ಬಣ್ಣಗಳು ನಮ್ಮ ಜೀವನದಲ್ಲಿ ಶಕ್ತಿ, ಸ್ಛೂರ್ತಿ ಮತ್ತು ಸಕಾರಾತ್ಮಕ ಎನರ್ಜಿಯನ್ನು ತುಂಬುತ್ತವೆ. ಇವನ್ನು ಭಾರತೀಯ ಹಬ್ಬಗಳ ಬಗ್ಗೆ ಹೇಳಬೇಕೆಂದರೆ, ಬಣ್ಣಗಳ ಮೆರುಗಿಲ್ಲದೆ, ಮನೆಯಷ್ಟೇ ಅಲ್ಲ, ಹಬ್ಬ ಕೂಡ ಸಪ್ಪೆ ಎನಿಸುತ್ತದೆ.
ಹಬ್ಬಗಳ ಆನಂದಮಯ ವಾತಾವರಣವನ್ನು ಇನ್ನಷ್ಟು ಖುಷಿಯಿಂದ ತುಂಬಲು ಹೊಸ ಯುಗದ ಫ್ಯಾಷನ್. ಪರಂಪರೆ, ಬಣ್ಣ ಮುಂತಾದವುಗಳನ್ನು ವಿಶಿಷ್ಟ ರೀತಿಯಲ್ಲಿ ಭಾವನಾತ್ಮಕವಾಗಿ ಆಯ್ಕೆ ಮಾಡುವುದರಿಂದ ಖುಷಿ ಮತ್ತಷ್ಟು ಹೆಚ್ಚುತ್ತದೆ.
ಹಬ್ಬಗಳ ಸಂದರ್ಭದಲ್ಲಿ ಮನೆಗೆ ಸಾಂಪ್ರದಾಯಿಕತೆ ಜೊತೆಗೆ ಆಧುನಿಕ ರೀತಿಯ ಲುಕ್ ಕೊಡಲು ಏನೇನು ಮಾಡಬೇಕು ನೋಡಿ.
ಗೋಡೆಗಳಿಗೆ ಮೆರುಗು
ಮನೆಯ ಗೋಡೆಗಳಿಗೆ ಬಣ್ಣ ಹೊಡೆಯುವುದು ಸಾಮಾನ್ಯ ಸಂಗತಿ. ಆದರೆ ಅದು ಅತ್ಯಂತ ಪರಿಣಾಮಕಾರಿ. ಭಾರತೀಯ ಹಬ್ಬಗಳು ಕೆಂಪು ಮತ್ತು ಕಿತ್ತಳೆ ಬಣ್ಣದಿಂದ ಕಂಗೊಳಿಸುತ್ತವೆ. ಹೀಗಾಗಿ ಈ ಬಣ್ಣಗಳು ನಿಮಗೆ ಸಮರ್ಪಿತ ಲುಕ್ ಕೊಡುತ್ತವೆ. ಗೋಡೆಗಳಿಗೆ ಹೊಸ ಬಣ್ಣದ ಮೆರುಗು ಕೊಡುವುದರಿಂದ ಕೇವಲ ಲುಕ್ ಅಷ್ಟೇ ದೊರೆಯುವುದಿಲ್ಲ, ಅದರ ಆಯುಷ್ಯ ಕೂಡ ಹೆಚ್ಚುತ್ತದೆ.
ಫರ್ನೀಚರ್‌ಗಳ ವ್ಯವಸ್ಥೆ
ಮನೆಯ ರೂಪ ಬದಲಿಸಲು ಸೋಫಾ, ಸೈಡ್ ಟೇಬಲ್ ಶೋಕೇಸ್ ಮತ್ತು ಎಲ್ಲಾ ಅಲಂಕಾರಿಕ ಕಲಾತ್ಮಕ ವಸ್ತುಗಳ ಅಷ್ಟಿಷ್ಟು ಬದಲಾವಣೆಗಳ ಬಳಿಕವೇ ಮನೆಗೆ ಹೊಸ ಲುಕ್ ಬರುತ್ತದೆ.
