ಲವ್ಲಿ ಸ್ಟಾರ್‌ ಮಸ್ತ್ ಮಾತು

ಮಸ್ತ್ ಮೊಹಬ್ಬತ್‌, ಮಳೆ, ಫೇರ್‌ ಅಂಡ್‌ ಲವ್ಲಿ  ಈ ಮೂರು ಚಿತ್ರಗಳೂ ನನೆಪಿರಲಿ ಪ್ರೇಮ್ ಅವರ ಹೊಸಚಿತ್ರಗಳು. `ಶತ್ರು' ಅಷ್ಟೊಂದು ವರ್ಕ್‌ ಔಟ್‌ ಆಗಲಿಲ್ಲ. ಆದರೆ ಆ್ಯಕ್ಷನ್‌ ಹೀರೋ ಆಗಬಲ್ಲೆ ಎಂದು ಪ್ರೇಮ್ ಪ್ರೂವ್ ‌ಮಾಡಿದರು. `ಶತ್ರು' ನಿರ್ಮಾಪಕರಿಗೆ ಶತ್ರು ಆಗಲಿಲ್ಲ. ಲವ್ಲಿ ಸ್ಟಾರ್‌, ರಾಯಲ್ ಸ್ಟಾರ್‌, ಹೋಮ್ಲಿ ಸ್ಟಾರ್‌, ನೆನಪಿರಲಿ ಪ್ರೇಮ್ ಇಷ್ಟು ಹೆಸರಲ್ಲಿ ಪ್ರೇಮ್ ಗೆ ಯಾವುದಿಷ್ಟ ಎಂದು ಕೇಳಿದಾಗ, ಸಂದರ್ಶನವೊಂದರಲ್ಲಿ ಪ್ರೇಮ್ ಹೇಳಿದ್ದು ಲವ್ಲಿ ಸ್ಟಾರ್‌ ಅನ್ನೋದು ಡಾ. ರಾಜ್‌ಕುಮಾರ್‌ಅಭಿಮಾನಿಗಳು ಕೊಟ್ಟಿದ್ದು. ಹಾಗಾಗಿ ಅದು ನನಗಿಷ್ಟ. ಆರ್‌. ಚಂದ್ರು ಸ್ಟೈಲಿಶ್‌ ಲವ್ಲೀ ಸ್ಟಾರ್‌ ಅಂತ ಹೆಸರಿಡ್ತೀನಿ ಅಂದರು. ಒಬ್ಬ ನಿರ್ದೇಶಕರಿಂದ ಇಂಥ ಹೆಸರು ತಗೊಳ್ಳೋದು ಅದೃಷ್ಟ, ತುಂಬಾ ಖುಷಿ ಆಗುತ್ತೆ, ಎನ್ನುವ ಪ್ರೇಮ್ ಸದ್ಯದಲ್ಲೇ ಪ್ರೊಡಕ್ಷನ್‌ ಹೌಸ್ ಕೂಡಾ ಶುರುಮಾಡಲಿದ್ದಾರೆ ಎಂಬ ಮಾತು ಇದೆ.

ಕಮಲ್ ಗೆ ಆ್ಯಕ್ಷನ್‌ ಕಟ್‌

Ramesh-Aravind-Actor1

ಕನ್ನಡದ ಚಿತ್ರರಂಗದ ಎವರ್‌ ಗ್ರೀನ್‌ ಹೀರೋ, ಮಿಸ್ಟರ್‌ ಪರ್ಫೆಕ್ಟ್ ಎಂದೆಲ್ಲ ಹೆಸರುವಾಸಿಯಾಗಿರುವ ರಮೇಶ್‌ ಅರವಿಂದ್ ನಟನೆಯಿಂದ ಸ್ವಲ್ಪ ಬಿಡುವು ತೆಗೆದುಕೊಂಡು ತಮ್ಮ ಹೆಜ್ಜೆಯನ್ನು ತಮಿಳಿನತ್ತ ಹಾಕಿದ್ದಾರೆ. ಆದರೆ ನಟನೆಗಾಗಲ್ಲ. ಕಮಲ್ ಹಾಸನ್‌ ಅವರನ್ನು ಎರಡನೇ ಬಾರಿಗೆ ನಿರ್ದೇಶನ ಮಾಡಲು ಹೊರಟಿದ್ದಾರೆ. `ರಾಮ ಶ್ಯಾಮ ಭಾಮ' ಚಿತ್ರದ ಮೂಲಕ ಕಮಲ್ ಅವರನ್ನು ಮತ್ತೆ ಕನ್ನಡದಲ್ಲಿ ನಟಿಸುವಂತೆ ಮಾಡಿದ್ದ ರಮೇಶ್‌ ನಿರ್ದೇಶಕರಾಗಿ ಗೆಲುವು ಕಂಡಿದ್ದರು. ಈ ಬಾರಿ ಕಮಲ್ ಬರೆದಿರುವ ಕಾನ್ಸೆಪ್ಟನ್ನು ಆರಿಸಿಕೊಂಡು ತಮಿಳಿನಲ್ಲಿ ಅದ್ಧೂರಿಯಾಗಿ ಚಿತ್ರವೊಂದನ್ನು ನಿರ್ದೇಶಿಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಕಮಲ್ ಹಾಸನ್‌ ಅವರ ಆಪ್ತಮಿತ್ರರಾಗಿರುವ ರಮೇಶ್‌ ಇತ್ತೀಚೆಗಷ್ಟೆ ಚಿತ್ರದ ಫಸ್ಟ್ ಲುಕ್‌ನ್ನು ಬಿಡುಗಡೆ ಮಾಡಿದ್ದಾರೆ. ಚಿತ್ರದ ಹೆಸರು `ಉತ್ತಮ ವಿಲನ್‌.' ಕಮಲ್ ಗೆ ವಿಭಿನ್ನ ರೀತಿಯಲ್ಲಿ ಮೇಕಪ್‌ ಮಾಡಿಸಲಾಗಿದೆ. ಈಗಾಗಲೇ ಫಸ್ಟ್ ಲುಕ್‌ನಲ್ಲಿ ರಮೇಶ್‌ ಸಾಕಷ್ಟು ಪ್ರಶಂಸೆಗಳನ್ನು ಸ್ವೀಕರಿಸುತ್ತಿದ್ದಾರೆ. ಅದರಲ್ಲೂ ಕನ್ನಡದ ನಟನೊಬ್ಬ ಕಮಲ್ ಹಾಸನ್‌ ಅವರಿಗೆ ತಮಿಳಿನಲ್ಲಿ ಆ್ಯಕ್ಷನ್‌ ಕಟ್‌ ಹೇಳುತ್ತಿರುವುದು ಇದೇ ಮೊದಲ ಸಲ ಎನ್ನಬಹುದು.

