ಉದ್ದನೆಯ, ದಟ್ಟ, ಕಪ್ಪು ಕೂದಲು ಹೆಣ್ಣಿನ ಸೌಂದರ್ಯದ ಮುಖ್ಯ ಒಡವೆ ಎನಿಸಿದೆ. ತನ್ನ ಈ ಅಮೂಲ್ಯ ಒಡವೆಯನ್ನು ಸಂರಕ್ಷಿಸಲು ಹಾಗೂ ಅದರ ಸೌಂದರ್ಯ ಸದಾಕಾಲ ಉಳಿಯುವಂತೆ ಮಾಡಲು, ಆಕೆ ಎಂಥ ಪರಿಶ್ರಮ ವಹಿಸಲಿಕ್ಕೂ ಸಿದ್ಧ. ಕೂದಲಿನ ಸೌಂದರ್ಯದಲ್ಲಿ ಅದರ ಉದ್ದಳತೆ ಮತ್ತು ದಟ್ಟವಾಗಿರುವಿಕೆಯ ಜೊತೆ, ಅದರ ಬಣ್ಣ ಅಷ್ಟೇ ಮುಖ್ಯ. ಇದನ್ನು ಆಕರ್ಷಕವಾಗಿರಿಸಲು, ಮಹಿಳೆಯರು ಕೂದಲಿಗೆ ಹೊಸ ಹೊಸ ಬಣ್ಣ ಹಚ್ಚಲು ಬಯಸುತ್ತಾರೆ. ಆದರೆ ಕೂದಲಿಗೆ ಬಣ್ಣ ಹಚ್ಚುವ ಮೊದಲು ಮತ್ತು ನಂತರ ಯಾವ ಯಾವ ವಿಷಯಗಳನ್ನು ಗಮನವಿಟ್ಟು ನೋಡಿಕೊಳ್ಳಬೇಕು ಎಂಬುದರ ಕುರಿತಾಗಿ ತುಸು ನಿರ್ಲಕ್ಷ್ಯ ವಹಿಸುತ್ತಾರೆ. ಕಲರ್‌ ಹಚ್ಚಿದ ನಂತರ ಕೂದಲಿನ ಸೌಂದರ್ಯ ಹೆಚ್ಚಿಸುವ ದೃಷ್ಟಿಯಲ್ಲಿ ಏನೇನು ಮಾಡಬೇಕು ಎಂದು ತಜ್ಞರ ಸಲಹೆ ನೋಡೋಣ.

