ಮದುವೆಯ ದಿನ ಯಾವುದೇ ಹುಡುಗಿಯ ಬದುಕಿನಲ್ಲಿ ಅತ್ಯಂತ ಮಹತ್ವದ ದಿನವಾಗಿರುತ್ತದೆ. ಆ ದಿನದ ಕನಸನ್ನು ಅವಳು ಚಿಕ್ಕಂದಿನಿಂದಲೇ ಕಂಡಿರುತ್ತಾಳೆ. ಆ ವಿಶೇಷ ದಿನದಂದು ಎಲ್ಲರ ದೃಷ್ಟಿ ತನ್ನ ಮೇಲೆ ಬೀಳುವಂತೆ ತಾನು ಅಲಂಕರಿಸಿಕೊಳ್ಳಬೇಕೆಂದು ಅವಳ ಬಯಕೆಯಾಗಿರುತ್ತದೆ. ಭಾರತೀಯ ವಧುಗಳು ತಲೆಯಿಂದ ಹಿಡಿದು ಕಾಲಿನವರೆಗೂ ಸುಂದರವಾದ ಒಡವೆಗಳಿಂದ ಅಲಂಕರಿಸಿಕೊಳ್ಳುತ್ತಾರೆ. ಅವು ಅವಳ ವ್ಯಕ್ತಿತ್ವ ಹಾಗೂ ಉಡುಪಿಗೆ ಶೋಭೆ ತರುತ್ತವೆ. ಬ್ರೈಡಲ್ ಜ್ಯೂವೆಲರಿ ಫ್ಯಾಷನ್‌ ಮಾತ್ರವಲ್ಲದೆ, ಪರಂಪರೆಯ ಪ್ರತೀಕ ಹಾಗೂ ಉತ್ತಮ ಇನ್ವೆಸ್ಟ್ ಮೆಂಟ್‌ ಕೂಡ ಆಗಿದೆ. ಮದುವೆಯ ಸೀಸನ್‌ ಬಂದಿದೆ. ಕಳೆದ ವರ್ಷಗಳಿಗೆ ಹೋಲಿಸಿದರೆ ಬ್ರೈಡಲ್ ಜ್ಯೂವೆಲರಿ ಡಿಸೈನುಗಳು ಹಾಗೂ ಪ್ಯಾಟರ್ನ್‌ಗಳಲ್ಲಿ ಕೊಂಚ ಬದಲಾವಣೆ ಬಂದಿದ್ದರೂ ವಧುವಿಗೆ ಒಡವೆ ಧರಿಸುವ ಇಚ್ಛೆಯಲ್ಲಿ ಯಾವುದೇ ಬದಲಾವಣೆ ಬಂದಿಲ್ಲ. ಬ್ರೈಡಲ್ ಜ್ಯೂವೆಲರಿಗೆ ಯಾವ ರೀತಿಯ ಟ್ವಿಸ್ಟ್ ಕೊಡುವುದೆಂದು ತಿಳಿಯೋಣ ಬನ್ನಿ.

ಬೈತಲೆ ಬೊಟ್ಟು ಅಥವಾ ಹಣೆಯ ಬೊಟ್ಟು

ಬೈತಲೆ ಬೊಟ್ಟು ಅಥವಾ ಹಣೆಯ ಬೊಟ್ಟು ವಧುವಿನ 16 ಶೃಂಗಾರಗಳಲ್ಲಿ ಪ್ರಮುಖವಾಗಿದೆ. ವಧುವಿನ ಬೈತಲೆಯನ್ನು ಅಲಂಕರಿಸುವ ಬೈತಲೆ ಬೊಟ್ಟು ಕುಂದಣ, ಡೈಮಂಡ್‌, ಕಲರ್ಡ್‌ ಸ್ಟೋನ್‌ಗಳಲ್ಲಿ ಬೇರೆ ಬೇರೆ ಸೈಜುಗಳಲ್ಲಿ ಮತ್ತು ಡಿಸೈನುಗಳಲ್ಲಿ ಲಭ್ಯವಿದೆ. ಕುಂದಣ ವರ್ಕ್‌ನ ಲಂಗದ ಜೊತೆಗೆ ಕುಂದಣದ ಬೈತಲೆ ಬೊಟ್ಟು ಚೆನ್ನಾಗಿರುತ್ತದೆ. ರಾಜಾಸ್ಥಾನಿ ವಧುಗಳು ಗೋಲ್ಡ್ ಮತ್ತು ಕುಂದಣದ ಗುಂಡಗಿನ ಆಕಾರದ ಬೈತಲೆ ಬೊಟ್ಟು ಧರಿಸಬಹುದು. `ಜೋಧಾ ಅಕ್ಬರ್‌’ ಚಿತ್ರದಲ್ಲಿ ಐಶ್ವರ್ಯಾ ರೈ ಅಂಥದ್ದನ್ನು ಧರಿಸಿದ್ದರು. ಬ್ರೈಡಲ್ ಜ್ಯೂವೆಲರಿಯ ಈ ರೂಪ ಹೆವಿ ಮತ್ತು ಲೈಟ್‌ ಎರಡರಲ್ಲೂ ಲಭ್ಯವಿದೆ. ಬೈತಲೆ ಬೊಟ್ಟು ವಧುಗಳಿಗೆ ಕಂಪ್ಲೀಟ್‌ ಲುಕ್‌ ಕೊಡುತ್ತದೆ. ಅದು ಟ್ರೆಡಿಶನಲ್ ಜ್ಯೂವೆಲರಿಯ ರೂಪವಾಗಿದೆ. ಈಗ ಇದು ಫ್ಯಾಷನ್‌ನಲ್ಲಿದೆ. ಬೈತಲೆ ಬೊಟ್ಟಿನಲ್ಲಿ ಕುಂದಣದ ಬೈತಲೆ ಬೊಟ್ಟು ಚಾಲ್ತಿಯಲ್ಲಿದೆ. ನೀವು ಬಯಸಿದರೆ ಇದನ್ನು ಸಿಂಗಲ್ ಲೇಯರ್‌ ಅಥವಾ ಡಬಲ್ ಲೇಯರ್‌ನಲ್ಲಿ ಪಡೆಯಬಹುದು.

