ಸುಂದರಾಗಿ ಕಾಣಬೇಕೆನ್ನುವುದು ಪ್ರತಿಯೊಬ್ಬ ಮಹಿಳೆಯ ಕನಸಾಗಿರುತ್ತದೆ. ನಿಮ್ಮ ಸೌಂದರ್ಯಕ್ಕೆ ಮೆರುಗು ಕೊಡಲು ಬ್ಯಾಕ್ ಲೆಸ್‌ ಮತ್ತು ಕಟ್‌ ಸ್ಲೀವ್ ಡ್ರೆಸೆಸ್‌ ಸಾಕಷ್ಟು ಪ್ರಮುಖ ಪಾತ್ರ ವಹಿಸುತ್ತವೆ.

ಹಾಲಿವುಡ್‌ನ ಮೇಕಪ್‌ ಮತ್ತು ಬ್ಯೂಟಿ ಎಕ್ಸ್ ಪರ್ಟ್‌ ಒಬ್ಬರು ಈ ಕುರಿತಂತೆ ಹೀಗೆ ಹೇಳುತ್ತಾರೆ, “ಮಹಿಳೆಯರು ಬ್ಯಾಕ್‌ ಲೆಸ್ ಮತ್ತು ಕಟ್‌ ಸ್ಲೀವ್ ‌ಡ್ರೆಸ್‌ಗಳಲ್ಲಿ ಬಹಳ ಸುಂದರವಾಗಿ ಕಂಡುಬರುತ್ತಾರೆ. ಏಕೆಂದರೆ ಅವರ ಬಾಹುಗಳು ಹಾಗೂ ದೇಹದ ಮೇಲ್ಭಾಗ ಹೆಚ್ಚು ಕಡಿಮೆ ಮುಚ್ಚಲ್ಪಟ್ಟಿರುತ್ತದೆ.  “ಇಡೀ ದೇಹಕ್ಕೆ ಹೋಲಿಸಿದರೆ ಆ ಭಾಗ ಹೆಚ್ಚು ಬೆಳ್ಳಗೆ ಇರುತ್ತದೆ. ಸುಂದರವಾದ ಡ್ರೆಸ್‌ಗಳನ್ನು ಧರಿಸಿದಾಗ ಆ ಭಾಗ ಹೆಚ್ಚು ಆಕರ್ಷಕವಾಗಿ ಕಂಡುಬರುತ್ತದೆ. ಇದರಿಂದ ಇಡೀ ವ್ಯಕ್ತಿತ್ವಕ್ಕೆ ಹೊಸ ಆಕರ್ಷಣೆ ಬರುತ್ತದೆ. ಅದರಲ್ಲೂ ಬಾಹುಗಳು ದಷ್ಟಪುಷ್ಟ ಮತ್ತು ಹೊಳಪುಳ್ಳದ್ದಾಗಿದ್ದರೆ ಆಕರ್ಷಣೆಗೆ ಮತ್ತಷ್ಟು ಮೆರುಗು ಬರುತ್ತದೆ.”

ಹವಾಮಾನ ಬದಲಾದಾಗ ಮಹಿಳೆಯರು ಬ್ಯಾಕ್‌ ಲೆಸ್‌ ಮತ್ತು ಕಟ್‌ ಸ್ಲೀವ್ ‌ಡ್ರೆಸ್‌ಗಳನ್ನು ಧರಿಸಲು ಹಿಂದೇಟು ಹಾಕುತ್ತಾರೆ. ಇನ್ನು ಕೆಲವರು ವೈಯಕ್ತಿಕ ಕಾರಣಗಳಿಂದಾಗಿ ಹೀಗೆ ಮಾಡುವುದರಿಂದ ದೂರ ಉಳಿಯುತ್ತಾರೆ. ಇಂತಹ ಡ್ರೆಸ್‌ಗಳನ್ನು ಧರಿಸಿದರಷ್ಟೇ ಸಾಲದು, ಅತ್ಯಂತ ಆತ್ಮವಿಶ್ವಾಸದಿಂದ ಧರಿಸುವುದು ಅತ್ಯವಶ್ಯಕ.

