ತಿಂಗಳ ಕೊನೆಯ ದಿನ. ಇನ್ನು 4 ದಿನಕ್ಕೆ ಹಬ್ಬ ಬರುತ್ತಿದೆ. ನನ್ನಾಕೆ ಮಾರ್ಟ್‌ಗೆ ಹೋಗಿದ್ದಾಳೆ. ಮಾರ್ಟ್‌ನಲ್ಲಿ ಟ್ರಾಲಿ ಡ್ರೈವ್ ‌ಮಾಡುವ ಡ್ಯೂಟಿ ನನ್ನದು. ನನ್ನ ಬಳಿ ಡ್ರೈವಿಂಗ್‌ ಲೈಸೆನ್ಸ್ ಇಲ್ಲ. ಸಾಮಾನ್ಯವಾಗಿ ಯಾವಾಗಲೂ ಮುಸುಕು ಹೊದ್ದಿರುವ ನಮ್ಮ ಕಾರಿಗೆ ಅವಶ್ಯಕತೆ ಬಂದಾಗ ಡೇಲಿ ಪೇಮೆಂಟ್‌ಗೆ ಅನುಗುಣವಾಗಿ ಡ್ರೈವರ್‌ನನ್ನು ನೇಮಿಸಿಕೊಂಡು ಬೇಕಾದೆಡೆ ಹೋಗುತ್ತೇವೆ. ನಾನೂ ಮಾರ್ಟ್‌ನ ಟ್ರಾಲಿಯನ್ನು ಚೆನ್ನಾಗಿ ಡ್ರೈವ್ ‌ಮಾಡುತ್ತೇನೆ, ಅಂದರೆ ತಳ್ಳುತ್ತೇನೆ. ಹಬ್ಬದ ಕಾರಣ ಮಾರ್ಟ್‌ಲ್ಲಿ ಜನರ ಗುಂಪು ಹೆಚ್ಚಾಗಿರುತ್ತದೆ. ನನಗೆ ಟ್ರಾಲಿ ತಳ್ಳಲು ಬಹಳ ಕಷ್ಟವಾಗುತ್ತದೆ. ಅದರಲ್ಲೂ ನನ್ನಾಕೆ ಟ್ರಾಲಿಯನ್ನು ಸಂಪೂರ್ಣವಾಗಿ ತುಂಬಿಸಿರುತ್ತಾಳೆ. ತೂಕ ಕ್ವಿಂಟಾಲ್ ‌ದಾಟಿರುತ್ತದೆ. ಹಬ್ಬಗಳಲ್ಲಿ ಅವಳ ಬಂಧು ವರ್ಗದವರೆಲ್ಲರ ದರ್ಶನವಾಗುತ್ತದೆ.

“ನೀವು ಏನಾದರೂ ತಗೊಳೋದು ಇದೆಯಾ?” ನನ್ನಾಕೆ ಕೇಳಿದಳು. ಅವಳ ಹಲ್ಲುಗಳು ಬೆಳ್ಳಗೆ ಹೊಳೆಯುತ್ತವೆ. ತುಟಿಗಳು ಪ್ರಾಕೃತಿಕವಾಗಿ ಕೆಂಪಗಿವೆ. ಅವಳ ನಗುವಿನಲ್ಲಿ ಆಕರ್ಷಣೆ ಇದೆ. ಅದು ನನಗೆ ಇಷ್ಟವಾಗುತ್ತದೆ, ಜೊತೆಗೆ ಅಸೂಯೆಯೂ ಆಗುತ್ತದೆ.

“ಅಂಥಾ ಸ್ಪೆಷಲ್ ಏನಿಲ್ಲ. ಪಕ್ಕದ ಡಿಪಾರ್ಟ್‌ಮೆಂಟ್‌ ಸ್ಟೋರ್‌ನಲ್ಲಿ ಏನೋ ತಗೋಬೇಕು. ನೀನು ಕಾರಿನಲ್ಲಿ ಕೂತಿರು,” ಎಂದೆ, ನಾನು ನಗುವುದನ್ನು ಬಿಟ್ಟಿದ್ದೆ. ಅದಕ್ಕೆ ವಿಶೇಷ ಕಾರಣವಿದೆ.  “ಚಿಕ್ಲೆಟ್ಸ್ ತಗೋಬೇಕು. ಯಾವ ಸೆಕ್ಷನ್‌ನಲ್ಲಿದೆ?” ಡಿಪಾರ್ಟ್‌ಮೆಂಟ್‌ ಸ್ಟೋರ್ಸ್‌ನ ಎನ್‌ಕ್ವೈರಿ ಕೌಂಟರ್‌ನಲ್ಲಿ ಕೂತಿದ್ದ ಸುಂದರ ಯುವತಿಯನ್ನು ಕೇಳಿದೆ.

