ತಾಯಿಯಾಗುವ ಅನುಭೂತಿಯಿಂದಲೇ ಗರ್ಭಿಣಿಯರ ಸೌಂದರ್ಯ ತಾನಾಗಿ ಹೊಳೆಯುತ್ತದೆ. ಒಬ್ಬ ಪ್ರಸಿದ್ಧ ಲೇಡಿ ಡಾಕ್ಟರ್ ಹೇಳುವಂತೆ ಗರ್ಭಾವಸ್ಥೆಯಲ್ಲಿ ಮಹಿಳೆಯರು ಅತ್ಯಂತ ಸುಂದರವಾಗಿ ಕಾಣುತ್ತಾರೆ. ಏಕೆಂದರೆ ಆ ಕ್ಷಣಗಳಲ್ಲಿ ಅವರು ಪ್ರಸನ್ನರಾಗಿಯೂ, ಆರೋಗ್ಯವಾಗಿಯೂ ಇರುತ್ತಾರೆ. ಎಲ್ಲ ಗರ್ಭಿಣಿಯರೂ ಪ್ರತಿ ಕ್ಷಣವನ್ನೂ ಆನಂದಮಯವಾಗಿ ಕಳೆಯಬೇಕು.

ಒಂದು ವೇಳೆ ಹೀಗೆ ನಡೆಯದಿದ್ದಲ್ಲಿ ಅದರ ದುಷ್ಪ್ರಭಾವ ಕೇವಲ ಗರ್ಭಿಣಿಯ ಮೇಲೆ ಅಲ್ಲದೆ ಮಗುವಿನ ಮೇಲೂ ಉಂಟಾಗುತ್ತದೆ.

ಪರಮ ಮೈತ್ರಿ

ಗರ್ಭಿಣಿ ತನ್ನ ಆರೋಗ್ಯವನ್ನು ಸರಿಯಾಗಿ ಗಮನಿಸಿಕೊಂಡು ಸುಂದರವಾಗಿ ಅಲಂಕರಿಸಿಕೊಂಡರೆ ನಿಶ್ಚಯವಾಗಿ ಅದರಲ್ಲಿ ಸಾರ್ಥಕತೆಯನ್ನು ಕಾಣುತ್ತಾಳೆ. ಆರೋಗ್ಯ ಹಾಗೂ ಸೌಂದರ್ಯ ಎರಡಕ್ಕೂ ಒಳ್ಳೆಯ ಮೈತ್ರಿ ಇದೆ. ಅನ್ನುವ ನಾವು ಬೇರೆ ಬೇರೆ ರೂಪದಲ್ಲಿ ಪ್ರಸ್ತುತಪಡಿಸುತ್ತಾ ನಿಮಗೆ ಕೆಲವು ಅಗತ್ಯ ಸಂಗತಿಗಳನ್ನು ಹೇಳುತ್ತಿದ್ದೇವೆ.

ವೈದ್ಯರಿಂದ ನಿಯಮಿತವಾಗಿ ಪರೀಕ್ಷಿಸಿಕೊಳ್ಳಿ

ವೈದ್ಯರಿಂದ ನಿಯಮಿತವಾಗಿ ಪರೀಕ್ಷಿಸಿಕೊಳ್ಳಿ. ಆರಂಭದ 7 ತಿಂಗಳಲ್ಲಿ ಪ್ರತಿ ತಿಂಗಳು ನಂತರ ಪ್ರತಿ 15 ದಿನಗಳಿಗೊಮ್ಮೆ, ಕೊನೆಯ ತಿಂಗಳಲ್ಲಿ ಪ್ರತಿ ವಾರಕ್ಕೊಮ್ಮೆ, ಮಧ್ಯದಲ್ಲಿ ಏನಾದರೂ ತೊಂದರೆಯಾದರೆ ಕೂಡಲೇ ವೈದ್ಯರ ಬಳಿಗೆ ಹೋಗಿ.ಗರ್ಭಿಣಿ ಎಂಬ ಕಾರಣಕ್ಕೆ 2 ಪಟ್ಟು ಆಹಾರ ಒಟ್ಟಿಗೆ ಸೇವಿಸಬೇಡಿ. ಅದರಿಂದ ನಿಮ್ಮ ತೂಕ ಹೆಚ್ಚಾಗುತ್ತದೆ ಮತ್ತು ಡೆಲಿವರಿಯಲ್ಲಿ ತೊಂದರೆಯಾಗುತ್ತದೆ. ದಿನ ಸಮತೋಲಿತ ಆಹಾರ ಸೇವಿಸಿ. ಇದರಿಂದ ತಾಯಿ ಮತ್ತು ಮಕ್ಕಳ ಆರೋಗ್ಯ ಚೆನ್ನಾಗಿರುತ್ತದೆ. ಈ ಸಮಯದಲ್ಲಿ ಹಾಲಿಗೆ ಬಹಳ ಪ್ರಾಮುಖ್ಯತೆ ಇದೆ. ಒಂದುವೇಳೆ ಬರೀ ಹಾಲನ್ನು ಕುಡಿಯಲಾಗದಿದ್ದರೆ ಖೀರು, ಪಾಯಸ, ಮೊಸರು ಅಥವಾ ಬೇರೆ ಯಾವುದೇ ರೂಪದಲ್ಲಿ ತೆಗೆದುಕೊಳ್ಳಬಹುದು. ಹಾಲಿನಿಂದ ತಾಯಿ ಹಾಗೂ ಮಗು ಇಬ್ಬರ ಮೂಳೆಗಳು ಮತ್ತು ಹಲ್ಲುಗಳು ಸದೃಢವಾಗುತ್ತವೆ.