ಹೊಳಪುಳ್ಳ ಕಲೆರಹಿತ ತ್ವಚೆಗೆ ನಿಮ್ಮಲ್ಲಿ ಆತ್ಮವಿಶ್ವಾಸ ಇರದೇ ಇದ್ದರೆ ನೀವು ಅಸಹಜತೆಯ ಅನುಭೂತಿ ಹೊಂದುವಿರಿ. ನಿಮ್ಮಲ್ಲಿ ಆತ್ಮವಿಶ್ವಾಸ ಯಾವಾಗ ಬರುತ್ತದೆಂದರೆ, ನಿಮ್ಮ ಬಾಡಿ ಟೋನ್ಡ್ ಆಗಿರಬೇಕು. ತ್ವಚೆಯ ಬಣ್ಣ ಏಕರೀತಿಯಲ್ಲಿರಬೇಕು. ಹೀಗಾಗಿ ಕಟ್‌ ಸ್ಲೀವ್ ‌ಮತ್ತು ಬ್ಯಾಕ್‌ ಲೆಸ್‌ ಪೋಷಾಕುಗಳನ್ನು ಧರಿಸಿ ಯಾವಾಗಾದರೂ ಹೊರಗೆ ಹೊರಟರೆ ಸನ್‌ ಸ್ಕ್ರೀನ್‌ನ್ನು ಅವಶ್ಯವಾಗಿ ಲೇಪಿಸಿಕೊಳ್ಳಿ.

ಸೌಂದರ್ಯ ತಜ್ಞೆಯೊಬ್ಬರು ಈ ಕುರಿತಂತೆ ಹೀಗೆ ಹೇಳುತ್ತಾರೆ, “ಇಂತಹ ಸ್ಕಿನ್‌ ಫ್ಲಾಂಟಿಂಗ್‌ ಡ್ರೆಸೆಸ್‌ ಧರಿಸುವ ಸಂದರ್ಭದಲ್ಲಿ ಟ್ಯಾನಿಂಗ್‌ನಿಂದ ರಕ್ಷಿಸಿಕೊಳ್ಳಲು 30 ರಿಂದ 40ರವರೆಗಿನ ಎಸ್‌ಪಿಎಫ್‌ ಇರುವ ಸನ್‌ ಸ್ಕ್ರೀನ್‌ನ್ನು ಅವಶ್ಯವಾಗಿ ಲೇಪಿಸಿಕೊಳ್ಳಿ. ಅದನ್ನು ಬಿಸಿಲಿನಲ್ಲಿ ಹೊರಡುವ 15-20 ನಿಮಿಷ ಮುಂಚೆ ಹಚ್ಚಿಕೊಳ್ಳಿ ಹಾಗೂ 4 ಗಂಟೆಯ ಬಳಿಕ ಪುನಃ ಉಪಯೋಗಿಸಿ.”