ಕೋಣೆಯ ಗೋಡೆಗಳಿಗೆ ಬಣ್ಣಗಳ ವೈವಿದ್ಯತೆಯ ಮೆರುಗು ಕೊಡಿ. ಕೋಣೆಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಪೀಠೋಪಕರಣಗಳನ್ನು ಇಡಲು ಪ್ರಯತ್ನಿಸಿ. ನಿಮ್ಮ ಬಳಿ ಚಾಕ್ಲೇಟ್ ಬಣ್ಣದ, ತಿಳಿ ಕ್ರೀಮ್ ಬಣ್ಣದ ಅಥವಾ ಗಾಢ ಹಳದಿ ಬಣ್ಣದ ಫರ್ನೀಚರ್‌ಗಳಿದ್ದರೆ ಗುಲಾಬಿ ಅಥವಾ ಕಿತ್ತಳೆ ಬಣ್ಣದ ಗೋಡೆಗಳಿಗೆ ಚೆನ್ನಾಗಿ ಒಪ್ಪುತ್ತವೆ.
ಕೈತೋಟ ಮತ್ತು ಮರಗಳು
ನಿಮ್ಮ ಮನೆಯಂಗಳದಲ್ಲಿ ಬೆಳೆದ ಹುಲ್ಲನ್ನು ಚೆನ್ನಾಗಿ ಕತ್ತರಿಸಿ, ಹೂಕುಂಡಗಳಿಗೆ ಆಗಾಗ ಬೇರೆ ಬೇರೆ ಬಣ್ಣಗಳ ರೂಪ ಕೊಡಿ. ಹುಲ್ಲನ್ನು ಟ್ರಿಮ್ ಮಾಡುವುದರಿಂದ ಮತ್ತು ಅಲಂಕಾರಿಕ ಕಲ್ಲುಗಳ ರಚನೆ ಬದಲಿಸುವುದರಿಂದ ನಿಮ್ಮ ತೋಟದ ರೂಪುರೇಷೆಯೇ ಬದಲಾಗಿಬಿಡುತ್ತದೆ. ಮನೆಯಲ್ಲಿ ಅಲಂಕಾರಿಕ ಮರಗಳನ್ನು ಬಿಳಿ ಬಣ್ಣದ ಕುಂಡದಲ್ಲಿ ನೆಟ್ಟರೆ, ಕಿತ್ತಳೆ ಬಣ್ಣದ ಗೋಡೆಗಳ ಮೇಲೆ ಬಹಳ ಚೆನ್ನಾಗಿ ಒಪ್ಪುತ್ತದೆ.
ನಿಮ್ಮ ಗೋಡೆಗಳ ಬಣ್ಣ ಬೇರೆಯಾಗಿದ್ದರೆ, ಆಗ ಸೆರಾಮಿಕ್‌ನ ಬೇರೆ ಬೇರೆ ಡಿಸೈನ್ ಮತ್ತು ಆಕಾರವನ್ನು ಬಳಸಿಕೊಂಡು ಅವುಗಳ ಬಳಿ ಶಿಲ್ಪಗಳನ್ನು ಇಟ್ಟರೆ ಆ ಸೌಂದರ್ಯಕ್ಕೆ ಮತ್ತಷ್ಟು ಮೆರುಗು ಬರುತ್ತದೆ.
ಅಲಂಕಾರಿಕ ಪುಟ್ಟ ವಸ್ತುಗಳು ಡಿಸೈನರ್ ಆಗಿರದೇ ಇದ್ದರೆ, ಕವರ್ಸ್ ಮತ್ತು ಪರದೆಗಳನ್ನು ಡಿಸೈನ್‌ನಲ್ಲಿ ತೆಗೆದುಕೊಳ್ಳಬೇಕು. ಇವುಗಳಲ್ಲಿ ಗಾಢವರ್ಣ ಸಮತೋಲನದಲ್ಲಿಡುವುದು ಅತ್ಯವಶ್ಯಕ. ಹೀಗೆ ಮಾಡದೇ ಇದ್ದರೆ ಕೋಣೆ ಬಹಳ ಗಾಢವರ್ಣವಿರುವಂತೆ ಗೋಚರಿಸುತ್ತದೆ.
