ಲುಕ್ಸ್ ಗೆ ಹೊಸ ಮೆರುಗು ಕೊಡಲು ಮುಖದ ಜೊತೆಗೆ ಕೂದಲು ಕೂಡ ಸುಂದರವಾಗಿರುವುದು ಅತ್ಯವಶ್ಯ. ಆಗಲೇ ವ್ಯಕ್ತಿತ್ವಕ್ಕೆ ಹೊಸ ಕಲೆ ಬರುತ್ತದೆ.

ಅಡ್ವಾನ್ಸ್ ಹೇರ್‌ ಟ್ರೀಟ್‌ಮೆಂಟ್‌ ಎಂತಹ ಹೊಸ ವಿಧಾನವೆಂದರೆ, ಅದರಿಂದ ಕೂದಲಿನ ಸೌಂದರ್ಯ ಹಾಗೂ ಹೊಳಪನ್ನು ಹೆಚ್ಚಿಸಬಹುದು. ಈ ಹೇರ್‌ ಟ್ರೀಟ್‌ಮೆಂಟ್‌ನಲ್ಲಿ ಹೇರ್‌ ಸ್ಟ್ರೇಟ್‌ ನಿಂಗ್‌, ರೀಬೌಂಡಿಂಗ್‌, ಹೇರ್‌ ಕಲರ್‌, ಹೈಡ್ರಾ ಥೆರಪಿ ಮತ್ತು ಹೇರ್‌ ಕಟ್‌ ವಿಶೇಷತೆಗಳಿವೆ.

ಕೂದಲಿನ ಪ್ರಕಾರಗಳನ್ನು ಅರಿಯಿರಿ

ಕೂದಲಿಗೆ ಯಾವುದೇ ಟ್ರೀಟ್‌ಮೆಂಟ್‌ ಮಾಡುವ ಮೊದಲು, ಕೂದಲಿನ ಪ್ರಕಾರಗಳನ್ನು ಅರಿಯಿರಿ. ಅದರ ಟೆಕ್ಸ್ ಚರ್‌ ಹೇಗಿದೆ ಎನ್ನುವುದನ್ನು ತಿಳಿದುಕೊಳ್ಳಿ. ಕೂದಲು ದಟ್ಟವಾಗಿ ಇದೆಯೋ ತೆಳ್ಳಗೆ ಇದೆಯೋ ಎಂಬುದನ್ನು ಅರಿಯುವುದರ ಜೊತೆಗೆ, ಕೂದಲಿನಲ್ಲಿ ನೈಸರ್ಗಿಕ ತೇವಾಂಶ ಎಷ್ಟಿದೆ ಎನ್ನುವುದನ್ನು ಕೂಡ ತಿಳಿದುಕೊಳ್ಳಬೇಕಾಗುತ್ತದೆ. ಇದನ್ನು ಅರಿತುಕೊಳ್ಳಲು ಕೂದಲಿನ ಒಂದು ಭಾಗವನ್ನು ಬೆರಳು ಹಾಗೂ ಹೆಬ್ಬೆಟ್ಟಿನಿಂದ ಒತ್ತಿ ಹಿಡಿದೆಳೆಯಿರಿ.

2

ಎಳೆಯುವುದರಿಂದ ಕೂದಲು ತುಂಡರಿಸಿದರೆ ಅವುಗಳಲ್ಲಿ ಸಾಮಾನ್ಯ ಎಲಾಸ್ಟಿಸಿಟಿ ಇದೆ ಎಂದರ್ಥ. ಒಂದು ವೇಳೆ ಕೈಯಲ್ಲಿ ಹಿಡಿಯುತ್ತಿದ್ದಂತೆಯೇ ಕೂದಲು ತುಂಡರಿಸಿದರೆ ಮೊದಲು ಅವಕ್ಕೆ 7-8 ಬಾರಿ ಸ್ಪಾ ಸಿಟಿಂಗ್‌ ಅವಶ್ಯವಾಗಿ ಪಡೆಯಿರಿ. ಆ ಬಳಿಕವೇ ಯಾವುದಾದರೂ ಟ್ರೀಟ್‌ಮೆಂಟ್‌ ತೆಗೆದುಕೊಳ್ಳಬಹುದು.