ಬಣ್ಣ ಹಚ್ಚುವ ಮೊದಲು ಬಿಳಿಯದಾಗಿ ಕೆಟ್ಟದಾಗಿ ಕಾಣಿಸುವ ಕೂದಲಿಗೆ ಹೇರ್‌ ಕಲರ್‌ ಹಚ್ಚಿ ಅದರ ಕುರೂಪಿತನ ಅಡಗಿಸುವುದರಲ್ಲಿ ಏನೂ ತಪ್ಪಿಲ್ಲ. ನೀವು ಮೊದಲ ಸಲ ಕೂದಲಿಗೆ ಬಣ್ಣ ಹಚ್ಚಿಸುವುದಿದ್ದರೆ, ಎಲ್ಲಕ್ಕೂ ಮೊದಲು ಕೇಶ ತಜ್ಞರನ್ನು ಸಂಪರ್ಕಿಸಿ. ನಿಮ್ಮ ಕೂದಲಿನ ಟೆಕ್ಸ್ ಚರ್‌ ತೋರಿಸಿ, ಯಾವ ಬಣ್ಣ ನಿಮ್ಮ ಕೂದಲಿಗೆ ಹೆಚ್ಚು ಹೊಂದುತ್ತದೆಂದು ತಿಳಿದುಕೊಳ್ಳಿ. ಹೇರ್‌ ಕಲರ್‌ ಹಾಕುವುದರಿಂದ ಕೂದಲು ತುಸು ಡ್ರೈ ಆಗುತ್ತದೆ ಎಂಬುದು ನಿಜ ಹಾಗೂ ಹೇರ್‌ ಕಲರ್‌ ಹಾಕಿದ ನಂತರ ಆ್ಯಂಟಿ ಡ್ಯಾಂಡ್ರಫ್‌ ಟ್ರೀಟ್‌ಮೆಂಟ್‌ ತೆಗೆದುಕೊಳ್ಳುವುದರಿಂದ ಕಲರ್‌ ಬೇಗ ಫೇಡ್‌ ಆಗಬಹುದು. ಆದ್ದರಿಂದ ಹೇರ್‌ ಕಲರ್‌ ಹಾಕುವ ಮೊದಲು ಅಗತ್ಯವಾಗಿ ಪ್ಯಾಚ್‌ ಟೆಸ್ಟ್ ಮಾಡಿಸಿ. ಅದರಿಂದ ಅಲರ್ಜಿ ಏನೂ ಇಲ್ಲ ತಾನೇ ಎಂಬುದು ಖಾತ್ರಿಯಾಗುತ್ತದೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ಮುಖ್ಯ ವಿಷಯವೆಂದರೆ, ಮಾರುಕಟ್ಟೆಯಲ್ಲಿ ಹಲವಾರು ಬಗೆಯ ಹೇರ್‌ ಕಲರ್ಸ್‌ ಲಭ್ಯವಿವೆ. ಆದರೆ ಇದರಲ್ಲಿ ಒಳ್ಳೆಯದು ಅಥವಾ ಕೆಟ್ಟದ್ದು ಯಾವುದು ಎಂದು ನೀವೇ ನೋಡಿ ಆರಿಸಿಕೊಳ್ಳಬೇಕು. ಉತ್ತಮ ಕಲರ್ಸ್‌ನ ಎಫೆಕ್ಟ್ ನಿಜಕ್ಕೂ ಕೂದಲಿನ ಮೇಲೆ ಹೆಚ್ಚು ದಿನ ಉಳಿಯದು, ಆದರೆ ಈ ಕಲರ್ಸ್‌ ಕೂದಲಿನ ಕೆರಾಟಿನ್‌ಗೆ ಎಂದೂ ಹಾನಿ ಮಾಡದು. ಇಲ್ಲಿ ಮತ್ತೊಂದು ಅತಿ ಮುಖ್ಯ ವಿಷಯವೆಂದರೆ, ಯಾವ ದಿನ ಕೂದಲಿಗೆ ನೀವು ಬಣ್ಣ ಹಚ್ಚಿಸುವಿರೋ, ಆ ದಿನ ಅಗತ್ಯವಾಗಿ ಕೂದಲನ್ನು ಶ್ಯಾಂಪೂನಿಂದ ತೊಳೆದಿರಬೇಕು. ಆದರೆ ಆ ದಿನ ಕೂದಲಿಗೆ ಕಂಡೀಶನರ್‌ ಬಳಸಬಾರದು. ಏಕೆಂದರೆ ಕಂಡೀಶನರ್‌ನಿಂದ ಕೂದಲಿನ ಕೋಟೆಕ್ಸ್ ಮತ್ತು ಕ್ಯುಟಿಕಲ್ಸ್ ಕ್ಲೋಸ್‌ ಆಗಿಬಿಡುತ್ತವೆ. ಇದರಿಂದ ಕೂದಲಿಗೆ ಬಣ್ಣ ಸಹಜ ರೀತಿಯಲ್ಲಿ ವಿಲೀನಗೊಳ್ಳುವುದಿಲ್ಲ. ಹೀಗಾಗಿ ಬೇಗ ಫೇಡ್‌ ಆಗುತ್ತದೆ. ಒಮ್ಮೊಮ್ಮೆ ಕೂದಲಿಗೆ ಗೋರಂಟಿ ಹಚ್ಚಿದರೂ ಸಹಜವಾಗಿ ಬಣ್ಣ ಹತ್ತುವುದಿಲ್ಲ. ಮೆಹಂದಿ ಕೂದಲಿಗೆ ಬಹಳ ಲಾಭದಾಯಕ. ಆದರೆ ಮಾರುಕಟ್ಟೆಯಲ್ಲಿ ಸಿಗುವ ಮೆಹಂದಿ ಪುಡಿಯ ಪ್ಯಾಕೆಟ್‌ನಲ್ಲಿ ಹಸಿರು ಬಣ್ಣದ ಕೆಮಿಕಲ್ಸ್ ಬೆರೆತಿರುತ್ತವೆ. ಇದನ್ನು ಕೂದಲಿಗೆ ಹಚ್ಚುವುದರಿಂದ, ಕೂದಲಿಗೆ ಮೆಹಂದಿಯಂಥ ಬಣ್ಣ ಹತ್ತುವುದೇನೋ ನಿಜ, ಆದರೆ ಅದು ಕೂದಲನ್ನು ಬೇಗ ಹಾಳು ಮಾಡುತ್ತದೆ. ಒಮ್ಮೆ ಮೆಹಂದಿ ಹಚ್ಚಿಬಿಟ್ಟರೆ ನಂತರ ಸುಲಭವಾಗಿ ಅದಕ್ಕೆ ಹೇರ್ ಕಲರ್‌ ಅಂಟುವುದಿಲ್ಲ. ಹೀಗಾಗಿ ಈಗಾಗಲೇ ತಲೆಗೆ ಮೆಹಂದಿ ಹಾಕಿಸಿದ್ದರೆ, ಅದಾದ 3-4 ತಿಂಗಳ ನಂತರವೇ ಹೇರ್‌ ಕಲರ್ಸ್‌ಹಾಕಿಸಬೇಕು.

