ಹೆಣ್ಣಿನ ಸೌಂದರ್ಯದಲ್ಲಿ ಉಗುರಿನ ಅಂದಕ್ಕೆ ತನ್ನದೇ ಆದ ಮಹತ್ವವಿದೆ. ಈ ಮಹತ್ವವನ್ನು ನಮ್ಮ ಮಹಿಳೆಯರು ಚೆನ್ನಾಗಿ ಅರಿತಿದ್ದಾರೆ. ಹೀಗಾಗಿ ಕೇವಲ ಬ್ರ್ಯಾಂಡೆಡ್‌ ಹಾಗೂ ಕಲರ್‌ ಫುಲ್ ‌ನೇಲ್ ‌ಪೇಂಟ್‌ ಹಚ್ಚುವುದರಿಂದ ಏನೂ ಲಾಭವಿಲ್ಲ ಎಂಬುವವರೆಗೆ ಗೊತ್ತು. ಅಷ್ಟಕ್ಕೇ ಸಮಾಧಾನಪಡದ ಅವರು ಈಗ ಡಿಸೈನರ್‌ ನೇಲ್ ‌ಆರ್ಟ್‌ ಮಾಡಿಸಿಕೊಂಡು, ತಮ್ಮ ಉಗುರುಗಳಿಗೆ ಅಪ್‌ ಡೇಟ್‌ ಲುಕ್ಸ್ ನೀಡಲು ಇಷ್ಟಪಡುತ್ತಾರೆ.

ಪಾರ್ಟಿ ಇರಲಿ ಅಥವಾ ಮನೆಯ ಸಣ್ಣಪುಟ್ಟ ಶುಭ ಸಮಾರಂಭವೇ ಇರಲಿ, ಪ್ರತಿಸಲ ಇವರು ಹೊಸ ನೇಲ್ ‌ಆರ್ಟ್‌ನೊಂದಿಗೆ ಸಿದ್ಧರಾಗುತ್ತಾರೆ. ಈ ಕುರಿತಾಗಿ ರಾಷ್ಟ್ರೀಯ ಖ್ಯಾತಿವೆತ್ತ ಸೆಲೆಬ್ರಿಟಿ ನೇಲ್ ಆರ್ಟ್‌ ಎಕ್ಸ್ ಪರ್ಟ್‌ ಪಮ್ಮಿ ಪಾಲ್ ಓದುಗರಿಗೆ ಅನೇಕ ಸಲಹೆ ನೀಡಲು ಬಯಸುತ್ತಾರೆ.

DSC_1362

ಇತ್ತೀಚೆಗೆ ದೆಹಲಿಯಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ನೇಲ್ ಆರ್ಟ್‌ ಪ್ರಕಾರಗಳಲ್ಲೇ ಹೊಚ್ಚ ಹೊಸತೆನಿಸುವ 3ಡಿ ಆರ್ಟ್‌ನ ಪ್ರಯೋಗ ಮಾಡಲಾಯಿತು. ಇದನ್ನು ವಾನ್ಯಾ ಬ್ಯೂಟಿ ಪ್ರಾಡಕ್ಟ್ಸ್, ಓರಿ ಫ್ಲೇಮ್ಸ್, ಆದ್ಯಾ ಬ್ಯೂಟಿ ಹಬ್‌ ಪ್ರಾಯೋಜಿಸಿತ್ತು.

DSC_1276

1 ಗಂಟೆಯ ಈ ಸ್ಪರ್ಧೆಯಲ್ಲಿ ಎಲ್ಲಾ ಸ್ಪರ್ಧಿಗಳೂ ವಿಭಿನ್ನ ಬಗೆಯ ನೇಲ್ ಆರ್ಟ್‌ ಪ್ರದರ್ಶಿಸಿ ತಮ್ಮ ಪ್ರತಿಭೆ ಪರಿಚಯಿಸಿದರು. ಇದರಲ್ಲಿ ವಿಜೇತರಾದ ಪೂಜಾ ಕುಮಾರ್‌, ತಮ್ಮ ಮಾಡೆಲ್ ನ ಕೈಬೆರಳ ಉಗುರಿನ ಮೇಲೆ 3ಡಿ ಲುಕ್ಸ್ ನ ನೇಲ್ ಆರ್ಟ್‌ ಮೂಡಿಸಿ ಎಲ್ಲರನ್ನೂ ಚಕಿತಗೊಳಿಸಿದರು. ಉಗುರುಗಳಿಗೆ ವಿಭಿನ್ನ ಸ್ಟೈಲ್ ‌ನೀಡಲು 3ಡಿ ನೇಲ್ ‌ಆರ್ಟ್‌ ಬಳಸಬೇಕಾಗುತ್ತದೆ. ಈ ಆರ್ಟ್‌ನಲ್ಲಿ ಉಗುರಿನ ಮೇಲೆ 3-4 ಬಣ್ಣಗಳನ್ನು ಬ್ಲೆಂಡ್‌ ಮಾಡಲಾಗುತ್ತದೆ. ಜೊತೆಗೆ ಬಣ್ಣಗಳಿಂದ ಉಗುರಿನ ಮೇಲೆ ನಾಜೂಕು ಡಿಸೈನ್‌ ಬಿಡಿಸಿ, ವೀಕ್ಷಕರು ಆ ಆಕೃತಿಯನ್ನು ನೋಡಿದಾಗ, 3 ಭಾಗಗಳಿಂದಲೂ (3ಡಿ ಎಫೆಕ್ಟ್) ನೋಡುತ್ತಿದ್ದೇವೆ ಎಂದು ಭಾಸವಾಗುವಂತೆ ಇದನ್ನು ಮಾಡುತ್ತಾರೆ.