ಹಣ್ಣುಗಳ ಸೇವನೆ ಅಗತ್ಯ

ಮೊಟ್ಟೆ, ಮೀನು ಮತ್ತು ಪನೀರ್‌ ಮುಂತಾದ ಪ್ರೋಟೀನ್‌ಯುಕ್ತ ಆಹಾರವನ್ನು ಅಗತ್ಯವಾಗಿ ಸೇವಿಸಿ. ಸಸ್ಯಾಹಾರಿ ಮಹಿಳೆಯರು ಎಲ್ಲ ರೀತಿಯ ತರಕಾರಿಗಳನ್ನೂ ಅಗತ್ಯವಾಗಿ ಸೇವಿಸಿ. ಈ ತರಕಾರಿಗಳಲ್ಲಿ ಕಬ್ಬಿಣ ಹಾಗೂ ವಿಟಮಿನ್‌ ಸಿಗುತ್ತದೆ. ಸಾಧ್ಯವಾದಷ್ಟೂ ಹಸಿ ತರಕಾರಿಗಳನ್ನೇ ತಿನ್ನಿ. ಹಣ್ಣುಗಳ ಸೇವನೆ ಬಹಳ ಮುಖ್ಯ. ದಿನಕ್ಕೆ 3-4 ಬಾರಿ ವಿಟಮಿನ್‌ಯುಕ್ತ ಮೂಸಂಬಿ, ಕಿತ್ತಳೆ ಇತ್ಯಾದಿ ಹಣ್ಣುಗಳನ್ನು ಅಗತ್ಯವಾಗಿ ತೆಗೆದುಕೊಳ್ಳಿ. ಬೆಣ್ಣೆಯನ್ನು ಉಪಯೋಗಿಸಿ ಕೊಬ್ಬಿರುವ ಆಹಾರವನ್ನು ಅಗತ್ಯವಾಗಿ ತೆಗೆದುಕೊಳ್ಳಿ. ಅದಕ್ಕೆ ಬೆಣ್ಣೆ ಒಳ್ಳೆಯದು. ಕೊಬ್ಬಿರುವ ಆಹಾರವನ್ನು ದಿನ 15 ರಿಂದ 30 ಗ್ರಾಂ ತೆಗೆದುಕೊಳ್ಳಿ. ಆದರೆ ಡಾಕ್ಟರ್‌ಸಲಹೆ ಅಗತ್ಯವಾಗಿ ಪಡೆಯಿರಿ.

ಸಮತೋಲಿತ ಆಹಾರ ತೆಗೆದುಕೊಳ್ಳಿ

ಕಾಳು, ಬೇಳೆ, ರೊಟ್ಟಿಯನ್ನು ಸರಿಯಾದ ಪ್ರಮಾಣದಲ್ಲಿ ತೆಗೆದುಕೊಳ್ಳಿ. ಎಲ್ಲ ರೀತಿಯ ಆಹಾರ ತಿನ್ನಬೇಕು. ಸಮತೋಲಿತ ಆಹಾರ ತಿನ್ನುವುದರಿಂದ ತಾಯಿ ಹಾಗೂ ಮಗುವಿನ ಆರೋಗ್ಯ ಚೆನ್ನಾಗಿರುತ್ತದೆ.