ಚರ್ಮಕ್ಕೆ ಕಲೆ ತಾಕಲು ಬಿಡಬೇಡಿ

Gsk-August-40-5

 

ಎಲ್ಲಾ ತರಹದ ಹೇರ್‌ ಕಲರ್ಸ್‌ನಲ್ಲೂ ಅಮೋನಿಯಾ ಇದ್ದೇ ಇರುತ್ತದೆ, ಹೀಗಾಗಿ ಅದು ಚರ್ಮಕ್ಕೆ ತಗುಲಿದರೆ ಅಲ್ಲಿ ಸುಟ್ಟಂತಾಗುತ್ತದೆ. ಹೀಗಾಗಿ ಹೇರ್‌ ಕಲರ್ಸ್‌ ಬಳಸುವ ಸಮಯದಲ್ಲಿ, ಅದು ಚರ್ಮಕ್ಕೆ ತಾಕಲು ಬಿಡಬೇಡಿ. ಕೂದಲಿಗೆ ಬಣ್ಣ ಹಚ್ಚುವಾಗ ವೆಟ್‌ ಟಿಶ್ಯು ಇಟ್ಟುಕೊಳ್ಳಬೇಕು, ತುಸು ಮಾತ್ರ ಬಣ್ಣ ಚರ್ಮದ ಮೇಲೆ ಬಿದ್ದರೂ ತಕ್ಷಣ ಅದನ್ನು ಒರೆಸಿಬಿಡಬೇಕು. ವಿಶೇಷವಾಗಿ ಕಂಗಳು ಹಾಗೂ ಕುತ್ತಿಗೆಯ ಆಚೀಚೆ ತಗುಲುವ ಬಣ್ಣವನ್ನು ತಕ್ಷಣ ಒರೆಸಬೇಕು. ಏಕೆಂದರೆ ಈ ಏರಿಯಾ ಬಲು ನಾಜೂಕು. ಕೂದಲಿಗೆ ಬಣ್ಣ ಹಚ್ಚುವುದಕ್ಕೆ ಮೊದಲೇ ಮುಖ ಹಾಗೂ ಕುತ್ತಿಗೆಯ ಬಳಿ ವ್ಯಾಸಲೀನ್‌ ಸವರಬೇಕು, ಆಗ ಕಲರ್‌ಹಚ್ಚಿದರೆ ಏನೂ ಹಾನಿಯಾಗದು. ಕಲರಿಂಗ್‌ ಮಾಡುವ ಸಮಯದಲ್ಲಿ ಕೈಗಳಿಗೆ ಗವಸು ತೊಟ್ಟಿರಬೇಕು. ಇದರಿಂದ ಕೈಗಳು, ಉಗುರುಗಳಿಗೆ ಬಣ್ಣ ತಗುಲುವುದಿಲ್ಲ.

