ಮಹಿಳೆಯ ವ್ಯಕ್ತಿತ್ವದ ಪ್ರಮುಖ ಅಂಶ ಮೇಕಪ್ ಆಗಿರುತ್ತದೆ. ಆದರೆ ಸಮಯದ ಅಭಾವ ಹಾಗೂ ಕೆಲಸದ ಒತ್ತಡದಿಂದಾಗಿ ಆಕೆ ಸರಿಯಾದ ರೀತಿಯಲ್ಲಿ ಸಿದ್ಧಳಾಗುವುದಿಲ್ಲ. ಹೀಗಾಗಿ ಅವಳ ಆತ್ಮವಿಶ್ವಾಸದಲ್ಲಿ ಕೊರತೆಯುಂಟಾಗುತ್ತದೆ. ಅದು ಅವಳ ಕೆಲಸದ ಮೇಲೆ ಪರಿಣಾಮ ಬೀರುತ್ತದೆ. ಅಂದಹಾಗೆ ಈಗ ಎಲ್ಲರ ದೃಷ್ಟಿ ಮೊದಲು ಲುಕ್ಸ್ ಮೇಲೆ ಬೀಳುತ್ತದೆ. ಆದ್ದರಿಂದ ಅದಕ್ಕೆ ಗಮನ ಕೊಡುವುದು ಎಲ್ಲ ಮಹಿಳೆಯರಿಗೂ ಅಗತ್ಯವಾಗಿದೆ.
ನಿಮಗೆ ಇನ್‌ಸ್ಟಂಟ್ ಮೇಕಪ್‌ಗೆ 6 ಟಿಪ್ಸ್ ಕೊಡುತ್ತಿದ್ದೇವೆ. ಅದನ್ನು ಬಳಸಿಕೊಂಡು ಬಹಳ ಕಡಿಮೆ ಸಮಯದಲ್ಲಿ ನೀವು ಆಕರ್ಷಕ ವ್ಯಕ್ತಿತ್ವದ ಒಡತಿಯಾಗಬಹುದು.
ಕ್ಲೆನ್ಸರ್ : ಮೇಕಪ್‌ಗೆ ಮೊದಲು ಮುಖವನ್ನು ಚೆನ್ನಾಗಿ ತೊಳೆದುಕೊಳ್ಳುವುದು ಬಹಳ ಅಗತ್ಯ. ಅದಕ್ಕೆ ನೀವು ಬೇಸಿಗೆಯಲ್ಲಿ ಆಯಿಲ್ ಫ್ರೀ ಕ್ಲೆನ್ಸರ್ ಉಪಯೋಗಿಸಬಹುದು. ಡ್ರೈಸ್ಕಿನ್ ಆಗಿದ್ದರೆ ಮಾಯಿಶ್ಚರೈಸರ್ ಹಾಗೂ ಆಯ್ಲಿ ಸ್ಕಿನ್ ಆಗಿದ್ದರೆ ಆ್ಯಸ್ಟ್ರಿಂಜೆಂಟ್ ಲೋಶನ್ ಹಚ್ಚಿ.
ಕನ್ಸೀಲರ್ : ಮುಖದ ಕಲೆಗಳು, ಆ್ಯಕ್ನೆ ಮತ್ತು ಡಾರ್ಕ್ ಸರ್ಕಲ್ ಇತ್ಯಾದಿಗಳನ್ನು ಕನ್ಸೀಲರ್ ಸಹಾಯದಿಂದ ಅಡಗಿಸಿ. ಕನ್ಸೀಲರ್‌ನ್ನು ಯಾವಾಗಲೂ ತೆಳುವಾಗಿ ಹಚ್ಚಿ.
ಫೌಂಡೇಶನ್ ಮತ್ತು ಪೌಡರ್: ಕನ್ಸೀಲರ್ ಹಚ್ಚಿದ ನಂತರ ಇಡೀ ಮುಖ ಹಾಗೂ ಕತ್ತಿನ ಮೇಲೆ ನಿಮ್ಮ ಸ್ಕಿನ್ ಟೋನ್‌ಗೆ ಅನುಗುಣವಾಗಿ ಫೌಂಡೇಶನ್ ಹಚ್ಚಿ. ಚಳಿಗಾಲದಲ್ಲಿ ಮಾಯಿಶ್ಚರೈಸರ್ ಬೇಸ್ಡಾ ಫೌಂಡೇಶನ್ ಮತ್ತು ಬೇಸಿಗೆಯಲ್ಲಿ ಆಯಿಲ್ ಫ್ರೀ ಫೌಂಡೇಶನ್ ಉಪಯೋಗಿಸಿ. ಫೌಂಡೇಶನ್‌ನ್ನು ಮಾಯಿಶ್ಚರೈಸರ್‌ನಂತೆ ತ್ವಚೆಯನ್ನು ಸೇರುವಂತೆ ಬ್ಲೆಂಡ್ ಮಾಡಿ. ಅದರಿಂದ ನಿಮಗೆ ಸಂಪೂರ್ಣವಾಗಿ ನ್ಯಾಚುರಲ್ ಲುಕ್ ಸಿಗುತ್ತದೆ. ನಂತರ ಬ್ರಶ್‌ನ ಸಹಾಯದಿಂದ ಮುಖದ ಮೇಲೆ ಲೂಸ್ ಪೌಡರ್ ಹಚ್ಚಿ.
