ಭಾರತೀಯ ಪೋಷಾಕುಗಳಲ್ಲಿ ಸೀರೆಯ ಫ್ಯಾಷನ್‌ ಮತ್ತೊಮ್ಮೆ ಮಹಿಳೆಯರ ಮನಸ್ಸನ್ನು ಸೆಳೆದು ಎಲ್ಲರೂ ಅದರ ಬಗ್ಗೆಯೇ ಮಾತನಾಡುವಂತೆ, ಚರ್ಚಿಸುವಂತೆ ಮಾಡಿದೆ. ಆದರೆ ಬದಲಾವಣೆಯ ಝಲಕ್‌ ಅದರ ಮೇಲೆ ಸ್ಪಷ್ಟವಾಗಿಯೂ ಗೋಚರಿಸುತ್ತಿದೆ.

ಹಾಗೆಂದೇ ಈಗ ಇದನ್ನು ಹಳೆಯ ರೀತಿಯಲ್ಲಿ ಧರಿಸುವುದಕ್ಕಿಂತ ಆಧುನಿಕ ರೀತಿಯಲ್ಲಿ ಧರಿಸುವ ಟ್ರೆಂಡ್‌ ಜೋರಾಗಿದೆ. ಭಾರತೀಯ ಸಂಸ್ಕೃತಿ ಹಾಗೂ ಹಿರಿಮೆ ಕಾಪಾಡುವ ಉಡುಗೆಯಾಗಷ್ಟೇ ಇದು ಉಳಿದಿಲ್ಲ. ಇದರ ಸೆಕ್ಸಿ ಲುಕ್ಸ್ ಗೆ ಎಲ್ಲರೂ ತಲೆಬಾಗುತ್ತಿದ್ದಾರೆ.

ಸೀರೆಗೆ ಸೆಕ್ಸಿ ಲುಕ್ಸ್ ನೀಡಲು ಡಿಸೈನರ್‌ಗಳು ಕೇವಲ ಸೀರೆಯ ಬಗೆಗಷ್ಟೇ ಅಲ್ಲ ರವಿಕೆ, ಪೆಟಿಕೋಟ್‌ನಲ್ಲೂ ಸಾಕಷ್ಟು ಹೊಸ ಹೊಸ ಪ್ರಯೋಗ ಮಾಡುತ್ತಿದ್ದಾರೆ. ಇದೇ ಕಾರಣದಿಂದ ಪಮೇಲಾ ಆ್ಯಂಡರಸನ್‌ ಆಗಿರಬಹುದು. ಇಲ್ಲಿ ಲೇಡಿ ಗಾಗಾ, ಈ ಇಬ್ಬರೂ ಸೀರೆಗಳ ಸೆಕ್ಸ್ ಅಪೀಲ್‌‌ನಲ್ಲಿ ಹೊಸ ಅಧ್ಯಾಯ ಸೇರ್ಪಡೆ ಮಾಡಿದ್ದಾರೆ.

ಸೆಕ್ಸಿಯಾಗಿ ಕಂಡುಬರುವ ಸೀರೆಯ ಹೊಸ ಲುಕ್‌ ನಿಜಕ್ಕೂ ಹಾಟ್‌ ಮತ್ತು ಬಿಂದಾಸ್‌ ಆಗಿದೆ. ಈ ಹೊಸ ರೀತಿಯ ಸೀರೆಯಲ್ಲಿ ಯಾವುದೇ ಮಹಿಳೆಯ ಅಪೀಲ್ ‌ದ್ವಿಗುಣಗೊಳ್ಳುತ್ತದೆ. ಸೀರೆಯಲ್ಲಿ ಬ್ಲೌಸ್‌ ಅಥವಾ ಪೆಟಿಕೋಟ್‌ಗೆ ಸ್ಟೈಲಿಶ್‌ ಲುಕ್ಸ್ ಕೊಡುವುದರಿಂದ ಬಾಡಿಯ ಟೋನ್‌ ಬದಲಾಗುತ್ತದೆ. ಪರ್ಫೆಕ್ಟ್ ಬಾಡಿಯ ಮೇಲೆ ಸೆಕ್ಸಿ ಸೀರೆ ಧರಿಸುವುದರಿಂದ ನೀವಂತೂ ಸೆಕ್ಸಿಯಾಗಿ ಗೋಚರಿಸುತ್ತೀರಿ. ಜೊತೆಗೆ ನಿಮ್ಮ ದೇಹ ಕಾಣಿಸುವುದು ಕೂಡ ಅಗತ್ಯ.