“ಚಿಕ್ಲೆಟ್ಸ್ ಔಟ್‌ ಆಫ್‌ ಸ್ಟಾಕ್‌ ಆಗಿದೆ ಸರ್‌, ಅಮೆರಿಕನ್‌ ಬ್ರ್ಯಾಂಡ್‌ನ ಚೂಯಿಂಗ್‌ ಗಮ್ ಕೂಡ ಖಾಲಿಯಾಗಿದೆ. ನೀವು ಫಸ್ಟ್ ಫ್ಲೋರ್‌ಗೆ ಹೋಗಿ ಕೌಂಟರ್‌ ನಂಬರ್‌ ಸಿಕ್ಸ್ ಟೀನ್‌ನಲ್ಲಿ ಕನ್‌ಫರ್ಮ್ ಮಾಡ್ಕೊಳ್ಳಿ,” ಆಕೆ ನಗುತ್ತಾ ಹೇಳಿದಳು.

ನಾನು ಕೌಂಟರ್‌ ನಂಬರ್‌ 16ಕ್ಕೆ ಹೋಗಿ ಅಲ್ಲಿ ತುಂಡು ಉಡುಗೆ ತೊಟ್ಟು ಸುಂದರವಾಗಿ ಮೇಕಪ್‌ ಮಾಡಿಕೊಂಡಿದ್ದ ಬೆಳ್ಳನೆಯ ತರುಣಿಯನ್ನು ಕೇಳಿದಾಗ ಆಕೆ, “ಚೂಯಿಂಗ್‌ ಗಮ್ಗೆ ಅಡ್ವಾನ್ಸ್ ಬುಕಿಂಗ್‌ ಮಾಡಿಸಬೇಕು,” ಎಂದು ಹೇಳಿ ಬುಕಿಂಗ್‌ ಫಾರ್ಮ್ ಕೊಟ್ಟಳು.

“ಅಡ್ವಾನ್ಸ್ ಬುಕಿಂಗ್‌!?…… ಚೂಯಿಂಗ್‌ ಗಮ್ ಗಾ!?” ನನಗೆ ಆಶ್ಚರ್ಯವಾಗಿತ್ತು. ಅಡ್ವಾನ್ಸ್ ಬುಕಿಂಗ್‌ ಫಾರ್ಮ್ ನಲ್ಲಿ ವಯಸ್ಸಿನ ಕಾಲಂ ಇತ್ತು. ಲಭ್ಯವಿದೆ ಎಂದು ಸೂಚನೆ ಕೊಡಲು ನನ್ನ ಕಾಂಟ್ಯಾಕ್ಟ್ ನಂಬರ್‌ ಕೊಡಬೇಕಿತ್ತು. ಯಾವುದೇ ಪರಿಸ್ಥಿತಿಯಲ್ಲೂ ಚೂಯಿಂಗ್‌ ಗಮ್ ನ ದುರುಪಯೋಗ ಮಾಡುವುದಿಲ್ಲ ಎಂದು ಡಿಕ್ಲರೇಶನ್‌ ಸಹಿ ಮಾಡಿ ಕೊಡಬೇಕಿತ್ತು.

“ಗೋರಿ ತೇರಿ ಪ್ರೀತ್‌ ಮೆ ಚಿತ್ರದ ಟ್ರೇಲರ್‌ ರಿಲೀಸ್‌ ಆದ ನಂತರ ಚೂಯಿಂಗ್‌ ಗಮ್ ನ ಡಿಮ್ಯಾಂಡ್‌ ಸಾಕಷ್ಟು ಹೆಚ್ಚಾಗಿದೆ. `ಚೀಂಗವ್‌ ಚಬಾ ಕೆ…’ ಹಾಡು ಸೂಪರ್‌ ಹಿಟ್‌ ಆಗಿದೆ. ಎಲೆಕ್ಷನ್‌ನಲ್ಲಿ ಯುವ ಮತದಾರರನ್ನು ಪ್ರಸನ್ನಗೊಳಿಸಬೇಕು. ಅದಕ್ಕೆ ಚೂಯಿಂಗ್‌ ಗಮ್ ಬೆಟರ್‌ ಆಪ್ಶನ್‌ ಆಗಿದೆ. ಎಲೆಕ್ಷನ್‌ ಕಮೀಶನರ್‌ಗಂತೂ ಅದರ ಬಗ್ಗೆ ಯಾವ ತಕರಾರೂ ಇಲ್ಲ,”