ಕಲರಿಂಗ್‌ ನಂತರ ಬಣ್ಣ ಹಚ್ಚುವುದಕ್ಕೆ ಮೊದಲು ಕೂದಲನ್ನು ಎಷ್ಟು ಸೂಕ್ಷ್ಮವಾಗಿ ನೋಡಿಕೊಳ್ಳುವಿರೋ, ಅಷ್ಟೇ ಎಚ್ಚರಿಕೆಯಿಂದ ಕಲರಿಂಗ್‌ ನಂತರ ಮಾಡಬೇಕು. ಇಲ್ಲದಿದ್ದರೆ ಬಣ್ಣ ಬೇಗ ಬಿಟ್ಟುಬಿಡುತ್ತದೆ. ಕಲರಿಂಗ್‌ ಮಾಡಿದ ನಂತರ, ಎಲ್ಲಕ್ಕೂ ಮುಖ್ಯವಾಗಿ ಆಫ್ಟರ್‌ ಕಲರ್‌ ಶ್ಯಾಂಪೂ ಬಳಸಬೇಕು. ಇಂಥ ಶ್ಯಾಂಪೂ ಸೋಡಿಯಂ ಸಲ್ಫೇಟ್‌ಫ್ರೀ ಆಗಿರುತ್ತದೆ. ಕೂದಲಿಗೆ ಬಲು ಸಾಫ್ಟ್ ಎನಿಸುತ್ತದೆ. ಹಾರ್ಡ್‌ ಶ್ಯಾಂಪೂ ಬಳಸುವುದರಿಂದ ಕೂದಲಿನಿಂದ ಬಣ್ಣ ಬೇಗ ಬಿಟ್ಟುಹೋಗುತ್ತದೆ. ಶ್ಯಾಂಪೂ ಮಾತ್ರವಲ್ಲದೆ, ಹೇರ್‌ ಕಲರ್‌ ಹಚ್ಚಿದ ನಂತರ ಬೌಂಡಿಂಗ್‌, ರೀಬೌಂಡಿಂಗ್‌ ಮತ್ತು ಕೂದಲನ್ನು ಹೈಲೈಟ್‌ಗೊಳಿಸುವುದು ಕೂಡ ಹಾನಿಕಾರಕ.

Gsk-August-40-4

ಇವನ್ನೆಲ್ಲ ಮಾಡಲೇಬೇಕೆಂದಿದ್ದರೆ, ಬಣ್ಣ ಬಳಿಯುವುದಕ್ಕೆ 15 ದಿನ ಮೊದಲೇ ಮಾಡಿಸಿರಬೇಕು.ಇದನ್ನು ಗಮನಿಸಿ

ನೀವು ನಿಮ್ಮ ಬಿಳಿಗೂದಲನ್ನು ತೋರ್ಪಡಿಸದಿರಲು ಕಲರಿಂಗ್‌ ಮಾಡುತ್ತಿದ್ದರೆ, ತಿಂಗಳಲ್ಲಿ ಒಂದು ಬಾರಿ ಮಾತ್ರ ಹೇರ್‌ ಕಲರ್‌ಬಳಸಬೇಕು.