ಇಯರ್‌ರಿಂಗ್ಸ್ ಭಾವೀ ವಧುವಿಗೆ ಮಾರುಕಟ್ಟೆಯಲ್ಲಿ ಇಯರ್‌ ರಿಂಗ್ಸ್ ನ ಸಾಕಷ್ಟು ವೆರೈಟಿಗಳಿವೆ. ಸಣ್ಣಪುಟ್ಟ ತೂಗಾಡುವ ಪರ್ಲ್ ಗಳು, ಕುಂದಣ, ಡೈಮಂಡ್‌ ಮತ್ತು ಗೋಲ್ಡ್ ಇಯರ್‌ ರಿಂಗ್ಸ್ ನ ಬಹಳಷ್ಟು ವೆರೈಟಿಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ನೀವು ಬಯಸಿದರೆ ಕಿವಿಗಳನ್ನು ಪೂರ್ತಿ ಮುಚ್ಚುವ ಇಯರ್‌ ರಿಂಗ್ಸ್ ಕೂಡ ಸಿಗುತ್ತವೆ. ಮದುವೆಯ ದಿನದಂದು ಡ್ರಮಾಟಿಕ್‌ ಲುಕ್ ಬಯಸಿದರೆ ಶ್ಯಾಂಡಲಿಯರ್‌ ಇಯರ್‌ ರಿಂಗ್ಸ್ ಆರಿಸಿಕೊಳ್ಳಬಹುದು. ಚೇನ್‌ ಇರುವ ಇಯರ್‌ ರಿಂಗ್ಸ್ ಸಿಗುತ್ತಿದ್ದು ಚೇನ್‌ನ್ನು ಕೂದಲಿಗೆ ಸಿಕ್ಕಿಸಿಕೊಳ್ಳಬಹುದು. ಇಂತಹ ಇಯರ್‌ ರಿಂಗ್ಸ್ ವಧುವಿಗೆ ಫಾರ್ಮ್‌ ಲುಕ್‌ ಕೊಡುತ್ತದೆ.

ನೋಸ್‌ ರಿಂಗ್‌ ಅಥವಾ ಮೂಗುತಿ

ಮೂಗುತಿ ಗುಂಡಗಿನ ಆಕಾರದಲ್ಲಿ ಚಿಕ್ಕ ಹಾಗೂ ಮೀಡಿಯಂ ಸೈಜ್‌ನಲ್ಲಿರುತ್ತದೆ. ಕೆಲವು ಕಡೆ ಚೇನ್‌ ಇಲ್ಲದೆ ಮೂಗುತಿ ಧರಿಸುತ್ತಾರೆ. ಕೆಲವರು ಕೂದಲಿನೊಂದಿಗೆ ಅಟ್ಯಾಚ್‌ ಮಾಡುವ ಚೇನ್‌ ಇರುವ ಮೂಗುತಿಯನ್ನು ಧರಿಸುತ್ತಾರೆ. ಕಾಲ ಬದಲಾದಂತೆ ಮೂಗುತಿಯ ಸ್ಟೈಲ್‌ನಲ್ಲೂ ಬದಲಾವಣೆ ಬರುತ್ತಿದ್ದು, ಅದು ಫ್ಯಾಷನ್‌ ಸ್ಟೇಟ್‌ಮೆಂಟ್‌ ಆಗುತ್ತಿದೆ. ಮೂಗುತಿ ಗೋಲ್ಡ್, ಮೀನಾಕಾರಿ, ರೂಬಿ, ಡೈಮಂಡ್‌ ಅಥವಾ ಮಲ್ಚಿಕಲರ್ಡ್‌ ಸ್ಟೋನ್‌ನದ್ದೂ ಕೂಡ ಆಗಬಹುದು. ರಾಜಾಸ್ಥಾನಿ ಮೂಗುತಿಯನ್ನು ಡಾಂಡಾ ಎನ್ನುತ್ತಾರೆ. ಮೂಗುತಿಯಲ್ಲಿ ಅಳವಡಿಸಿದ 2 ಕೆಂಪು ಮುತ್ತಿನ ಮಧ್ಯೆ ಬಿಳಿ ಮುತ್ತು ಬಹಳ ಸುಂದರವಾಗಿ ಕಾಣುತ್ತದೆ.