ಇದರ ಹೊರತಾಗಿ ಗಮನಿಸಿ : ಕೂದಲಿನ ವೇವ್ ‌ಹೇಗಿದೆ? ನಾರ್ಮಲ್, ವೆರಿ ಕರ್ಲಿ, ಕರ್ಲಿ ಅಥವಾ ಮ್ಯಾಗಿ ಕರ್ಲಿ? ಕೂದಲಿಗೆ ಮೊದಲೇ ಮೆಹಂದಿ ಲೇಪಿಸಲಾಗಿದೆಯೇ? (ಒಂದು ವೇಳೆ ಹಾಕಿದ್ದರೆ ಅದರ 100% ರಿಸ್ಟ್‌ ಬರುವುದಿಲ್ಲ)

3

ಕೂದಲಿಗೆ ಬಣ್ಣ ಹಾಕಲಾಗಿದೆಯೇ ಅಥವಾ ಟಚ್‌ ಅಪ್‌ ಮಾಡಲಾಗಿದೆಯೇ ಅಥವಾ ಬ್ಲೀಚ್‌ ಮಾಡಲಾಗಿದೆಯೇ?

ಹೇರ್‌ ಕಟ್‌ ಆಗಿದೆಯೋ ಇಲ್ಲವೋ ಎನ್ನುವುದನ್ನು ಪರಿಶೀಲನೆ ಮಾಡಿ ನೋಡಿ. ಏಕೆಂದರೆ ಸ್ಚ್ರೇಟ್‌ನಿಂಗ್‌ನ ಮುಂಚೆ ಹೇರ್‌ ಕಟ್‌ಆಗಬಹುದು, ಆ ಬಳಿಕ ಆಗುವುದಿಲ್ಲ.

ಹೇರ್ಸ್ಟ್ರೇಟ್ನಿಂಗ್ವಿಥ್ರೀಬೌಂಡಿಂಗ್‌ : ಸ್ಟ್ರೇಟ್‌ನಿಂಗ್‌ ಮಾಡುವ ಮೊದಲೇ ಕ್ರೀಮ್ ನ ಪ್ರಕಾರಗಳ ಬಗ್ಗೆ ಅರಿಯಿರಿ. ಏಕೆಂದರೆ ಯಾವ ಸ್ಟ್ರೇಟ್‌ನಿಂಗ್‌ ಕ್ರೀಮ್ ನಿಂದ ಯಾವ ಕೂದಲಿಗೆ ಉಪಯುಕ್ತ ಎನ್ನುವುದು ಗೊತ್ತಾಗುತ್ತೆ.

ಸ್ಟ್ರೇಟ್‌ನಿಂಗ್‌ ಕ್ರೀಮ್ ನಲ್ಲಿ 4 ಬಗೆಗಳು

ಸೆನ್ಸೆಟೈಸ್ಸ್ಟ್ರೇಟ್ನಿಂಗ್ಕ್ರೀಮ್ : ಯಾವ ಕೂದಲಿನಲ್ಲಿ ಮೊದಲಿನಿಂದಲೇ ಸಾಕಷ್ಟು ಕೆಮಿಕಲ್ ಅಂದರೆ ಹೇರ್‌ ಕಲರ್‌, ಹೇರ್ ಬ್ಲೀಚ್‌ ಹಾಕಲಾಗಿರುತ್ತದೋ ಅಂಥವರಿಗೆ ಇದು ಉಪಯುಕ್ತ. ಇದನ್ನು ಲೇಪಿಸಿ 10-40 ನಿಮಿಷಗಳ ಕಾಲ ಹಾಗೆಯೇ ಬಿಡಿ.

ಗ್ಲೋಬಲ್ ಕಲರ್‌ (ಪ್ರೀ ಲೈಟಿಂಗ್‌) ಕ್ರೀಮ್ : ಇದೂ ಕೂಡ ಕೆಮಿಕಲ್ ಇರುವ ಕೂದಲಿಗಾಗಿಯೇ ರೂಪಿಸಲಾಗಿದೆ. ಇದನ್ನು ಕೂದಲಿಗೆ ಹಚ್ಚಿ 10 ರಿಂದ 40 ನಿಮಿಷಗಳ ಕಾಲ ಹಾಗೆಯೇ ಬಿಡಿ. ಪ್ರತಿ 10 ನಿಮಿಷಗಳಿಗೊಮ್ಮೆ ಅದನ್ನು ಚೆಕ್‌ ಮಾಡಿ.

