ಜ್ಯೋತಿ ಸಿಂಗ್ ಸಂಸ್ಥಾಪಕಿ, ಕ್ರಿಯೇಟಿವ್ ಆರ್ಟ್
ಕಂಪ್ಯೂಟರ್ ಮತ್ತು ಟೆಕ್ನಾಲಜಿ ಬಂದದ್ದರಿಂದ ಸಣ್ಣ ಊರುಗಳಲ್ಲೂ ದೊಡ್ಡ ನಗರಗಳಲ್ಲಿ ಸಿಗುತ್ತಿದ್ದ ಸೌಕರ್ಯಗಳು ಸಿಗುತ್ತಿವೆ. ಇದರಿಂದ ಸಣ್ಣ ಊರುಗಳಲ್ಲಿ ಬಿಸ್‌ನೆಸ್ ಮಾಡುವವರಿಗೆ ಬಹಳ ಅನುಕೂಲವಾಗುತ್ತಿದೆ. ಬಹಳಷ್ಟು ಜನ ಕಂಪ್ಯೂಟರ್ ಮತ್ತು ಟೆಕ್ನಾಲಜಿಗೆ ಸಂಬಂಧಿಸಿದ ಕ್ರಿಯೇಟಿವ್ ವರ್ಕ್‌ಗಳನ್ನು ತಮ್ಮ ಬಿಸ್‌ನೆಸ್ ಮಾಡಿಕೊಂಡಿದ್ದಾರೆ.
ಕಾನ್ಪುರದ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಜ್ಯೋತಿ ಕ್ರೈಸ್ಟ್ ಚರ್ಚ್ ಕಾಲೇಜಿನಿಂದ ಪದವಿ ಪಡೆದರು. ಅವರು ಡಾಕ್ಟರ್‌ಆಗಲು ಬಯಸಿ ಬಿಎಂಎಸ್ ಶಿಕ್ಷಣಕ್ಕೆ ಸೇರಿಕೊಂಡರು. ಆಗಲೇ ಮನೆಯವರಿಗೆ ಅವರ ಮದುವೆಯ ಚಿಂತೆ ಕಾಡತೊಡಗಿತು. ಮನೆಯವರ ಇಚ್ಛೆಯ ಮುಂದೆ ಜ್ಯೋತಿಯದು ಏನೂ ನಡೆಯಲಿಲ್ಲ. 1997ರಲ್ಲಿ ಅವರ ಮದುವೆ ಆಗ್ರಾದ ವ್ಯಾಪಾರಿ ನಂದನ್ ಸಿಂಗ್‌ರೊಂದಿಗೆ ನಡೆಯಿತು. ಆಗ್ರಾ ಮತ್ತು ಗುಜರಾತ್‌ನಲ್ಲಿ ಅವರಿಗೆ ದೊಡ್ಡ ವ್ಯವಹಾರವಿತ್ತು. ಜ್ಯೋತಿಯ ಅತ್ತೆಯ ಮನೆ ದೊಡ್ಡ ಬಿಸ್‌ನೆಸ್ ವುಮನ್ ಫ್ಯಾಮಿಲಿಯಾಗಿತ್ತು. ಓದಿನ ನಂತರ, ಟೆಕ್ನಿಕಲ್ ಕ್ಷೇತ್ರದಲ್ಲಿ ಯಶಸ್ಸು ಬೇಗ ಸಿಗುತ್ತದೆ ಎಂದು ಜ್ಯೋತಿಗೆ ತಿಳಿದಿತ್ತು. ಅವರು ಮಲ್ಟಿಮೀಡಿಯಾ ಕ್ಷೇತ್ರದಲ್ಲಿ ತಮ್ಮ ಕೆರಿಯರ್ ರೂಪಿಸಿಕೊಳ್ಳಲು ಬಯಸಿದರು.
“ನಮ್ಮದು ಬಿಸ್‌ನೆಸ್ ಕುಟುಂಬ. ನಮ್ಮ ಪರಿಚಯಸ್ಥರೂ ಹೆಚ್ಚಾಗಿ ಬಿಸ್‌ನೆಸ್ ಮಾಡುವವರೇ. ಅವರು ತಮ್ಮದೇನಾದರೂ ಕ್ರಿಯೇಟಿವ್ ಡಿಸೈನ್ ಮಾಡಿಸಬೇಕಾಗಿದ್ದರೆ ದೆಹಲಿಗೆ ಓಡಬೇಕಾಗಿತ್ತು.
“ಹೀಗಾಗಿ ಆ ಕೆಲಸವನ್ನು ನಾನು ಮಾಡಬೇಕು ಎಂದು ಅನ್ನಿಸಿತು. ನನಗೆ ಮಲ್ಟಿ ಮೀಡಿಯಾ ಬಗ್ಗೆ ಏನೂ ತಿಳಿದಿರಲಿಲ್ಲ. ಕೆಲವರನ್ನು ಕೆಲಸಕ್ಕೆ ಇಟ್ಟುಕೊಂಡು ಶುರು ಮಾಡಬೇಕೆಂದು ಯೋಚಿಸಿದೆ. ನಂತರ ಯಾವುದಾದರೂ ಕೆಲಸ ಶುರು ಮಾಡುವಾಗ ನನಗೂ ಅದರ ಬಗ್ಗೆ ತಿಳಿವಳಿಕೆ ಇರಬೇಕು ಅನ್ನಿಸಿತು. ಆಗ ನಾನು ಮಲ್ಟಿಮೀಡಿಯಾ ಕೋರ್ಸ್‌ಗೆ ಸೇರಿದೆ,” ಎಂದು ಜ್ಯೋತಿ ಹೇಳುತ್ತಾರೆ.
