ಮಾರುಕಟ್ಟೆಯಲ್ಲಿ ಸಿಗುವ ವಿವಿಧ ರೀತಿಯ ಸೌಂದರ್ಯ ಪ್ರಸಾಧನಗಳಿಂದ ನಮ್ಮ ಸೌಂದರ್ಯ ಹೊಳೆಯುತ್ತದೆ. ಆದರೆ ಈ ಹೊಳಪು ಕ್ಷಣಿಕ. ಹೆಸರಾಂತ ಡಯೆಟೀಶಿಯನ್‌ ಹಾಗೂ ಹೆಲ್ತ್ ರಿಪೋರ್ಟರ್‌ ಲಿಜಾ ಡ್ರೈಯರ್‌ ಹೀಗೆ ಹೇಳುತ್ತಾರೆ. ಕೆಲವು ವಿಶೇಷ ಆಹಾರ ಪದಾರ್ಥಗಳನ್ನು ನಮ್ಮ ಆಹಾರದ ಪಟ್ಟಿಯಲ್ಲಿ ಸೇರಿಸಿಕೊಂಡು ಹೊಳೆಯುವ ಚರ್ಮ, ಆಕರ್ಷಕ ರೇಷ್ಮೆಯಂತಹ ಕೂದಲು ಮತ್ತು ಸ್ವಸ್ಥ ಉಗುರುಗಳು ಇತ್ಯಾದಿ ಪ್ರಾಕೃತಿಕ ಸೌಂದರ್ಯ ಪಡೆಯಬಹುದು.

ಅಂತಹ ಆಹಾರ ಪದಾರ್ಥಗಳನ್ನು ಬ್ಯೂಟಿ ಫುಡ್‌ ಎಂದು ಕರೆಯುತ್ತಾರೆ. ಇವನ್ನು ನಿರಂತರವಾಗಿ ಸೇವಿಸುವುದರಿಂದ ರಕ್ತ ಸಂಚಾರ ಸುಗಮವಾಗುತ್ತದೆ. ತ್ವಚೆಯ ಟಿಶ್ಶೂಗಳನ್ನು ರಿಪೇರಿ ಮಾಡಿ ಅವನ್ನು ಬಾಗುವಂತೆ ಮಾಡಿ ಸೌಂದರ್ಯ ಕೊಡುತ್ತವೆ. ಅದರಿಂದ ನೀವು ಬಹಳ ಕಾಲ ಯೌವನ ಉಳಿಸಿಕೊಂಡು ಆರೋಗ್ಯವಾಗಿಯೂ ಇರಬಹುದು.

beuty-food-6

ಸ್ಟ್ರಾಬೆರಿ ಮತ್ತು ಪಾಲಕ್‌ ಸೊಪ್ಪು : ಕಾಸ್ಮೆಟಿಕ್‌ ಸರ್ಜನ್‌ ಡಾ. ಮೀನಾಕ್ಷಿಯವರ ಪ್ರಕಾರ ಆ್ಯಂಟಿ ಆಕ್ಸಿಡೆಂಟ್‌ ಅಂಶಗಳಿಂದ ತುಂಬಿರುವ ಸ್ಟ್ರಾಬೆರಿ ಮತ್ತು ಪಾಲಕ್‌ ತ್ವಚೆಯ ಪೋಷಣೆಯಲ್ಲಿ ವಿಶೇಷ ಸಹಾಯ ಮಾಡುತ್ತದೆ. ಜೊತೆಗೆ ಆ್ಯಂಟಿ ಏಜಿಂಗ್ ಕೆಲಸವನ್ನೂ ಮಾಡುತ್ತದೆ. ಸುಕ್ಕುಗಳನ್ನು ದೂರ ಮಾಡಿ ತ್ವಚೆಯನ್ನು ಸ್ಪಾಂಜಿಯಾಗಿಸುತ್ತದೆ. ಆದ್ದರಿಂದ ಇವೆರಡನ್ನೂ ನಿಮ್ಮ  ಆಹಾರದಲ್ಲಿ ಯಾವುದಾದರೂ ರೂಪದಲ್ಲಿ ಅಗತ್ಯವಾಗಿ ಸೇರಿಸಿಕೊಳ್ಳಿ. ಇಷ್ಟೇ ಅಲ್ಲ, 2-3 ಸ್ಟ್ರಾಬೆರಿಯನ್ನು ಪ್ಯೂರಿ ಮಾಡಿಕೊಳ್ಳಿ. ಅದಕ್ಕೆ ಸ್ವಲ್ಪ ಮೊಸರನ್ನು ಸೇರಿಸಿ ಕೆಲವು ಹನಿ ನಿಂಬೆರಸ ಹಾಕಿ. ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಚ್ಚಿ 20 ನಿಮಿಷ ಬಿಡಿ. ನಂತರ ತೊಳೆಯಿರಿ. ಮುಖ ಹೊಳೆಯುತ್ತದೆ.