ಧೂಮಪಾನ ಮಾಡಬೇಡಿ

ಈ ಸಮಯದಲ್ಲಿ ಮಾದಕ ದ್ರವ್ಯಗಳ ಸೇವನೆ ಅಥವಾ ಧೂಮಪಾನ ಮಾಡಲೇಬಾರದು. ಅದರಿಂದ ತಾಯಿ ಹಾಗೂ ಮಗುವಿನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಆರಾಮದಾಯಕ ಬಟ್ಟೆ ಧರಿಸಿ

ಈ ಸಮಯದಲ್ಲಿ ಮನೆಯ ಕೆಲಸಗಳನ್ನು ಅಗತ್ಯವಾಗಿ ಮಾಡಿ. ದಿನ ಸ್ನಾನ ಮಾಡಿ, ಹಗುರವಾಗಿ ಮೇಕಪ್‌ ಮಾಡಿಕೊಳ್ಳಿ. ಚೆನ್ನಾಗಿ ಡ್ರೆಸ್‌ ಮಾಡಿಕೊಳ್ಳಿ. ಬಟ್ಟೆ ಆರಾಮದಾಯಕವಾಗಿರಬೇಕು. ಚಪ್ಪಲಿಯೂ ಆರಾಮದಾಯಕವಾಗಿರಬೇಕು. ಮೆಟರ್ನಿಟಿ ಬ್ರಾ ಧರಿಸಿದರೆ ಒಳ್ಳೆಯದು.

ದೇಹದ ಮಸಾಜ್‌ ಅಗತ್ಯ

ಎದೆ ಹಾಗೂ ಹೊಟ್ಟೆಯನ್ನು ಹಗುರವಾಗಿ ಮಸಾಜ್‌ ಮಾಡಿ. ಅದರಿಂದ ಸ್ಟ್ರೆಚ್‌ ಮಾರ್ಕ್ಸ್ ಬೀಳುವುದಿಲ್ಲ. ಇದಲ್ಲದೆ ಇಡೀ ದೇಹವನ್ನು ಮಸಾಜ್‌ ಮಾಡಿಯೇ ಸ್ನಾನ ಮಾಡಿ. ಸರಿಯಾದ ಪೋಶ್ಚರ್‌ಬಗ್ಗೆ ಗಮನವಿರಲಿ. ಪೋಶ್ಚರ್‌ ಸರಿಯಾಗಿಲ್ಲದಿದ್ದರೆ ಗರ್ಭದ ಭಾರದಿಂದ ಶರೀರ ಕುರೂಪಿಯಾಗಿ ಕಂಡುಬರುತ್ತದೆ.

ಕಾಲುಗಳಿಗೆ ಆಯಾಸವಾಗದಿರಲಿ

ಗರ್ಭಾವಸ್ಥೆಯಲ್ಲಿ ಹೆಚ್ಚುವರಿ ತೂಕದಿಂದ ಕಾಲುಗಳಿಗೆ ಆಯಾಸ ಹೆಚ್ಚಾಗುತ್ತದೆ. ಈ ಸಮಯದಲ್ಲಿ ಕಾಲುಗಳಿಗೆ ವಿಶೇಷ ಗಮನ ನೀಡಬೇಕು. ಕಾಲುಗಳಿಗೆ ವ್ಯರ್ಥವಾಗಿ ಆಯಾಸ ಕೊಡಬೇಡಿ. ಎಷ್ಟು ಹೊತ್ತು ಸಾಧ್ಯವೋ ಅಷ್ಟು ಹೊತ್ತು ಮಾತ್ರ ನಿಂತು ಕೆಲಸ ಮಾಡಿ. ಇಲ್ಲದಿದ್ದರೆ ಕುಳಿತೇ ಕೆಲಸ ಮಾಡಿ. ಕೈ ಕಾಲುಗಳ ಉಗುರುಗಳನ್ನು ಸರಿಯಾಗಿ ನೋಡಿಕೊಳ್ಳಿ ಹಾಗೂ ಅವನ್ನು ಸ್ವಚ್ಛಗೊಳಿಸಿ. ಮೆನಿಕ್ಯೂರ್‌ ಮತ್ತು ಪೆಡಿಕ್ಯೂರ್‌ ಕೂಡ ಮಾಡಿಸಬಹುದು.