ಇಂತಹದರಲ್ಲಿ ದೇಹ ಕಾಣಿಸುವ ಸ್ಟೈಲ್ ಎಷ್ಟರಮಟ್ಟಿಗೆ ಸರಿ ಎನ್ನುವುದರ ಬಗ್ಗೆ ಚರ್ಚೆಗಳು ಆಗುತ್ತಲೇ ಇರುತ್ತವೆ. ಆದರೆ ವಾಸ್ತವ ಸಂಗತಿಯೇನೆಂದರೆ, ಯಾವುದೇ ಸ್ಟೈಲ್‌‌ಗೆ ತರ್ಕ ಎನ್ನುವುದಿಲ್ಲ. ಬೇರೆಯವರನ್ನು ಆಕರ್ಷಿಸಲು ಇದಕ್ಕೆ ತನ್ನದೇ ಆದ ಒಂದು ಗತ್ತು ಇರುತ್ತದೆ. ಆದರೆ ನಿಮ್ಮ ಬೆಡಗನ್ನು ಹೆಚಿಸಿಕೊಳ್ಳಲು ನೀವು ಈ ಉಪಾಯ ಅನುಸರಿಸುದಿದ್ದರೆ ಕೆಲವು ಸಂಗತಿಗಳನ್ನು ಗಮನದಲ್ಲಿಟ್ಟುಕೊಳ್ಳುವ ಅಗತ್ಯವಿದೆ. ನಿಮ್ಮ ವೆಯ್ಸ್ಟ್ನ್ ಬಗ್ಗೆ ಹೆಚ್ಚು ಗಮನಕೊಡಿ. ಇಲ್ಲಿನ ತ್ವಚೆ ಹೆಚ್ಚು ಸ್ವಚ್ಛವಾಗಿರಬೇಕು. ಅಲ್ಪ ಸ್ವಲ್ಪ ಕೂಡ ಫ್ಲ್ಯಾಬ್‌ ಅಂದರೆ ತ್ವಚೆ ಸಡಿಲು ಸಡಿಲಾಗಿರುವಂತೆ ಗೋಚರಿಸಬಾರದು.

ಇದಕ್ಕಾಗಿ ನೀವು ಎಲ್ಲಕ್ಕೂ ಮೊದಲು ವೆಯ್ಸ್ಟ್ನ್ನು ಟೋನ್‌ ಮಾಡಬೇಕಾಗುತ್ತೆ. ಸೀರೆಗೆ ಮ್ಯಾಚಿಂಗ್‌ ಆಗುವ ಬಣ್ಣದ ಪೆಟಿಕೋಟ್ ಅಂತೂ ಧರಿಸಲೇಬೇಕು. ಜೊತೆಗೆ ಪ್ಯಾಂಟಿ ಕೂಡ ಲೇಸ್‌ ಅಥವಾ ಸ್ಯಾಟಿನ್‌ದ್ದಾಗಿರಲಿ. ಅಂದರೆ ಫೆಮಿನೈನ್‌ ಅಪೀಲ್‌ನ ಫ್ಯಾಬ್ರಿಕ್‌ನದ್ದು.

ಸೀರೆಯ ಸೆರಗನ್ನು ನೀವು ಅದರ ಸ್ಟ್ರಿಂಗ್ಸ್ ಕಂಡುಬರುವಂತೆ ಹಿಡಿದುಕೊಳ್ಳ ಬೇಕೆಂದೇನಿಲ್ಲ. ನೀವು ಸೀರೆಯನ್ನು ಪಾರಂಪರಿಕವಾಗಿ ಕಟ್ಟಿಕೊಂಡು ಬೆಡಗನ್ನು ತೋರಿಸಬಹುದು ಹಾಗೂ ಸೆಕ್ಸಿಯಾಗಿ ಕಾಣಬಹುದು. ಬ್ಯಾಕ್‌ ಲೆಸ್‌ ಹಾಗೂ ನ್ಯೂಡ್‌ಸ್ಟ್ರಿಪ್ಸ್ ಬ್ಲೌಸ್‌ ಮತ್ತು ಪಾರದರ್ಶಿ ಸೀರೆ ಧರಿಸುವುದರಿಂದ ನಿಮ್ಮ ಶರೀರವಂತೂ ಗೋಚರಿಸುತ್ತದೆ. ಜೊತೆಗೆ ಸೆಕ್ಸಿಯಾಗಿಯೂ ಕಂಡುಬರುವಿರಿ.

ಈ ಸ್ಟೈಲ್‌‌ನ್ನು ಹೊಂದಲು ಬೋಲ್ಡ್ ನಿರ್ಧಾರ ಹೆಚ್ಚು ಕೆಲಸಕ್ಕೆ ಬರುತ್ತದೆ. ಹೀಗಾಗಿ ಇದನ್ನು ಗಮನದಲ್ಲಿಟ್ಟುಕೊಳ್ಳಿ.

ಸೀರೆಯ ಪ್ರಾಣ ಡಿಸೈನರ್‌ ಬ್ಲೌಸ್‌

Sari-3

ಇಂದಿನ ಫ್ಯಾಷನ್‌ ಯುಗದಲ್ಲಿ ನೀವು ಸೀರೆಯನ್ನು ಇನ್ನಷ್ಟು ಸ್ಟೈಲಿಶ್‌ ಮತ್ತು ಸೆಕ್ಸಿಗೊಳಿಸಬೇಕೆಂದಿದ್ದರೆ ಅದನ್ನು ಡಿಸೈನರ್‌ ಬ್ಲೌಸ್‌ನಿಂದ ಮಾಡಬಹುದು. ಸೆಕ್ಸಿ ಲುಕ್ಸ್ ಪಡೆದುಕೊಳ್ಳಲು ಬ್ಲೌಸ್‌ನ ಜೊತೆ ಜೊತೆಗೆ ಹಲವು ಬಗೆಯ ಪ್ರಯೋಗಗಳನ್ನು ಮಾಡಬಹುದಾಗಿದೆ.