ಲೋ ಫ್ಯಾಟ್‌ ಮೊಸರು : ಕ್ಯಾಲ್ಶಿಯಂ ಮತ್ತು ಫಾಸ್ಪರಸ್‌ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಮೊಸರು ಹಲ್ಲುಗಳ ಎನಾಮೆಲ್‌ಗೆ ಶಕ್ತಿ ಕೊಡುತ್ತದೆ, ಕ್ಯಾವಿಟಿ ಉಂಟಾಗುವುದನ್ನು ತಡೆಯುತ್ತದೆ. ನಿಯಮಿತವಾಗಿ ಮೊಸರು ಉಪಯೋಗಿಸುವುದರಿಂದ ತ್ವಚೆ ಹೊಳೆಯುತ್ತದೆ ಮತ್ತು ಬಳುಕುತ್ತದೆ. ಜೊತೆಗೆ ಆಸ್ಟೂವೋ ಪೋರೋಸಿಸ್‌ನ್ನು ತಡೆಯುವಲ್ಲೂ ಸಹಾಯ ಮಾಡುತ್ತದೆ.

ಮೊಸರನ್ನು ಮಾಸ್ಕ್ ನಂತೆಯೂ ಉಪಯೋಗಿಸಬಹುದು. ಸ್ವಚ್ಛವಾದ ಮುಖಕ್ಕೆ ಮೊಸರನ್ನು ಮೆತ್ತಿ. 10 ನಿಮಿಷ ಬಿಟ್ಟು ತೊಳೆಯಿರಿ.

ಅರ್ಧ ಕಪ್‌ ಪೂರ್ತಿ ಫ್ಯಾಟ್‌ ಇರುವ ಮೊಸರಿನಲ್ಲಿ 3 ದೊಡ್ಡ ಚಮಚ ಜೇನುತುಪ್ಪ ಮತ್ತು 1 ಮೊಟ್ಟೆಯ ಹಳದಿ ಭಾಗ ಹಚ್ಚಿ ಮಿಶ್ರಣ ತಯಾರಿಸಿ. ಇದನ್ನು ಕೂದಲಿನ ಮೇಲೆ ಹಚ್ಚಿ 15 ನಿಮಿಷ ಬಿಡಿ. ನಂತರ ತೊಳೆಯಿರಿ. ಇದು ಪ್ರೋಟೀನ್‌ ರಿಚ್‌ ಹೇರ್‌ ಮಾಸ್ಕ್ ನ ಕೆಲಸ ನಿರ್ವಹಿಸುತ್ತದೆ.

ಆ್ಯಪಲ್ ಸೈಡರ್‌ ವಿನಿಗರ್‌ : ಇದರಲ್ಲಿ ಬಹಳಷ್ಟು ಗುಣಗಳಿದ್ದು ಸ್ಕಿನ್‌ ಟಿಶ್ಶೂಸ್‌ ಹೀಲಿಂಗ್‌ ಮಾಡುತ್ತವೆ. ಅಲ್ಲದೆ, ತ್ವಚೆಗೆ ಕೋಮಲತೆ ಹಾಗೂ ಹೊಳಪನ್ನು ಕೊಡುತ್ತದೆ. ಇದರಲ್ಲಿರುವ ಎನ್‌ಝೈಮ್ ಗಳು ಮೃತ ತ್ವಚೆಯ ಪದರವನ್ನು ದೂರ ಮಾಡಿ ಅದಕ್ಕೆ ಹೊಸ ರೂಪ ಕೊಡುತ್ತದೆ, ಫ್ಯಾಟ್‌ ಕಡಿಮೆ ಮಾಡುತ್ತದೆ ಹಾಗೂ ಪಚನಕ್ರಿಯೆಯನ್ನು ಸುಧಾರಿಸುತ್ತದೆ.