ಕೌಂಟರ್‌ನಲ್ಲಿ ಕುಳಿತಿದ್ದ ಆ ಸುಂದರ ಯುವತಿ ಹೇಳಿದಳು.“ಈರುಳ್ಳಿಯ ಬ್ಲ್ಯಾಕ್‌ ಮಾರ್ಕೆಟ್‌ ಕೇಳಿದ್ದೆ, ನೋಡಿದ್ದೆ. ಆದರೆ ಈಗ ಈರುಳ್ಳಿ ಬಹಳ ಕಣ್ಣೀರು ತರಿಸಿದೆ. ನಾನ್‌ ವೆಜ್‌ ಬಿಟ್ಟು ವೆಜ್‌ ಲೋಕಕ್ಕೆ ಶರಣಾಗುವಂತೆ ಮಾಡಿದೆ. ಅದೇ ರೀತಿ ಚೂಯಿಂಗ್‌ ಗಮ್ ನ ಅಡ್ವಾನ್ಸ್ ಬುಕಿಂಗ್‌ನ ಡಿಕ್ಲರೇಶನ್‌ ಕೊಡಬೇಕು ಅಂತೀರಿ,” ಎಂದು ನಾನು ಆಶ್ಚರ್ಯದಿಂದ ಅವಳತ್ತ ನೋಡಿ ಅಡ್ವಾನ್ಸ್ ಬುಕಿಂಗ್‌ ಫಾರ್ಮ್ ಸಹಿ ಮಾಡಿ ಕೊಟ್ಟೆ.

“ಏನ್ರಿ ಅಂಥಾ ವಿಶೇಷ ಖರೀದಿ?” ಕಾರ್‌ನಲ್ಲಿ ಕಾಯುತ್ತಾ ಕೂತಿದ್ದ ನನ್ನಾಕೆ ಕೇಳಿದಳು. ಡಿಪಾರ್ಟ್‌ಮೆಂಟ್‌ ಸ್ಟೋರ್‌ನಲ್ಲಿ ಸಾಕಷ್ಟು ಹೊತ್ತು ಕಳೆದಿದ್ದೆ.

“ಚೂಯಿಂಗ್‌ ಗಮ್ ನ ಅಡ್ವಾನ್ಸ್ ಬುಕಿಂಗ್‌ ಮಾಡುತ್ತಿದ್ದೆ. ಅದು ಮಾಕೆರ್ಟ್‌ನಿಂದ ಮಾಯವಾಗಿದೆ,” ಎಂದೆ.

“ನನಗ್ಯಾಕ್ರೀ ಹೇಳಲಿಲ್ಲ? ನನ್ನ ಬಳಿ ಚೂಯಿಂಗ್‌ ಗಮ್ ನ ಸ್ಟಾಕ್‌ ಇದೆ,” ಎನ್ನುತ್ತಾ ನನ್ನಾಕೆ ತನ್ನ ದುಬಾರಿ ಇಂಪೋರ್ಟೆಡ್ ಪರ್ಸ್‌ನಿಂದ ಚೂಯಿಂಗ್‌ ಗಮ್ನ ಪ್ಯಾಕೆಟ್‌ ತೆಗೆದುಕೊಟ್ಟು ಪ್ರೀತಿಭರಿತ ದೃಷ್ಟಿಯಿಂದ ನನ್ನನ್ನು ನೋಡಿದಳು.

