ಬದಲಾದ ಹವಾಮಾನ ಸುಡಲು ಶುರು ಮಾಡಿದೆ. ಉರಿಯುವ ಸೂರ್ಯ ತನ್ನೊಂದಿಗೆ ಹಲವಾರು ಸಮಸ್ಯೆಗಳನ್ನು ಒಟ್ಟಿಗೆ ತರುತ್ತಾನೆ. ಬೇಸಿಗೆಯ ಬಿರುಬಿಸಿಲಿನಲ್ಲಿ ತ್ವಚೆ ಸುಡುವುದು, ಡಾರ್ಕ್‌ ಸರ್ಕಲ್ಸ್ ಉಂಟಾಗುವುದು, ಬೆವರಿನ ದುರ್ಗಂಧ….. ಇತ್ಯಾದಿ ಅನೇಕ ಸಮಸ್ಯೆಗಳು ಉಂಟಾಗುತ್ತವೆ. ಆದರೆ ಕೊಂಚ ಗಮನಕೊಟ್ಟರೆ ಈ ಸಮಸ್ಯೆಗಳಿಂದ ಸುಲಭವಾಗಿ ಮುಕ್ತಿ ಪಡೆಯಬಹುದು.

ನಿಯಮಿತವಾಗಿ ಮಾಯಿಶ್ಚರೈಸರ್ಉಪಯೋಗಿಸಿ

ಕಾಸ್ಮೆಟಿಕ್ಸ್ : ಬ್ಯೂಟಿ ಎಕ್ಸ್ ಪರ್ಟ್‌ ಶೋಭಾ, ಬೇಸಿಗೆಯಲ್ಲಿ ವಾಟರ್‌ ಬೇಸ್ಡ್ ಮಾಯಿಶ್ಚರೈಸರ್ಸ್ ಉಪಯೋಗ ಉತ್ತಮ. ಜೊತೆಗೆ ಮುಖವನ್ನು ಸ್ವಚ್ಛ ನೀರಿನಿಂದ ಆಗಾಗ್ಗೆ ತೊಳೆಯುವುದೂ ಒಳ್ಳೆಯದು ಎನ್ನುತ್ತಾರೆ.

ಮನೆ ಮದ್ದು : ಈ ಹವಾಮಾನದಲ್ಲಿ ಸುಲಭವಾಗಿ ಸಿಗುವ ಸೌತೆಕಾಯಿಯನ್ನು ಗುಲಾಬಿ ಜಲದೊಂದಿಗೆ ಬೆರೆಸಿ  ಉಪಯೋಗಿಸಿದರೆ ಒಳ್ಳೆಯದು. ಅಲ್ಲದೆ ಗಂಧ, ಅರಿಶಿನ, ಆ್ಯಲೋವೇರಾ, ನೆಲ್ಲಿಕಾಯಿ ಇತ್ಯಾದಿಗಳನ್ನು ಉಪಯೋಗಿಸಿ ತ್ವಚೆಯನ್ನು ಸುಂದರಗೊಳಿಸಬಹುದು.

ಹವಾಮಾನಕ್ಕೆ ಸನ್ಸ್ಕ್ರೀನ್ಅಗತ್ಯ

ಕಾಸ್ಮೆಟಿಕ್ಸ್ : ಶೋಭಾರ ಪ್ರಕಾರ, ಒಂದು ಅಧ್ಯಯನದಂತೆ ಶೇ.90ರಷ್ಟು ಸಂದರ್ಭಗಳಲ್ಲಿ ಪ್ರಿಮೆಚ್ಯೂರ್‌ ಏಜಿಂಗ್‌ಗೆ ಕಾರಣ ಬಿಸಿಲಿನಲ್ಲಿ ಹೆಚ್ಚು ಎಕ್ಸ್ ಪೋಷರ್‌. ಅದರಿಂದ ಪಾರಾಗಲು ಮನೆಯಿಂದ ಹೊರಡುವ ಮೊದಲು ಸನ್‌ಸ್ಕ್ರೀನ್‌ ಹಚ್ಚುವುದು ಅಗತ್ಯ.

