ಕ್ರಿಸ್ಟಲ್ ಡಿಸೋಜಾ

`ಕಹೆ ನಾ ಕಹೆ' ಧಾರಾವಾಹಿಯಿಂದ ತಮ್ಮ ನಟನೆಯ ಕೆರಿಯರ್‌ಆರಂಭಿಸಿದ ನಟಿ ಕ್ರಿಸ್ಟಲ್ ಡಿಸೋಜಾಮುಂಬೈನಲ್ಲಿ ಹುಟ್ಟಿ ಬೆಳೆದಿದ್ದಾರೆ. ಚಿಕ್ಕಂದಿನಲ್ಲಿ ಅವರು ಮುಂದೊಂದು ದಿನ ತಾನು ಹೀರೋಯಿನ್‌ ಆಗುತ್ತೇನೆಂದು ಯೋಚಿಸಿರಲಿಲ್ಲ. ಆ್ಯಕ್ಟಿಂಗ್ ಇಷ್ಟಪಡುವ ಕ್ರಿಸ್ಟಲ್‌ಗೆ ಮೊದಲ ಬಾರಿ ಬಾಲಾಜಿಯವರಿಂದ ನಟಿಸಲು ಅವಕಾಶ ಸಿಕ್ಕಾಗ ನಟನೆಯೇ ಅವರ ಮೊದಲ ಆಯ್ಕೆಯಾಯಿತು. ನಂತರ `ಕ್ಯಾ ದಿಲ್ ‌ಮೆ ,' `ಆಹಟ್‌,' `ಕಸ್ತೂರಿ,' `ಕಿಸ್‌ ದೇಶ್‌ ಮೆ ಹೈ ಮೇರಾ ದಿಲ್‌,' `ಬಾತ್‌ ಹಮಾರಿ ಪಕ್ಕೀ ಹೈ' ಇತ್ಯಾದಿ ಒಂದಾದ ಮೇಲೊಂದು ಧಾರಾವಾಹಿಗಳಲ್ಲಿ ನಟಿಸಿದರು.

ಈಗ ಕ್ರಿಸ್ಟಲ್ `ಏಕ್‌ ನಯಿ ಪೆಹಚಾನ್‌' ಧಾರಾವಾಹಿಯಲ್ಲಿ ಸಾಕ್ಷಿಯ ಪಾತ್ರ ನಿರ್ವಹಿಸುತ್ತಿದ್ದಾರೆ. ಅದರಲ್ಲಿ ಸಾಕ್ಷಿ ತನ್ನ ಅತ್ತೆಯಿಂದ ಬದುಕಿನ ಮೌಲ್ಯಗಳನ್ನು ಕಲಿಯುತ್ತಿದ್ದಾರೆ. ಅತ್ತೆ ಆಧುನಿಕ ಜೀವನದ ವಿಧಾನಗಳನ್ನು ತಮ್ಮದಾಗಿಸಿಕೊಳ್ಳುವ ಪಾಠ ಕಲಿಯುತ್ತಿದ್ದಾರೆ.

ಕ್ರಿಸ್ಟಲ್ ಆಗಾಗ್ಗೆ ತನ್ನ ತಾಯಿಯ ಜೊತೆ ಕುಳಿತು ಧಾರಾವಾಹಿಗಳನ್ನು ನೋಡಿ ಆನಂದಿಸುತ್ತಿದ್ದರು. ಅವರಿಗೆ `ಹಮ್ ಪಾಂಚ್‌,' `ಶರಾರತ್‌' ಮತ್ತು `ತೂ ತೂ ಮೈ ಮೈ' ಧಾರಾವಾಹಿಗಳು ಬಹಳ ಇಷ್ಟವಿತ್ತು.

``ಅಭಿನಯವೇ ನನ್ನ ಕ್ಷೇತ್ರವೆಂದು ಬಹುಶಃ ನನ್ನ ತಾಯಿಗೆ ತಿಳಿದಿತ್ತು. ಅದಕ್ಕೆ ಅವರು ನನ್ನನ್ನು ಜೊತೆಗೆ ಕೂಡಿಸಿಕೊಂಡು ಧಾರಾವಾಹಿಗಳನ್ನು ನೋಡುತ್ತಿದ್ದರು. ಅದರ ಲಾಭ ನನಗೆ ಈಗ ಸಿಗುತ್ತಿದೆ,'' ಎನ್ನುತ್ತಾರೆ.

