ಲವ್ಲಿ ಸ್ಟಾರ್‌ ಮಸ್ತ್ ಮಾತು

ಮಸ್ತ್ ಮೊಹಬ್ಬತ್‌, ಮಳೆ, ಫೇರ್‌ ಅಂಡ್‌ ಲವ್ಲಿ  ಈ ಮೂರು ಚಿತ್ರಗಳೂ ನನೆಪಿರಲಿ ಪ್ರೇಮ್ ಅವರ ಹೊಸಚಿತ್ರಗಳು. `ಶತ್ರು’ ಅಷ್ಟೊಂದು ವರ್ಕ್‌ ಔಟ್‌ ಆಗಲಿಲ್ಲ. ಆದರೆ ಆ್ಯಕ್ಷನ್‌ ಹೀರೋ ಆಗಬಲ್ಲೆ ಎಂದು ಪ್ರೇಮ್ ಪ್ರೂವ್ ‌ಮಾಡಿದರು. `ಶತ್ರು’ ನಿರ್ಮಾಪಕರಿಗೆ ಶತ್ರು ಆಗಲಿಲ್ಲ. ಲವ್ಲಿ ಸ್ಟಾರ್‌, ರಾಯಲ್ ಸ್ಟಾರ್‌, ಹೋಮ್ಲಿ ಸ್ಟಾರ್‌, ನೆನಪಿರಲಿ ಪ್ರೇಮ್ ಇಷ್ಟು ಹೆಸರಲ್ಲಿ ಪ್ರೇಮ್ ಗೆ ಯಾವುದಿಷ್ಟ ಎಂದು ಕೇಳಿದಾಗ, ಸಂದರ್ಶನವೊಂದರಲ್ಲಿ ಪ್ರೇಮ್ ಹೇಳಿದ್ದು ಲವ್ಲಿ ಸ್ಟಾರ್‌ ಅನ್ನೋದು ಡಾ. ರಾಜ್‌ಕುಮಾರ್‌ಅಭಿಮಾನಿಗಳು ಕೊಟ್ಟಿದ್ದು. ಹಾಗಾಗಿ ಅದು ನನಗಿಷ್ಟ. ಆರ್‌. ಚಂದ್ರು ಸ್ಟೈಲಿಶ್‌ ಲವ್ಲೀ ಸ್ಟಾರ್‌ ಅಂತ ಹೆಸರಿಡ್ತೀನಿ ಅಂದರು. ಒಬ್ಬ ನಿರ್ದೇಶಕರಿಂದ ಇಂಥ ಹೆಸರು ತಗೊಳ್ಳೋದು ಅದೃಷ್ಟ, ತುಂಬಾ ಖುಷಿ ಆಗುತ್ತೆ, ಎನ್ನುವ ಪ್ರೇಮ್ ಸದ್ಯದಲ್ಲೇ ಪ್ರೊಡಕ್ಷನ್‌ ಹೌಸ್ ಕೂಡಾ ಶುರುಮಾಡಲಿದ್ದಾರೆ ಎಂಬ ಮಾತು ಇದೆ.