ಹೇರ್‌ ಕಲರ್‌ ಮಾಡಿಸಿಕೊಂಡು ಸ್ವಿಮ್ಮಿಂಗ್‌ ಮಾಡಲು ಹೋಗಬೇಡಿ. ಏಕೆಂದರೆ ಸ್ವಿಮ್ಮಿಂಗ್‌ ಪೂಲ್‌ನ ನೀರಿನಲ್ಲಿ ಕ್ಲೋರಿನ್ ಬೆರೆತಿರುತ್ತದೆ, ಇದು ಕೂದಲಿನಿಂದ ಹೇರ್‌ ಕಲರ್‌ನ್ನು ನಾಶಪಡಿಸಬಲ್ಲದು.

ಗರ್ಭವತಿಯರು ತಮ್ಮ ವೈದ್ಯರ ಸಲಹೆ ಪಡೆಯದೆ ಹೇರ್‌ ಕಲರಿಂಗ್‌ ಮಾಡಿಸಬಾರದು.

ವಾರದಲ್ಲಿ 1-2 ಸಲ ಕೊಬ್ಬರಿ ಎಣ್ಣೆ ಬಳಸಿ ಚೆನ್ನಾಗಿ ಹೆಡ್‌ ಮಸಾಜ್‌ ಮಾಡಬೇಕು.

ಮತ್ತೆ ಮತ್ತೆ ಹೇರ್‌ ಕಲರ್‌ ಬದಲಿಸುತ್ತಿರಬೇಡಿ. ಇದರಿಂದ ನಿಮ್ಮ ಕೂದಲು ಇನ್ನಷ್ಟು ತೆಳು, ದುರ್ಬಲ ಆಗಬಹುದು.

ಕೂದಲಿನ ಸಂರಕ್ಷಣೆ ನಿಮ್ಮ ಕೈಯಲ್ಲಿದೆ. ಹೀಗಾಗಿಯೇ ಸಂದರ್ಭಕ್ಕೆ ತಕ್ಕಂತೆ ಹೇರ್‌ ಸ್ಟೈಲ್ ಸಹ ಬದಲಾಗುತ್ತಿರುತ್ತದೆ. ನಿಮ್ಮ ವ್ಯಕ್ತಿತ್ವ ಎದ್ದು ಕಾಣುವಂತೆ ನಿಮ್ಮ ಹೇರ್‌ ಸ್ಟೈಲ್ ಇರಬೇಕು, ಅಧ್ವಾನ ಆಗಬಾರದು.

ಬನ್‌ ವಿತ್‌ ಪ್ಲೆಟ್ ಕೂದಲನ್ನು ಕಿವಿಯಿಂದ ಕಿವಿಗೆ ವಿಭಜಿಸಿಕೊಂಡು, ಹಿಂಬದಿಯ ಕೂದಲ ಬ್ಯಾಂಡ್‌ನ ಸಹಾಯದಿಂದ ಹೈಪೋನಿ ಮಾಡಿ. ಕೆಲವು ಕೂದಲನ್ನು ಆ ಬ್ಯಾಂಡ್‌ ಮೇಲೆ ಸುತ್ತಿಕೊಳ್ಳಿ, ಆಗ ಬ್ಯಾಂಡ್‌ ಕಾಣಿಸದು. ಈಗ ಈ ವಿಭಜಿತ ಕೂದಲಿನ ಹಿಂದಿನಿಂದ, ಸ್ವಲ್ಪ ಕೂದಲು ತೆಗೆದುಕೊಂಡು ಕ್ರೌನ್‌ ಏರಿಯಾದಲ್ಲಿ ಒಂದು ಸ್ಟಫಿಂಗ್‌ ಮಾಡಿಕೊಳ್ಳಿ, ಅದನ್ನು ಪಿನ್‌ನಿಂದ ಸೆಟ್ ಮಾಡಿ.