ನಾರ್ಮಲ್ ಕ್ರೀಮ್ : ಈ ಕ್ರೀಮ್ ಅಷ್ಟೇನೂ ದಟ್ಟವಿಲ್ಲದ ಕೂದಲಿಗೆ ಉಪಯುಕ್ತ. ಇದರ ಕಾಲಾವಧಿ 20 ರಿಂದ 50 ನಿಮಿಷ. ಅದನ್ನು ಪ್ರತಿ 20 ನಿಮಿಷಗಳಿಗೊಮ್ಮೆ ಚೆಕ್‌ ಮಾಡಿ.

ರೆಸಿಸ್ಟೆಂಟ್ಕ್ರೀಮ್ : ಒಂದು ವೇಳೆ ಕೂದಲಿನ ವೇವ್ಸ್ ಹಠಮಾರಿಯಾಗಿದ್ದು ಕೂದಲು ದಟ್ಟವಾಗಿದ್ದರೆ ರೆಸಿಸ್ಟೆಂಟ್‌ ಕ್ರೀಮ್ ಹಚ್ಚಬೇಕು. ಅದನ್ನು ಕೂದಲಿಗೆ ಹಚ್ಚಿದ ಬಳಿಕ 20 ರಿಂದ 50 ನಿಮಿಷಗಳ ಕಾಲ ಹಾಗೆಯೇ ಬಿಡಿ.

ಸ್ಟ್ರೇಟ್‌ನಿಂಗ್‌ ಮಾಡುವಾಗ ಕೂದಲಿನ ಬುಡ ಭಾಗದಲ್ಲಿ ಹಾರ್ಡ್‌ ಬೋರ್ಡ್‌ ಇಡಿ. ಹೀಗೆ ಮಾಡುವುದರಿಂದ ಕ್ರೀಮ್ ಹಚ್ಚಿದ ಬಳಿಕ ಅವು ನೇರವಾಗಿಯೇ ಇರುತ್ತವೆ.

ಸ್ಟ್ರೇಟ್‌ನಿಂಗ್‌ ಮಾಡುವ ಮೊದಲು ಕೂದಲನ್ನು ಆಪ್ಟಿ ಸ್ಟ್ರೇಟ್‌ ಶ್ಯಾಂಪೂವಿನಿಂದ ತೊಳೆಯಿರಿ ಹಾಗೂ ಟವೆಲ್‌ನಿಂದ ಒಣಗಿಸಿ. ನಂತರ ಸಾಧಾರಣ ಹಸಿಯಾಗಿರುವ ಕೂದಲಿಗೆ ಸ್ಟ್ರೇಟ್‌ನಿಂಗ್‌ ಕ್ರೀಮ್ ನ್ನು ಸೆಕ್ಷನ್‌ ವೈಸ್‌ ಹಚ್ಚಿ.

ನಡು ನಡುವೆ ಕೂದಲಿನ ಬಾಂಡ್‌ ಬ್ರೇಕ್‌ ಆಗಿದೆಯೋ ಇಲ್ಲಿ ಎಂಬುದನ್ನು ಚೆಕ್‌ ಮಾಡುತ್ತಾ ಇರಿ. ಬಾಂಡ್‌ ಬ್ರೇಕ್‌ ಆಗಿದ್ದರೆ ಕೂದಲನ್ನು ಉಗುರು ಬೆಚ್ಚಗಿನ ನೀರಿನಿಂದ ಸ್ವಚ್ಛಗೊಳಿಸಿ.