ಪರದೆ ಮತ್ತು ಕವರ್ಸ್
ಹೊಳೆಯುವ ಕೇಸರಿ ಬಣ್ಣದ ಗೋಡೆಗಳ ಬಾಗಿಲುಗಳು ಮತ್ತು ಕಿಟಕಿಗಳು, ತಿಳಿ ಕೇಸರಿ ವರ್ಣದ ಪರದೆಗಳು ಬಹಳ ಸುಂದರವಾಗಿ ಕಾಣುತ್ತವೆ. ಇಂತಹ ಸೋಫಾದ ಕವರ್ಸ್ ನೇರಳೆ ಅಥವಾ ಗಾಢ ಗುಲಾಬಿ ವರ್ಣದ ಕಾಂಟ್ರಾಸ್ಟ್ ತುಂಬಾ ಚೆನ್ನಾಗಿ ಗೋಚರಿಸುತ್ತವೆ.
ಪಡಸಾಲೆ ಬಣ್ಣ ಬಣ್ಣದ್ದಾಗಿ ಕಾಣಲು ಕಪ್ಪು ಬಣ್ಣ ಮಿಶ್ರಿತ ಹಸಿರು ಬಣ್ಣದ ಪರದೆಗಳು ಮತ್ತು ಹಳದಿ ಬಣ್ಣದ ಕವರ್‌ಗಳಿಂದ ತಾಜಾತನದ ಅನುಭೂತಿ ಬರುತ್ತದೆ.
ಕಾರ್ಪೆಟ್‌ಗಳು ಮತ್ತು ಚಾಪೆಗಳು
ಕಾರ್ಪೆಟ್ ಮತ್ತು ಚಾಪೆಗಳಿಂದಾಗಿ ಬೆಡ್ ರೂಮಿಗೆ ವಿಶಿಷ್ಟ ಲುಕ್ ದೊರೆಯುತ್ತದೆ. ಇದರಿಂದ ನಿಮ್ಮ ಜೀವನಶೈಲಿಯೂ ಬೆಳಗುತ್ತದೆ. ಇವು ಆರಾಮದಾಯಕವಾಗಿರುವುದರ ಜೊತೆಗೆ, ಮನೆಗೆ ಆಧುನಿಕತೆಯ ಸ್ಪರ್ಶ ದೊರೆಯುತ್ತದೆ. ಕಾರ್ಪೆಟ್ ಮತ್ತು ಚಾಪೆಗಳು ಸಾಧಾರಣ ಗ್ರೇ, ತಿಳಿ ಗುಲಾಬಿ ಬಣ್ಣದ್ದಾಗಿರಬೇಕು. ಇದರಿಂದ ಜಾಗ ಇನ್ನಷ್ಟು ಮೆರುಗು ಪಡೆದುಕೊಳ್ಳುತ್ತದೆ.
ದೀಪದ ಅಲಂಕಾರ
ದೀಪಾವಳಿ ಬೆಳಕಿನ ಹಬ್ಬ. ಈ ಹಬ್ಬದ ಸಂದರ್ಭದಲ್ಲಿ ಪಡಸಾಲೆಯಲ್ಲಿ ಹಚ್ಚಿದ ಸುಂದರ ದೀಪಗಳಿಂದ ಮನೆಗೆ ಬಂದ ಅತಿಥಿಗಳು ಖುಷಿಪಡುತ್ತಾರೆ. ಇದರ ಹೊರತಾಗಿ ಪ್ಲೇಟಿಂಗ್ ಕ್ಯಾಂಡಲ್ಸ್ ನ್ನು ಒಂದು ದೊಡ್ಡ ಪಾತ್ರೆಯಲ್ಲಿ ನೀರು ತುಂಬಿ, ಅದರಲ್ಲಿ ಗುಲಾಬಿಯ ಎಸಳುಗಳನ್ನು ಹಾಕಿ ಅಲಂಕರಿಸಿ. ಇದನ್ನು ನೀವು ನಿಮ್ಮ ಡ್ರಾಯಿಂಗ್ ರೂಮಿನ ನಟ್ಟನಡುವೆ ಇಟ್ಟರೆ ಕೋಣೆಯ ಅಲಂಕಾರಕ್ಕೆ ಮತ್ತಷ್ಟು ಮೆರುಗು ಬರುತ್ತದೆ.