ಅಂದಹಾಗೆ ಕಟ್‌ ಸ್ಲೀವ್ ‌ಮತ್ತು ಬ್ಯಾಕ್‌ ಲೆಸ್‌ ಪೋಷಾಕುಗಳಲ್ಲಿ ನಿಮ್ಮ ತ್ವಚೆ ಹೆಚ್ಚು ಎಕ್ಸ್ ಪೋಸ್‌ ಆಗುತ್ತದೆ. ಹೀಗಾಗಿ ನಿಮ್ಮ ತ್ವಚೆ ಚೆನ್ನಾಗಿ ಮಾಯಿಶ್ಚರೈಸ್ಡ್ ಆಗಿರಬೇಕು, ಅದರಲ್ಲಿ ಯಾವುದೇ ಕಲೆಗಳಾಗಲಿ, ಮೊಡವೆಗಳಾಗಲಿ ಇರಬಾರದು. ತ್ವಚೆಯ ಮೇಲಿನ ಮೊಡವೆ ಮತ್ತು ಕಪ್ಪು ಕಲೆಗಳನ್ನು ಹೋಗಲಾಡಿಸಲು ಎಂತಹ ಕ್ರೀಮ್ ನ್ನು ಆಯ್ಕೆ ಮಾಡಿಕೊಳ್ಳಬೇಕೆಂದರೆ, ಅದರಲ್ಲಿ ಸ್ಯಾಲಿಸಿಲಿಕ್‌ ಆ್ಯಸಿಡ್‌ನ ಸೂಕ್ತ ಪ್ರಮಾಣ ಇರಬೇಕು. ಅಂದಹಾಗೆ ಶುಭ್ರ ಕಲೆರಹಿತ ತ್ವಚೆಯನ್ನು ಒಂದೇ ರಾತ್ರಿಯಲ್ಲಿ ಪಡೆದುಕೊಳ್ಳಲು ಆಗದು. ಹೀಗಾಗಿ ಆತುರ ತೋರಿಸಬೇಡಿ. ನೀವು ಯಾವುದೇ ವಿಶೇಷ ಸಂದರ್ಭಕ್ಕಾಗಿ ಸಿಂಗರಿಸಿಕೊಳ್ಳಬೇಕೆಂದಿದ್ದರೆ, ಒಂದು ವಾರದ ಮುಂಚಿನಿಂದಲೇ ಸಿದ್ಧತೆ ಆರಂಭಿಸಿ. ಆ ದಿನ ಡ್ರೆಸ್‌ ಧರಿಸುವ ಮುನ್ನ ಸ್ಲೀವ್ ಲೆಸ್ ಮತ್ತು ಬ್ಯಾಕ್‌ನಲ್ಲಿ ಬಾಡಿ ಲೋಶನ್‌ನ್ನು ಚೆನ್ನಾಗಿ ಲೇಪಿಸಿಕೊಳ್ಳಿ. ಬಳಿಕ ಅದರ ಮೇಲೆ ಸ್ವಲ್ಪ ಗ್ಲಿಟರ್‌ ಕೂಡ ಹಚ್ಚಿ. ನಳನಳಿಸುವ ತ್ವಚೆಯ ಮೇಲೆ ಬ್ಯಾಕ್‌ ಲೆಸ್‌ ಮತ್ತು ಕಟ್‌ ಸ್ಲೀವ್ ‌ಡ್ರೆಸ್‌ಗಳು ಶೋಭೆ ಕೊಡುವುದು ನಿಮ್ಮ ದೇಹ ಹೇರ್‌ಫ್ರೀ ಆಗಿದ್ದಾಗ ಮಾತ್ರ. ಅದರಲ್ಲೂ ವಿಶೇಷವಾಗಿ ಬಾಹು ಮತ್ತು ಕಂಕುಳ ಭಾಗದಲ್ಲಿನ ಕೂದಲನ್ನು ಅವಶ್ಯವಾಗಿ ಸ್ವಚ್ಛಗೊಳಿಸಿ. ಅದಕ್ಕಾಗಿ ರೇಜರ್‌ನ್ನು ಬಳಸಬೇಡಿ. ಏಕೆಂದರೆ ಅದರಿಂದ ತ್ವಚೆ ಕಪ್ಪಗಾಗಬಹುದು. ನೀವು ನಿಯಮಿತವಾಗಿ ಯಾವುದಾದರೂ ಒಳ್ಳೆಯ ಪಾರ್ಲರ್‌ಗೆ ಹೋಗಿ ವ್ಯಾಕ್ಸಿಂಗ್‌ ಮಾಡಿಸಿಕೊಳ್ಳುತ್ತಾ ಇರಿ.