hair-3

ಒಂದು ವೇಳೆ ನಿಮ್ಮದು ಶುಷ್ಕ ಕೇಶವಾಗಿದ್ದರೆ, ಆಪ್ಟಿಕೇರ್‌ ಮಾಸ್ಕನ್ನು ಉಪಯೋಗಿಸಿ. ಮಾಸ್ಕ್ ನ್ನು ಉತ್ತಮ ರೀತಿಯಲ್ಲಿ ಬೆರಳಿನಿಂದ ಮಿಶ್ರಣ ಮಾಡುತ್ತ ಲೇಪಿಸಿ. ಬಳಿಕ ಅದನ್ನು 5 ನಿಮಿಷ ಹಾಗೆಯೇ ಇರಲು ಬಿಡಿ. ನಂತರ ಸಾಧಾರಣ ನೀರಿನಿಂದ ಸ್ವಚ್ಛಗೊಳಿಸಿ. ಈಗ ಕೂದಲನ್ನು 100% ರೂಟ್‌ನಿಂದ ಡ್ರೈ ಮಾಡಿ.ಹೇರ್‌ ಡ್ರೈಯರ್‌ ಮೀಡಿಯಂ ಹೀಟ್‌ ನಲ್ಲೇ ಆಗಬೇಕು. ಶೇ.80ರಷ್ಟು ಉದ್ದನೆಯ ಕೂದಲನ್ನು ಡ್ರೈ ಮಾಡಿ. ಶೇ.20ರಷ್ಟು ಕೂದಲಿನಲ್ಲಿ ತೇವಾಂಶ ಇರಬೇಕು. ಈಗ ಕೂದಲಿನ ಸ್ವಲ್ಪ ಸ್ವಲ್ಪ ಭಾಗಕ್ಕೆ 180 ಡಿಗ್ರಿ ಟೆಂಪರೇಚರ್‌ನಲ್ಲಿ ಐರ್ನಿಂಗ್‌ ಮಾಡಿ. ಬಳಿಕ ಕೂದಲಿನಲ್ಲಿ ನ್ಯೂಟ್ರಿಲೈಸರ್‌ ಲೇಪಿಸಿ ಹಾಗೂ ಅದನ್ನು 10 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಕೂದಲನ್ನು ಸಾಧಾರಣ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಈಗ ಡ್ರೈಯರ್‌ನಿಂದ ಮಧ್ಯಮ ಬಿಸಿಯಲ್ಲಿ ಕೂದಲನ್ನು ಶೇ.100ರಷ್ಟು ಡ್ರೈ ಮಾಡಿ.

ಕೂದಲಿನಲ್ಲಿ ಪವರ್ಶೈನ್‌ : ಕೂದಲಿಗೆ ಹೆಚ್ಚುವರಿ ಹೊಳಪು ತರಲು ಆಪ್ಟಿ ಕೇರ್‌ ಮಾಸ್ಕ್ ನಲ್ಲಿ ಆಪ್ಟಿ ಕೇರ್‌ ಸೀರಮ್ ಮಿಕ್ಸ್ ಮಾಡಿ. ಅರ್ಧ ಚಮಚ ಮಾಸ್ಕ್ ನಲ್ಲಿ ಒಂದು ಹನಿ ಸೀರಮ್ ಹಾಕಿಕೊಂಡು ಕೂದಲಿನುದ್ದಕ್ಕೂ ಬೆರಳಿನ ಸಹಾಯದಿಂದ ಲೇಪಿಸಿ. ಅದನ್ನು 5 ನಿಮಿಷಗಳ ಕಾಲ ಹಾಗೆಯೇ ಇರಲು ಬಿಡಿ. ಬಳಿಕ 100% ಮೀಡಿಯಂ ಹೀಟ್‌ನಲ್ಲಿ ಡ್ರೈಯರ್‌ನಿಂದ ಡ್ರೈ ಮಾಡಿ. ಡ್ರೈಯರ್‌ನ್ನು ಮೇಲ್ಭಾಗದತ್ತ ಇಡುತ್ತ ಕೂದಲಿನಲ್ಲಿ ಬೆರಳನ್ನು ತಿರುಗಿಸುತ್ತ ಒಣಗಿಸಿ.

IMG_7842-copy-copy

ಎಚ್ಚರಿಕೆಗಳು

ಸ್ಟ್ರೇಟ್‌ನಿಂಗ್‌ ವಿತ್‌ ರೀಬೌಂಡಿಂಗ್‌ ಸರ್ವೀಸ್‌ನ ಬಳಿಕ 72 ಗಂಟೆಗಳ ತನಕ ಕೂದಲನ್ನು ಶ್ಯಾಂಪೂ ಅಥವಾ ನೀರಿನಿಂದಾಗಲಿ ತೊಳೆಯಬೇಡಿ.

ಕೂದಲನ್ನು ಕಿವಿಗಳ ಹಿಂದೆ ಸರಿಸುವುದನ್ನು ಮಾಡಬೇಡಿ. ಹೀಗೆ ಮಾಡುವುದರಿಂದ ಕೂದಲಿನಲ್ಲಿ ವಕ್ರತೆ ಉಂಟಾಗಬಹುದು.