ಅಂದಹಾಗೆ ಈಚೆಗೆ ಫ್ಯಾಷನ್‌ ಡಿಸೈನರ್‌ಗಳು ಸೀರೆಗಿಂತ ಹೆಚ್ಚಾಗಿ ಬ್ಲೌಸ್‌ನ ಡಿಸೈನ್‌ಗಳ ಬಗೆಗೆ ಹೆಚ್ಚು ಒತ್ತು ಕೊಡುತ್ತಿದ್ದಾರೆ. ಈಚೆಗೆ ಬಗೆಬಗೆಯ ಫ್ಯಾಬ್ರಿಕ್‌ನ ಬಗೆಬಗೆಯ ಡಿಸೈನಿನ ಬ್ಲೌಸ್‌ಗಳು ಫ್ಯಾಷನ್‌ನಲ್ಲಿವೆ. ಉದಾಹರಣೆಗೆ ನೆಟ್‌, ಬ್ರೊಕೆಡ್‌, ಟಿಶ್ಯೂ, ವೆಲ್ವೆಟ್‌ ಹಾಗೂ ಸಿಮಸಿರ್‌ನ ಪ್ಲೇನ್‌ ಸೀರೆಯ ಜೊತೆಗೆ ಧರಿಸಿದ ಡಿಸೈನರ್‌ ಬ್ಲೌಸ್‌ ನಿಮ್ಮ ವ್ಯಕ್ತಿತ್ವವನ್ನು ಮತ್ತಷ್ಟು ಪ್ರಭಾವಿತಗೊಳಿಸುತ್ತದೆ.