ಕೂದಲು ಹಾಗೂ ತ್ವಚೆಯ ಸ್ವಚ್ಛತೆ ಅಗತ್ಯ

ಕೂದಲನ್ನು ಸ್ವಚ್ಛವಾಗಿಟ್ಟುಕೊಂಡು ಕಂಡೀಶನಿಂಗ್‌ ಕೂಡ ಮಾಡಿಸಿ. ಸ್ವಚ್ಛ ಹಾಗೂ ಆರೋಗ್ಯವಂತ ಕೂದಲು ನಿಮ್ಮ ಸೌಂದರ್ಯ ಹೆಚ್ಚಿಸುತ್ತದೆ. ತ್ವಚೆಯ ಸ್ವಚ್ಛತೆ ಹಾಗೂ ಮಾಯಿಶ್ಚರೈಸಿಂಗ್‌ನಲ್ಲಿ ವಿಳಂಬ ಮಾಡಬೇಡಿ. ಪ್ರಸವದ ಸಮಯದಲ್ಲಿ ಮುಖದಲ್ಲಿ ಮಚ್ಚೆಗಳುಂಟಾಗುತ್ತವೆ. ಸಾಮಾನ್ಯವಾಗಿ ಪ್ರಸವದ ನಂತರ ತಾನಾಗಿ ಸರಿಹೋಗುತ್ತದೆ. ಹಗುರವಾದ ಮೇಕಪ್ ಸೂಕ್ತ ಗರ್ಭಾವಸ್ಥೆಯಲ್ಲಿ ಹೊಳಪಿನ ಮತ್ತು ಡಾರ್ಕ್‌ ಮೇಕಪ್‌ ಮಾಡಿಕೊಳ್ಳಬಾರದು. ಈ ಸಂದರ್ಭದಲ್ಲಿ ಸ್ವಾಭಾವಿಕವಾಗಿ ಕಾಣುವ ಲೈಟ್‌ ಮೇಕಪ್‌ ಉಚಿತವಾಗಿರುತ್ತದೆ. ಬ್ಲಶರ್‌ ಹಾಗೂ ನ್ಯಾಚುರಲ್ ಲಿಪ್‌ಸ್ಟಿಕ್‌ನ್ನು ಹಗುರವಾಗಿ ತೀಡಿರಿ. ಕಣ್ಣುಗಳ ಮೇಕಪ್‌ಮಾಡಿ. ಆದರೆ ಅದು ಕೆಟ್ಟದೆನಿಸಬಾರದು. ಕಾಜಲ್ ಹಾಗೂ ಐ ಲೈನರ್‌ಗಳನ್ನು ತೆಳುವಾಗಿ ಲೇಪಿಸಿ. ಮಸ್ಕರಾದ 2 ಕೋಟ್‌ ಹಚ್ಚಿ. ಸಂಜೆ ವಿಶೇಷ ಸಂದರ್ಭವಾಗಿದ್ದರೆ ಶ್ಯಾಡೋ ಹಚ್ಚಬಹುದು. ಮನಸ್ಸು ಮೆದುಳಿಗೆ ಸ್ಛೂರ್ತಿ ನೀಡಿ.

ಇದಲ್ಲದೆ ಕೆಲವು ವಿಶೇಷ ವಿಷಯಗಳನ್ನು ಗಮನಿಸಬೇಕು. ಪ್ರಸವ ಹತ್ತಿರವಾಗುವವರೆಗೆ ಶಾಂತವಾಗಿ ಆರಾಮವಾಗಿ ಇರುವುದು ಅಗತ್ಯ. ಯಾವುದೇ ಚಿಂತೆ ಮಾಡಬಾರದು. ಒಂದುವೇಳೆ ಇದ್ದಕ್ಕಿದ್ದಂತೆ ಅಶಕ್ತರಾದರೆ ದುಃಖಿತರಾಗದೆ ಸ್ವಾಭಾವಿಕ ರೂಪದಲ್ಲಿ ನಿಮ್ಮ ಮನಸ್ಸು ಹಾಗೂ ಮೆದುಳನ್ನು ಸ್ಛೂರ್ತಿಯುತವಾಗಿಟ್ಟುಕೊಳ್ಳಿ.

ಪೂರ್ತಿ ನಿದ್ದೆ ಅಗತ್ಯ

ಮಧ್ಯಾಹ್ನ ಬಹಳ ಸುಸ್ತಾದರೆ ಕಾಲುಗಳನ್ನು ತಲೆಗಿಂತ ಎತ್ತರದಲ್ಲಿ ಇಟ್ಟುಕೊಂಡು ಮಲಗಬೇಕು. ಮುಕ್ತ ಗಾಳಿಯ ಆನಂದದಲ್ಲಿ 7-8 ಗಂಟೆ ನಿದ್ದೆಯೂ ಅಗತ್ಯವಾಗಿದೆ.

– ಡಾ. ವಿನುತಾ ರಾವ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