garmi-me-cool-cool-2

ಬೇಸಿಗೆಯಲ್ಲಿ ಸ್ಕಿನ್‌ಗೆ ಡಬಲ್ ಪ್ರೊಟೆಕ್ಷನ್‌ ಅಗತ್ಯವಿದೆ. ಈ ಸಮಯದಲ್ಲಿ ಟ್ಯಾನಿಂಗ್‌ ಅಥವಾ ಸನ್‌ ಬರ್ನ್‌ ತೊಂದರೆ ಹೆಚ್ಚು. ಹವಾಮಾನವನ್ನು ಗಮನಿಸಿ ಶೇ.20-25ರಷ್ಟು ಸನ್‌ ಪ್ರೊಟೆಕ್ಷನ್‌ ಫ್ಯಾಕ್ಟರ್‌ ಇರುವ ಕ್ರೀಂ ಉಪಯೋಗಿಸಬೇಕು.

ಮನೆ ಮದ್ದು : ಬಿಸಿಲಿನಿಂದ ಮನೆಗೆ ಬಂದಾಗ ಮೊದಲು ಸೌತೆಕಾಯಿ ಅಥವಾ ಆಲೂಗಡ್ಡೆಯ ರಸವನ್ನು ಮುಖಕ್ಕೆ ಹಚ್ಚಿಕೊಳ್ಳಿ. ಜಿಡ್ಡಿನ ತ್ವಚೆ ಇರುವವರು ಕಿತ್ತಳೆ ಹಣ್ಣು ಅಥವಾ ಕಲ್ಲಂಗಡಿ ಹಣ್ಣಿನ ರಸ ಹಚ್ಚಬೇಕು. ಇದರಿಂದ ತಾಜಾತನ ಉಂಟಾಗುತ್ತದೆ.

ಕೂದಲಿನ ರಕ್ಷಣೆ

ಕಾಸ್ಮೆಟಿಕ್ಸ್ : ಬೇಸಿಗೆಯಲ್ಲಿ ಹೆಚ್ಚು ಬೆವರು ಬರುವುದರಿಂದ ತ್ವಚೆ ಅಂಟಂಟಾಗುತ್ತದೆ. ಅದರ ನೇರ ಪರಿಣಾಮ ಕೂದಲಿನ ಮೇಲೆ ಉಂಟಾಗುತ್ತದೆ. ತೀಕ್ಷ್ಣ ಬಿಸಿಲು, ಮಾಲಿನ್ಯ ಮತ್ತು ಸರಿಯಾಗಿ ನೋಡಕೊಳ್ಳದಿದ್ದರೆ ಕೂದಲು ತನ್ನ ಕಾಂತಿ ಕಳೆದುಕೊಳ್ಳುತ್ತದೆ ಹಾಗೂ ನಿರ್ಜೀವವಾಗಿ ಕಾಣುತ್ತದೆ. ಕೂದಲಿಗೆ ರಕ್ಷಣಾ ಕವಚ ಕೊಡಲು ಹೇರ್‌ ಸೀರಮ್ ಅಥವಾ ಸನ್‌ ಶೀಲ್ಡ್ ಉಪಯೋಗಿಸಿ. ಈ ಹವಾಮಾನದಲ್ಲಿ ಸುಲಭವಾಗಿ ಮ್ಯಾನೇಜ್‌ ಮಾಡುವಂತಹ ಹೇರ್‌ ಸ್ಟೈಲ್ ಮಾಡಿಕೊಳ್ಳಿ. ಉಪಯೋಗಿಸುವ ಶ್ಯಾಂಪೂ ಹರ್ಬಲ್ ಮತ್ತು ಬ್ರ್ಯಾಂಡೆಡ್‌ ಆಗಿರಲಿ. ತೀಕ್ಷ್ಣ ಬಿಸಿಲಿಗೆ ಎಂದೂ ತಲೆಯೊಡ್ಡದಿರಿ, ಕ್ಯಾಪ್‌ ಅಥವಾ ಛತ್ರಿ ಉಪಯೋಗಿಸಿ. ನಿಯಮಿತ ಸ್ವಚ್ಛತೆ ಮತ್ತು ಸರಿಯಾದ ಆಹಾರದಿಂದ ನಿಮ್ಮ ಕೂದಲು ನಿಶ್ಚಿತವಾಗಿ ಸುಂದರವಾಗುತ್ತದೆ.