ನಿಮಗೆ ಹೊಂದುವ ಎಂತಹ ಬ್ಲೌಸ್‌ ಆಯ್ಕೆ ಮಾಡಿಕೊಳ್ಳಬೇಕು, ಅದು ನಿಮಗೆ ಹೇಗೆ ವಿಭಿನ್ನವಾಗಿ ಕಾಣಿಸಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳಿ : ಸಾಮಾನ್ಯವಾಗಿ ಸೀರೆಯ ಬಣ್ಣ ಹಾಗೂ ಫ್ಯಾಬ್ರಿಕ್‌ಗೆ ಹೊಂದುವಂತಹ ಬ್ಲೌಸ್‌ನ್ನು ಸಿದ್ಧಪಡಿಸಲಾಗುತ್ತಿತ್ತು. ಇಂದಿನ ಫ್ಯಾಷನ್‌ನಲ್ಲಿ ಬ್ಲೌಸ್‌ನ ಫ್ಯಾಬ್ರಿಕ್‌ನ್ನು ಕಾಂಟ್ರಾಸ್ಟ್ ಆಗಿರುವಂತೆ ನೋಡಿಕೊಳ್ಳಲಾಗುತ್ತದೆ. ಮಾರ್ಕೆಟ್‌ನಲ್ಲಿ ಪ್ರಸ್ತುತ ಡಿಸೈನರ್‌ ಬ್ಲೌಸ್‌ ನೂಡ್‌ ಸ್ಟ್ರಿಪ್ಸ್, ಶಾರ್ಟ್‌ ನೆಕ್‌ ,ಸ್ಲೀವ್ ಲೆ‌ಸ್‌ ಮತ್ತು ಹೋಲ್ಡ್ ನೆಕ್‌ನ ರೂಪದಲ್ಲಿ ಲಭ್ಯವಿವೆ. ಕೆಂಪು, ನೀಲಿ ಹಾಗೂ ಹಸಿರು ವರ್ಣದ ಸೀರೆಗಳಿಗೆ ಅಂಥದೇ ಬಣ್ಣದ ಬ್ಲೌಸ್‌ಗಳು ಹೆಚ್ಚು ಹೊಂದುತ್ತವೆ. ವಿದ್ಯಾಬಾಲನ್‌ `ಡರ್ಟಿ ಪಿಕ್ಟರ್‌’ನಲ್ಲಿ ಡೀಪ್‌ ಬ್ಯಾಕ್‌ ಹಾಗೂ ಬ್ಯಾಕ್‌ ಲೆಸ್‌ ಬ್ಲೌಸ್‌ ಧರಿಸಿದ್ದಳು. ಇದು ನಿಮ್ಮ ಸಾಧಾರಣ ಶೈಲಿಗೆ ಸೆಕ್ಸಿ ಮೆರುಗು ಕೊಡುತ್ತದೆ. ಸೆಕ್ಸಿ ಲುಕ್ಸ್ಗಾಗಿ ಕೋರ್ಸೆಟ್‌ ಮತ್ತು ಬಿಕಿನಿ ಸ್ಟೈಲಿನ ಸೆಕ್ಸಿ ಬ್ಲೌಸ್‌ನ್ನು ಆಯ್ದುಕೊಳ್ಳಿ ಅಥವಾ ಡೀಪ್‌ನೆಕ್‌ ಮತ್ತು ಹೈಬ್ಯಾಕ್ಸ್ ನ ಮುಖಾಂತರ ಕೂಡ ಸೆಕ್ಸಿ ಲುಕ್ಸ್ ಪಡೆಯಬಹುದು. ಅದಕ್ಕಾಗಿ ದೈಹಿಕವಾಗಿ ಫಿಟ್‌ ಆಗಿರುವುದು ಅತ್ಯವಶ್ಯಕ. ಇಲ್ಲದಿದ್ದರೆ ನೀವು ಹೇಗ್ಹೇಗೊ ಕಾಣುವಿರಿ. ಸದ್ಯ ಚೋಲಿಕಟ್‌ ಬ್ಲೌಸ್‌ನ ಫ್ಯಾಷನ್‌ ಇದೆ. ಇದರಲ್ಲಿ ದೊಡ್ಡ ಹಾಗೂ ಚಿಕ್ಕ ಬ್ಲೌಸ್‌ನ ಲುಕ್ಸ್ ಕೂಡ ಅತ್ಯುತ್ತಮ ಮತ್ತು ಸೆಕ್ಸಿಯಾಗಿ ಕಂಡುಬರುತ್ತದೆ. ನೆಟ್‌, ಜಾರ್ಜೆಟ್‌ ಟಿಶ್ಯೂ ಸೀರೆ ಅಥವಾ ಫಿಶ್‌ ಟೇಲ್ ಲೆಹಂಗಾದ ಜೊತೆಗೆ ಇದನ್ನು ಮ್ಯಾಚಿಂಗ್‌ ಮಾಡಬಹುದು. ಆದರೆ ಇದಕ್ಕಾಗಿ ನಿಮ್ಮ ಹೊಟ್ಟೆ ಸಪೂರವಾಗಿರುವುದು ಅತ್ಯವಶ್ಯ. ಸೆಕ್ಸಿ ಹಾಗೂ ಫ್ಯಾಷನ್‌ಲುಕ್ಸ್ಗಾಗಿ ಬ್ಲೌಸ್‌ ಬದಲು ಹೆವಿ ಪ್ಲೇವರ್‌ ಎಂಬ್ರಾಯಿಡರಿ ಮಾಡಿರುವ ಟಾಪ್‌ ಕೂಡ ಧರಿಸಬಹುದು. ಎಕ್ಸ್ ಪರಿಮೆಂಟ್‌ಮಾಡಬೇಕೆಂದಿದ್ದರೆ ಬಬಲ್ ಸಿಲುಯೆಟ್‌ ಬ್ಲೌಸ್‌ ಕೂಡ ಟ್ರೈ ಮಾಡಿ ನೋಡಿ. ಇದಕ್ಕಾಗಿ ನಿಮಗೆ ಬ್ಲೌಸ್‌ನ ಕೆಳಭಾಗದಲ್ಲಿ ಎಲಾಸ್ಟಿಕ್‌ ಹಾಕಬೇಕಾಗುತ್ತದೆ.

ಒಂದು ವೇಳೆ ಬ್ಲೌಸ್‌ನ್ನು ಸ್ಲೀವ್ ‌ಜೊತೆಗೆ ಬಳಸಿದರೆ ಅದರಿಂದ ಸೀರೆಯ ಪರಿಪೂರ್ಣ ಲುಕ್‌ ಬದಲಾಗಿಬಿಡುತ್ತದೆ. ಇತ್ತೀಚಿನ ದಿನಗಳಲ್ಲಿ ಸೀರೆಯ ಜೊತೆಗೆ ಅರ್ಧ ತೋಳಿನ ಸ್ಲೀವ್ ‌ಫ್ಯಾಷನ್‌ನಲ್ಲಿದೆ.