ಕಮಲ್ ಗೆ ಆ್ಯಕ್ಷನ್‌ ಕಟ್‌

Ramesh-Aravind-Actor1

ಕನ್ನಡದ ಚಿತ್ರರಂಗದ ಎವರ್‌ ಗ್ರೀನ್‌ ಹೀರೋ, ಮಿಸ್ಟರ್‌ ಪರ್ಫೆಕ್ಟ್ ಎಂದೆಲ್ಲ ಹೆಸರುವಾಸಿಯಾಗಿರುವ ರಮೇಶ್‌ ಅರವಿಂದ್ ನಟನೆಯಿಂದ ಸ್ವಲ್ಪ ಬಿಡುವು ತೆಗೆದುಕೊಂಡು ತಮ್ಮ ಹೆಜ್ಜೆಯನ್ನು ತಮಿಳಿನತ್ತ ಹಾಕಿದ್ದಾರೆ. ಆದರೆ ನಟನೆಗಾಗಲ್ಲ. ಕಮಲ್ ಹಾಸನ್‌ ಅವರನ್ನು ಎರಡನೇ ಬಾರಿಗೆ ನಿರ್ದೇಶನ ಮಾಡಲು ಹೊರಟಿದ್ದಾರೆ. `ರಾಮ ಶ್ಯಾಮ ಭಾಮ’ ಚಿತ್ರದ ಮೂಲಕ ಕಮಲ್ ಅವರನ್ನು ಮತ್ತೆ ಕನ್ನಡದಲ್ಲಿ ನಟಿಸುವಂತೆ ಮಾಡಿದ್ದ ರಮೇಶ್‌ ನಿರ್ದೇಶಕರಾಗಿ ಗೆಲುವು ಕಂಡಿದ್ದರು. ಈ ಬಾರಿ ಕಮಲ್ ಬರೆದಿರುವ ಕಾನ್ಸೆಪ್ಟನ್ನು ಆರಿಸಿಕೊಂಡು ತಮಿಳಿನಲ್ಲಿ ಅದ್ಧೂರಿಯಾಗಿ ಚಿತ್ರವೊಂದನ್ನು ನಿರ್ದೇಶಿಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಕಮಲ್ ಹಾಸನ್‌ ಅವರ ಆಪ್ತಮಿತ್ರರಾಗಿರುವ ರಮೇಶ್‌ ಇತ್ತೀಚೆಗಷ್ಟೆ ಚಿತ್ರದ ಫಸ್ಟ್ ಲುಕ್‌ನ್ನು ಬಿಡುಗಡೆ ಮಾಡಿದ್ದಾರೆ. ಚಿತ್ರದ ಹೆಸರು `ಉತ್ತಮ ವಿಲನ್‌.’ ಕಮಲ್ ಗೆ ವಿಭಿನ್ನ ರೀತಿಯಲ್ಲಿ ಮೇಕಪ್‌ ಮಾಡಿಸಲಾಗಿದೆ. ಈಗಾಗಲೇ ಫಸ್ಟ್ ಲುಕ್‌ನಲ್ಲಿ ರಮೇಶ್‌ ಸಾಕಷ್ಟು ಪ್ರಶಂಸೆಗಳನ್ನು ಸ್ವೀಕರಿಸುತ್ತಿದ್ದಾರೆ. ಅದರಲ್ಲೂ ಕನ್ನಡದ ನಟನೊಬ್ಬ ಕಮಲ್ ಹಾಸನ್‌ ಅವರಿಗೆ ತಮಿಳಿನಲ್ಲಿ ಆ್ಯಕ್ಷನ್‌ ಕಟ್‌ ಹೇಳುತ್ತಿರುವುದು ಇದೇ ಮೊದಲ ಸಲ ಎನ್ನಬಹುದು.