ಬೆವರಿನ ದುರ್ವಾಸನೆಯಿಂದ ದೂರವಿರಿ

ನೀವು ಕಟ್‌ ಸ್ಲೀವ್ ‌ಧರಿಸಿದ್ದು, ನಿಮ್ಮ ದೇಹದಿಂದ ಬೆವರಿನ ದುರ್ವಾಸನೆ ಹೊರಹೊಮ್ಮುತ್ತಿದ್ದರೆ ಮೊದಲು ಅದನ್ನು ನಿವಾರಿಸಲು ಪ್ರಯತ್ನಿಸಿ. ಕಂಕುಳಿನಿಂದ ಬೆವರು ಬರದಿರಲು ಏನು ಮಾಡಬೇಕು ಎಂಬುದರ ಬಗ್ಗೆ ಸೌಂದರ್ಯತಜ್ಞೆ ಸುಮತಿ ಹೀಗೆ ಹೇಳುತ್ತಾರೆ, “ಸ್ನಾನ ಮಾಡುವಾಗ ನೀರಿನಲ್ಲಿ ವಿಟಮಿನ್‌ `ಸಿ’ ಇರುವ ನಿಂಬೆ ಅಥವಾ ಕಿತ್ತಳೆ ಹಣ್ಣಿನ ಸಿಪ್ಪೆಗಳನ್ನು ಹಾಕಿಕೊಳ್ಳಿ. ಇದರಿಂದ ಹೆಚ್ಚು ಹೊತ್ತಿನ ತನಕ ತಾಜಾತನದ ಅನುಭೂತಿ ಇರುತ್ತದೆ. ನಿಮ್ಮ ದೇಹದಿಂದ ಒಳ್ಳೆಯ ಸುವಾಸನೆಯೂ ಬರುತ್ತಿರುತ್ತದೆ. ನೀವು ಕಂಕುಳ ಭಾಗದಲ್ಲಿ ಪರ್ಫ್ಯೂಮ್ ಅಥವಾ ಆ್ಯರೋಮಾ ಆಯಿಲ್ ‌ಕೂಡ ಲೇಪಿಸಬಹುದು.”

ಮತ್ತೊಬ್ಬ ಸೌಂದರ್ಯ ತಜ್ಞೆ ರಜನಿ ಹೇಳುತ್ತಾರೆ, “ಡಿಯೋಡರೆಂಟ್‌ ಕೊಳ್ಳುವಾಗ ಗುಣಮಟ್ಟದ ಬಗ್ಗೆ ಗಮನವಿರಲಿ. ಅದನ್ನು ನೇರವಾಗಿ ತ್ವಚೆಯ ಮೇಲೆ ಬಳಸಬೇಡಿ. ಇದರಿಂದ ಅದು ಬೆವರಿನ ಜೊತೆ ಸೇರಿಕೊಂಡು ಅದರಲ್ಲಿನ ಕೆಮಿಕಲ್ ನಿಮ್ಮ ಕಂಕುಳನ್ನು ಕಪ್ಪಗಾಗಿಸಬಹುದು.”

ದುರ್ವಾಸನೆ ನಿವಾರಿಸಲು ರೋಸ್‌ ವಾಟರ್‌ ಮಿಶ್ರಿತ ನೀರಿನಿಂದ ಸ್ನಾನ ಮಾಡಿ. ಇಲ್ಲಿ ಗುಲಾಬಿ ಎಸಳುಗಳನ್ನು ಸ್ನಾನದ ನೀರಿನಲ್ಲಿ ಹಾಕಿ. ಇದರಿಂದ ಇಡೀ ದಿನ ನಿಮ್ಮ ದೇಹ ಸುವಾಸನೆ ಬೀರುತ್ತಿರುತ್ತದೆ.

ತೋಳುಗಳು ಸುಂದರವಾಗಿರಲಿ

ನಿಮ್ಮ ಬಾಹುಗಳು ಸುಂದರವಾಗಿದ್ದಲ್ಲಿ ಮಾತ್ರವೇ ನಿಮಗೆ ಕಟ್‌ ಸ್ಲೀವ್ ನಂತಹ ಡ್ರೆಸ್‌ಗಳು ಆಕರ್ಷಕವಾಗಿ ಕಂಡುಬರುತ್ತವೆ. “ಕಟ್‌ ಸ್ಲೀವ್ ‌ಡ್ರೆಸ್‌ಗಳು ನಿಮಗೆ ಒಪ್ಪುವಂತೆ ಮಾಡಲು ಬಾಹುಗಳು ಬೆಳ್ಳಗೆ ಕಾಣುವುದಕ್ಕಿಂತ, ಅವು ಸುಂದರ ಹಾಗೂ ಹೊಳಪುಳ್ಳದ್ದಾಗಿ ಕಾಣುವಂತೆ ಮಾಡುವುದು ಹೆಚ್ಚು ಮಹತ್ವದ್ದು,” ಎಂದು ಸೌಂದರ್ಯ ತಜ್ಞೆಯೊಬ್ಬರು ಹೇಳುತ್ತಾರೆ.