ದೇಹಕ್ಕನುಗುಣವಾಗಿ ಸೀರೆ ಆಯ್ಕೆ

Sari-4

ಸೀರೆಯ ಸರಿಯಾದ ಆಯ್ಕೆ ನಿಮ್ಮ ಪರ್ಸನಾಲಿಟಿಗೆ ಸರಿಯಾದ ರೂಪವನ್ನು ನೀಡುತ್ತದೆ. ಸೀರೆಯನ್ನು ಆಯ್ಕೆ ಮಾಡಿಕೊಳ್ಳುವ ಮೊದಲೇ ನಿಮ್ಮ ಬಾಡಿ ಸ್ಟ್ರಕ್ಚರ್‌ ಹೇಗಿದೆ ಎಂದು ಮೊದಲು ಖಚಿತಪಡಿಸಿಕೊಳ್ಳಿ. ಯಾವ ಮಹಿಳೆಯರು ಸ್ದೂಲದೇಹಿಗಳಾಗಿದ್ದಾರೋ, ಅವರು ಸೀರೆಯ ಜೊತೆಗೆ ಕಡಿಮೆ ವ್ಯಾಸವುಳ್ಳ ಸ್ಟ್ರೇಟ್‌ ಕಟ್‌ ಪೆಟಿಕೋಟ್‌ ಧರಿಸಬೇಕು. ಎಣ್ಣೆಗೆಂಪು ಬಣ್ಣದವರು ಯಾವಾಗಲೂ ಡಾರ್ಕ್‌ ಕಲರ್ಸ್‌ ಅಂದರೆ ಮೆರೂನ್‌, ಡಾರ್ಕ್‌ ಪಿಂಕ್‌, ಗ್ರೀನ್‌, ಬ್ಲೂ ಧರಿಸಬಹುದು. ತೆಳ್ಳನೆಯ ಕಾಯದ, ಎತ್ತರದ ನಿಲುವಿನ ಹಾಗೂ ಸಪೂರ ದೇಹದ ಮಹಿಳೆಯರಿಗೆ ಎಲ್ಲ ಬಗೆಯ ಸೀರೆಗಳು ಚೆನ್ನಾಗಿ ಒಪ್ಪುತ್ತವೆ.

ಸ್ದೂಲದೇಹಿಗಳು ಕ್ರೇಪ್‌, ಶಿಫಾನ್‌ ಮತ್ತು ಜಾರ್ಜೆಟ್‌ ಸೀರೆಗಳನ್ನು ಉಡಬೇಕು ಹಾಗೂ ಟಿಶ್ಯೂ, ಆರ್ಗೆಂಜಾ ಮತ್ತು ಸ್ಟಿಫ್‌ ಕಾಟನ್ ಸೀರೆಗಳು ತೆಳ್ಳನೆಯ ಹಾಗೂ ಎತ್ತರದ ನಿಲುವಿನ ಮಹಿಳೆಯರಿಗೆ ಒಪ್ಪುತ್ತವೆ. ದೊಡ್ಡ ಬಾರ್ಡರ್‌ ಹಾಗೂ ದೊಡ್ಡ ಪ್ರಿಂಟ್‌ನ ಸೀರೆಗಳು ಮಹಿಳೆಯರ ಎತ್ತರವನ್ನು ಕಡಿಮೆ ಎಂಬಂತೆ ತೋರಿಸುತ್ತವೆ. ಎತ್ತರ ಕಡಿಮೆ ಇರುವ ಮಹಿಳೆಯರಿಗೆ ಬಾರ್ಡರ್‌ ರಹಿತ ಅಥವಾ ಚಿಕ್ಕ ಬಾರ್ಡರ್‌ ಇರುವ ಸೀರೆಗಳು ಚೆನ್ನಾಗಿ ಒಪ್ಪುತ್ತವೆ. ದೊಡ್ಡ ಬಾರ್ಡರ್‌ನ ಸೀರೆಗಳು ಇವರ ಎತ್ತರವನ್ನು ಇನ್ನಷ್ಟು ಕಡಿಮೆ ಎಂಬಂತೆ ದರ್ಶಿಸುತ್ತವೆ. ಫ್ಯಾಷನೆಬಲ್ ಹಾಗೂ ಗ್ಲಾಮರ್‌ ಲುಕ್ಸ್ ಬೇಕಿದ್ದರೆ ಸೀರೆಯನ್ನು ಯಾವಾಗಲೂ ಹೊಕ್ಕಳಿನ ಕೆಳಗೆಯೇ ಧರಿಸಿ. ನೀವು ಸೊಂಟಕ್ಕೆ ಯಾವುದಾದರೂ ಆಭರಣ ಕೂಡ ಧರಿಸಬಹುದು. ನೀವು ಸೀರೆ ಉಡುವ ಮುನ್ನ ಫುಟ್‌ವೇರ್‌ ಧರಿಸಿ. ಏಕೆಂದರೆ ಆ ಬಳಿಕ ನಿಮಗೆ ಸೀರೆ ಎತ್ತರ ಎನಿಸಬಾರದು. ಗ್ಲಾಮರಸ್‌ ಹಾಗೂ ಸೆಕ್ಸಿ ಲುಕ್ಸ್ ಗಾಗಿ ನಿಮ್ಮ ಪೆಟಿಕೋಟ್‌ನಲ್ಲಿ ಸುಂದರ ಲೇಸ್‌ ಹಾಕಿಸಿ. ಇದರಿಂದ ಮೆಟ್ಟಿಲು ಏರುವಾಗ ನಿಮ್ಮ ಪೆಟಿಕೋಟ್‌ ಕಂಡುಬಂದರೆ ಆ ವೇಸ್‌ ರಾಯ್‌ಲುಕ್ಸ್ ನೀಡುತ್ತದೆ. ಅದೇ ರೀತಿ ಝೀನಿ ಸೀರೆಗಳನ್ನು ಧರಿಸುವಾಗ ಲೇಸ್‌ ಹಚ್ಚಿದ ಪೆಟಿಕೋಟ್‌ ಧರಿಸಿದರೆ ಬಹಳ ಅದ್ಧೂರಿಯಾಗಿ ಕಾಣುತ್ತದೆ. ಸೀರೆಯ ಪಿನ್‌ನ್ನು ಯಾವಾಗಲೂ ಭುಜದ ಹಿಂಭಾಗದಲ್ಲಿ ಹಾಕಿ. ಇದರಿಂದ ಸೀರೆ ಒಂದೇ ಕಡೆ ಸರಿಯಾಗಿ ನಿಲ್ಲುತ್ತದೆ. ಪಿನ್‌ ಕೂಡ ಚೆನ್ನಾಗಿ ಕಾಣುತ್ತದೆ. ನೆಟ್‌ನ ಸೀರೆಯೊಂದಿಗೆ ಯಾವಾಗಲೂ ಬ್ಯಾಕ್‌ ಹುಕ್‌ ಅಥವಾ ಸೈಡ್‌ ಹುಕ್‌ ಇರುವ ಬ್ಲೌಸ್‌ಹೊಲಿಸಿ. ಝೀನಿ ನೆಟ್‌ ಸೀರೆಯೊಂದಿಗೆ ಬ್ಲೌಸ್‌ ಚೆನ್ನಾಗಿ ಕಾಣುತ್ತೆ. ನಿಮ್ಮದು ತೆಳ್ಳನೆಯ ಸೊಂಟ ಇರದೇ ಇದ್ದರೆ ಉದ್ದನೆಯ ಬ್ಲೌಸ್‌ ಟ್ರೈ ಮಾಡಿ. ಬೊಜ್ಜು ಹಾಗೂ ಹೆಚ್ಚು ತೂಕದ ಮಹಿಳೆಯರು ಗಮನವಿಡಬೇಕಾದ ಸಂಗತಿಯೇನೆಂದರೆ, ಬ್ಲೌಸ್‌ಹೊಲಿಸುವಾಗ ಕಡಿಮೆ ಪಫ್‌ ಹಾಕಿಸಬೇಕು. ತೆಳ್ಳನೆಯ ಕಾಯದವರೆಂದು ತೋರಿಸಿಕೊಳ್ಳಲು, ನಿಮಗೆ ಬದಲಾವಣೆ ಇಷ್ಟವೆಂದಾದರೆ, ಹಿಂಭಾಗದಲ್ಲಿ ನೆಕ್‌ ಲೈನ್‌ನ್ನು ಇಂಚು ಮೇಲ್ಭಾಗಕ್ಕೆ ತೆಗೆದುಕೊಳ್ಳುವುದು ಮತ್ತು ಮುಂಭಾಗದಲ್ಲಿ ಡೀಪ್‌ಇಡುವುದರಿಂದ ನೆಕ್‌ ಲೈನ್‌ ಸ್ಲಿಮ್ ಎಂಬಂತೆ ಕಂಡುಬರುತ್ತದೆ. ಇದರಿಂದ ನೀವು ಉದ್ದವಾಗಿಯೂ ಕಂಡುಬರುತ್ತೀರಿ.