ಭಟ್ಟರ ಕ್ಯಾಂಪಿಗೆ ರಾಗಿಣಿ

IMG-20131205-WA0013

ಯೋಗರಾಜ್‌ ಭಟ್ಟರ ಕ್ಯಾಂಪ್‌ ಎಂದಕೂಡಲೇ ಅದರಲ್ಲಿ ನಟಿಸುವ ನಟ ನಟಿಯರಿಗೆ ಒಂದಲ್ಲ ಒಂದು ರೀತಿ ರೆಕಗ್ನೇಶನ್‌ ಸಿಕ್ಕೇ ಸಿಗುತ್ತದೆಂಬ ನಂಬಿಕೆ ಇದೆ. ಭಟ್ಟರ ನಿರ್ಮಾಣದ ಸಂಸ್ಥೆ ಹೊಸ ಹೊಸ ನಿರ್ದೇಶಕರಿಗೆ ಅವಕಾಶ ಕೊಡುತ್ತಲೇ ಬಂದಿದೆ. ಅವರ ಬಳಿ ಕೆಲಸ ಮಾಡಿದ ಸಹಾಯಕ ನಿರ್ದೇಶಕರಿಗೆ ಸ್ವತಂತ್ರವಾಗಿ ಚಿತ್ರ ನಿರ್ದೇಶಿಸುವ ಅವಕಾಶ ಕಲ್ಪಿಸಿಕೊಡುತ್ತಾರೆ. ಗಡ್ಡ ವಿಜಿ ಈಗಷ್ಟೇ `ದ್ಯಾವ್ರಿ’ ಚಿತ್ರದ ಮೂಲಕ ಗಮನ ಸೆಳೆದರು. ಈಗ ಅವರದೇ ನಿರ್ದೇಶನದ ಚಿತ್ರವೊಂದರಲ್ಲಿ ರಾಗಿಣಿ ದ್ವಿವೇದಿ ಗಮನಾರ್ಹ ಪಾತ್ರ ಮಾಡಲಿದ್ದಾಳಂತೆ. ರಾಗಿಣಿ ಈಗಾಗಲೇ ಕನ್ನಡ ಚಿತ್ರರಂಗದ ಜನಪ್ರಿಯ ತಾರೆ. ಆದರೂ ಭಟ್ಟರ ಚಿತ್ರದಲ್ಲಿ ಎಂಥ ಪಾತ್ರ ಮಾಡಿಸಬಹುದೆಂಬ ಕುತೂಹಲ ಇರುವವರಿಗೆ ಇಲ್ಲಿದೆ ಉತ್ತರ. `ತುಪ್ಪ ಬೇಕಾ ತುಪ್ಪ….’ ಅಂತ ಐಟಂ ಡ್ಯಾನ್ಸ್  ಮಾಡಿ ಒಳ್ಳೆ ಡ್ಯಾನ್ಸರ್‌ ಅನಿಸಿಕೊಂಡಿದ್ದ ರಾಗಿಣಿಗೆ ಈ ಬಾರಿ ಪೂರ್ಣ ಪ್ರಮಾಣದ ಡ್ಯಾನ್ಸರ್‌ ಪಾತ್ರ ನಿರ್ವಹಿಸುವ ಅವಕಾಶ ಸಿಕ್ಕಿದೆ. `ಹೌದು, ಈ ಚಿತ್ರದಲ್ಲಿ ನನ್ನದು ಡ್ಯಾನ್ಸರ್‌ ಪಾತ್ರ. ಅದಕ್ಕಾಗಿ ಎಲ್ಲ ತರಹದ ತಯಾರಿ ನಡೆಸಿಕೊಳ್ಳುತ್ತಿದ್ದೇನೆ,’ ಎಂದು ರಾಗಿಣಿ ಹೇಳುತ್ತಾಳೆ.

ಡ್ಯಾಡೀಸ್‌ ಗರ್ಲ್

DSC-0665

ಮೈಮೇಲೆಲ್ಲಾ ಟ್ಯಾಟೂ ಹಾಕಿಸಿಕೊಳ್ಳೋದು ಈಗಿನ ಸ್ಟೈಲು. ಅದರಲ್ಲೂ ಸಿನಿಮಾದವರು ವಿಧವಿಧವಾದ ರೀತಿಯಲ್ಲಿ ಟ್ಯಾಟೂ ಹಾಕಿಸಿಕೊಂಡು ಸುದ್ದಿಯಾಗುತ್ತಾರೆ. ಜಗ್ಗೇಶ್‌ ಅವರ ಅಮ್ಮನ ಫೋಟೋವನ್ನೇ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ರಕ್ಷಿತಾ ಮಗನ ಹೆಸರನ್ನು ಹಾಕಿಸಿಕೊಂಡಿದ್ದಾರೆ. ಪ್ರಿಯಾಮಣಿ ಕೂಡಾ ಕೈ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾಳೆ. ಇಲ್ಲಿ ವಿಶೇಷತೆ ಎಂದರೆ ಪ್ರಿಯಾಮಣಿ ತನ್ನ ಕೈ ಮೇಿ ಡ್ಯಾಡೀಸ್‌ರ್ಗ್‌ಅಂತ ಟ್ಯಾಟೂ ಹಾಕಿಸಿಕೊಂಡಿದ್ದಾಳಂತೆ! ಇದನ್ನು ನೋಡಿದವರು ಟ್ಯಾಟೂ ಹಾಕಿಸಿಕೊಳ್ಳುವುದಕ್ಕೂ ವಿಶೇಷ ಕಾರಣ ಹುಡುಕುತ್ತಾರೆ. ಅಪ್ಪನ ಮೆಚ್ಚಿನ ಹಾಗೂ ಮುದ್ದಿನ ಮಗಳಾಗಿರೋದ್ರಿಂದ ಪ್ರಿಯಾಮಣಿ ಆ ರೀತಿ ಹಾಕಿಸಿಕೊಂಡಿರಬಹುದು. ಆದರೆ ಸಿನಿಮಾದವರು ಸುಮ್ಮನಿರುತ್ತಾರಾ? ಅರೆರೆ… ಪ್ರಿಯಾಂಕಾ ಚೋಪ್ರಾ ಕೂಡಾ ತನ್ನ ಬಲಗೈ ಮೇಲೆ ಡ್ಯಾಡೀಸ್‌ ಗರ್ಲ್ ಅಂತ ಹಾಕಿಸಿಕೊಂಡಿದ್ದಾಳಂತಲ್ಲ…. ಪ್ರಿಯಾಗೂ ಅದೇ ಸ್ಛೂರ್ತಿ ಇರಬಹುದೇ ಎನ್ನುತ್ತಿದ್ದಾರೆ. ಏನೇ ಆಗಲಿ ಒಳ್ಳೆಯದನ್ನೇ ಕಾಪಿ ಮಾಡಿದ್ದಾಳಲ್ಲ, ಹೋಗಲಿ ಬಿಡಿ.