ಮನೆ ಮದ್ದು : ಮೊಸರು ಮತ್ತು ಮುಲ್ತಾನಿ ಮಿಟ್ಟಿಯ ಪ್ಯಾಕ್‌ ಮಾಡಿ ಕೂದಲಿಗೆ ಹಚ್ಚಿ. ಅರ್ಧ ಗಂಟೆಯ ನಂತರ ತಣ್ಣೀರಿನಿಂದ ತೊಳೆಯಿರಿ. ಮೊಸರಿನಿಂದ ನಿಯಮಿತವಾಗಿ ಕೂದಲನ್ನು ತೊಳೆದರೆ ಕೂದಲು ಉದುರುವುದು ನಿಲ್ಲುತ್ತದೆ. ವಿಟಮಿನ್‌ ಎ, ವಿಟಮಿನ್‌ ಬಿ ಕಾಂಪ್ಲೆಕ್ಸ್ ಮತ್ತು ಪ್ರೋಟೀನ್‌ಯುಕ್ತ ಆಹಾರವನ್ನು ಹೆಚ್ಚು ಸೇವಿಸಿ. ಮೊಳಕೆ ಬಂದ ಗೋಧಿಯನ್ನು ಹಾಲಿನಲ್ಲಿ ಬೇಯಿಸಿ ಸವಿಯಿರಿ. ಇದರಿಂದ ಕೂದಲಿಗೆ ಬಹಳ ಲಾಭ ಉಂಟಾಗುತ್ತದೆ. ಪರಂಗಿಹಣ್ಣು, ಬಾಳೆಹಣ್ಣು, ನೆಲ್ಲಿಕಾಯಿ, ಮಾವು, ಸೀಬೆ, ಕಲ್ಲಂಗಡಿಯಂತಹ ಹಣ್ಣುಗಳನ್ನು ಹೆಚ್ಚು ಸೇವಿಸಿ. ತರಕಾರಿಗಳಲ್ಲಿ ಟೊಮೇಟೊ, ಬಟಾಣಿ, ಈರುಳ್ಳಿ, ಬದನೆ, ಬೆಂಡೆಕಾಯಿ, ಪುದೀನಾ, ಮೂಲಂಗಿ, ಎಲೆಕೋಸು ಇತ್ಯಾದಿಗಳ ಸೇವನೆ ಕೂದಲಿನ ಆರೋಗ್ಯ ಕಾಪಾಡಲು ಮತ್ತು ಕೂದಲನ್ನು ಸುಂದರವಾಗಿಡಲು ಸಹಾಯ ಮಾಡುತ್ತದೆ.

