ಮದುವೆಯ ದಿನ ಯಾವುದೇ ಹುಡುಗಿಯ ಬದುಕಿನಲ್ಲಿ ಅತ್ಯಂತ ಮಹತ್ವದ ದಿನವಾಗಿರುತ್ತದೆ. ಆ ದಿನದ ಕನಸನ್ನು ಅವಳು ಚಿಕ್ಕಂದಿನಿಂದಲೇ ಕಂಡಿರುತ್ತಾಳೆ. ಆ ವಿಶೇಷ ದಿನದಂದು ಎಲ್ಲರ ದೃಷ್ಟಿ ತನ್ನ ಮೇಲೆ ಬೀಳುವಂತೆ ತಾನು ಅಲಂಕರಿಸಿಕೊಳ್ಳಬೇಕೆಂದು ಅವಳ ಬಯಕೆಯಾಗಿರುತ್ತದೆ. ಭಾರತೀಯ ವಧುಗಳು ತಲೆಯಿಂದ ಹಿಡಿದು ಕಾಲಿನವರೆಗೂ ಸುಂದರವಾದ ಒಡವೆಗಳಿಂದ ಅಲಂಕರಿಸಿಕೊಳ್ಳುತ್ತಾರೆ. ಅವು ಅವಳ ವ್ಯಕ್ತಿತ್ವ ಹಾಗೂ ಉಡುಪಿಗೆ ಶೋಭೆ ತರುತ್ತವೆ. ಬ್ರೈಡಲ್ ಜ್ಯೂವೆಲರಿ ಫ್ಯಾಷನ್‌ ಮಾತ್ರವಲ್ಲದೆ, ಪರಂಪರೆಯ ಪ್ರತೀಕ ಹಾಗೂ ಉತ್ತಮ ಇನ್ವೆಸ್ಟ್ ಮೆಂಟ್‌ ಕೂಡ ಆಗಿದೆ. ಮದುವೆಯ ಸೀಸನ್‌ ಬಂದಿದೆ. ಕಳೆದ ವರ್ಷಗಳಿಗೆ ಹೋಲಿಸಿದರೆ ಬ್ರೈಡಲ್ ಜ್ಯೂವೆಲರಿ ಡಿಸೈನುಗಳು ಹಾಗೂ ಪ್ಯಾಟರ್ನ್‌ಗಳಲ್ಲಿ ಕೊಂಚ ಬದಲಾವಣೆ ಬಂದಿದ್ದರೂ ವಧುವಿಗೆ ಒಡವೆ ಧರಿಸುವ ಇಚ್ಛೆಯಲ್ಲಿ ಯಾವುದೇ ಬದಲಾವಣೆ ಬಂದಿಲ್ಲ. ಬ್ರೈಡಲ್ ಜ್ಯೂವೆಲರಿಗೆ ಯಾವ ರೀತಿಯ ಟ್ವಿಸ್ಟ್ ಕೊಡುವುದೆಂದು ತಿಳಿಯೋಣ ಬನ್ನಿ.