ನೆಕ್ಲೇಸ್

ನೆಕ್ಲೇಸ್‌ ಅಥವಾ ಸರ ಯಾವುದೇ ವಧುವಿಗೆ ಜ್ಯೂವೆಲರಿಯ ಆಕರ್ಷಣೆಯ ಕೇಂದ್ರವಾಗಿದೆ. ಮಾರುಕಟ್ಟೆಯಲ್ಲಿ ವಧುವಿನ ಡ್ರೆಸ್‌ನ ಬಣ್ಣ, ಪ್ಯಾಟರ್ನ್‌ ಮತ್ತು ನೆಕ್‌ ಲೈನ್‌ಗೆ ಅನುಗುಣವಾಗಿ ವಿಭಿನ್ನ ಬಣ್ಣಗಳು ಮತ್ತು ಡಿಸೈನುಗಳ ನೆಕ್ಲೇಸ್‌ ಇವೆ. ಬ್ರಾಡ್‌ ಚೋಕರ್‌ನಿಂದ ಹಿಡಿದು ನ್ಯಾರೋ ಚೋಕರ್‌, ಸಿಂಗಲ್ ಪೋಣಿಸಿದ ನೆಕ್ಲೇಸ್‌, ಮಲ್ಟಿ ಸ್ಟ್ಯಾಂಡ್‌ ನೆಕ್ಲೇಸ್‌, ರಾಣಿ ಸರ, ಪೋಣಿಸಿದ ಮುತ್ತುಗಳು ಇತ್ಯಾದಿ ವೆರೈಟಿ ಇವೆ. ಅಂದರೆ ಮಾರುಕಟ್ಟೆಯಲ್ಲಿ ನಿಮ್ಮ ಜೇಬಿಗೆ ಅನುಗುಣವಾಗಿ ಎಲ್ಲ ವೆರೈಟಿಗಳೂ ಲಭ್ಯವಿವೆ. ಅವು ಗೋಲ್ಡ್ ನೆಕ್ಲೇಸ್‌, ಮುತ್ತಿನದ್ದಾಗಲಿ, ಕುಂದಣ, ಪೋಲಕಿಯದಾಗಲಿ, ಬೀಡೆಡ್‌ ಸ್ವರೋಸ್ಕಿ ಕ್ರಿಸ್ಟಲ್ ಅಥವಾ ಡೈಮಂಡ್ ನದಾಗಲೀ ನಿಮ್ಮ ಡ್ರೆಸ್‌ಗೆ ತಕ್ಕಂತೆ ಇನ್ನು ಮ್ಯಾಚ್‌ ಮಾಡಬಹುದು. ದುಬಾರಿ ಬೆಲೆಯಿಂದಾಗಿ ಭಾರಿ ಚಿನ್ನದ ಸೆಟ್‌ ಖರೀದಿಸಲು ಇಚ್ಛಿಸದಿದ್ದರೆ ಕ್ಯಾಸ್ಟಿಂಗ್‌ ಜ್ಯೂವೆಲರಿ, ಮೈಕ್ರೋ ಗೋಲ್ಡ್, ಕುಂದಣ, ಹೈದರಾಬಾದ್‌ ಮುತ್ತು ಪೋಲಕಿ ಸೆಟ್‌ ಕೂಡ ಪ್ರಯತ್ನಿಸಬಹುದು. ಇವು ಅಫರ್ಡೆಬಲ್ ಆಗಿರುವ ಜೊತೆಗೆ ವಧುವನ್ನು ಫ್ಯಾಷನೆಬಲ್ ಮತ್ತು ಸುಂದರವಾಗಿ ಕಾಣಿಸುವಂತೆ ಮಾಡುತ್ತದೆ.

ಸಾಕಷ್ಟು ಆಪ್ಶನ್‌ಗಳಿವೆ

ಪರ್ಲ್ ಜ್ಯೂವೆಲರಿ : ಕಲರ್ಡ್‌ ಪರ್ಲ್ಸ್ ಮತ್ತು ಇಮಿಟೇಶನ್‌ ಪರ್ಲ್ಸ್ ನಿಮ್ಮ ಜೇಬಿಗೆ ಭಾರವಾಗದೆ ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತವೆ. ಪರ್ಲ್ ಹೊರಗಿನ ಸೌಂದರ್ಯದ ಜೊತೆ ಜೊತೆಗೆ ಒಳಗಿನ ಸೌಂದರ್ಯವನ್ನೂ ಹೆಚ್ಚಿಸುತ್ತದೆ.

ಕುಂದಣ ಜ್ಯೂವೆಲರಿ : ಮೊಘಲ್ ರಾಣಿಯರ ಶೋಭೆ ಹೆಚ್ಚಿಸಿದ ಕುಂದಣ ಜ್ಯೂವೆಲರಿಯನ್ನು ನಿಮ್ಮ ಮದುವೆಯ ದಿನದಂದು ಧರಿಸಿದರೆ ನೀವು ಸಹ ಯಾವ ರಾಣಿಗೂ ಕಡಿಮೆಯಿಲ್ಲದಂತೆ ಶೋಭಿಸುವಿರಿ. ಗೋಲ್ಡ್ ನಲ್ಲಿ ಕುಂದಣದ ಮೀನಾಕಾರಿ ಮಾಡಲಾಗುತ್ತದೆ. ಕುಂದಣದ ಸೆಟ್‌ ಪೋಲಕಿ ಸೆಟ್‌ನ ಲುಕ್‌ ಕೊಡುತ್ತದೆ. ಆದರೆ ಇವು ಪೋಲಕಿಯ ಸೆಟ್‌ಗಿಂತ ಕಡಿಮೆ ಹೊಳೆಯುತ್ತವೆ. ಏಕೆಂದರೆ ಇವು ಗಾಜಿನ ತುಂಡುಗಳು. ಆದರೆ ಲಕಿ ಸೆಟ್‌ನಲ್ಲಿ ರಾ ಅನ್‌ ಕಟ್‌ ಡೈಮಂಡ್‌ ಇರುತ್ತವೆ.

ಜಡಾಲೆ ಸೆಟ್‌ : ಜಡಾಲೆ ಸೆಟ್‌ನ ಟೆಕ್ನಿಕ್‌ನಲ್ಲಿ ಕುಂದಣ, ಪೋಲಕಿ ಮತ್ತು ಮೀನಾಕಾರಿಯನ್ನು ಗೋಲ್ಡ್ ನಲ್ಲಿ ಎನ್‌ ಗ್ರೇವ್ ಮಾಡಲಾಗುತ್ತದೆ.