ನಿಮ್ಮ ಬಾಹುಗಳು ದಷ್ಟಪುಷ್ಟ ಮತ್ತು ಟೋನ್ಡ್ ಆಗಿದ್ದರೆ ನಿಮ್ಮ ಇಡೀ ವ್ಯಕ್ತಿತ್ವವೇ ಎದ್ದುಕಾಣುತ್ತದೆ. ಅದೇ ರೀತಿ ಹಿಂಭಾಗ ಕೂಡ ಸ್ವಚ್ಛ ಮತ್ತು ಕಲೆರಹಿತವಾಗಿರಬೇಕು.

ಅದಕ್ಕಾಗಿ ನೀವು ಏನೇನು ಲೇಪನ ಲೇಪಿಸುತ್ತೀರೋ, ಅದನ್ನು ಮೊಣಕೈ ಹಾಗೂ ಬೆರಳಿನ ತುದಿಯತನಕ ಲೇಪಿಸಲು ಮರೆಯಬೇಡಿ. ಏಕೆಂದರೆ ಈ ಭಾಗದಲ್ಲಿ ಡೆಡ್‌ ಸ್ಕಿನ್‌ ಹಾಗೂ ಬ್ಯಾಕ್‌ ನೆಸ್‌ ಸಮಸ್ಯೆ ಹೆಚ್ಚು ಇರುತ್ತದೆ. ನಿಮ್ಮ ಪ್ರತಿಯೊಂದು ಲೇಪನದಲ್ಲಿ ರೋಸ್‌ ವಾಟರ್‌ ಮಿಶ್ರಣ ಮಾಡಿ. ಇದರಿಂದ ತ್ವಚೆಗೆ ಹೊಳಪು ಬರುತ್ತದೆ.

ತ್ವಚೆಯನ್ನು ಹೊಳಪುಳ್ಳದ್ದಾಗಿ ಮಾಡಲು ಒಳ್ಳೆಯ ಉಪಾಯವೆಂದರೆ ರೋಸ್‌ ವಾಟರ್‌, ನಿಂಬೆರಸ ಮತ್ತು ಗ್ಲಿಸರಿನ್‌ನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಲೇಪಿಸಿ. ಅದೇ ರೀತಿ ನೀವು ಆಲೂ ರಸ ಮತ್ತು ಮಿಲ್ಕ್ ಪೌಡರ್‌ನ ಪ್ಯಾಕ್‌ ಕೂಡ ಲೇಪಿಸಬಹುದು.

ಗ್ಲಾಮರಸ್‌ ಮೇಕಪ್‌

ab-khul-kar

ಸ್ಕಿನ್‌ ಪ್ಲೇಟಿಂಗ್‌ ಡ್ರೆಸೆಸ್‌ನ ಸೌಂದರ್ಯ ಹೆಚ್ಚಲು ನಿಮ್ಮ ಮೇಕಪ್‌, ಡ್ರೆಸ್‌ ಜೊತೆಗೆ ಹೊಂದಾಣಿಕೆ ಆಗುವಂತಿರಬೇಕು.

ಈ ಕುರಿತಂತೆ ಸ್ನೇಹಾ ಹೇಳುತ್ತಾರೆ, “ಮೊದಲು ಮೇಪಲ್ ನಲ್ಲಿ ಡಾರ್ಕ್‌ ಐಸ್‌ ಮತ್ತು ಲೈಟ್‌ ಲಿಪ್‌ಸ್ಟಿಕ್‌ನ ಟ್ರೆಂಡ್‌ ಇತ್ತು. ಆದರೆ ಈಗ ಲೈಟ್‌ ಐಸ್‌ ಮತ್ತು ರೆಡ್‌ ಲಿಪ್‌ಸ್ಟಿಕ್‌ನ ಟ್ರೆಂಡ್‌ ಇದೆ. ನೀವು ಲೈಟ್‌ ಅಥವಾ ಪೇಸ್ಟಲ್ ಕಲರ್‌ನ ಸ್ಲೀವ ಲೆ‌ಸ್‌ ಡ್ರೆಸ್ ಧರಿಸಿದ್ದರೆ, ಇಂತಹದರಲ್ಲಿ ನಿಮಗೆ ಲೈಟ್‌ ಮೇಕಪ್‌ನ ಜೊತೆಗೆ ಗಾಢ ಕೆಂಪು ಲಿಪ್ಸ್ ನ ಕಾಂಬಿನೇಷನ್‌ ಹೆಚ್ಚು ಹೊಂದುತ್ತದೆ. ಪಾರ್ಟಿ ಅಥವಾ ಹಗಲು ಹೊತ್ತಿನ ಸಮಾರಂಭಗಳಿಗೆ ಹೊರಟಿದ್ದರೆ ಎರಡಕ್ಕೂ ಐ ಮೇಕಪ್‌ ಮತ್ತು ಲಿಪ್‌ ಮೇಕಪ್ ಗಾಢವಾಗಿರಬೇಕು. ಮೇಕಪ್‌ಗೆ ಮುಂಚೆ ಐಸ್‌ ಲೇಪಿಸಿಕೊಳ್ಳಿ. ಏಕೆಂದರೆ ಮೇಕಪ್‌ ಹೆಚ್ಚು ಹೊತ್ತು ಉಳಿಯುವಂತಾಗಬೇಕು.