ಕಾಲುಗಳನ್ನು ಅಲಕ್ಷ್ಯ ಮಾಡಬೇಡಿ

ಕಾಸ್ಮೆಟಿಕ್ಸ್ : ಸಂಪೂರ್ಣ ಸೌಂದರ್ಯಕ್ಕೆ ಕಾಲುಗಳು ಸುಂದರವಾಗಿರುವುದೂ ಬಹಳ ಅಗತ್ಯ. ನೀವು ವಿಶೇಷವಾಗಿ ಮುಖ ಮತ್ತು ಕೂದಲಿಗೆ ಗಮನ ಕೊಡುತ್ತೀರಿ. ಕಾಲುಗಳನ್ನು ಲಕ್ಷಿಸುವುದಿಲ್ಲ. ಒಂದು ಒಳ್ಳೆಯ ಫುಟ್‌ ಸ್ಕ್ರಬ್‌ ಖರೀದಿಸಿ. ದಿನ ಸ್ನಾನ ಮಾಡುವಾಗ ಹಿಮ್ಮಡಿಗಳಿಗೆ ಸೋಪು ಹಚ್ಚಿ ಇದರಿಂದ ಉಜ್ಜಿ. ಹಿಮ್ಮಡಿಯಲ್ಲಿನ ಕೊಳೆ ಹೋಗಿ ಮೃತ ತ್ವಚೆ ದೂರಾಗುವುದು. ಹಿಮ್ಮಡಿಗಳು ಸ್ವಚ್ಛವಾಗಿ ಮೃದುವಾಗುತ್ತವೆ. ಕಾಲುಗಳನ್ನು ಉಗುರು ಬೆಚ್ಚಗಿನ ನೀರಿನಲ್ಲಿ 10 ನಿಮಿಷಗಳ ಕಾಲ ಇಡಿ. ನಂತರ ಒರೆಸಿ ಯಾವುದಾದರೂ ಫುಟ್‌ ಕ್ರೀವ್‌ ಹಚ್ಚಿ.

garmi-me-cool-cool-3

ಮನೆ ಮದ್ದು : ರಾತ್ರಿ ಮಲಗುವ ಮೊದಲು ಕಾಲುಗಳನ್ನು ಚೆನ್ನಾಗಿ ತೊಳೆದು ಒರೆಸಿ. ಹಿಮ್ಮಡಿ ಒಡೆದಿದ್ದರೆ ಸಾಸುವೆ ಎಣ್ಣೆಯಲ್ಲಿ ಬಿಸಿ ವ್ಯಾಕ್ಸ್ ಬೆರೆಸಿ ಕ್ರೀಮ್ ನಂತೆ ಮಾಡಿಕೊಳ್ಳಿ. ಅದನ್ನು ಹಿಮ್ಮಡಿಗೆ ಹಚ್ಚಿದರೆ ಹಿಮ್ಮಡಿಯ ಬಿರುಕುಗಳು ದೂರವಾಗುತ್ತವೆ. ಸೇಬು, ಕಿತ್ತಳೆಹಣ್ಣು ಮತ್ತು ವಿಟಮಿನ್‌ ಎ ಇರುವ ಆಹಾರದ ಸೇವನೆ ಕಾಲುಗಳ ತ್ವಚೆಯನ್ನು ಸುಂದರಗೊಳಿಸುತ್ತದೆ. ಈ ಹಣ್ಣುಗಳನ್ನು ಹೆಚ್ಚು ಸೇವಿಸಿ.

ಕಣ್ಣುಗಳ ರಕ್ಷಣೆ

ಬೇಸಿಗೆಯಲ್ಲಿ ಹೊರಗೆ ಹೋಗುವಾಗ ಸನ್‌ ಗ್ಲಾಸ್‌ ಉಪಯೋಗಿಸಿ. ಇವು ಕಣ್ಣುಗಳ ಸುರಕ್ಷಾ ಕವಚವಾಗಿದೆ. ನಿಮ್ಮ ಸೌಂದರ್ಯವನ್ನೂ ಹೆಚ್ಚಿಸುತ್ತದೆ. ಬೇಸಿಗೆಯ ಕಾವಿನಿಂದ ಪಾರಾಗಲು ಗುಲಾಬಿ ಜಲದಲ್ಲಿ ಸ್ವಚ್ಛವಾದ ಹತ್ತಿ ಅದ್ದಿ ಕಣ್ಣುಗಳ ಮೇಲಿಟ್ಟು ಸ್ವಲ್ಪ ಹೊತ್ತು ಕಣ್ಣುಗಳನ್ನು ಮುಚ್ಚಿ ಮಲಗಿ. ಇದರಿಂದ ಕಣ್ಣುಗಳಿಗೆ ಶೀತಲತೆ ಸಿಕ್ಕು ಆಯಾಸ ಪರಿಹಾರವಾಗುತ್ತದೆ.

ರಂಜಿನಿ ಪ್ರಕಾಶ್

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