ಮೇಕಪ್ ಹೆಚ್ಚು ಸಮಯ ನಿಲ್ಲುತ್ತದೆ ಹಾಗೂ ಹೆಚ್ಚುವರಿ ಆಯಿಲ್‌ನ್ನು ಪೌಡರ್ ಹೀರಿಕೊಳ್ಳುತ್ತದೆ.
ಬ್ಲಶರ್ : ಕೆನ್ನೆಗಳಿಗೆ ನ್ಯಾಚುರಲ್ ಗ್ಲೋಯಿಂಗ್ ಲುಕ್ ಕೊಡಲು ನಿಮ್ಮ ಸ್ಕಿನ್ ಟೋನ್‌ಗೆ ಅನುಗುಣವಾದ ಬ್ಲಶರ್‌ನ್ನು ಉಪಯೋಗಿಸಿ. ನಿಮ್ಮ ಕೆನ್ನೆಗಳ ಮೇಲೆ ನಗುವಾಗ ಮೇಲೇಳುವ ಭಾಗದಲ್ಲಿ ಬ್ಲಶರ್ ಹಚ್ಚಿ. ಬ್ಲಶರ್‌ನ್ನು ಯಾವಾಗಲೂ ತೆಳುವಾಗಿಯೇ ಹಚ್ಚಿ.
ಐ ಮೇಕಪ್ : ಡೇ ಮೇಕಪ್‌ಗೆ ಅಪ್ಪರ್ ಲಿಡ್ ಮೇಲೆ ಐ ಲೈನರ್ ಮತ್ತು ಲೋಯರ್ ಲಿಡ್ ಮೇಲೆ ಕಾಜಲ್ ಅಥವಾ ಐ ಪೆನ್ಸಿಲ್ ಉಪಯೋಗಿಸಿ. ಜೊತೆಗೆ ಹಗಲಿನಲ್ಲಿ ಐ ಶ್ಯಾಡೋನಲ್ಲಿ ಸಾಫ್ಟ್ ಪೇಸ್ಟಲ್ ಶೇಡ್‌ನ್ನೇ ಉಪಯೋಗಿಸಿ. ರಾತ್ರಿ ಕಣ್ಣುಗಳಿಗೆ ಶೈನಿ ಮತ್ತು ಗ್ಲಾಸಿ ಲುಕ್ ಕೊಡಲು ಬ್ರಾಂಝ್, ಗೋಲ್ಡ್ ಮತ್ತು ಡಾರ್ಕ್ ಶೇಡ್ ಉಪಯೋಗಿಸಿ. ಜೊತೆಗೆ ವಾಟರ್ ಪ್ರೂಫ್ ಟ್ರ್ಯಾನ್ಸ್ ಪರೆಂಟ್ ಅಥವಾ ಬ್ಲ್ಯಾಕ್ ಮಸ್ಕರಾದಿಂದ ಕಣ್ಣುಗಳ ಮೇಕಪ್ ಪೂರ್ಣಗೊಳಿಸಿ. ಐ ಬ್ರೋಸ್‌ನ್ನು ಐ ಪೆನ್ಸಿಲ್ ಸಹಾಯದಿಂದ ಡಿಫೈನ್ ಮಾಡಿ.
ಲಿಪ್ ಮ್ಯಾಜಿಕ್ : ಹಗಲಿನಲ್ಲಿ ತುಟಿಗಳ ಮೇಲೆ ಲಿಪ್ ಪೆನ್ಸಿಲ್‌ನಿಂದ ಔಟ್ ಲೈನ್ ಮಾಡಿಕೊಂಡು ನ್ಯಾಚುರಲ್ ಶೇಡ್‌ನ ಲಿಪ್‌ಸ್ಟಿಕ್ ಹಚ್ಚಿ ಅಥವಾ ಬರೀ ನ್ಯೂಟ್ರಲ್ ಶೇಡ್‌ನ ಲಿಪ್ ಗ್ಲಾಸ್ ಉಪಯೋಗಿಸಿ.
– ಕೆ. ಮಮತಾ