ಟ್ಯಾಟೂ ಹಾಕಿಸಿಕೊಳ್ಳಿ

ಕಟ್‌ ಸ್ಲೀವ್ ‌ಡ್ರೆಸೆಸ್‌ ಒಂದು ವೇಳೆ ಬ್ಯಾಕ್‌ ಲೆಸ್‌ ಅಥವಾ ಲೋಕಟ್‌ ಡಿಸೈನ್‌ನದಾಗಿದ್ದರೆ, ನೀವು ನಿಮ್ಮ ತೋಳು ಹಾಗೂ ಬೆನ್ನಿನ ಭಾಗದಲ್ಲಿ ಯಾವುದಾದರೂ ಸುಂದರ ಟ್ಯಾಟೂ ಕೂಡ ಹಾಕಿಸಿಕೊಳ್ಳಬಹುದು. ಅದು ಇಷ್ಟ ಇಲ್ಲದ್ದಿದರೆ ಕಪ್ಪು ಮೆಹೆಂದಿ ಲೇಪಿಸಿ ಅದನ್ನು ಕಲರ್‌ ಫುಲ್ ಕ್ರಿಸ್ಟಲ್‌ನೊಂದಿಗೆ ಅಲಂಕರಿಸಿ.ಬಾಡಿ ಶಿಮ್ಮರ್‌ನ್ನು ಉಪಯೋಗಿಸುವುದರ ಮೂಲಕ ನೀವು ನಿಮ್ಮ ಚರ್ಮಕ್ಕೆ ಹೊಳಪು ತರಬಹುದು. ಶಿಮ್ಮರ್‌ ಪೌಡರ್‌ನಲ್ಲೂ ಬರುತ್ತದೆ ಮತ್ತು ಸ್ಪ್ರೇನಲ್ಲೂ ಕೂಡ. ಕಾಕ್‌ ಟೇಲ್ ‌ಪಾರ್ಟಿಗೆ ಹೋಗುವುದಿದ್ದರೆ ಬ್ಲ್ಯಾಕ್‌ ಟಿಪಿಕಲ್ ಮೆಹೆಂದಿಯ ಬದಲು ಕಲರ್ಡ್‌ ಟ್ಯಾಟ್ಯೂನ ಡಿಸೈನ್‌ ಹಾಕಿಸಿಕೊಂಡು ಪಾರ್ಟಿಗೆ ಮೆರುಗು ಕೊಡಿ.

ಕಟ್‌ ಸ್ಲೀವ್ ಡ್ರೆಸೆಸ್‌

ಮಾರುಕಟ್ಟೆಯಲ್ಲಿ ಭಾರತೀಯ ಪಾರಂಪರಿಕ ರೀತಿಯ ಕಟ್‌ ಸ್ಲೀವ್ ಡ್ರಿಸೆಸ್‌ ದೊರೆಯುತ್ತವೆ ಹಾಗೂ ಪಾಶ್ಚಾತ್ಯ ಉಡುಗೆಯಲ್ಲೂ ಕೂಡ. ಈಚೆಗೆ ಸಿಂಗಲ್ ಶೋಲ್ಡರ್‌ ಕಟ್‌ ಸ್ಲೀವ್ಸ್ ಹೆಚ್ಚು ಫ್ಯಾಷನ್‌ನಲ್ಲಿವೆ. ಇದರ ಹೊರತಾಗಿ ಟ್ಯೂಬ್‌ ಡ್ರೆಸೆಸ್‌ನ ಜೊತೆಗೆ ಸೀಥ್ರೂ ಅಂದರೆ ನೆಟ್‌ ಮುಂತಾದ ಡ್ರೆಸ್‌ಗಳನ್ನೂ ಧರಿಸಬಹುದು.