ಸಿಡಿದೆದ್ದ ಕ್ರೇಜಿ ರವಿಚಂದ್ರನ್

DSC-4924

ಇತ್ತೀಚೆಗೆ ಹೊಸದೊಂದು ರೂಪ ತಾಳಿದ್ದಾರೆ. ಅವರ ಮೊದಲಿನ ಕ್ರೇಜಿಸ್ಟಾರ್‌ ಬದಲಾಗಿದ್ದಾರೆ. `ಕ್ರೇಜಿಸ್ಟಾರ್‌’ ಚಿತ್ರ ಬಿಡುಗಡೆ ನಂತರ ಅಸಲಿ ರವಿ ಅವರನ್ನು ತೆರೆ ಮೇಲೆ ನೋಡುವಂತಾಯ್ತು. ಜನಪ್ರಿಯ ಸ್ಟಾರ್‌ ಒಬ್ಬನ ಬದುಕಿನಲ್ಲಾದ ತಿರುವೊಂದು ಹೇಗೆ ಅವನ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಕಥಾವಸ್ತುವಾಗಿತ್ತು. ರವಿಚಂದ್ರನ್‌ ತಮ್ಮಲ್ಲಿರುವ ಕ್ರೇಜಿಸ್ಟಾರ್‌ನ್ನು ತೆರೆ ಮೇಲೆ ರಾರಾಜಿಸಿದರು. ಚಿತ್ರದ ಕೆಲವು ಎಮೋಷನ್‌ ಸೀನ್ಸ್ ಕಣ್ಣೀರು ತರಿಸಿದ್ದೂ ಉಂಟು. ಆದರೆ ಈ ಚಿತ್ರದ ಬಗ್ಗೆ ಮೂಡಿಬಂದ ವಿಮರ್ಶೆಗಳು ಕ್ರೇಜಿಯನ್ನು ಸಿಡಿದೇಳುವಂತೆ ಮಾಡಿದೆ. “ನಾನು ಒಳ್ಳೆ ಸಿನಿಮಾ ಮಾಡಿದಾಗೆಲ್ಲ ವಿಮರ್ಶಕರು ಹೇಳುವುದೊಂದು, ಬರೆಯುವುದೊಂದು. ಸಿನಿಮಾ ನೋಡುತ್ತಲೇ ಕುಳಿತ ಸ್ಥಳದಿಂದ `ಟ್ವೀಟ್‌’ ಮಾಡುತ್ತಾರೆ. ಫಸ್ಟ್ ಹಾಫ್ ಬೋರ್‌, ಸೆಕೆಂಡ್‌ ಹಾಫ್‌ ಓ.ಕೆ. ಅಂತ. ಆದರೆ ವಿಮರ್ಶೆಗಳಲ್ಲಿ ಆ ಸಾಲುಗಳು ಇರುವುದಿಲ್ಲ. ನಿಮಗನಿಸಿದ್ದನ್ನು ಬರೆಯಿರಿ ಎಲ್ಲರೂ ಮಾತನಾಡಿಕೊಂಡು ಬರೆಯಬೇಡಿ,” ಎಂದು ಬೋಧನೆ ಮಾಡಿದ್ದಾರೆ. “ನನ್ನ ಹೊಸ ಚಿತ್ರ `ಮಂಜಿನ ಹನಿ’ ನೋಡಿದ ನಂತರ ನೀವುಗಳೇ ನನ್ನನ್ನು ಹುಡುಕಿಕೊಂಡು ಬಂದು ಮಾತನಾಡಿಸುತ್ತೀರಾ!” ಎಂದು ಆವಾಜ್‌ ಹಾಕಿದ್ದಾರೆ.