ಹೇರ್‌ ಕ್ಲಿಪ್ಸ್, ಪಿನ್ಸ್, ಬ್ಯಾಂಡ್ಸ್ ಮುಂತಾದವನ್ನು ಉಪಯೋಗಿಸಬೇಡಿ. ಇದರಿಂದ ಕೂದಲಿನಲ್ಲಿ ಎಳೆತ ಉಂಟಾಗಬಹುದು ಹಾಗೂ ಅದು ತುಂಡರಿಸಬಹುದು.

ಹೆಚ್ಚು ಉಷ್ಣತೆಯಿರುವ ಸ್ಥಳದಲ್ಲಿ ಇರಬೇಡಿ. ಬೆವರು ಬಂದಾಗ ಸ್ಟ್ರೇಟ್‌ನಿಂಗ್‌ ಹಾಳಾಗಬಹುದು.

ಜಾಗಿಂಗ್‌, ಎಕ್ಸರ್‌ಸೈಜ್‌, ಯೋಗ, ಡ್ಯಾನ್ಸ್ ಹೀಗೆ ಯಾವುದನ್ನೂ ಮಾಡಬೇಡಿ.

ಸ್ಕೂಟಿ ಮುಂತಾದವನ್ನು ಚಲಾಯಿಸಬೇಡಿ. ಸ್ಕೂಟರ್‌ ಅಥವಾ ಬೈಕ್‌ ಮೇಲೂ ಕುಳಿತುಕೊಳ್ಳಬೇಡಿ. ಏಕೆಂದರೆ ಕೂದಲು ಹಾರಿ ಅವುಗಳ ಅಂದ ಹಾಳಾಗಬಹುದು. ಅವುಗಳಲ್ಲಿ ವೇವ್ ‌ಉಂಟಾಗಬಹುದು.

ತಲೆಯ ಮೇಲೆ ಕ್ಯಾಪ್‌. ಹೆಲ್ಮೆಟ್‌, ಟೈಟ್‌ ಸ್ಕಾರ್ಫ್‌ ಮುಂತಾದವನ್ನು ಧರಿಸಬೇಡಿ.

ಯಾವುದೇ ಪರ್ಮನೆಂಟ್‌ ಹೇರ್‌ ಕಲರ್‌ ಮಾಡಿಸಿಕೊಳ್ಳಲು 14 ದಿನಗಳ ಕಾಲ ನಿರೀಕ್ಷಿಸಿ.

ಹೇರ್ಕಲರ್‌ : ಹೇರ್‌ ಕಲರ್‌ ಮಾಡುವ ಮೊದಲು ಕೂದಲನ್ನು ಹೈಲೈಟ್‌ ಮಾಡಲಾಗುತ್ತದೆ. ನಂತರ ಅದರಲ್ಲಿ ಗ್ಲೋಬಲ್ ಕಲರ್‌ ಮಾಡಲಾಗುತ್ತದೆ. ಗ್ಲೋಬಲ್ ಕಲರ್‌ ತಯಾರಿಸಿಕೊಳ್ಳಲು 30 ಮಿ. ಲೀಟರ್‌ ಕಲರ್‌ನಲ್ಲಿ 60 ಮಿ.ಲೀ. ಡೆಲಪರ್‌ ಹಾಕಿಕೊಳ್ಳಿ. ತಲೆಯ ಮೇಲ್ಭಾಗದಲ್ಲಿ ಕೂದಲಿನಲ್ಲಿ ಹಾರ್ಟ್‌ ಶೇಪ್‌ ಮಾಡಿಕೊಳ್ಳಿ.

ಈಗ ಸೈಡ್‌ ಪಾರ್ಟಿಂಗ್‌ನ ಪ್ರಕಾರ, ಕೂದಲಿನ ಕೆಳಭಾಗದಲ್ಲಿ ಫಾಯಿಲ್ ‌ಹಚ್ಚಿ ಮೇಲ್ಭಾಗದಲ್ಲಿ ಕಲರ್‌ ಮಾಡುತ್ತಾ ಹೋಗಿ. ಹಾರ್ಟ್‌ ಶೇಪ್‌ನ ಹೊರಗಿನಿಂದ 3 ಡಯಾಗನ್‌ ಭಾಗ ಮಾಡಿಕೊಳ್ಳಿ. ನೈಸರ್ಗಿಕ ಕೂದಲನ್ನು ನಡುವೆಯೇ ಬಿಟ್ಟು ಗ್ಲೋಬಲ್ ಕಲರ್‌ ಮಾಡುತ್ತಾ ಹೋಗಿ ಹಾಗೂ ಫಾಯಿಲ್‌ನಲ್ಲಿ ಮುಚ್ಚಿಡಿ. ಎಡಭಾಗದಿಂದ ಆರಂಭಿಸಿ ಹಾರ್ಟ್‌ ಶೇಪ್‌ನ ಹೊರಗಡೆ ಒಂದಾದ ಬಳಿಕ ಒಂದರಂತೆ ಎರಡು ವರ್ಟಿಕಲ್ ಭಾಗ ಮಾಡಿಕೊಳ್ಳಿ ಹಾಗೂ ಗ್ಲೋಬಲ್ ಕಲರ್‌ ಮಾಡುತ್ತ ಹೋಗಿ.