3 ಡಿ ನೇಲ್ ‌ಆರ್ಟ್‌ ರಚಿಸುವ ವಿಧಾನ

DSC_1235

ಈ ತರಹದ ಆರ್ಟ್‌ಗಾಗಿ ಎಲ್ಲಕ್ಕೂ ಮೊದಲು ಡಿಸೈನ್‌ ಫಿಕ್ಸ್ ಆಗಬೇಕು. ಇದಾದ ನಂತರ ಉಗುರಿನ ಮೇಲೆ ಕವರ್‌ ಬೇಸ್ ಹಾಕಬೇಕು. ನಂತರ 3-4 ಬಣ್ಣಗಳ ನೇಲ್ ‌ಪೇಂಟ್‌ನಿಂದ ಉಗುರಿನ ಮೇಲೆ ಡಿಸೈನ್‌ ಮಾಡಲಾಗತ್ತದೆ. ಇದು ಎಂಥದೇ ಡಿಸೈನ್ ಇರಲಿ, ಬಣ್ಣಗಳ ಸೂಕ್ತ ಮ್ಯಾಚಿಂಗ್‌ ಹಾಗೂ ಬ್ಲೆಂಡಿಂಗ್‌ನಿಂದ 3ಡಿ ಲುಕ್ಸ್ ನೀಡಲಾಗುತ್ತದೆ.

3 ಡಿ ಡಿಸೈನ್ಸ್

DSC_1217

ಇಂಥ ನೇಲ್ ‌ಆರ್ಟ್‌ನಲ್ಲಿ ಹೆಚ್ಚಾಗಿ ಮಾರ್ಬಲ್, ರೇನ್‌ ಬೋ, ಫಾರೆಸ್ಟ್, ಸ್ಚ್ರೈಪ್ಸ್ ನಂಥ ಡಿಸೈನ್‌ ಆರಿಸಲಾಗುತ್ತದೆ. ಇದನ್ನು ಡ್ರೆಸ್‌ಗೆ ಹೊಂದುವಂತೆಯೂ ಮಾಡಬಹುದು. ಏಕೆಂದರೆ ಇದರಲ್ಲಿ ಹಲವಾರು ಬಣ್ಣಗಳನ್ನು ಒಟ್ಟಿಗೆ ಬಳಸಲಾಗುತ್ತದೆ.

ಇದರಲ್ಲಿ ಇನ್ನೊಂದು ವೈಶಿಷ್ಟ್ಯವೆಂದರೆ, ಸ್ಟಡ್‌ಸ್ಟೋನ್‌ ಬಳಸಿಯೂ ಡಿಸೈನ್‌ಗೊಳಿಸಬಹುದು. ಇದನ್ನು ತಿಲಕದ ಬಿಂದಿಗಳಲ್ಲಿ ಬಳಸಲಾಗುವ ಸ್ಟೋನ್‌, ಚಮಕಿಗಳಿಂದ ಇನ್ನಷ್ಟು ಸೊಗಸಾಗಿಸಬಹುದು.