ವಾಸ್ತವ ಜೀವನದಲ್ಲಿ ಕ್ರಿಸ್ಟಲ್ ಹೇಳಬೇಕಾದುದನ್ನು ಸ್ಪಷ್ಟವಾಗಿ ಹೇಳುತ್ತಾರೆ. ಅಂತಹ ಪಾತ್ರವನ್ನು ಅವರು ಸಹಜವಾಗಿ ನಿಭಾಯಿಸುತ್ತಾರೆ. ಆತ್ಮೀಯತೆಯ ಸೀನ್‌ಗಳಿಗೆ ಅವರು ಸಹಜವಾಗಿರುವುದಿಲ್ಲ. ಅವರು ಹೇಳುತ್ತಾರೆ, ``ನಾನು ಬಹಳ ಫನ್ ಲವಿಂಗ್‌. ಆದರೆ ರೊಮ್ಯಾಂಟಿಕ್‌ ಮತ್ತು ಇಂಟಿಮೇಟ್‌ ಸೀನ್‌ ಮಾಡುವಾಗ ಕೈಕಾಲು ನಡುಗುತ್ತವೆ. ನಾನು ನರ್ಸ್‌ ಆಗುತ್ತೇನೆ. ನಾನು ರೊಮ್ಯಾಂಟಿಕ್‌ ಅಲ್ಲ.''

ಪ್ರೀತಿ ಮತ್ತು ರೊಮ್ಯಾನ್ಸ್ ಗಳಲ್ಲಿ ವ್ಯತ್ಯಾಸವೇನೆಂದು ಕೇಳಿದಾಗ ಕ್ರಿಸ್ಟಲ್, ``ಪ್ರೀತಿಯನ್ನು ಹೃದಯದಿಂದ ಮಾಡಲಾಗುತ್ತದೆ. ರೊಮ್ಯಾನ್ಸ್ ನ್ನು ಯಾರ ಜೊತೆಗಾದರೂ ಮಾಡಬಹುದು. ಒಂದು ವೇಳೆ ನಿಮ್ಮನ್ನು ಬಿಟ್ಟು ಬೇರೆ ಯಾರ ಬಗ್ಗೆಯಾದರೂ ಯೋಚಿಸಿದರೆ ಅದೇ ಪ್ರೀತಿ,'' ಎಂದರು.

ಕ್ರಿಸ್ಟಲ್‌ರಿಗೆ ಬಿಡುವಿನ ಸಮಯ ಸಿಗುವುದು ಬಹಳ ಕಡಿಮೆ. ಹಾಗೆ ಸಿಕ್ಕಾಗ ಅವರು ತಮ್ಮ ಕುಟುಂಬದವರೊಡನೆ ಶಾಪಿಂಗ್ ಮಾಡುವುದು ಮತ್ತು ಸುತ್ತಾಡುವುದನ್ನು ಇಷ್ಟಪಡುತ್ತಾರೆ. ಅವರು ಹೀಗೆ ಹೇಳುತ್ತಾರೆ, ``ನನಗೆ ರಜೆ ಇದ್ದಾಗ ಮನೆಯವರಿಗೆ ಚಿಂತೆಯಾಗುತ್ತದೆ. ಏಕೆಂದರೆ ನನ್ನ ಬಯಕೆಗಳು ಬಹಳ ಹೆಚ್ಚಾಗುತ್ತವೆ. ಚೆನ್ನಾಗಿ ತಿನ್ನುವುದು, ಹರಟೆ ಹೊಡೆಯುವುದು ಇತ್ಯಾದಿ ಮಾಡುತ್ತೇನೆ.

``ಮನೆಯವರಿಗೆ ಇದು ಇಷ್ಟವಾಗುವುದಿಲ್ಲ. ಅವರು ಮನೆಯಲ್ಲಿದ್ದು 1 ಲೋಟ ಟೀ ಕುಡಿದು ಟಿ.ವಿ. ನೋಡಿ ಸಂತೋಷವಾಗಿರುತ್ತಾರೆ. ನಾನು ಅಡುಗೆ ಮಾಡುವುದಿಲ್ಲ. ಆದರೆ ರುಚಿ ರುಚಿಯಾಗಿ ತಿನ್ನುತ್ತೇನೆ. ನನಗೆ ಕಾಂಟಿನೆಂಟಲ್ ಆಹಾರ ಇಷ್ಟ. ಪಾಸ್ತಾ, ಪಿಜ್ಜಾ, ಪಂಜಾಬಿ ಊಟ, ದಾಲ್‌ಮಖನಿ, ರುಮಾಲಿ ರೋಟಿ, ಬಟರ್‌, ಪನೀರ್‌ ಎಲ್ಲವನ್ನೂ ತಿನ್ನುತ್ತೇನೆ.''

ಕ್ರಿಸ್ಟಲ್ ತಮ್ಮ ಸೌಂದರ್ಯ ಕಾಪಾಡಿಕೊಳ್ಳಲು ಆಹಾರದ ಬಗ್ಗೆ ವಿಶೇಷ ಗಮನ ಕೊಡುತ್ತಾರೆ. ಎಲ್ಲ ಆಹಾರವನ್ನೂ ತಿನ್ನುವುದಿಲ್ಲ. ಫ್ರೈಡ್‌ ಆಹಾರ ತಿನ್ನುವುದಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