hair-2

ನ್ಯಾಚುರಲ್ ಕೂದಲಿನ 1 ಇಂಚ್‌ ಸೆಕ್ಷನ್‌ ಬಿಟ್ಟು ಮತ್ತು ಇಡೀ ತಲೆಯಲ್ಲಿ ಬಲಭಾಗದ ತನಕ 2 ವರ್ಟಿಕಲ್ ಭಾಗ ಮಾಡಿಕೊಳ್ಳಿ. ಬಳಿಕ ಕಲರ್‌ ಕ್ರೀಮ್ ಹಚ್ಚುತ್ತ ಹೋಗಿ. ಈಗ ಇಡೀ ತಲೆಯ ತುಂಬ ಗ್ಲೋಬಲ್ ಕಲರ್‌ ಹಾಕಿ. ಕಲರ್‌ ಥೆರಪಿ ಶ್ಯಾಂಪೂನಿಂದ ಕೂದಲನ್ನು ತೊಳೆಯಿರಿ, ಬಳಿಕ ಕಲರ್‌ ಕೇರ್‌ ಥೆರಪಿ ಕಂಡೀಶನರ್‌ ಕೂದಲಿಗೆ ಹಚ್ಚಿ ಸ್ವಲ್ಪ ಹೊತ್ತಿನ ಬಳಿಕ ಕೂದಲು ತೊಳೆಯಿರಿ.

ಹೈಡ್ರಾ ಥೆರಪಿ : ಇದನ್ನು ಮೊದಲು `ಬೈಟ್‌ ರಿಪೇರ್‌ ಥೆರಪಿ’ ಎಂದೂ ಕರೆಯಲಾಗುತ್ತಿತ್ತು. ಇದು ಶುಷ್ಕ ಹಾಗೂ ಮೆಹಂದಿ ಲೇಪಿಸಿದ ಕೂದಲಿಗೆ ಉಪಯುಕ್ತ. ಹೈಡ್ರಾ ಎಂದರೆ ಮಾಯಿಶ್ಚರ್‌ (ತೇವಾಂಶ). ಅದು ಕೂದಲನ್ನು ಮೃದು ಮತ್ತು ಫ್ಲೆಕ್ಸಿಬಲ್‌ಗೊಳಿಸುತ್ತದೆ. ಈ ಥೆರಪಿಯನ್ನು ಆ್ಯಲೋವೇರಾದಿಂದ ಮಾಡಲಾಗುತ್ತದೆ.

ಎಲ್ಲಕ್ಕೂ ಮೊದಲು ಅಲ್ಟ್ರಾ ಹೈಡ್ರೇಟಿಂಗ್‌ ಶ್ಯಾಂಪೂನಿಂದ ಕೂದಲನ್ನು ಚೆನ್ನಾಗಿ ಸ್ವಚ್ಛಗೊಳಿಸಿಕೊಳ್ಳಿ. ಬಳಿಕ ಅದನ್ನು ಟವೆಲ್‌ನಿಂದ ಒಣಗಿಸಿ. ಈಗ ಕೂದಲನ್ನು 4 ಭಾಗ ಮಾಡಿಕೊಳ್ಳಿ. ಸೆರಾ ರಿಪೇರ್‌ ಲಿಕ್ವಿಡ್‌ನ್ನು ಕೂದಲಿನ ಮೇಲೆ ಹನಿಹನಿಯಾಗಿ ಮೇಲಿನಿಂದ ಕೆಳಭಾಗದ ತನಕ ಹಚ್ಚಿ. ಈಗ ಹೈಡ್ರಾ ಮಾಸ್ಕ್ ನ್ನು ತಳಭಾಗದಿಂದ ಮೇಲ್ಭಾಗದ ತನಕ ಹಚ್ಚಿ ಮಸಾಜ್‌ ಮಾಡಿ.