– ಗೀತಾಂಜಲಿ

ಸೆಬ್ರಿಟಿಗಳ ಸೀರೆ ಮೋಹ

Sari-2

ಬಾಲಿವುಡ್‌ ಆಗಿರಲಿ ಹಾಲಿವುಡ್‌ ಇರಲಿ, ಎಲ್ಲೆಲ್ಲೂ ವೆಸ್ಟರ್ನ್‌ ಸ್ಟೈಲ್‌‌ನ್ನು ಅನುಸರಿಸುವ ಸ್ಪರ್ಧೆಯೇ ಏರ್ಪಟ್ಟಿತ್ತು. ಆದರೆ ಈಗ ನಟಿಯರು ಸೀರೆಯ ಬಗ್ಗೆ ಮೋಹಿತರಾಗಿದ್ದಾರೆ. ಅವರಿಗೆ ಅದು ಹೆಚ್ಚೆಚ್ಚು ಹಿಡಿಸಲಾರಂಭಿಸಿದೆ. ಅದರ ಒಂದು ನೋಟ ಇಲ್ಲಿದೆ:

ರೇಖಾ : ಹಿರಿಯ ಕಲಾವಿದೆ ರೇಖಾ ಸೀರೆಯ ಮೇಲೆ ಪ್ರಾಣವನ್ನೇ ಇಟ್ಟಿದ್ದಾರೆ. ಸಿನಿಮಾ ಪಾರ್ಟಿಯೇ ಇರಬಹುದು ಅಥವಾ ಪ್ರಶಸ್ತಿ ವಿತರಣಾ ಸಮಾರಂಭ, ಎಲ್ಲೆಲ್ಲೂ ನೀವು ಸೀರೆಯಲ್ಲಿಯೇ ಕಾಣುತ್ತೀರಿ. ಸೀರೆಯಲ್ಲಿಯೇ ಅವರು ಹೆಚ್ಚು ಸುಂದರ ಹಾಗೂ ಗ್ಲಾಮರಸ್‌ ಆಗಿ ಕಂಡುಬರುತ್ತಾರೆ.