ನಂತರ ವಿಭಜಿತ ಕೂದಲಿನ ಹಿಂಬದಿಯ ತುಸು ಕೂದಲಿನಿಂದ ಸ್ಟಫಿಂಗ್‌ ಮೇಲೆ ಸೆಟ್‌ ಮಾಡಿಕೊಳ್ಳಿ. ಇದು ಫ್ರಂಟ್‌ನಲ್ಲಿ ಎತ್ತರದ ಜಡೆ ಆಗುತ್ತದೆ. ಈಗ ಹೇರ್‌ ಸ್ಪ್ರೇ ಮಾಡಿ, ಕೂದಲಿನ 1-1 ಜೊಂಪೆಯನ್ನು ಮುಂದೆ ತೆಗೆದುಕೊಂಡು ಟ್ವಿಸ್ಟ್ ಮಾಡುತ್ತಾ, ಎಡದಿಂದ ಬಲಗಿವಿಯವರೆಗೆ ಕೊನೆಯವರೆಗೂ ತಂದು, ಜಡೆಯೊಂದಿಗೆ ಹೆಣೆಯಿರಿ.

Gsk-August-40-2

ಈಗ ಪೋನಿಯಿಂದ ಕೂದಲಿನ ಒಂದು ಜೊಂಪೆ ತೆಗೆದುಕೊಂಡು, ಒಂದು ಬದಿಯಿಂದ, ಒನ್‌ ಸೈಡ್‌ ಫ್ರೆಂಚ್‌ ಪ್ಲೆಟ್ಸ್ ಹಾಕಬೇಕು. ನಂತರ ಅದನ್ನು ತುಸು ಮೇಲೆತ್ತಿ ಟ್ಯಾಗ್‌ ಮಾಡಿ. ಉಳಿದ ಕೂದಲಿನಿಂದ ಒಂದು ಉದ್ದದ ಜಡೆ ಹೆಣೆಯಿರಿ. ನಂತರ ಇದನ್ನು ಮುತ್ತಿನ ಮಾಲೆ ಅಥವಾ ಮ್ಯಾಚಿಂಗ್‌ ಡ್ರೆಸ್‌ನ ಆ್ಯಕ್ಸೆಸರಿಯಿಂದ ಅಲಂಕರಿಸಿ.

ಹಾಫ್‌ ಮೂನ್‌ ಸ್ಟೈಲ್ ‌ಮುಂಭಾಗದಿಂದ ಕಿವಿಯಿಂದ ಕಿವಿಗೆ ಹರಡುವಂತೆ ಒಂದು ಭಾಗ ಮಾಡಿ. ಹಿಂಬದಿಯ ಕೂದಲಿನ ಕೆಳಭಾಗದಲ್ಲಿ ಒಂದು ಪೋನಿ ಮಾಡಿ, ಅದಕ್ಕೆ ಜೆಲ್ ‌ಹಾಕಿಡಿ. ನಂತರ ಹೇರ್‌ ಸ್ಪ್ರೇ ಮಾಡಿ. ಈಗ ಮುಂಭಾಗದಿಂದ ಕೂದಲನ್ನು ಸೈಡ್‌ಗೆ ತೆಗೆದುಕೊಂಡು, ಹಿಂಬದಿಯಿಂದ ಪಿನ್‌ನಿಂದ ಸೆಟ್‌ ಮಾಡಿ.

ಮುಂಭಾಗದಿಂದ ಸೈಡ್‌ ಪಾರ್ಟಿಂಗ್‌ ಮಾಡುವುದಕ್ಕೆ ಮೊದಲು, ಕೂದಲಿನ ಬ್ಯಾಕ್‌ ಕೋಂಬಿಂಗ್‌ ಮಾಡಿ. ಪೋನಿಯ 1-1 ಜೊಂಪೆಯನ್ನೂ ತೆಗೆದು ಪೋನಿಯಲ್ಲೇ ಸುತ್ತಿಕೊಳ್ಳಿ. ನಂತರ ಕೂದಲಿಗೆ ಜೆಲ್ ಹಾಕಿ. ಹೆಣೆದ ಜಡೆಯನ್ನು ಪೋನಿ ಮೇಲೆ ಗೋಲಾಕಾರವಾಗಿ ಸುತ್ತಿ, ಪಿನ್‌ನಿಂದ ಸೆಟ್‌ ಮಾಡಿ.