ಈ ಮಸಾಜ್‌ನ್ನು 15 ರಿಂದ 20 ನಿಮಿಷಗಳ ಕಾಲ ಮಾಡಿ.

ಈಗ ಕೂದಲಿಗೆ ಬಿಸಿ ಕಾವು ಕೊಡಲು ಬಿಸಿನೀರಿನಲ್ಲಿ ಅದ್ದಿದ ಟವೆಲ್ ಅಥವಾ ಹಾಟ್‌ ಸ್ಟೀಮರ್‌ನಿಂದ 5 ನಿಮಿಷಗಳ ಕಾಲ ಸ್ಟೀಮ್ ಕೊಡಿ ಹಾಗೂ 10 ನಿಮಿಷಗಳ ಕಾಲ ರೂಮ್ ಟೆಂಪರೇಚರ್‌ನಲ್ಲಿ ಬಿಡಿ. ಬಳಿಕ ಕೂದಲನ್ನು ನೀರಿನಿಂದ ಸ್ವಚ್ಛಗೊಳಿಸಿ ಒಣಗಿಸಿಕೊಳ್ಳಿ. ಇದು ಕೂದಲಿಗೆ ಮೃದುತ್ವ ಹಾಗೂ ಹೊಳಪನ್ನು ತಂದುಕೊಡುತ್ತದೆ.

hair-4

ಹೇರ್ಕಟ್‌ : ಕ್ರೌನ್‌ ಏರಿಯಾದಿಂದ ಕೂದಲನ್ನು ಯು ಶೇಪ್‌ನಲ್ಲಿ ತೆಗೆದುಕೊಂಡು 90 ಡಿಗ್ರಿಯಲ್ಲಿ ಕತ್ತರಿಸಿಕೊಳ್ಳಿ. ಮುಂಭಾಗದಿಂದ ಬೈತಲೆ ತೆಗೆದು ಕೂದಲನ್ನು ಇಬ್ಭಾಗಿಸಿಕೊಳ್ಳಿ. ಹಿಂಭಾಗದ ಕೂದಲನ್ನು ರಬ್ಬರ್‌ನಿಂದ ಕಟ್ಟಿ. ಕಿವಿಯ ಕಡೆಗಿನ ಕೂದಲಿನ ಒಂದು ಗೈಡ್‌ ಲೈನ್‌ ಮಾಡಿಕೊಂಡು ಕಟ್‌ ಮಾಡಿಕೊಳ್ಳಿ. ಹಿಂಭಾಗದಲ್ಲಿ ಕಟ್ಟಿದ ಕೂದಲನ್ನು ಬಿಚ್ಚಿಕೊಂಡು ವರ್ಟಿಕಲ್ ಸೆಕ್ಷನ್‌ನಲ್ಲಿ ತೆಗೆದುಕೊಂಡು ಅಲ್ಲಿಂದ ಗೈಡ್‌ ಲೈನ್‌ ಕೊನೆಗೊಳ್ಳುತ್ತ ಸ್ವಲ್ಪ ಅಡ್ಡವಾಗಿ ಕತ್ತರಿಸಿ. ಈಗ ಮುಂಭಾಗದ ಲುಕ್‌ಗಾಗಿ ಐ ಬ್ರೋಸ್‌ನ ಕೊನೆಯಲ್ಲಿ ಎರಡೂ ಬದಿಯಿಂದ ಕೂದಲನ್ನು ತೆಗೆದುಕೊಂಡು ಮೂಗಿನ ಕಡೆ ತೆಗೆದುಕೊಳ್ಳಿ ಮತ್ತು ವಿ ಶೇಪ್‌ನಲ್ಲಿ ತಿರುಗಿಸಿಕೊಂಡು ಕತ್ತರಿಸಿಕೊಳ್ಳಿ. ಕಿವಿಯ ಕಡೆಗಿನ ಕೂದಲನ್ನು ಬೆರಳ ಮೇಲೆ ತೆಗೆದುಕೊಂಡು ಸ್ಲೈಸ್‌ ಸ್ಟೈಲ್‌ನಲ್ಲಿ ಕತ್ತರಿಸಿ ಬೇಸ್ ಯಾವಾಗಲೂ 0 ಡಿಗ್ರಿಯ ಮೇಲೆ ಕತ್ತರಿಸಿ.

ಸುಧಾ ರಾವ್

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