ಸ್ಟಡ್‌ಸ್ಟೋನ್‌ ನೇಲ್ ಆರ್ಟ್‌ ಮಾಡುವ ಕ್ರಮ

ಈ ಆರ್ಟ್‌ ಮಾಡುವುದಕ್ಕಾಗಿ ಎಲ್ಲಕ್ಕೂ ಮೊದಲು, ಯಾವುದೇ ಬಗೆಯ ನೇಲ್ ‌ಪೇಂಟ್‌ನ್ನು ನಿಮ್ಮ ಉಗುರಿಗೆ ಹಚ್ಚಿಕೊಳ್ಳಿ. ಅದನ್ನು ಕಾಂಪ್ಲಿಮೆಂಟ್‌ಗೊಳಿಸುತ್ತಾ, ಒಂದು ಸ್ಟೋನ್‌ ಅಥವಾ ಸ್ಟಡ್‌ನ್ನು ಉಗುರಿಗೆ ಅಂಟಿಸುವ ಗ್ಲೂ ನೆರವಿನಿಂದ ಅಂಟಿಸಿಬಿಡಿ. ಇದೇ ತರಹ ನೀವು ಟ್ರಾನ್ಸ್ ಪರೆಂಟ್‌ ಮತ್ತು ಸ್ಪಾರ್ಕ್ಸ್‌ ಕಾಂಬಿನೇಶನ್ನಿನ ನೇಲ್ ‌ಪೇಂಟ್‌ಗೂ ಮಾಡಬಹುದು.

ಸ್ಟಡ್‌ ಸ್ಟೋನ್‌ ಡಿಸೈನ್ಸ್

3D-nailart-1

ಸ್ಟಡ್‌ಸ್ಟೋನ್‌ ಮೂಲಕ ನೀವು ಉಗುರಿನ ಮೇಲೆ ಹೂಬಳ್ಳಿಗಳ ವಿನ್ಯಾಸ ಬಿಡಿಸಬಹುದು. ಜೊತೆಗೆ ಸ್ಟೋನ್ಸ್ ಗೆ ಪೋಲ್ಕಾ ಡಾಟ್ ತರಹ ಬಳಸಿಕೊಳ್ಳಬಹುದು.

3ಡಿ ಮತ್ತು ಸ್ಟೋನ್‌ ನೇಲ್ ‌ಆರ್ಟ್‌ ಮಾತ್ರವಲ್ಲ, ಈ ಸ್ಪರ್ಧೆಯಲ್ಲಿ ಸೋಶಿಯಲ್ ನೆಟ್‌ ವರ್ಕಿಂಗ್‌ ಸೈಟ್‌ನ ಐಕಾನ್ಸ್ ಸಹ ನೇಲ್ ಆರ್ಟ್‌ ಲಿಸ್ಟ್ ನಲ್ಲಿ ಶಾಮೀಲಾಗದೆ ಇರಲು ಸಾಧ್ಯವಾಗಲಿಲ್ಲ. ಈ ಸ್ಪರ್ಧೆಯ ಮತ್ತೊಬ್ಬ ವಿಜೇತರಾದ ಅಂಜುಶರ್ಮ ಹೇಳುತ್ತಾರೆ, “ಇಂದಿನ ಟೀನ್‌ ಏಜರ್ಸ್‌ ಸದಾ ಕಂಪ್ಯೂಟರ್‌ಗೆ ಅಂಟಿರುತ್ತಾರೆ. ಸೋಶಿಯಲ್ ನೆಟ್‌ ವರ್ಕಿಂಗ್‌ ಸೈಟ್ಸ್ ಅವರಿಗೆ ಬಲು ಇಷ್ಟ. ಹೀಗಾಗಿ ನೇಲ್ ‌ಆರ್ಟ್‌ನಲ್ಲೂ ಇಂಥ ಐಕಾನ್ಸ್ ರನ್ನು ಡಿಸೈನ್‌ ಗೊಳಿಸಿದರೆ ಹೆಚ್ಚು ಕ್ರಿಯೇಟಿವ್ ‌ಎನಿಸುತ್ತದೆ.”

ಇದೇ ತರಹ ಫ್ಯಾಬ್ರಿಕ್‌ ನೇಲ್ ಆರ್ಟ್‌ನಲ್ಲೂ ಕೆಲವರು ಬಹುಮಾನ ಗಳಿಸಿದರು. ಫ್ಯಾಬ್ರಿಕ್‌ ಕಲರ್ಸ್‌ನಿಂದ ಫ್ಯಾನ್ಸಿ, ಫಂಕಿ ಡಿಸೈನ್ಸ್ ಮಾಡಿದ ಸ್ವಾತಿ, “ನೇಲ್ ‌ಪೇಂಟ್‌ನಿಂದ ಅತಿ ಸಣ್ಣ ಡಿಸೈನ್‌ ಮಾಡಲು ಹೋದರೆ, ಅದು ಹರಡಿಕೊಳ್ಳುತ್ತದೆ. ಹೀಗಾಗಿ ಇಂಥ ಕಡೆ ಫ್ಯಾಬ್ರಿಕ್‌ ಕಲರ್ಸ್‌ ಬಳಸಬೇಕು,” ಎನ್ನುತ್ತಾರೆ.