beuty-food-3

ಕ್ಯಾರೆಟ್‌ ಮತ್ತು ಬೀಟ್‌ ರೂಟ್‌ : ಇವು ಮಹತ್ವಪೂರ್ಣ ವಿಟಮಿನ್‌ಗಳು ಮತ್ತು ಖನಿಜ ಪದಾರ್ಥಗಳಿಂದ ತುಂಬಿರುವುದರಿಂದ ಆ್ಯಂಟಿ ಏಜಿಂಗ್‌ನ್ನು ತಡೆಯುತ್ತದೆ ಮತ್ತು ತ್ವಚೆಯ ಹೊರಗಿನ ಪದರವನ್ನು ಸರಿಯಾಗಿಡುತ್ತದೆ. 2 ವಾರಗಳು ಕ್ಯಾರೆಟ್‌ ಹಾಗೂ ಬೀಟ್‌ ರೂಟ್‌ ರಸವನ್ನು ನಿಯಮಿತವಾಗಿ ಕುಡಿದರೆ ಅದ್ಭುತ ಸೌಂದರ್ಯ ನಿಮ್ಮದಾಗುತ್ತದೆ.

ಬೆಳ್ಳುಳ್ಳಿ : ಇದು ನೆರಿಗೆಗಳನ್ನು ತಡೆದು ತ್ವಚೆಯ ಟಿಶ್ಶೂಗಳಿಗೆ ಹೊಸ ಜೀವನ ಕೊಡುತ್ತದೆ. ಟಾಕ್ಸಿನ್‌ಗಳಿಂದ ರಕ್ಷಿಸುತ್ತದೆ. 1-2 ಬೆಳ್ಳುಳ್ಳಿ ಎಸಳುಗಳನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದು ಲಾಭದಾಯಕ.

ಸಿಹಿ ಗೆಣಸು : ಇದೊಂದು ಆ್ಯಂಟಿ ಏಜಿಂಗ್‌ ಫುಡ್‌ ಆಗಿದೆ. ಏಕೆಂದರೆ ಇದು ವಿಟಮಿನ್‌ `ಎ’ ನಿಂದ ತುಂಬಿದೆ. ಇದರ ನಿಯಮಿತ ಸೇವನೆಯಿಂದ ತ್ವಚೆ ನುಣುಪಾಗಿ ಹಾಗೂ ಹೊಳಪಾಗಿ ಕಂಡುಬರುತ್ತದೆ.

ವೀಟ್‌ ಜರ್ಮ್ (ಮೊಳಕೆ ಬರಿಸಿದ ಧಾನ್ಯ) : 2-3 ದೊಡ್ಡ ಸ್ಪೂನ್‌ ವೀಟ್‌ ಜರ್ಮ್ ನ್ನು ನಿಮ್ಮ ಡಯೆಟ್‌ನಲ್ಲಿ ಸೇರಿಸುವುದರಿಂದ ತ್ವಚೆಗೆ ಸಂಬಂಧಿಸಿದ ಪಿಂಪಲ್ಸ್ ಮತ್ತು ಆ್ಯಕ್ನೆ ಇತ್ಯಾದಿ ಸಮಸ್ಯೆಗಳಿಂದ ಪಾರಾಗಬಹುದು ಮತ್ತು ತ್ವಚೆ ಸುಂದರವಾಗುತ್ತದೆ. ಮೊಸರು, ಪನೀರುಗಳೊಂದಿಗೆ ಬೆರೆಸಿ ಇದನ್ನು ಉಪಯೋಗಿಸಬಹುದು.

ಹುಳಿ ಹಣ್ಣು : ನಿಂಬೆ, ಕಿತ್ತಳೆ, ಚಕ್ಕೋತ ಮತ್ತು ನೆಲ್ಲಿಕಾಯಿ ತ್ವಚೆಯನ್ನು ಸ್ವಸ್ಥ ಹಾಗೂ ಸುಂದರಗೊಳಿಸುವಲ್ಲಿ ಸಹಾಯ ಮಾಡುತ್ತವೆ. ಇವುಗಳ ಸೇವನೆ ಆ್ಯಂಟಿ ಆಕ್ಸಿಡೆಂಟ್‌ನ ಕೆಲಸ ಮಾಡುವುದರಿಂದ ತ್ವಚೆಯನ್ನು ಕೋಮಲ, ಸ್ವಚ್ಛ ಹಾಗೂ ಕಾಂತಿಯುತವನ್ನಾಗಿ ಮಾಡುತ್ತವೆ. ಇವುಗಳ ಜ್ಯೂಸ್‌ನ್ನು ನಿಯಮಿತವಾಗಿ ಸೇವಿಸುವುದರಿಂದ ವ್ಯತ್ಯಾಸ ಕಂಡುಬರುತ್ತದೆ.