ಟೆಂಪಲ್ ಜ್ಯೂವೆಲರಿ : ಪ್ರಾಚೀನ ಕಲೆಯ ಈ ಜ್ಯೂವೆಲರಿ ನಿಮಗೆ ಗ್ರ್ಯಾಂಡ್‌ ಮತ್ತು ಹೆವಿ ಲುಕ್‌ ಕೊಡುತ್ತದೆ. ನೀವು ಭಾರಿ ಜ್ಯೂವೆಲರಿ ಇಷ್ಟಪಟ್ಟರೆ ಹಾಗೂ ಬಜೆಟ್‌ಗೆ ತಕ್ಕಂತಿದ್ದರೆ ಇದನ್ನು ಆರಿಸಿಕೊಳ್ಳಬಹುದು.

ಎವರ್‌ ಗ್ರೀನ್‌ ಡೈಮಂಡ್‌ : ಎಲ್ಲ ವಧುಗಳ ಮನಸ್ಸನ್ನು ಆಕರ್ಷಿಸುವ ಡೈಮಂಡ್‌ ಜ್ಯೂವೆಲರಿ ಎಲಿಗೆಂಟ್‌ ಸೋಬರ್‌ ಲುಕ್‌ ಕೊಡುವ ಜೊತೆ ಜೊತೆಗೆ ಕಲೆಯ ಉತ್ಕೃಷ್ಟ ಮಾದರಿಯೂ ಆಗಿದೆ. ಡೈಮಂಡ್‌ ಜ್ಯೂವೆಲರಿ ಸ್ಟೇಟಸ್‌ನ ಪ್ರತೀಕ ಆಗಿದೆ.

ಕಾಶಿ ಜ್ಯೂವೆಲರ್ಸ್ ನ ಡಿಸೈನ್‌ ಹೆಡ್‌ ಪ್ರೀತಿ ಹೀಗೆ ಹೇಳುತ್ತಾರೆ, “ಡೈಮಂಡ್‌ ಬ್ರೈಡಲ್ ಜ್ಯೂವೆಲರಿಯ ಫೇವರಿಟ್‌ ಸ್ಟೋನ್‌. ಅದನ್ನು ಇಲ್ಯೂಷನ್‌ ಸೆಟಿಂಗ್‌ನಿಂದ ಕಡಿಮೆ ಖರ್ಚಿನಲ್ಲಿ ಮಾಡಬಹುದು.”

ಕ್ರಿಸ್ಟಲ್ ಜ್ಯೂವೆಲರಿ : ಕ್ರಿಸ್ಟಲ್‌ನ ಬ್ರೈಡಲ್ ಜ್ಯೂವೆಲರಿ ಇಂದು ಎಲ್ಲ ಬ್ರೈಡಲ್‌ಗಳ ವಾರ್ಡ್‌ ರೋಬ್‌ನಲ್ಲಿ ಕಂಗೊಳಿಸುತ್ತಿದೆ. ಬ್ರೈಟ್ ಮತ್ತು ಪೇಸ್ಟಲ್ ಎರಡೂ ಬಣ್ಣಗಳ ಉಡುಪುಗಳೊಂದಿಗೆ ಕ್ರಿಸ್ಟಲ್ ಜ್ಯೂವೆಲರಿ ಚೆನ್ನಾಗಿ ಒಪ್ಪುತ್ತದೆ ಹಾಗೂ ವಧುವಿನ ಸೌಂದರ್ಯ ಹೆಚ್ಚಿಸುತ್ತದೆ.

ಸ್ಟೇಟ್‌ಮೆಂಟ್‌ ಜ್ಯೂವೆಲರಿ : ಯಾವುದೇ ವಧುವಿಗೆ ಸ್ಟೇಟ್‌ಮೆಂಟ್‌ ಜ್ಯೂವೆಲರಿ ಗಾರ್ಜಿಯಸ್‌ ಮತ್ತು ಗ್ಲಾಮರಸ್‌ ಲುಕ್‌ ಕೊಡುತ್ತದೆ. ಬೋಲ್ಡ್ ಮತ್ತು ಯೂನಿಕ್‌ ಡಿಸೈನ್‌ನ ಈ ಜ್ಯೂವೆಲರಿ ಸೈಜ್‌ನಲ್ಲಿ ದೊಡ್ಡದಾಗಿರುತ್ತದೆ. ಶಾಂಡಲಿಯರ್‌ ಇಯರ್‌ ರಿಂಗ್ಸ್ ಆಗಲೀ, ಅಗಲವಾದ ಬ್ಯಾಂಗಲ್ಸ್ ಆಗಲೀ, ಕಾಕ್‌ ಟೇಲ್ ‌ರಿಂಗ್ಸ್ ಆಗಲೀ, ಸ್ಟೇಟ್‌ಮೆಂಟ್‌ ನೆಕ್ಲೇಸ್‌ ಆಗಲೀ ಎಲ್ಲ ವಧುವನ್ನು ಆಕರ್ಷಣೆಯ ಕೇಂದ್ರವಾಗಿಸುತ್ತವೆ.