ಫ್ಯಾಬ್ರಿಕ್‌ ನೇಲ್ ಆರ್ಟ್‌ ಮಾಡುವ ವಿಧಾನ

ಇದನ್ನು ಮಾಡುವುದಕ್ಕಾಗಿ, ಉಗುರುಗಳ ಮೇಲೆ ಬ್ರಶ್‌ ಅಥವಾ ಟೂತ್‌ ಪಿಕ್‌ ಬಳಸಬೇಕು. ಇಂಥ ನೇಲ್ ‌ಆರ್ಟ್‌ ಮಾಡಲು, ಮೊದಲು ಉಗುರಿನ ಮೇಲೆ ನೇಲ್ ಬೇಸ್‌ ಹಾಕಬೇಕು. ನೇಲ್ ಬೇಸ್‌ ಅರ್ಧದಷ್ಟು ಒಣಗಿದ ನಂತರ ಅದರ ಮೇಲೆ ಟೂಥ್‌ ಪಿಕ್ ಫ್ಯಾಬ್ರಿಕ್‌ ಕಲರ್‌ನಿಂದ ಪೋಲ್ಕಾ ಡಾಟ್ಸ್ ಅಥವಾ ಚೆಕ್ಸ್ ಬಿಡಿಸಬಹುದು. ಈ ಡಿಸೈನ್‌ ಒಣಗಿದ ನಂತರ ಇದರ ಮೇಲೆ ಟ್ರಾನ್ಸ್ ಪರೆಂಟ್‌ ನೇಲ್ ಪೇಂಟ್‌ ಹಚ್ಚಬೇಕು, ಆಗ ಅದು ಚೆನ್ನಾಗಿ ಸೆಟ್‌ ಆಗುತ್ತದೆ. ಹಾಗೆಯೇ ನೇಲ್ ‌ಎಕ್ಸ್ ಟೆನ್‌ಶನ್‌ನಲ್ಲಿಯೂ ನೈಪುಣ್ಯತೆ ತೋರಿಸಬಹುದು.

– ಜಿ. ಪ್ರತಿಭಾ

ಇವನ್ನು ಮರೆಯಬೇಡಿ

3D-nailart

ಕಲರ್‌ ಬ್ಯಾಲೆನ್ಸಿಂಗ್‌ : ನೇಲ್ ‌ಆರ್ಟ್‌ ಮಾಡುವಾಗ ಎಲ್ಲಕ್ಕಿಂತ ಮುಖ್ಯವಾದುದು ಎಂದರೆ, ಸರಿಯಾದ ಬಣ್ಣಗಳ ಹೊಂದಾಣಿಕೆ. ಇಲ್ಲದಿದ್ದರೆ ಉತ್ತಮ ಡಿಸೈನ್‌ ಸಹ ಕೆಟ್ಟದಾಗಿ ಕಂಡೀತು.

ಶುಚಿತ್ವಕ್ಕೆ ಗಮನವಿರಲಿ : ನೇಲ್ ಆರ್ಟ್‌ ಮಾಡುವಾಗ ಸಹಜವಾಗಿಯೇ ಬಣ್ಣಗಳು ಹರಡಿಕೊಳ್ಳುತ್ತವೆ. ತುಸು ಶ್ರದ್ಧೆ ವಹಿಸಿ ಕೆಲಸ ಮಾಡಿದರೆ, ಬಣ್ಣಗಳು ಹೆಚ್ಚು ಹರಡದಂತೆ ತಡೆಯಬಹುದು. ಆದರೂ ಬಣ್ಣ ಉಗುರಿನಿಂದ ಹೊರಚಾಚಿದರೆ, ಮರೆಯದೆ ಅದನ್ನು ಬೇಗ ಶುಚಿಗೊಳಿಸಬೇಕು. ಇಲ್ಲದಿದ್ದರೆ ಅದು ಹರಡಿಕೊಂಡು ಅಂದದ ಡಿಸೈನ್‌ ಅರ್ಥವಿಲ್ಲದೆ ಹೋದೀತು, ಜೊತೆಗೆ ಉಗುರು ಸಹ ಕೆಟ್ಟದಾಗಿ ಕಂಡೀತು.

ಡಿಸೈನ್‌ನಲ್ಲಿ ಹೊಸತನವಿರಲಿ : ಒಂದು ಕೈನ ಎಲ್ಲಾ ಉಗುರುಗಳೂ ಒಂದೇ ತರಹ ಡಿಸೈನ್‌ಗೊಂಡಿರಬೇಕೆಂದೇನೂ ಇಲ್ಲ. ಅದರಲ್ಲಿ ಪರಸ್ಪರ ಪೂರಕ ಗುಣವಿದ್ದರೆ ಆದೀತು. ಹೀಗೆ ಮಾಡುವುದರಿಂದ ಡಿಸೈನ್‌ ಸದಾ ಸರ್ವದಾ ಹೊಚ್ಚ ಹೊಸತಾಗಿ ಇರುತ್ತದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