ನನ್ನಾಕೆ ಟಿ.ವಿಯಲ್ಲಿ ಬರುತ್ತಿದ್ದ `ಗೋರಿ ತೇರಿ ಪ್ರೀತ್‌ ಮೆ’ ಚಿತ್ರದ ಟ್ರೇಲರ್‌ ನೋಡಲು ಕರೆದಳು. ಚಿತ್ರದ ಜನಪ್ರಿಯ ಹಾಡು `ಚೀಂಗಮ್ ಚಬಾ ಕೆ….’ ನೋಡಲು ಪಕ್ಕ ಕೂಡಿಸಿಕೊಂಡಳು ಮತ್ತು ನನ್ನತ್ತ ಒಂದು ರೀತಿಯಾಗಿ ನೋಡಿದಳು. ಅವಳು ಚೂಯಿಂಗ್‌ ಗಮ್ ಅಗಿಯುತ್ತಿದ್ದಳು. ನಿಯಂತ್ರಣ ರೇಖೆ ಉಲ್ಲಂಘಿಸುವ ಸಾಧ್ಯತೆ ಇತ್ತು.

“ನಾನು ಡಿಕ್ಲರೇಶನ್‌ ಫಾರ್ಮ್ ಗೆ ಸೈನ್‌ ಮಾಡಿದ್ದೀನಿ. ಅದರ ಉಲ್ಲಂಘನೆ ಮಾಡೋದು ಸರಿಯಲ್ಲ,” ಎಂದೆ. ನಂತರ ನಾನು `ಗೋರಿ ತೇರಿ ಪ್ರೀತ್‌ ಮೆ’ ಚಿತ್ರಕ್ಕೆ ಮಲ್ಟಿಪ್ಲೆಕ್ಸ್ ನಲ್ಲಿ ಟಿಕೆಟ್‌ ಬುಕ್‌ ಮಾಡಿ, ಚಿತ್ರ ನೋಡಿದ ನಂತರ ಒಳ್ಳೆಯ ಹೋಟೆಲ್‌ನಲ್ಲಿ ನಾನ್‌ವೆಜ್‌ ಊಟ ಕೊಡಿಸುವುದಾಗಿ ಹೇಳಿದೆ. ವ್ಯಾಲೆಂಟೈನ್‌ ಡೇ ನಂದು ಅವಳಿಗೆ ಡೈಮಂಡ್‌ ಜ್ಯೂವೆಲರಿ ಕೊಡಿಸುತ್ತೇನೆಂದೂ ಪ್ರಾಮಿಸ್‌ ಮಾಡಿದೆ.

ನನ್ನಾಕೆ ಬೆಳ್ಳಗೇನೂ ಇಲ್ಲ. ಶ್ಯಾಮಲ ವರ್ಣದವಳು. ಆದರೂ ಅವಳನ್ನು ಕಂಡರೆ ನನಗಿಷ್ಟ. ಬೆಳ್ಳಗಿರುವ ಚಿಕ್ಕ ವಯಸ್ಸಿನ ಹುಡುಗಿಯನ್ನು ರೇಗಿಸುವ ಆಸೆ ನನಗಿಲ್ಲ.

ಈ ನಡುವೆ ನಾನು ಹಲ್ಲುನೋವಿನಿಂದ ನರಳುತ್ತಿದ್ದೇನೆ. ಹಲ್ಲು ನೋವಿನಿಂದಾಗಿ ನಾನು ಪತ್ನಿಯಿಂದ ದೂರವಿರಬೇಕಾಗಿದೆ. ಹಲ್ಲುಗಳ ಬಗ್ಗೆ ಅಗತ್ಯ ಮಾಹಿತಿಗೆ ಗೂಗಲ್ ಸಹಾಯ ಪಡೆಯುತ್ತಿದ್ದೆ. ಆಗ ಚೂಯಿಂಗ್‌ ಗಮ್ ನ ಔಷಧೀಯ ಗುಣಗಳ ಮಾಹಿತಿ ಸಿಕ್ಕಿತು. ಶುಗರ್‌ಫ್ರೀ ಗಮ್ ನಲ್ಲಿ ಜಾಲಿ ಟಾಲ್ ‌ಸ್ವೀಟ್‌ನರ್‌ನ ಪದರ ಇರುತ್ತದೆ. ಚೂಯಿಂಗ್‌ ಗಮ್ ಅಗಿಯುವುದರಿಂದ ಹಲ್ಲುಗಳಲ್ಲಿ ಕ್ಯಾವಿಟೀಸ್‌, ಪ್ಲಾಕ್ಸ್ ಉಂಟಾಗುವುದಿಲ್ಲ. ಜಾಲಿ ಟಾಲ್ ಹಲ್ಲುಗಳಲ್ಲಿ ಕೊಳೆತ ಉಂಟು ಮಾಡುವ  ಸ್ಚ್ರೆಪ್ಟೋಕೋಕಸ್‌ಮ್ಯೂಟೆನ್ಸ್ ತಳಿಯ ಬ್ಯಾಕ್ಟೀರಿಯಾ ಉತ್ಪನ್ನವಾಗಲು ಬಿಡುವುದಿಲ್ಲ.  ಚೂಯಿಂಗ್‌ ಗಮ್ ಆಗಿಯುವುದರಿಂದ ಬಾಯಲ್ಲಿ ಬಹಳಷ್ಟು ಜೊಲ್ಲು ಉಂಟಾಗುತ್ತದೆ ಮತ್ತು ಹಲ್ಲಿನ ಎನಾಮೆಲ್ ‌ಗಟ್ಟಿಯಾಗುತ್ತದೆ. ಮಾನವನ ಶರೀರದಲ್ಲಿ ಅತ್ಯಂತ ಕಠೋರವಾದದ್ದು ಹಲ್ಲಿನ ಎನಾಮಲ್ ಆಗಿರುತ್ತದೆ.