ಈಗ ಉಳಿದ ಕೂದಲಿನಿಂದ ಸ್ಟಫಿಂಗ್‌ ಮಾಡಿ. ಇದನ್ನು ಹಾಫ್‌ ಸ್ಪೂನ್‌ ಶೈಲಿಯಲ್ಲಿ ಮಾಡಿ, ಕೂದಲನ್ನು ಸ್ಟಫಿಂಗ್‌ನಲ್ಲಿ ಸುತ್ತಿಕೊಳ್ಳಿ. ಇದನ್ನು ಕೊಂಡೆಯ ಸ್ಟೈಲ್ ಪಿನ್‌ನಿಂದ ಸೆಟ್‌ ಮಾಡಿ, ನಂತರ ತೂಗಾಡುವ ಆ್ಯಕ್ಸೆಸರೀಸ್‌ ಬಳಸಿ ಅಲಂಕರಿಸಿ.

ಶಾರ್ಟ್‌ ಹೇರ್‌ ಕೊಂಡೆ ಕೂದಲಿನ ಮುಂಭಾಗದಿಂದ ಕಿವಿಯಿಂದ ಕಿವಿಗೆ ವಿಭಜಿಸಿ. ಮುಂಭಾಗದಿಂದ ತುಸು ಕೂದಲನ್ನು ಬ್ಯಾಕ್ ಕೋಂಬಿಂಗ್‌ ಮಾಡಿ. ಅದರ ಪಫ್‌ ಮಾಡಿ ಪಿನ್ನುಗಳಿಂದ ಸೆಟ್‌ ಮಾಡಿ. ಈಗ ಪಫ್‌ಗೆ ಫಿನಿಶಿಂಗ್‌ ನೀಡಲು ಕಿವಿಯಿಂದ ಕಿವಿಯವರೆಗಿನ 1-1 ಸೆಕ್ಷನ್‌ನ್ನು ಪಫ್‌ ಮೇಲಕ್ಕೆ ಕೊಂಡೊಯ್ಯಿರಿ, ಪಿನ್ನಿನಿಂದ ಸೆಟ್‌ ಮಾಡಿ. ಈಗ ಕೆಳಭಾಗದ ಕೂದಲಿನ ಕೆಳ ಪೋನಿ ಸಿದ್ಧಪಡಿಸಿ. ಪೋನಿಯ ಕೆಳಗೆ ಸ್ಟಫ್ ಕೊಂಡೆ ಬರಲಿ. ಮುಂಭಾಗದಿಂದ ಕೂದಲಿನ ಸೈಡ್‌ ಪಾರ್ಟಿಂಗ್‌ ಮಾಡಿ. ಈಗ ಸ್ಟಫ್ಡ್ ಕೊಂಡೆಗೆ ಹೇರ್‌ ಸ್ಪ್ರೇ ಮಾಡಿ, ಅಂದದ ಆ್ಯಕ್ಸೆಸರೀಸ್‌ ಹಾಕಿಡಿ.