ಕಟ್‌ ಸ್ಲೀವ್ ‌ಟ್ಯೂನಿಕ್‌, ಸ್ಪೆಗೆಟಿ, ಶಾರ್ಟ್‌ ಟಾಪ್‌ ಮತ್ತು ಬಣ್ಣ ಬಣ್ಣದ ಕುರ್ತಾಗಳು ಹೆಚ್ಚು ಸುಂದರವಾಗಿ ಕಂಡುಬರುತ್ತವೆ. ಶಾರ್ಟ್ ಟಾಪ್‌ ಮತ್ತು ಟೀಶರ್ಟ್‌ಗಳನ್ನು ಧರಿಸಬಹುದು. ವೈಟ್‌, ಪಿಂಕ್‌, ಪರ್ಪಲ್, ವೈಲೆಟ್‌ನಂತಹ ಕಲರ್‌ಗಳು ಜಾರ್ಜೆಟ್‌ ಮತ್ತು ಕಾಟನ್‌ ಫ್ಯಾಬ್ರಿಕ್‌ನಲ್ಲಿ ಯತ್ಥೇಚವಾಗಿ ದೊರೆಯುತ್ತವೆ.

ಕೆಲವು ಟಿಪ್ಸ್

ಬಟ್ಟೆಗಳು ಹೆಚ್ಚು ಬಿಗಿಯಾಗದಿರಲಿ. ಇದರಿಂದ ಕಂಕುಳ ಭಾಗದಲ್ಲಿ ರೋಮ ರಂಧ್ರಗಳಿಂದ ಬೆವರು ಮುಕ್ತವಾಗಿ ಹೊರಬರಲು ಸಾಧ್ಯವಾಗವುದಿಲ್ಲ.

ನಿಮ್ಮ ಬ್ಯಾಗ್‌ನಲ್ಲಿ ಯಾವಾಗಲೂ ಟಿಶ್ಯೂ ಪೇಪರ್‌ ಇಡಿ. ಅದರಿಂದ ಕಂಕುಳ ಭಾಗವನ್ನು ಆಗಾಗ ಸ್ವಚ್ಛಗೊಳಿಸುತ್ತಾ ಇರಿ.

ಕಟ್‌ ಸ್ಲೀವ್‌ನ ಕುರ್ತಾ ಡಿಸೈನ್‌ ಸ್ಲೀವ್ಸ್ ನ ಬಳಿ ಇರಬಾರದು. ಅದು ನೆಕ್‌ ಮೇಲೆಯೇ ಇರಲಿ. ಇಲ್ಲದಿದ್ದರೆ ಬೆವರಿನಿಂದ ಬಟ್ಟೆಗಳು ಒದ್ದೆಯಾದಾಗ ಹೊರಹೊಮ್ಮುವ ಕೆಮಿಕಲ್ ರೋಮ ಛಿದ್ರದೊಳಗೆ ಹೋಗಿ ರಿಯಾಕ್ಷನ್‌ ಮಾಡುವ ಸಂಭವಿರುತ್ತದೆ. ಹೀಗಾಗಿ ನೀವು ಎಂತಹ ಬಾಡಿ ಲೋಶನ್‌ನ್ನು ಆಯ್ಕೆ ಮಾಡಿಕೊಳ್ಳಬೇಕೆಂದರೆ, ಅದು ನಿಮ್ಮ ತ್ವಚೆಯನ್ನು ಮಾಯಿಶ್ಚರೈಸ್ಡ್ ಇಡುವುದರ ಜೊತೆಗೆ ಅದರ ಬಣ್ಣವನ್ನು ಅಂದವಾಗಿಡಬೇಕು.

– ಗಿರಿಜಾ ರವಿರಾಜ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