ಸಫಲತೆ ಸಿಕ್ಕಿತು
ಜ್ಯೋತಿಯ ಈ ಪಯಣ ನಿಧಾನವಾಗಿ ಯಶಸ್ಸಿನ ಮೆಟ್ಟಿಲುಗಳನ್ನು ಏರತೊಡಗಿತು. ದೆಹಲಿ, ಮುಂಬೈ ಮತ್ತು ಸಿಂಗಾಪುರ್‌ಗಳಲ್ಲಿ ಅವರಿಗೆ ಕೆಲಸ ಸಿಗತೊಡಗಿತು.
ಅವರು ಹೇಳುತ್ತಾರೆ, “ನಾವು ದೊಡ್ಡ ನಗರಗಳಿಗಿಂತ ಕಡಿಮೆ ರೇಟ್‌ನಲ್ಲಿ ಕೆಲಸ ಮಾಡಿಕೊಡಲು ಶುರು ಮಾಡಿದೆ. ಜನರಿಗೆ ನಮ್ಮ ಕೆಲಸ ಚೆನ್ನಾಗಿದೆ ಅನ್ನಿಸಿತು. ಹೆಚ್ಚಾಗಿ ಡಾಕ್ಯುಮೆಂಟರಿ ಮತ್ತು ಟಿವಿ ಚಾನೆಲ್ ಗಳ ಜಾಹೀರಾತುಗಳನ್ನು ಶೂಟ್ ಮಾಡುವ ಕೆಲಸ ಸಿಕ್ಕಿತು. ಇದರಲ್ಲಿ ನಮ್ಮ ಫೀಲ್ಡ್ ಟೀಮ್ನವರ ಸಹಕಾರ ಚೆನ್ನಾಗಿದೆ.”
“ಮಗ ಹಾಗೂ ನನ್ನ ಗಂಡ ಬೆಳಗ್ಗೆ 11 ಗಂಟೆಯೊಳಗೆ ಸ್ಕೂಲ್ ಹಾಗೂ ಆಫೀಸಿಗೆ ಹೊರಟುಬಿಡುತ್ತಾರೆ. ನಾನೂ ನನ್ನ ಕ್ರಿಯೇಟಿವ್ ಆರ್ಟ್‌ನ ಆಫೀಸಿಗೆ ಹೊರಡುತ್ತೇನೆ. ಅಲ್ಲಿ ನಡೆಯುವ ಕೆಲಸಗಳನ್ನು ಗಮನಿಸುತ್ತೇನೆ. ಯೋಗ್ಯ ದರದಲ್ಲಿ ಸರಿಯಾಗಿ ಕೆಲಸ ಮಾಡಬೇಕು. ಬಿಸ್‌ನೆಸ್‌ಲ್ಲಿ ದೊಡ್ಡ ರೇಸ್ ಕುದುರೆಯಾಗಲು ಇದು ಅತ್ಯಂತ ಅಗತ್ಯವಾಗಿದೆ.
“ಸಣ್ಣ ಊರುಗಳಲ್ಲಿ ಕೆಲಸ ಮಾಡುವುದರಿಂದ ಕೆಲವು ಲಾಭಗಳೂ ಇವೆ, ಕೆಲವು ನಷ್ಟಗಳೂ ಇವೆ. ನಮಗೆ ಒಳ್ಳೆಯ ಕೆಲಸಕ್ಕೂ ಕಡಿಮೆ ಹಣ ಸಿಗುತ್ತದೆ. ಆದರೆ ದೊಡ್ಡ ನಗರಗಳಲ್ಲಿ ಕೆಲಸ ಮಾಡುತ್ತಿರುವ ಕಂಪನಿಗಳಿಗೆ ಜನ ಸಂತೋಷದಿಂದ ಹೆಚ್ಚು ಹಣ ಕೊಡುತ್ತಾರೆ. ಅವರ ಮೇಲೆ ವಿಶ್ವಾಸವನ್ನೂ ಇಡುತ್ತಾರೆ. ನಮ್ಮಲ್ಲಿ ಕೆಲಸ ನೋಡಿದ ನಂತರವೇ ವಿಶ್ವಾಸ ಇಡುತ್ತಾರೆ. ಈ ಬಿಸ್‌ನೆಸ್ ಸಹ ಕಣ್ಣು ಕುಕ್ಕುವಂತಿರುತ್ತದೆ.
“ಇದಕ್ಕೆ ತನ್ನದೇ ಆದ ಸವಾಲುಗಳಿರುತ್ತವೆ. ದಿನ ಅನೇಕ ರೀತಿಯ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಆದರೆ ಪರಿಶ್ರಮ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡುವವರಿಗೆ ಖಂಡಿತ ಯಶಸ್ಸು ಸಿಗುತ್ತದೆ!” ಎಂದು ಅವರು ಹೇಳುತ್ತಾರೆ.
ಜ್ಯೋತಿ ತಮ್ಮ ತ್ವಚೆಯ ರಕ್ಷಣೆಗೆ ಎಂದೂ ಸಾಬೂನು ಉಪಯೋಗಿಸಿರಲಿಲ್ಲ. 14 ವರ್ಷಗಳ ಹಿಂದೆ ಮೊದಲ ಬಾರಿ ಡವ್ ಸೋಪ್ ಉಪಯೋಗಿಸಿದರು. ಆಗಿನಿಂದ ಇಂದಿನವರೆಗೆ ಇವರು ಡವ್ ಸೋಪನ್ನೇ ಉಪಯೋಗಿಸುತ್ತಿದ್ದಾರೆ. ಇವರಿಗೆ ಎಂದೂ ತ್ವಚೆಗೆ ಸಂಬಂಧಿಸಿದಂತೆ ಯಾವುದೇ ತೊಂದರೆಯಾಗಲಿಲ್ಲ.
– ಪ್ರತಿನಿಧಿ