`ಹೆಲಿಟೋಸಿಸ್‌’ ಅಂದರೆ ಉಸಿರಿನ ದುರ್ವಾಸನೆಯಿಂದ ಪಾರಾಗಲು ಚೂಯಿಂಗ್‌ ಗಮ್ ಅಗಿಯಬೇಕೆಂದು ಹೇಳುತ್ತಾರೆ.

ಹಲ್ಲಿನ ಆರೋಗ್ಯಕ್ಕಾಗಿ ನಾನು ಚೂಯಿಂಗ್‌ ಗಮ್ ಸದಾ ಇಟ್ಟುಕೊಂಡಿರುತ್ತೇನೆ. ಈರುಳ್ಳಿಯಂತೆ ಉದ್ಭವವಾದ ಚೂಯಿಂಗ್‌ ಗಮ್ ಸಂಕಷ್ಟ ಅತಿಶೀಘ್ರದಲ್ಲಿ ದೂರವಾಗಲಿದೆ ಎಂದು ನನಗೆ ಭರವಸೆ ಇದೆ. ಆಗ ಯುವ ಮತದಾದರು ಮತ್ತು ಹಲ್ಲಿನ ಭಾದೆ ಇರುವವರಿಗೆ ನೆಮ್ಮದಿಯುಂಟಾಗುತ್ತದೆ. ಅಗ್ಗದ ದರದಲ್ಲಿ ಅಡ್ವಾನ್ಸ್ ಬುಕಿಂಗ್‌ ಇಲ್ಲದೆ ಚೂಯಿಂಗ್‌ ಗಮ್ ಲಭ್ಯವಾಗುತ್ತದೆ. ಡಿಕ್ಲರೇಶನ್‌ಗೆ ಸಹಿ ಹಾಕುವ ಅಗತ್ಯವಿರುವುದಿಲ್ಲ. ಯುವಕರಿಗೆ ನಿಜವಾದ ಪ್ರೀತಿ ಮಾಡಲು ಸ್ವಾತಂತ್ರ್ಯ ಸಿಗುತ್ತದೆ. ನನ್ನ ಮೊಬೈಲ್ ‌ರಿಂಗ್‌ ಆಗುತ್ತಿದೆ. ಡಿಪಾರ್ಟ್‌ಮೆಂಟ್‌ ಸ್ಟೋರ್‌ನಿಂದ ಕೌಂಟರ್‌ 16ರಲ್ಲಿನ ಲೇಟೆಸ್ಟ್ ಪೊಸಿಶನ್‌ ಹೇಳಿದರು.

ಸಿಕ್ಸ್ ಟೀನ್‌ನ ಈ ಬ್ರೇಕಿಂಗ್‌ ನ್ಯೂಸ್‌ನಿಂದ ನೆಮ್ಮದಿ ಸಿಕ್ಕಿದೆ. ಈಗ ನನ್ನ ಚೂಯಿಂಗ್‌ ಗಮ್ ನನ್ನ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