ರೋಲ್ ಪಫ್‌ ಕೊಂಡೆ

ಮುಂಭಾಗದ ಕೂದಲನ್ನು ಬಿಟ್ಟು, ಹಿಂಭಾಗದ ಕೂದಲಿನ ಒಂದು ಸೈಡ್‌ ಪೋನಿ ಮಾಡಿಕೊಳ್ಳಿ. ಮುಂಭಾಗದ ಕೂದಲಿನ ಬ್ಯಾಕ್ ಕೋಂಬಿಂಗ್‌ ಮಾಡುತ್ತಾ ಸೈಡ್‌ ಪಫ್‌ ಮಾಡಿ. ಮುಂಭಾಗದ ಕೂದಲಿನ ಬ್ಯಾಕ್‌ ಕೋಂಬಿಂಗ್‌ ಮಾಡುತ್ತಾ, ಹಿಂಬದಿಗೆ ತೆಗೆದುಕೊಳ್ಳಿ. ಉಳಿದ ಕೂದಲನ್ನು ಪೋನಿಯಲ್ಲಿ ಸುತ್ತಿಕೊಳ್ಳಿ. ಈಗ ಪೋನಿಯ ಕೂದಲನ್ನು 2 ಭಾಗ ಮಾಡಿ, ಅದರ ಕೆಳಗೆ ಸ್ಟಫಿಂಗ್‌ ಹಾಕುತ್ತಾ, ಒಂದು ಜೊಂಪೆ ಸುತ್ತಿಕೊಳ್ಳಿ ಹಾಗೂ ಪೋನಿಯ ಮೇಲೆ ಟ್ಯಾಗ್‌ ಮಾಡಿ, ಅದರ ಕೆಳಗೆ ಸ್ಟಫಿಂಗ್‌ ಹಾಕುತ್ತಾ ಒಂದು ಜೊಂಪೆ ಸುತ್ತಿಕೊಳ್ಳಿ ಹಾಗೂ ಪೋನಿಯ ಮೇಲೆ ಟ್ಯಾಗ್‌ ಮಾಡಿ. ಒಂದು ಜೊಂಪೆಯ ಭಾಗವನ್ನು ಬೆರಳಿನಿಂದ ಸುರುಳಿ ಸುತ್ತುತ್ತಾ, ಪಿನ್ನುಗಳಿಂದ ಸೆಟ್‌ ಮಾಡಿ. ಇಂಥದೇ ಸಣ್ಣ ಸಣ್ಣ ಸೆಕ್ಷನ್‌ ಮಾಡುತ್ತಾ, ಹಲವಾರು ಸುರುಳಿಗಳನ್ನು ಮಾಡಿ, ಹೇರ್‌ ಸ್ಪ್ರೇ ಮಾಡಬೇಕು.

ಐ ಮೇಕಪ್

Gsk-August-40-3

ಕಂಗಳ ಮೇಕಪ್‌ಗಾಗಿ, ಐ ಲಿಡ್‌ ಮೇಲೆ ಪರ್ಲ್ ಗೋಲ್ಡ್ ಐ ಶ್ಯಾಡೋ ಹಚ್ಚಿರಿ. ಈಗ ವೆಟ್‌ ಪಿಂಕ್‌ ಶ್ಯಾಡೋವನ್ನು ಲಿಡ್‌ನ ಕೊನೆಯಿಂದ `ವಿ’ ಆಕಾರದಲ್ಲಿ ಇಡೀ ಐ ಲಿಡ್‌ ಮೇಲೆ ಹಚ್ಚಬೇಕು. ನಂತರ ಬ್ಲ್ಯಾಕ್‌ ಶ್ಯಾಡೋದಿಂದ ಐ ಲಿಡ್‌ನ ಅಂಚಿನಿಂದ ಹಾಕುತ್ತಾ ಮರ್ಜ್‌ ಮಾಡಿ. ಇದನ್ನು ಹಾಫ್‌ ಏರಿಯಾದಲ್ಲೇ ಹಾಕಬೇಕು.

ಈಗ ಬ್ರಶ್‌ನ್ನು ಒದ್ದೆ ಮಾಡಿಕೊಂಡು ಐ ಲಿಡ್‌ನ ಸೆಂಟರ್‌ನಲ್ಲಿ ಗೋಲ್ಡ್ ಶ್ಯಾಡೋ ಹಚ್ಚಿರಿ. ಈಗ ಇದರ ಮೇಲೆ ಕ್ರೈಲಾನ್‌ನ ಗ್ಲಿಟರ್ ಜೆಲ್ ‌ಹರಡಿರಿ. ಇದನ್ನು ಎರಡೂ ಬೆರಳುಗಳಿಂದ ರಬ್‌ ಮಾಡುತ್ತಾ ಚೆನ್ನಾಗಿ ಹರಡಬೇಕು. ಐ ಲೈನರ್‌ ತೀಡಿ, ಮಸ್ಕರಾ ಹಚ್ಚಬೇಕು.

– ಅನುಪ್ರಭಾ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