beuty-food-4

ಟೊಮೇಟೊ : ಇದರಲ್ಲಿ ವಿಟಮಿನ್‌ `ಸಿ’ ಮತ್ತು `ಎ’ ಎರಡೂ ಇರುತ್ತವೆ. ಜೊತಗೆ ಸಾಕಷ್ಟು ಪ್ರಮಾಣದಲ್ಲಿ ಪೊಟ್ಯಾಶಿಯಂ ಕೂಡ ಇರುತ್ತದೆ. ಇದರಲ್ಲಿನ ಲೈಕೋಪೀನ್‌ ಎಂಬ ಅಂಶ ಆ್ಯಂಟಿ ಆಕ್ಸಿಡೆಂಟ್‌ನ ಕೆಲಸ ಮಾಡುತ್ತದೆ. ಟೊಮೇಟೊ ಸೇವಿಸುವುದರಿಂದ ತ್ವಚೆಯನ್ನು ಸನ್‌ಬರ್ನ್‌ನಿಂದಲೂ ರಕ್ಷಿಸಬಹುದು.

ಅಖ್ರೋಟು ಮತ್ತು ಅಗಸೆ : ಇವೆರಡೂ ಒಮೆಗಾ-3 ಫ್ಯಾಟಿ ಆಮ್ಲದ ಮುಖ್ಯ ಸ್ರೋತವಾಗಿದ್ದು ತ್ವಚೆ, ಕೂದಲು ಮತ್ತು ಮೂಳೆಗಳಿಗೆ ಪೋಷಣೆ ನೀಡುತ್ತವೆ. ಜೊತೆಗೆ ತ್ವಚೆಯ ಸಮಸ್ಯೆಗಳಿಂದಲೂ ರಕ್ಷಿಸುತ್ತವೆ.

ಡಾರ್ಕ್‌ ಚಾಕಲೇಟ್‌ : ಇದು ಪೌಷ್ಟಿಕ ಹಾಗೂ ಆ್ಯಂಟಿ ಆಕ್ಸಿಡೆಂಟ್‌ ಅಂಶಗಳಿಂದ ತುಂಬಿರುತ್ತದೆ. ಚಾಕಲೇಟ್‌ ತಿನ್ನುವುದರಿಂದ ಬಿಸಿಲಿನಿಂದ ತ್ವಚೆಗೆ ಉಂಟಾಗುವ ತೊಂದರೆಯಿಂದ ಪಾರು ಮಾಡುತ್ತದೆ ಮತ್ತು ರಕ್ತ ಸಂಚಾರ ಹೆಚ್ಚಿಸುತ್ತದೆ. ಅದರಿಂದ ತ್ವಚೆಯ ಸೌಂದರ್ಯ ಹೊಳೆಯುತ್ತದೆ.

beuty-food-2

ಗ್ರೀನ್‌ ಟೀ : ಇದು ಪಾಲಿಫಿನಾಲಿ ‌ಆ್ಯಂಟಿ ಆಕ್ಸಿಡೆಂಟ್‌ ಎಂಬ ಅಂಶಗಳಿಂದ ಕೂಡಿರುತ್ತದೆ. ಅಲಪ ತ್ವಚೆಯನ್ನು ಏಜಿಂಗ್‌ನಿಂದ ರಕ್ಷಿಸುತ್ತವೆ. ಗ್ರೀನ್‌ ಟೀ ಹೃದಯದ ಕಾಯಿಲೆ ಮತ್ತು ಕ್ಯಾನ್ಸರ್‌ನಂತಹ ರೋಗಗಳಿಂದಲೂ ಕಾಪಾಡುತ್ತದೆ. ಇದರಲ್ಲಿರುವ ಫ್ಲೆಯೋನೈಡ್‌ ಅಂಶ ತ್ವಚೆಗೆ ಲಾಭಕಾರಿಯಾಗಿದೆ. ಅದು ಸಿಸ್ಟಮ್ ನ್ನು ಕ್ಲೀನ್‌ ಮಾಡುತ್ತದೆ. ಜೊತೆಗೆ ತೂಕವನ್ನು ನಿಯಂತ್ರಿಸುತ್ತದೆ.

ಇದಲ್ಲದೆ ಒಣದ್ರಾಕ್ಷಿ, ಕೆಂಪು ಮತ್ತು ಹಳದಿ ಕ್ಯಾಪ್ಸಿಕಂ, ಬ್ರೋಕ್ಲಿ, ಪರಂಗಿಹಣ್ಣು ಹಾಗೂ ಬಾದಾಮಿ ಸೇವಿಸುವುದರಿಂದ ಸೌಂದರ್ಯ ಮತ್ತಷ್ಟು ಹೊಳೆಯುತ್ತದೆ.

– ಎನ್‌. ರಾಧಾಮಣಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