ಬೈತಲೆ ಬೊಟ್ಟು ಅಥವಾ ಹಣೆಯ ಬೊಟ್ಟು

ಬೈತಲೆ ಬೊಟ್ಟು ಅಥವಾ ಹಣೆಯ ಬೊಟ್ಟು ವಧುವಿನ 16 ಶೃಂಗಾರಗಳಲ್ಲಿ ಪ್ರಮುಖವಾಗಿದೆ. ವಧುವಿನ ಬೈತಲೆಯನ್ನು ಅಲಂಕರಿಸುವ ಬೈತಲೆ ಬೊಟ್ಟು ಕುಂದಣ, ಡೈಮಂಡ್‌, ಕಲರ್ಡ್‌ ಸ್ಟೋನ್‌ಗಳಲ್ಲಿ ಬೇರೆ ಬೇರೆ ಸೈಜುಗಳಲ್ಲಿ ಮತ್ತು ಡಿಸೈನುಗಳಲ್ಲಿ ಲಭ್ಯವಿದೆ. ಕುಂದಣ ವರ್ಕ್‌ನ ಲಂಗದ ಜೊತೆಗೆ ಕುಂದಣದ ಬೈತಲೆ ಬೊಟ್ಟು ಚೆನ್ನಾಗಿರುತ್ತದೆ. ರಾಜಾಸ್ಥಾನಿ ವಧುಗಳು ಗೋಲ್ಡ್ ಮತ್ತು ಕುಂದಣದ ಗುಂಡಗಿನ ಆಕಾರದ ಬೈತಲೆ ಬೊಟ್ಟು ಧರಿಸಬಹುದು. `ಜೋಧಾ ಅಕ್ಬರ್‌' ಚಿತ್ರದಲ್ಲಿ ಐಶ್ವರ್ಯಾ ರೈ ಅಂಥದ್ದನ್ನು ಧರಿಸಿದ್ದರು. ಬ್ರೈಡಲ್ ಜ್ಯೂವೆಲರಿಯ ಈ ರೂಪ ಹೆವಿ ಮತ್ತು ಲೈಟ್‌ ಎರಡರಲ್ಲೂ ಲಭ್ಯವಿದೆ. ಬೈತಲೆ ಬೊಟ್ಟು ವಧುಗಳಿಗೆ ಕಂಪ್ಲೀಟ್‌ ಲುಕ್‌ ಕೊಡುತ್ತದೆ. ಅದು ಟ್ರೆಡಿಶನಲ್ ಜ್ಯೂವೆಲರಿಯ ರೂಪವಾಗಿದೆ. ಈಗ ಇದು ಫ್ಯಾಷನ್‌ನಲ್ಲಿದೆ. ಬೈತಲೆ ಬೊಟ್ಟಿನಲ್ಲಿ ಕುಂದಣದ ಬೈತಲೆ ಬೊಟ್ಟು ಚಾಲ್ತಿಯಲ್ಲಿದೆ. ನೀವು ಬಯಸಿದರೆ ಇದನ್ನು ಸಿಂಗಲ್ ಲೇಯರ್‌ ಅಥವಾ ಡಬಲ್ ಲೇಯರ್‌ನಲ್ಲಿ ಪಡೆಯಬಹುದು.

ಇಯರ್‌ರಿಂಗ್ಸ್ ಭಾವೀ ವಧುವಿಗೆ ಮಾರುಕಟ್ಟೆಯಲ್ಲಿ ಇಯರ್‌ ರಿಂಗ್ಸ್ ನ ಸಾಕಷ್ಟು ವೆರೈಟಿಗಳಿವೆ. ಸಣ್ಣಪುಟ್ಟ ತೂಗಾಡುವ ಪರ್ಲ್ ಗಳು, ಕುಂದಣ, ಡೈಮಂಡ್‌ ಮತ್ತು ಗೋಲ್ಡ್ ಇಯರ್‌ ರಿಂಗ್ಸ್ ನ ಬಹಳಷ್ಟು ವೆರೈಟಿಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ನೀವು ಬಯಸಿದರೆ ಕಿವಿಗಳನ್ನು ಪೂರ್ತಿ ಮುಚ್ಚುವ ಇಯರ್‌ ರಿಂಗ್ಸ್ ಕೂಡ ಸಿಗುತ್ತವೆ. ಮದುವೆಯ ದಿನದಂದು ಡ್ರಮಾಟಿಕ್‌ ಲುಕ್ ಬಯಸಿದರೆ ಶ್ಯಾಂಡಲಿಯರ್‌ ಇಯರ್‌ ರಿಂಗ್ಸ್ ಆರಿಸಿಕೊಳ್ಳಬಹುದು. ಚೇನ್‌ ಇರುವ ಇಯರ್‌ ರಿಂಗ್ಸ್ ಸಿಗುತ್ತಿದ್ದು ಚೇನ್‌ನ್ನು ಕೂದಲಿಗೆ ಸಿಕ್ಕಿಸಿಕೊಳ್ಳಬಹುದು. ಇಂತಹ ಇಯರ್‌ ರಿಂಗ್ಸ್ ವಧುವಿಗೆ ಫಾರ್ಮ್‌ ಲುಕ್‌ ಕೊಡುತ್ತದೆ.

ನೋಸ್‌ ರಿಂಗ್‌ ಅಥವಾ ಮೂಗುತಿ

ಮೂಗುತಿ ಗುಂಡಗಿನ ಆಕಾರದಲ್ಲಿ ಚಿಕ್ಕ ