ಕ್ರಿಸ್ಟಲ್ ಡಿಸೋಜಾ
`ಕಹೆ ನಾ ಕಹೆ’ ಧಾರಾವಾಹಿಯಿಂದ ತಮ್ಮ ನಟನೆಯ ಕೆರಿಯರ್‌ಆರಂಭಿಸಿದ ನಟಿ ಕ್ರಿಸ್ಟಲ್ ಡಿಸೋಜಾಮುಂಬೈನಲ್ಲಿ ಹುಟ್ಟಿ ಬೆಳೆದಿದ್ದಾರೆ. ಚಿಕ್ಕಂದಿನಲ್ಲಿ ಅವರು ಮುಂದೊಂದು ದಿನ ತಾನು ಹೀರೋಯಿನ್ ಆಗುತ್ತೇನೆಂದು ಯೋಚಿಸಿರಲಿಲ್ಲ. ಆ್ಯಕ್ಟಿಂಗ್ ಇಷ್ಟಪಡುವ ಕ್ರಿಸ್ಟಲ್‌ಗೆ ಮೊದಲ ಬಾರಿ ಬಾಲಾಜಿಯವರಿಂದ ನಟಿಸಲು ಅವಕಾಶ ಸಿಕ್ಕಾಗ ನಟನೆಯೇ ಅವರ ಮೊದಲ ಆಯ್ಕೆಯಾಯಿತು. ನಂತರ `ಕ್ಯಾ ದಿಲ್ ಮೆ ,’ `ಆಹಟ್,’ `ಕಸ್ತೂರಿ,’ `ಕಿಸ್ ದೇಶ್ ಮೆ ಹೈ ಮೇರಾ ದಿಲ್,’ `ಬಾತ್ ಹಮಾರಿ ಪಕ್ಕೀ ಹೈ’ ಇತ್ಯಾದಿ ಒಂದಾದ ಮೇಲೊಂದು ಧಾರಾವಾಹಿಗಳಲ್ಲಿ ನಟಿಸಿದರು.
ಈಗ ಕ್ರಿಸ್ಟಲ್ `ಏಕ್ ನಯಿ ಪೆಹಚಾನ್’ ಧಾರಾವಾಹಿಯಲ್ಲಿ ಸಾಕ್ಷಿಯ ಪಾತ್ರ ನಿರ್ವಹಿಸುತ್ತಿದ್ದಾರೆ. ಅದರಲ್ಲಿ ಸಾಕ್ಷಿ ತನ್ನ ಅತ್ತೆಯಿಂದ ಬದುಕಿನ ಮೌಲ್ಯಗಳನ್ನು ಕಲಿಯುತ್ತಿದ್ದಾರೆ. ಅತ್ತೆ ಆಧುನಿಕ ಜೀವನದ ವಿಧಾನಗಳನ್ನು ತಮ್ಮದಾಗಿಸಿಕೊಳ್ಳುವ ಪಾಠ ಕಲಿಯುತ್ತಿದ್ದಾರೆ.
ಕ್ರಿಸ್ಟಲ್ ಆಗಾಗ್ಗೆ ತನ್ನ ತಾಯಿಯ ಜೊತೆ ಕುಳಿತು ಧಾರಾವಾಹಿಗಳನ್ನು ನೋಡಿ ಆನಂದಿಸುತ್ತಿದ್ದರು. ಅವರಿಗೆ `ಹಮ್ ಪಾಂಚ್,’ `ಶರಾರತ್’ ಮತ್ತು `ತೂ ತೂ ಮೈ ಮೈ’ ಧಾರಾವಾಹಿಗಳು ಬಹಳ ಇಷ್ಟವಿತ್ತು.
“ಅಭಿನಯವೇ ನನ್ನ ಕ್ಷೇತ್ರವೆಂದು ಬಹುಶಃ ನನ್ನ ತಾಯಿಗೆ ತಿಳಿದಿತ್ತು. ಅದಕ್ಕೆ ಅವರು ನನ್ನನ್ನು ಜೊತೆಗೆ ಕೂಡಿಸಿಕೊಂಡು ಧಾರಾವಾಹಿಗಳನ್ನು ನೋಡುತ್ತಿದ್ದರು. ಅದರ ಲಾಭ ನನಗೆ ಈಗ ಸಿಗುತ್ತಿದೆ,” ಎನ್ನುತ್ತಾರೆ.
ವಾಸ್ತವ ಜೀವನದಲ್ಲಿ ಕ್ರಿಸ್ಟಲ್ ಹೇಳಬೇಕಾದುದನ್ನು ಸ್ಪಷ್ಟವಾಗಿ ಹೇಳುತ್ತಾರೆ. ಅಂತಹ ಪಾತ್ರವನ್ನು ಅವರು ಸಹಜವಾಗಿ ನಿಭಾಯಿಸುತ್ತಾರೆ. ಆತ್ಮೀಯತೆಯ ಸೀನ್‌ಗಳಿಗೆ ಅವರು ಸಹಜವಾಗಿರುವುದಿಲ್ಲ. ಅವರು ಹೇಳುತ್ತಾರೆ, “ನಾನು ಬಹಳ ಫನ್ ಲವಿಂಗ್. ಆದರೆ ರೊಮ್ಯಾಂಟಿಕ್ ಮತ್ತು ಇಂಟಿಮೇಟ್ ಸೀನ್ ಮಾಡುವಾಗ ಕೈಕಾಲು ನಡುಗುತ್ತವೆ. ನಾನು ನರ್ಸ್ ಆಗುತ್ತೇನೆ. ನಾನು ರೊಮ್ಯಾಂಟಿಕ್ ಅಲ್ಲ.”
ಪ್ರೀತಿ ಮತ್ತು ರೊಮ್ಯಾನ್ಸ್ ಗಳಲ್ಲಿ ವ್ಯತ್ಯಾಸವೇನೆಂದು ಕೇಳಿದಾಗ ಕ್ರಿಸ್ಟಲ್, “ಪ್ರೀತಿಯನ್ನು ಹೃದಯದಿಂದ ಮಾಡಲಾಗುತ್ತದೆ. ರೊಮ್ಯಾನ್ಸ್ ನ್ನು ಯಾರ ಜೊತೆಗಾದರೂ ಮಾಡಬಹುದು. ಒಂದು ವೇಳೆ ನಿಮ್ಮನ್ನು ಬಿಟ್ಟು ಬೇರೆ ಯಾರ ಬಗ್ಗೆಯಾದರೂ ಯೋಚಿಸಿದರೆ ಅದೇ ಪ್ರೀತಿ,” ಎಂದರು.
ಕ್ರಿಸ್ಟಲ್‌ರಿಗೆ ಬಿಡುವಿನ ಸಮಯ ಸಿಗುವುದು ಬಹಳ ಕಡಿಮೆ. ಹಾಗೆ ಸಿಕ್ಕಾಗ ಅವರು ತಮ್ಮ ಕುಟುಂಬದವರೊಡನೆ ಶಾಪಿಂಗ್ ಮಾಡುವುದು ಮತ್ತು ಸುತ್ತಾಡುವುದನ್ನು ಇಷ್ಟಪಡುತ್ತಾರೆ. ಅವರು ಹೀಗೆ ಹೇಳುತ್ತಾರೆ, “ನನಗೆ ರಜೆ ಇದ್ದಾಗ ಮನೆಯವರಿಗೆ ಚಿಂತೆಯಾಗುತ್ತದೆ. ಏಕೆಂದರೆ ನನ್ನ ಬಯಕೆಗಳು ಬಹಳ ಹೆಚ್ಚಾಗುತ್ತವೆ. ಚೆನ್ನಾಗಿ ತಿನ್ನುವುದು, ಹರಟೆ ಹೊಡೆಯುವುದು ಇತ್ಯಾದಿ ಮಾಡುತ್ತೇನೆ.
“ಮನೆಯವರಿಗೆ ಇದು ಇಷ್ಟವಾಗುವುದಿಲ್ಲ. ಅವರು ಮನೆಯಲ್ಲಿದ್ದು 1 ಲೋಟ ಟೀ ಕುಡಿದು ಟಿ.ವಿ. ನೋಡಿ ಸಂತೋಷವಾಗಿರುತ್ತಾರೆ. ನಾನು ಅಡುಗೆ ಮಾಡುವುದಿಲ್ಲ. ಆದರೆ ರುಚಿ ರುಚಿಯಾಗಿ ತಿನ್ನುತ್ತೇನೆ. ನನಗೆ ಕಾಂಟಿನೆಂಟಲ್ ಆಹಾರ ಇಷ್ಟ. ಪಾಸ್ತಾ, ಪಿಜ್ಜಾ, ಪಂಜಾಬಿ ಊಟ, ದಾಲ್‌ಮಖನಿ, ರುಮಾಲಿ ರೋಟಿ, ಬಟರ್, ಪನೀರ್ ಎಲ್ಲವನ್ನೂ ತಿನ್ನುತ್ತೇನೆ.”
ಕ್ರಿಸ್ಟಲ್ ತಮ್ಮ ಸೌಂದರ್ಯ ಕಾಪಾಡಿಕೊಳ್ಳಲು ಆಹಾರದ ಬಗ್ಗೆ ವಿಶೇಷ ಗಮನ ಕೊಡುತ್ತಾರೆ. ಎಲ್ಲ ಆಹಾರವನ್ನೂ ತಿನ್ನುವುದಿಲ್ಲ. ಫ್ರೈಡ್ ಆಹಾರ ತಿನ್ನುವುದಿಲ್ಲ.
“ಈಗ ಕಾಯಿಲೆಗಳು ಬಹಳಷ್ಟು ಹೆಚ್ಚುತ್ತಿರುವುದರಿಂದ ಚೆನ್ನಾಗಿ ಆಲೋಚಿಸಿ ತಿನ್ನಬೇಕು. ವ್ಯಾಯಾಮಕ್ಕೆ ಸಮಯ ಸಿಗುವುದಿಲ್ಲ. ದಿನವಿಡೀ ನೀರನ್ನು ಕುಡಿಯತ್ತೇನೆ. ಮನೆಗೆ ಹೋದಕೂಡಲೇ ನನ್ನ ಮೇಕಪ್ ತೆಗೆದು ನೈಟ್ ಕ್ರೀಮ್ ಹಚ್ಚುತ್ತೇನೆ. ಸದಾ ಖುಷಿಯಾಗಿರುತ್ತೇನೆ.
“ನಗುವುದರಿಂದ ಮನುಷ್ಯ ಅತ್ಯಂತ ಫಿಟ್ ಆಗಿರುತ್ತಾನೆ. ನನಗೆ ಮೇಕಪ್ ಮಾಡಿಕೊಳ್ಳುವುದು, ಅಲಂಕರಿಸಿಕೊಳ್ಳುವುದು ಇಷ್ಟ. ನಾನು ಹೆಚ್ಚು ಶಾಪಿಂಗ್ ಮಾಡುತ್ತೇನೆ. ಎಲ್ಲ ರೀತಿಯ ಡ್ರೆಸ್ ಧರಿಸುತ್ತೇನೆ. ಶೂಟಿಂಗ್‌ಗೂ ಚೆನ್ನಾಗಿ ಅಲಂಕರಿಸಿಕೊಂಡು ಬರುತ್ತೇನೆ. ಇಲ್ಲಿ ಬಂದು ಬದಲಿಸಬೇಕು.
“ಆದರೂ ಇಷ್ಟೊಂದು ಸಜ್ಜಾಗಿ ಏಕೆ ಬರುತ್ತೀಯಾ ಎಂದು ಎಲ್ಲರೂ ಕೇಳುತ್ತಾರೆ. ಆದರಿ ನನಗೆ ಹೀಗೆ ಮಾಡಿಕೊಳ್ಳಲು ಇಷ್ಟ. ನನ್ನ ಪರ್ಸ್‌ನಲ್ಲಿ ಕಾಜಲ್, ಲಿಪ್ ಗ್ಲಾಸ್ ಮತ್ತು ಲಿಪ್‌ಸ್ಟಿಕ್ ಅಗತ್ಯವಾಗಿ ಇಟ್ಟುಕೊಳ್ಳುತ್ತೇನೆ. ನನ್ನ ಹೇರ್ ಕೇರ್ ಅಮ್ಮ ನೋಡಿಕೊಳ್ಳುತ್ತಾರೆ. ಅವರು ವಾರಕ್ಕೊಮ್ಮೆ ನನ್ನ ತಲೆಗೆ ಎಣ್ಣೆಹಚ್ಚಿ ಮಸಾಜ್ ಮಾಡುತ್ತಾರೆ,” ಎನ್ನುತ್ತಾರೆ.
ಸಂಗಾತಿಯ ಬಗ್ಗೆ ಕ್ರಿಸ್ಟಲ್ ಇನ್ನೂ ಯೋಚಿಸಿಲ್ಲ. ಅವರು ಇನ್ನಷ್ಟು ಮುಂದುವರಿಯಬೇಕಾಗಿದೆ.
– ಜಿ. ಸುಮಾ