ಸಿನಿಮಾಗೆ ಬೈ….ಬೈ

DSC-8265

ಸ್ಯಾಂಡಲ್ ವುಡ್‌ನ ಮೋಹಕ ತಾರೆ ರಮ್ಯಾ ಸಂಸದೆಯಾದಾಗಿನಿಂದ ಆಕೆಯ ಲೈಫ್‌ ಸ್ಟೈಲ್ ‌ಬದಲಾಗಿಬಿಟ್ಟಿದೆ. ಮೊದಲಾದರೆ ಸಾಕಷ್ಟು ಗ್ಲಾಮರಸ್‌ ಆಗಿ, ಡಿಸೈನರ್‌ ಬಟ್ಟೆಗಳನ್ನು ತೊಟ್ಟು ಭರ್ಜರಿಯಾಗಿ ಬರುತ್ತಿದ್ದ ರಮ್ಯಾ ಈಗ ಅವೆಲ್ಲವನ್ನು ಗಂಟುಕಟ್ಟಿ ಮೂಲೆಗೆಸೆದಿದ್ದಾಳೆ. ಕಾಟನ್‌ ಸೀರೆಗಳು, ಕಾಟನ್‌ ಚೂಡಿದಾರ್‌ಗಳು ವಾರ್ಡ್‌ ರೋಬ್‌ ಸೇರಿಕೊಂಡಿವೆ. ಜನರ ಸೇವೆಯೇ ಜನಾರ್ಧನನ ಸೇವೆ ಅಂತ ದಿನದ ಇಪ್ಪತ್ನಾಲ್ಕು ತಾಸುಗಳೂ ತನ್ನ ಕ್ಷೇತ್ರದ ಜನರಿಗಾಗಿ ಮೀಸಲಿಡುತ್ತಿರುವ ರಮ್ಯಾ, ತಾನೊಬ್ಬ ಸಿನಿಮಾ ತಾರೆ ಎಂಬುದನ್ನೇ ಮರೆತಂತಿದೆ. ಇತ್ತೀಚೆಗೆ `ಆರ್ಯನ್‌’ ಚಿತ್ರದ ಹಾಡಿನ ಚಿತ್ರೀಕರಣಕ್ಕೆಂದು ಶಿವರಾಜ್‌ ಕುಮಾರ್ ಅವರೊಂದಿಗೆ ಸ್ಟೆಪ್‌ ಹಾಕಲು ಬಂದಿದ್ದ ರಮ್ಯಾ, ಪತ್ರಿಕಾಗೋಷ್ಠಿಯಲ್ಲಿ ತನ್ನ ಕ್ಷೇತ್ರದ ಬಗ್ಗೆ ಜನಸೇವೆ ಮತ್ತು ಜವಾಬ್ದಾರಿಗಳ ಬಗ್ಗೆ ಮಾತನಾಡಿದ್ದೇ ಹೆಚ್ಚು. `ಬಹುಶಃ `ಆರ್ಯನ್‌’ ನನ್ನ ಕಡೆಯ ಚಿತ್ರವಾಗಬಹುದು,’ ಎಂದು ಘೋಷಿಸಿ ಸುದ್ದಿಯಾದಳು.

`ದಿಲ್ ಕಾ ರಾಜ’ ಚಿತ್ರಕ್ಕಾಗಿ ಡೇಟ್ಸ್ ನ್ನು ಚುನಾವಣೆ ನಂತರ ಕೊಡುವುದಾಗಿ ಹೇಳಿದಳು. ಹನ್ನೆರಡು ವರ್ಷ ಸಿನಿಮಾ ರಂಗದಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದೀನಲ್ಲ ಇವಿನ್ನು ಸಾಕು ಅಂದಳು. `ನೀರ್‌ ದೋಸೆ’ ಕೋರ್ಟಿನಲ್ಲಿರೋದ್ರಿಂದ ಅದರ ಬಗ್ಗೆ ಮಾತನಾಡಲಿಲ್ಲ. ಯಶಸ್ವಿ ನಾಯಕಿಯಾಗಿರುವಾಗಲೇ ಸಿನಿಮಾರಂಗವನ್ನು ತೊರೆದು ಹೋಗುತ್ತಿರುವ ರಮ್ಯಾ, ತನ್ನೆಲ್ಲ ಸಮಯ ಜನರ ಸೇವೆಗಾಗಿ ಮುಡಿಪು ಎಂದು ಹೇಳುತ್ತಾಳೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