ಭಟ್ಟರ ಕ್ಯಾಂಪಿಗೆ ರಾಗಿಣಿ

IMG-20131205-WA0013

ಯೋಗರಾಜ್‌ ಭಟ್ಟರ ಕ್ಯಾಂಪ್‌ ಎಂದಕೂಡಲೇ ಅದರಲ್ಲಿ ನಟಿಸುವ ನಟ ನಟಿಯರಿಗೆ ಒಂದಲ್ಲ ಒಂದು ರೀತಿ ರೆಕಗ್ನೇಶನ್‌ ಸಿಕ್ಕೇ ಸಿಗುತ್ತದೆಂಬ ನಂಬಿಕೆ ಇದೆ. ಭಟ್ಟರ ನಿರ್ಮಾಣದ ಸಂಸ್ಥೆ ಹೊಸ ಹೊಸ ನಿರ್ದೇಶಕರಿಗೆ ಅವಕಾಶ ಕೊಡುತ್ತಲೇ ಬಂದಿದೆ. ಅವರ ಬಳಿ ಕೆಲಸ ಮಾಡಿದ ಸಹಾಯಕ ನಿರ್ದೇಶಕರಿಗೆ ಸ್ವತಂತ್ರವಾಗಿ ಚಿತ್ರ ನಿರ್ದೇಶಿಸುವ ಅವಕಾಶ ಕಲ್ಪಿಸಿಕೊಡುತ್ತಾರೆ. ಗಡ್ಡ ವಿಜಿ ಈಗಷ್ಟೇ `ದ್ಯಾವ್ರಿ' ಚಿತ್ರದ ಮೂಲಕ ಗಮನ ಸೆಳೆದರು. ಈಗ ಅವರದೇ ನಿರ್ದೇಶನದ ಚಿತ್ರವೊಂದರಲ್ಲಿ ರಾಗಿಣಿ ದ್ವಿವೇದಿ ಗಮನಾರ್ಹ ಪಾತ್ರ ಮಾಡಲಿದ್ದಾಳಂತೆ. ರಾಗಿಣಿ ಈಗಾಗಲೇ ಕನ್ನಡ ಚಿತ್ರರಂಗದ ಜನಪ್ರಿಯ ತಾರೆ. ಆದರೂ ಭಟ್ಟರ ಚಿತ್ರದಲ್ಲಿ ಎಂಥ ಪಾತ್ರ ಮಾಡಿಸಬಹುದೆಂಬ ಕುತೂಹಲ ಇರುವವರಿಗೆ ಇಲ್ಲಿದೆ ಉತ್ತರ. `ತುಪ್ಪ ಬೇಕಾ ತುಪ್ಪ....' ಅಂತ ಐಟಂ ಡ್ಯಾನ್ಸ್  ಮಾಡಿ ಒಳ್ಳೆ ಡ್ಯಾನ್ಸರ್‌ ಅನಿಸಿಕೊಂಡಿದ್ದ ರಾಗಿಣಿಗೆ ಈ ಬಾರಿ ಪೂರ್ಣ ಪ್ರಮಾಣದ ಡ್ಯಾನ್ಸರ್‌ ಪಾತ್ರ ನಿರ್ವಹಿಸುವ ಅವಕಾಶ ಸಿಕ್ಕಿದೆ. `ಹೌದು, ಈ ಚಿತ್ರದಲ್ಲಿ ನನ್ನದು ಡ್ಯಾನ್ಸರ್‌ ಪಾತ್ರ. ಅದಕ್ಕಾಗಿ ಎಲ್ಲ ತರಹದ ತಯಾರಿ ನಡೆಸಿಕೊಳ್ಳುತ್ತಿದ್ದೇನೆ,' ಎಂದು ರಾಗಿಣಿ ಹೇಳುತ್ತಾಳೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