ಸ್ಟೇಟ್‌ಮೆಂಟ್‌ ಜ್ಯೂವೆಲರಿ ಧರಿಸುವಾಗ ಒಂದೇ ಸ್ಟೇಟ್‌ಮೆಂಟ್‌ ಜ್ಯೂವೆಲರಿ ಧರಿಸಿ. ಒಂದು ವೇಳೆ ನೆಕ್ಲೇಸ್‌ ಸ್ಟೇಟ್‌ಮೆಂಟ್‌ ಲುಕ್ ಕೊಡುತ್ತಿದ್ದರೆ ಸಿಂಪಲ್ ಇಯರ್‌ ರಿಂಗ್ಸ್ ಧರಿಸಿ. ಎಮರಾಲ್ಡ್ ಶಾಂಡಲಿಯರ್‌ ಇಯರ್‌ ರಿಂಗ್ಸ್,

‌ಇಯರ್‌ ರಿಂಗ್ಸ್ ಮತ್ತು ಕಲರ್‌ ಫುಲ್ ಜೆಮ್ ಸ್ಟೋನ್‌ನ ದೊಡ್ಡ ಕಾಕ್‌ಟೇಲ್ ‌ರಿಂಗ್‌ ಕೂಡ ಯಾವುದೇ ವಧುವಿನ ಮದುವೆ ದಿನವನ್ನು ವಿಶೇಷವಾಗಿಸುತ್ತದೆ. ಇಂದಿನ ವಧು ಆಧುನಿಕಳೂ ಸ್ವಾವಲಂಬಿಯೂ ಆಗಿದ್ದು ಹೃದಯದಲ್ಲಿ ಭಾರತೀಯಳಾಗಿದ್ದಾಳೆ. ಹೀಗಾಗಿ ಈ ವಿಶೇಷ ದಿನದಂದು ಅವಳು ತನ್ನ ಲುಕ್‌ನೊಂದಿಗೆ ಎಕ್ಸ್ ಪೆರಿಮೆಂಟ್‌ ಮಾಡಲು ಸಿದ್ಧಳಾಗಿದ್ದಾಳೆ. ಸ್ಟೇಟ್‌ಮೆಂಟ್ ಜ್ಯೂವೆಲರಿ ಆಧುನಿಕ ವಧುವಿಗೆ ಗ್ಲಾಮರಸ್‌ ಲುಕ್‌ ಕೊಡುತ್ತದೆ. ನೀವು ಆಫ್‌ ಶೋಲ್ಡರ್‌ ಲೋಕಟ್‌ ನೆಕ್‌ ಲೈನ್‌ ಡ್ರೆಸ್‌ ಧರಿಸಲು ಬಯಸಿದ್ದರೆ ಸ್ಟೇಟ್‌ಮೆಂಟ್‌ ಜ್ಯೂವೆಲರಿ ನಿಮಗೆ ಬೆಸ್ಟ್ ಆಪ್ಶನ್‌ ಆಗಿದೆ.

ಬಾಲಿವುಡ್‌ ಮತ್ತು ಬ್ರೈಡಲ್ ಜ್ಯೂವೆಲರಿ

bridal-jwellery-jode-dil-ka-rista-2

ನೀವು ಶ್ರೀದೇವಿಯ ಚಿತ್ರ `ಚಾಂದನಿ’ ಯಲ್ಲಿ, ಕರಿಶ್ಮಾ ಕಪೂರ್‌ಳನ್ನು `ಜುಬೇದಾ’ನಲ್ಲಿ, ಐಶ್ವರ್ಯಾ ರೈಯನ್ನು `ಉಮ್ರಾನ್ ‌ಜಾನ್‌’ ಮತ್ತು `ಜೋಧಾ ಅಕ್ಬರ್‌’ ಚಿತ್ರಗಳಲ್ಲಿ ಸುಂದರವಾದ ಬ್ರೈಡಲ್ ಜ್ಯೂವೆಲರಿಯಲ್ಲಿ ನೋಡಿರಬಹುದು. ತಲೆಯಿಂದ ಕಾಲಿನವರೆಗೆ ಗೋಲ್ಡ್, ಕುಂದಣ ಮತ್ತು ಜಡಾ ಜ್ಯೂವೆಲರಿಗಳಿಂದ ಅಲಂಕೃತರಾದ ಈ ಬಾಲಿವುಡ್‌ ವಧುಗಳು ಒಬ್ಬ ಭಾವಿ ವಧು ವಿಶೇಷ ಸ್ಟೈಲ್‌ನಲ್ಲಿ ಅಲಂಕರಿಸಿಕೊಳ್ಳಲು ಪ್ರೇರೇಪಿಸುತ್ತವೆ. `ಜೋಧಾ ಅಕ್ಬರ್‌’ನಲ್ಲಿ ಐಶ್ವರ್ಯಾ ರೈ ಬ್ರೈಡಲ್ ಜ್ಯೂವೆಲರಿ ಎಷ್ಟು ಪ್ರಸಿದ್ಧಿವಾಯಿತೆಂದರೆ ಮಾರುಕಟ್ಟೆಯಲ್ಲಿ `ಜೋಧಾ ಅಕ್ಬರ್‌’ ಜ್ಯೂವೆಲರಿ ಹೆಸರಿನಲ್ಲಿ ಎಲ್ಲ ವಧುಗಳೂ ಅದಕ್ಕೆ ಬೇಡಿಕೆ ಸಲ್ಲಿಸಿದರು.