ಅಲಂಕಾರಕ್ಕಾಗಿ ಫೋಟೋ ಫ್ರೇಮ್ಸ್, ಪೇಂಟಿಂಗ್, ವಾಲ್ ಹ್ಯಾಂಗಿಂಗ್‌ಗಳನ್ನು ಯಾವುದೇ ಹವಾಮಾನದಲ್ಲಾದರೂ ಬದಲಿಸಬಹುದಾಗಿದೆ. ಏಕೆಂದರೆ ಇವುಗಳ ಬೆಲೆ ಕಡಿಮೆ. ಈ ಬದಲಾವಣೆ ಚಿಕ್ಕ ಪ್ರಮಾಣದ್ದು. ಆದರೆ ಈ ಬದಲಾವಣೆಯಿಂದ ಮನೆಯ ಲುಕ್‌ನಲ್ಲಿ ಬಹಳಷ್ಟು ವ್ಯತ್ಯಾಸ ಕಂಡುಬರುತ್ತದೆ.
ಬೆಳಕಿನ ಸಂಯೋಜನೆ
ಒಳ್ಳೆಯ ಬೆಳಕಿನ ಯೋಜನೆ ಹಬ್ಬಗಳಲ್ಲಿ ಬಹಳಷ್ಟು ಮಹತ್ವ ಪಡೆದುಕೊಳ್ಳುತ್ತದೆ. ಭಾರತೀಯ ಹಬ್ಬಗಳು ಬೆಳಕಿನ ಸಂಯೋಜನೆಯಿಂದ ಗುರುತಿಸಲ್ಪಡುತ್ತವೆ. ಹೀಗಾಗಿ ಬೇರೆ ಬೇರೆ ಬಣ್ಣ ಮತ್ತು ಬೆಳಕಿನಿಂದ ಮನೆ ಪ್ರಕಾಶಮಾನವಾಗುತ್ತದೆ. ಅದು ಆಕರ್ಷಕ ಮತ್ತು ಹರ್ಷಭರಿತ ವಾತಾವರಣ ನೀಡುತ್ತದೆ. ಈಚೆಗೆ ಮಾರುಕಟ್ಟೆಯಲ್ಲಿ ವಿದ್ಯುತ್ ಮಿತವ್ಯಯದ ಲೈಟ್‌ಗಳು ಬಂದಿದ್ದು, ಅವನ್ನು ನೀವು ಬಳಸಬಹುದು.
ಹೂಗಳ ಅಲಂಕಾರ
ಹೂಗಳ ಅಲಂಕಾರ ಪ್ರತಿಯೊಬ್ಬ ಭಾರತೀಯ ಮಹಿಳೆಗೆ ಚಿರಪರಿತವಾಗಿದೆ. ಹೂ ಮಾಲೆಗಳು, ಹೂಗಳ ರಂಗೋಲಿಯಿಂದ ಮನೆ ಅತ್ಯಂತ ಸುಂದರವಾಗಿ ಕಾಣುತ್ತದೆ. ಹೂಗಳ ಸುವಾಸನೆಯಿಂದ ಮನೆಯಲ್ಲಿ ವಿಶಿಷ್ಟ ಬಗೆಯ ವಾತಾವರಣವೇ ರೂಪುಗೊಳ್ಳುತ್ತದೆ ಹಾಗೂ ಹಳೆಯ ಪರಂಪರೆಯ ಅನುಭವಾಗುತ್ತದೆ.
ಉತ್ಸಾಹಭರಿತ ಹಬ್ಬದ ವಾತಾವರಣದಲ್ಲಿ ಈ ಚಿಕ್ಕಚಿಕ್ಕ ಸಂಗತಿಗಳನ್ನು ಅನುಸರಿಸುವುದರಿಂದ ಮನೆಯ ವಾತಾವರಣವಷ್ಟೇ ಪ್ರಫುಲ್ಲಿತಗೊಳ್ಳುವುದಿಲ್ಲ, ಹಬ್ಬದ ವಾತಾವರಣ ದ್ವಿಗುಣಗೊಳ್ಳುತ್ತದೆ.
– ರತ್ನಾ ರಾಜೀವ್