ದೀಪಿಕಾ ಪಡುಕೋಣೆ : ದೀಪಿಕಾ ಎಷ್ಟೇ ಪಾಶ್ಚಾತ್ಯ ಉಡುಗೆ ಇಷ್ಟಪಡಲಿ, ಭಾರತೀಯ ಉಡುಗೆಗಳಲ್ಲಿ ಸೀರೆ ಅವರಿಗೆ ಹೆಚ್ಚು ಇಷ್ಟವಾಗುತ್ತದೆ. ಹಾಗೆಂದೇ ರೆಡ್‌ ಕಾರ್ಪೆಟ್‌ ಮೇಲೆ ಸೀರೆಯನ್ನು ಧರಿಸಿದ್ದರು.

ಎಮಿ ಜ್ಯಾಕ್ಸನ್‌ : `ಏಕ್‌ ದೀವಾನಾ ಥಾ’ ಚಿತ್ರದಲ್ಲಿ ಅಭಿನಯಿಸಿದ ಈ ವಿದೇಶಿ ಕಲಾವಿದೆ ಸೀರೆಯಲ್ಲಿಯೇ ಕಂಡುಬಂದರು.

ಕತ್ರೀನಾ ಕೈಫ್‌ : ತಮ್ಮ ಆರಂಭದ ದಿನಗಳಲ್ಲಿ ಪಾಶ್ಚಾತ್ಯ ಉಡುಗೆಯ ಹೊರತು ಬೇರೆ ಔಟ್‌ಫಿಟ್‌ಗಳನ್ನು ಇಷ್ಟಪಡ್ತಾನೇ ಇರಲಿಲ್ಲ. ಆದರೆ `ಸಿಂಗ್‌ ಈಸ್‌ ಕಿಂಗ್‌’ ಚಿತ್ರದಲ್ಲಿ ಅವರಿಗೆ ಸೀರೆಯ ಬಗ್ಗೆ ಮೋಹ ಉಂಟಾಯಿತು. ಆ ಬಳಿಕವಂತೂ ಅವರು ಬಹುತೇಕ ಸೀರೆಗಳಲ್ಲೇ ಕಂಡುಬರುತ್ತಾರೆ.

ಕರೀನಾ ಕಪೂರ್‌ : ಕರೀನಾ ಕಪೂರ್‌ ಖಾನ್‌ ಕೂಡ ವಿಶೇಷ ಸಂದರ್ಭದಲ್ಲಿ ಸೀರೆ ಧರಿಸಲು ಇಷ್ಟಪಡುತ್ತಾಳೆ. `ರಾ ಒನ್‌’ ಚಿತ್ರದಲ್ಲಿ ಕೆಂಪು ಸೀರೆಯಲ್ಲಿ ಅವರು ಬಹಳ ಸೆಕ್ಸಿಯಾಗಿ ಕಂಡುಬಂದಿದ್ದರು.

ಪ್ರಿಯಾಂಕಾ ಛೋಪ್ರಾ : ಪ್ರಿಯಾಂಕಾ ಛೋಪ್ರಾ ಸೀರೆಯಲ್ಲಿಯೇ ತನ್ನ ಫಿಗರ್‌ ಅಂದವಾಗಿ ಕಾಣುತ್ತದೆ, ಎನ್ನುತ್ತಾಳೆ. `ದೋಸ್ತಾನಾ’ ಚಿತ್ರದ ಹಾಡು `ದೇಸಿ ಗರ್ಲ್’ನಲ್ಲಿ ಪ್ರಿಯಾಂಕಾಳ ಲುಕ್ಸ್ ಸೀರೆಯಲ್ಲಿ ಬಹಳ ಗ್ಲಾಮರಸ್‌ ಆಗಿ ಕಂಡುಬಂದಿತ್ತು.

ವಿದ್ಯಾ ಬಾಲನ್‌ : `ಡರ್ಟಿ ಪಿಕ್ಚರ್‌’ನಲ್ಲಿ ವಿದ್ಯಾ ಡೀಪ್‌ ಬ್ಯಾಕ್‌, ಬ್ಯಾಕ್‌ ಲೆಸ್‌, ಚೋಲಿ ಕಟ್‌ ಬ್ಲೌಸ್‌ ಧರಿಸಿ ತನ್ನನ್ನು ಸೆಕ್ಸಿ ಹೀರೋಯಿನ್‌ಗಳ ಪಟ್ಟಿಯಲ್ಲಿ ತಂದು ನಿಲ್ಲಿಸಿದಳು. ಸೀರೆ ಮಹಿಳೆಯರಿಗೆ ಪರ್ಫೆಕ್ಟ್ ಡ್ರೆಸ್‌ ಎಂದು ವಿದ್ಯಾ ಹೇಳುತ್ತಾಳೆ.