ಸ್ಟೈಲ್ ಟಿಪ್ಸ್ : ಭಾರಿಯಾದ ಜ್ಯೂವೆಲರಿ ಬಯಸುತ್ತಿದ್ದು ನಿಮ್ಮ ಬಜೆಟ್‌ ಹೆಚ್ಚಾಗಿದ್ದರೆ ನಿಜಾಮ್ ಜ್ಯೂವೆಲರಿ, ಡೈಮಂಡ್ ಜ್ಯೂವೆಲರಿ, ಜೇಡ್ ಸೆಟ್‌, ಟೆಂಪಲ್ ಜ್ಯೂವೆಲರಿ ಟ್ರೈ ಮಾಡಬಹುದು. ನಿಮ್ಮ ಪರ್ಸನಾಲಿಟಿಗೆ ಸೂಟ್‌ ಆಗುವಂತಹ ಹಾಗೂ ಮದುವೆಯ ಉಡುಪುಗಳಿಗೆ ಮ್ಯಾಚ್‌ ಆಗುವಂತಹ ಜ್ಯೂವೆಲರಿ ಆಯ್ದುಕೊಳ್ಳಿ. ಅಫರ್ಡಬಲ್ ಜೊತೆಗೆ ಸುಂದರವಾಗಿ ಹಾಗೂ ಫ್ಯಾಷನೆಬಲ್ ಆಗಿ ಕೂಡ ಕಾಣಿಸಬೇಕು. ಡೈಮಂಡ್‌ ಹಾಗೂ ಚಿನ್ನದ ಭಾರಿ ಒಡವೆಗಳಿಗೆ ನಿಮ್ಮ ಬಜೆಟ್‌ ಒಪ್ಪದಿದ್ದರೆ ಹೈದರಾಬಾದಿ ಪರ್ಲ್ಸ್ ನ ಜ್ಯೂವೆಲರಿ ಆರಿಸಿಕೊಳ್ಳಿ. ಪರ್ಲ್ ಎಂದೂ ಔಟ್‌ ಆಫ್‌ ಫ್ಯಾಷನ್‌ ಆಗುವುದಿಲ್ಲ. ಮದುವೆಗಾಗಿ ಪರ್ಲ್ ಜ್ಯೂವೆಲರಿಯ ಹೆವಿ ಸ್ಟೈಲ್ ‌ಆರಿಸಿಕೊಳ್ಳಬಹುದು. ಮದುವೆಯಲ್ಲಿ ಗೋಲ್ಡ್ ಜ್ಯೂವೆಲರಿ ಮ್ಯಾಚ್‌ ಆಗದಿದ್ದರೆ ಸ್ಟೋನ್‌ ಜ್ಯೂವೆಲರಿ ಆಯ್ಕೆ ಮಾಡಬಹುದು. ಹಿಂದೆ ವಧುಗಳು ರೆಡ್‌ ಅಥವಾ ಮೆರೂನ್‌ ಬಣ್ಣ ಆರಿಸಿಕೊಳ್ಳುತ್ತಿದ್ದರು. ಆದರೆ ಈಗ ಗ್ರೀನ್‌, ಕ್ರೀಂ, ಯೆಲ್ಲೋ, ಪಿಂಕ್‌, ಬ್ಲೂ ಎಲ್ಲ ಬಣ್ಣಗಳನ್ನೂ ಹೊಂದಿಸುತ್ತಿದ್ದಾರೆ. ಮ್ಯಾಚಿಂಗ್‌ ಸ್ಟೋನ್ಸ್ ನ ಜ್ಯೂವೆಲರಿ ಖರೀದಿಸಲಾಗುತ್ತಿತ್ತು. ಅದು ವಧುವಿಗೆ ಟ್ರೆಡಿಶನಲ್ ಮತ್ತು ಆ್ಯಂಟಿಕ್‌ ಲುಕ್‌ ಕೊಡುತ್ತದೆ. ಕುತ್ತಿಗೆಯಲ್ಲಿ ದೊಡ್ಡ ಸ್ಟೋನ್‌ನ ಜ್ಯೂವೆಲರಿ ಧರಿಸುತ್ತಿದ್ದರೆ ಬೇರೆ ಯಾವುದೇ ಜ್ಯೂವೆಲರಿ ಧರಿಸಬೇಡಿ. ಪ್ರಾಕೃತಿಕ ಸ್ಟೋನ್‌ನಿಂದ ತಯಾರಿಸಿದ ಜ್ಯೂವೆಲರಿಯನ್ನು ಔಟ್‌ಫಿಟ್‌ನ ಬಣ್ಣದೊಂದಿಗೆ ಮ್ಯಾಚ್‌ ಮಾಡಿ. ಪ್ರಾಕೃತಿಕ ಸ್ಟೋನ್‌ನಲ್ಲಿ ಪುಷ್ಯರಾಗ, ರತ್ನ ಮತ್ತು ಗೋಮೇಧಿಕ ಇರುತ್ತದೆ. ಪುಷ್ಯರಾಗ ಮತ್ತು ರತ್ನದಂತಹ ಸ್ಟೋನ್ಸ್ ದುಬಾರಿ. ಆದರೆ ಗೋಮೇಧಿಕ ಅಷ್ಟು ದುಬಾರಿಯಲ್ಲ. ಆದ್ದರಿಂದ ಜ್ಯೂವೆಲರಿ ಡಿಸೈನರ್‌ನಿಂದ ನೀವು ಗೋಮೇಧಿಕದಿಂದ ನೆಕ್‌ಪೀಸ್‌, ಬ್ರೇಸ್‌ಲೆಟ್‌, ರಿಂಗ್‌ ಇತ್ಯಾದಿ ಮಾಡಿಸಬಹುದು. ದೊಡ್ಡ ಸ್ಟೋನ್‌ನ ಜ್ಯೂವೆಲರಿಯೊಂದಿಗೆ ತೆಳು ಶೇಡ್‌ನ ಔಟ್‌ಫಿಟ್‌ ಧರಿಸಿ. ಬ್ರೈಟ್‌ ಕಲರ್‌ನ ಉಡುಪುಗಳೊಂದಿಗೆ ಇವು ಚೆನ್ನಾಗಿರುವುದಿಲ್ಲ.

ಮದುವೆಯ ದಿನದಂದು ಹೇರ್‌ ಸ್ಟೈಲ್‌‌ನಲ್ಲಿ ಹೇರ್‌ ಆ್ಯಕ್ಸೆಸರೀಸ್‌ ಉಪಯೋಗಿಸಿದರೆ ಅದನ್ನು ನಿಮ್ಮ ಸಂಗಾತಿಯೊಂದಿಗೆ ಮ್ಯಾಚ್‌ ಮಾಡಿ. ನಿಮ್ಮ ಸಂಗಾತಿಯ ಬಳಿ ಸ್ಟೋನ್ಸ್ ಅಥವಾ ಮುತ್ತಿನ ವರ್ಕ್‌ ಇದ್ದರೆ ಹೇರ್‌ ಆ್ಯಕ್ಸೆಸರೀಸ್‌ ಕೂಡ ಅದಕ್ಕೆ ಮ್ಯಾಚ್‌ ಆಗಬೇಕು. ನೀವು ಬಯಸಿದರೆ ಹೂಗಳಿಂದಲೂ ಕೂದಲನ್ನು ಅಲಂಕರಿಸಬಹುದು. ಒಂದುವೇಳೆ ನಿಮ್ಮ ಸೊಂಟ ತೆಳ್ಳಗಿದ್ದರೆ ಡಾಬನ್ನೂ ಧರಿಸಬಹುದು. ಅದು ಗೋಲ್ಡ್, ಬೀಡ್ಸ್ ಅಥವಾ ಕುಂದಣದ್ದು ಆಗಿರಬಹುದು.

ಮದುವೆಯಂದು ಎಲ್ಲರ ಆಕರ್ಷಣಾ ಕೇಂದ್ರವಾಗಲು ಇಚ್ಛಿಸಿ ಕಡಿಮೆ ಬಜೆಟ್‌ನಲ್ಲಿ ಸುಂದರವಾಗಿ ಕಾಣಲು ಬಯಸಿದರೆ ಹೆವಿ ಜ್ಯೂವೆಲರಿ ಬದಲು ಎಕ್ಸ್ ಕ್ಲೂಸಿವ್ ‌ಜ್ಯೂವೆಲರಿಯನ್ನು ಆರಿಸಿಕೊಳ್ಳಿ. ರೂಬಿಯ ಜಾಗದಲ್ಲಿ ರೆಡ್‌ ಕಲರ್‌ನ ಗಾರ್ನೆಟ್ ಉಪಯೋಗಿಸಬಹುದು. ರೆಡ್‌ ಕಲರ್‌ ವಧುವಿನ ಸೌಂದರ್ಯವನ್ನು ಹೆಚ್ಚಿಸುತ್ತದೆ. ಪೋಲಕಿ, ಜ್ಯೂವೆಲರಿ ವಧುವಿಗೆ ಪಾರಂಪರಿಕ ರೂಪ ಕೊಡುತ್ತದೆ. ಎನಾಮೆಲಿಂಗ್‌ನಿಂದ ಜ್ಯೂವೆಲರಿಗೆ ವಿಭಿನ್ನ ಬಣ್ಣ ಸಿಗುತ್ತದೆ ಮತ್ತು ಜ್ಯೂವೆಲರಿಯ ಸೌಂದರ್ಯ ಹೆಚ್ಚುತ್ತದೆ.

ಜ್ಯೂವೆಲರಿ ಡಿಸೈನರ್‌ ಜ್ಯೋತಿ ಹೇಳುತ್ತಾರೆ, “ಬರುವ ಸೀಸನ್‌ನಲ್ಲಿ ಎಥ್ನಿಕ್‌ ಟಚ್‌ನ ಜ್ಯೂವೆಲರಿ ಫ್ಯಾಷನ್‌ನಲ್ಲಿರುತ್ತದೆ. ನೀವು ಕಡಿಮೆ ಬಜೆಟ್‌ನಲ್ಲಿ ಆಕರ್ಷಕವಾಗಿ ಕಾಣಲು ಇಚ್ಛಿಸಿದರೆ ಡ್ರೆಸ್‌ನೊಂದಿಗೆ ಮ್ಯಾಚ್‌ ಆಗುವಂತಹ ಆ್ಯಂಟಿಕ್‌ ಲುಕ್‌ನ ಮಹಾರಾಣಿ ಟಚ್‌ನ ವಿಕ್ಟೋರಿಯನ್‌ ಜ್ಯೂವೆಲರಿ ಧರಿಸಬಹುದು.

– ರೇಣುಕಾ ಕುಲಕರ್ಣಿ

ಪರ್ಫೆಕ್ಟ್ ಬ್ರೈಡ್‌ನಂತೆ ಕಾಣಲು

bridal-jwellery-jode-dil-ka-rista

ನಿಮ್ಮ ಬಾಡಿ ಟೈಪ್‌ಗೆ ತಕ್ಕಂತೆ ಜ್ಯೂವೆಲರಿ ಆಯ್ದುಕೊಂಡರೆ ಮಾತ್ರ ನೀವು ಪರ್ಫೆಕ್ಟ್ ಬ್ರೈಡ್‌ ಅನ್ನಿಸುತ್ತೀರಿ. ಎಂತಹ ಜ್ಯೂವೆಲರಿ ಆರಿಸಿಕೊಂಡು ನಿಮ್ಮ ಪ್ರಿಯಕರನ ಹೃದಯ ಗೆಲ್ಲಬಹುದೆಂದು ತಿಳಿಯೋಣ ಬನ್ನಿ.