ಡಿಸೈನರ್‌ಗಳು ಏನು ಹೇಳುತ್ತಾರೆ?

ಬಾಲಿವುಡ್‌ನಲ್ಲಷ್ಟೇ ಅಲ್ಲ, ರಾಂಪ್‌ ಮೇಲೂ ಸೀರೆಯ ಜಾದೂ ನಡೆಯುತ್ತದೆ. ದೇಹ ಪ್ರದರ್ಶನದ ಅರ್ಥ ನೀವು ಅಧ್ವಾನವಾಗಿ ಕಾಣುತ್ತೀರಿ ಅಥವಾ ನಿಮಗೆ ಸೀರೆ ಉಡಲು ಬರುವುದಿಲ್ಲ ಎಂದಲ್ಲ. ಪ್ರತಿಯೊಂದು ಡ್ರೆಸ್ಸಿಗೂ ತನ್ನದೇ ಆದ ಸ್ದಾನ ಹಾಗೂ ಬೆಲೆ ಇದ್ದೇ ಇರುತ್ತದೆ. ಒಂದು ವೇಳೆ ಸೀರೆಯ ಜೊತೆಗೆ ಕೆಲವು ಹೊಸ ಲುಕ್ಸ್ ಕ್ರಿಯೇಟ್‌ ಮಾಡಿದರೆ ಅದರ ಒರಿಜಿನಾಲಿಟಿ ಕೊನೆಗೊಳ್ಳುತ್ತದೆ ಎಂದೂ ಅಲ್ಲ. ಬಾಲಿವುಡ್‌ ಸೀರೆಯನ್ನು ಸೆನ್ಶುಯಸ್‌ ಮಾಡಿದರೆ, ಹಾಲಿವುಡ್‌ ಸೆಲೆಬ್ರಿಟಿಗಳು ಅದನ್ನು ಗ್ಲಾಮರ್ ಸಾಧನವನ್ನಾಗಿಸಿಕೊಂಡಿದ್ದಾರೆ.

– ಅನುಭವ್ ಜೊಹ್ರಿ.

Sari-5

ಈಚೆಗೆ ರೆಡಿ ಟು ವೇರ್‌ ಕಾನ್ಸೆಪ್ಟ್ ಮುಖಾಂತರ ಸೀರೆ ಉಡುವ ತೊಂದರೆ ಮೊದಲಿನ ಹಾಗೆ ಇಲ್ಲ. ಇದರಿಂದಾಗಿ ಇದನ್ನು ಸುಲಭವಾಗಿ ಉಡುವಲ್ಲಿ ಹುಡುಗಿಯರಿಗೆ ಆತ್ಮವಿಶ್ವಾಸ ಹೆಚ್ಚುತ್ತಿದೆ. ಸೆಕ್ಸಿಯಾಗಿ ಕಂಡುಬರಲು ತದ್ವಿರುದ್ಧ ದಿಸೆಯಲ್ಲಿ ಸೆರಗು ಬರುವಂತೆ ನೋಡಿಕೊಳ್ಳಿ. ಎಲ್ಲರೂ ಧರಿಸುವಂತೆ ಧರಿಸಿದರೆ ಪಾರಂಪರಿಕ ಲುಕ್‌ ಅಷ್ಟೇ ಉಳಿಯುತ್ತದೆ. ಸೀರೆಯ ಸೆರಗನ್ನು ಬಟರ್‌ ಫ್ಲೈ ಶೇಪ್‌ನಲ್ಲಿ ಮಾಡಿದರೆ ನೀವು ಹಾಟ್‌ ಹಾಗೂ ಸೆಕ್ಸಿಯಾಗಿ ಕಂಡುಬರುವಿರಿ. ಪ್ಲೀಟ್ಸ್ ಅಂದರೆ ನೆರಿಗೆಯ ಬಗ್ಗೆ ಹೇಳಬೇಕೆಂದರೆ, ಈಚೆಗೆ ಸೆಕ್ಸಿಯಾಗಿ ಕಾಣುವ ರೀತಿಯಲ್ಲಿ ನೆರಿಗೆ ಮಾಡಿದ್ದು ಬರುತ್ತಿವೆ. ಈ ತೆರನಾದ ಸೀರೆಗಳ ಉದ್ದ ಐದೂವರೆ ಮೀಟರ್‌ಗಿಂತ ಕಡಿಮೆ ಇರಬಾರದು. ಕಡಿಮೆ ಇರುವುದರಿಂದ ಸೀರೆಗೆ ಲುಕ್‌ ಇರುವುದಿಲ್ಲ. ಕೆಲವರು ತಮ್ಮ ದೇಹ ಗಾತ್ರಕ್ಕನುಸಾರ 6 ಮೀಟರ್‌ ತನಕ ಸೀರೆ ಸಿದ್ಧಪಡಿಸಿಕೊಳ್ಳುತ್ತಾರೆ.

– ಮೀನಾಕ್ಷಿ ಖಂಡೇಲಾಲ್‌.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