ನೀವು ಉದ್ದವಾಗಿದ್ದರೆ ಚೋಕರ್‌ ಸ್ಟೈಲ್‌‌ನ ನೆಕ್ಲೇಸ್‌ ಆಯ್ದುಕೊಳ್ಳಿ. ನಿಮಗೆ ಸ್ಟೋನ್‌ ಮತ್ತು ಪರ್ಲ್ ನ ನೆಕ್ಲೇಸ್‌ ಚೆನ್ನಾಗಿ ಒಪ್ಪುತ್ತದೆ. ಬ್ರಾಡ್‌ ಬ್ರೇಸ್‌ಲೆಟ್‌ ಧರಿಸಿ ಅಥವಾ ಬಹಳಷ್ಟು ಸ್ಟೋನ್‌ ಇರುವ ಡೆಲಿಕೇಟ್‌ ಬ್ರೇಸ್‌ಲೆಟ್‌ ಆರಿಸಿಕೊಳ್ಳಿ. ನೀವು ಉದ್ದವಾಗಿರುವುದರಿಂದ ಉದ್ದದ ಡ್ಯಾಂಗ್ಲರ್ಸ್ ಆರಿಸಿಕೊಳ್ಳಿ.

ನೀವು ಕಡಿಮೆ ಉದ್ದವಿದ್ದರೆ ಉದ್ದದ ನೆಕ್ಲೇಸ್‌ ಅಥವಾ ಕಾಲರ್‌ಲೆಸ್‌ ನೆಕ್ಲೇಸ್‌ ಆರಿಸಿ. ಕಡಗ ಡೆಲಿಕೇಟ್‌ ಆಗಿರಲಿ. ಚೈನ್‌ ಇರುವ ಹಾಗೂ ಮೇಲ್ಭಾಗದಲ್ಲಿ ಡಿಸೈನ್‌ ಇರುವ ಇಯರ್‌ ರಿಂಗ್ಸ್ ಧರಿಸಿ.

ಜ್ಯೂವೆಲರಿ ಮತ್ತು ಸ್ಕಿನ್‌ ಅಲರ್ಜಿ  

ಭಾವಿ ವಧುವಿಗಾಗಿ ಮಾರುಕಟ್ಟೆಯಲ್ಲಿ ವಿಧವಿಧವಾದ ಆರ್ಟಿಫಿಶಿಯಲ್ ಜ್ಯೂವೆಲರಿ ಇದ್ದು ಅವಳ ಸೌಂದರ್ಯ ಹೆಚ್ಚಿಸುತ್ತವೆ. ಆದರೆ ಬದಲಿಗೆ ಸ್ಕಿನ್‌ ಅಲರ್ಜಿ ಉಂಟು ಮಾಡುತ್ತದೆ.

ಆರ್ಟಿಫಿಶಿಯಲ್ ಜ್ಯೂವೆಲರಿಯಿಂದ ಸ್ಕಿನ್‌ ಅಲರ್ಜಿ ಆಗದಿರಲು ಅದನ್ನು ಧರಿಸುವ ಮೊದಲು ಆ ಜ್ಯೂವೆಲರಿ ನಿಮ್ಮ ಸ್ಕಿನ್‌ಗೆ ಸೂಟ್‌ ಆಗುತ್ತದೆಯೋ ಇಲ್ಲವೋ ಎಂದು ತಿಳಿದುಕೊಳ್ಳಿ. ಅಂದಹಾಗೆ ಜ್ಯೂವೆಲರಿಯಲ್ಲಿರುವ ನಿಕ್ಕಲ್ ಲೋಹದಿಂದ ತ್ವಚೆಗೆ ಅಲರ್ಜಿಯಾಗುತ್ತದೆ. ಅದರಿಂದ ನವೆಯುಂಟಾಗುತ್ತದೆ. ತ್ವಚೆಯಲ್ಲಿ ದದ್ದು, ಗುಳ್ಳೆಗಳು ಏಳುತ್ತವೆ. ಅವುಗಳಿಂದ ಪಾರಾಗಲು ಜ್ಯೂವೆಲರಿ ಧರಿಸುವ ಮೊದಲು ಮೆಡಿಕೇಟೆಡ್‌ ಕ್ರೀಂ ಹಚ್ಚಿ.

ಜ್ಯೂವೆಲರಿ ಧರಿಸುವ ಮೊದಲು ಅದರಿಂದ ಯಾವುದೇ ಹರಿತವಾದ ತಂತಿ ಹೊರಬಂದಿಲ್ಲವೇ ಎಂದು ಪರೀಕ್ಷಿಸಿ.

ಹೆಚ್ಚು ಕಾಲ ಆರ್ಟಿಫಿಶಿಯಲ್ ಒಡವೆಗಳನ್ನು ಧರಿಸಬೇಡಿ.

ಹ್ಯಾಂಡಲ್ ವಿತ್‌ ಕೇರ್‌

ಪೋಲಕಿ ಮತ್ತು ಕುಂದಣ ಜ್ಯೂವೆಲರಿಯನ್ನು ಬಟರ್‌ ಪೇಪರ್‌ನಲ್ಲಿ ಅಥವಾ ಪ್ಲ್ಯಾಸ್ಟಿಕ್‌ನ ಏರ್‌ ಟೈಟ್‌ ಬಾರಕ್ಸ್ ನಲ್ಲಿಡಿ.  ಡೈಮಂಡ್‌ ಜ್ಯೂವೆಲರಿಯನ್ನು ವೆಲ್ವೆಟ್‌ ಬಾಕ್ಸ್ ನಲ್ಲಿಡಿ.

ಪರ್ಫ್ಯೂಮ್ ಅಥವಾ ಡಿಯೋಡರೆಂಟ್‌ ಹಚ್ಚಿಕೊಂಡು 10 ನಿಮಿಷಗಳ ನಂತರ ಕುಂದಣ ಜ್ಯೂವೆಲರಿ ಧರಿಸಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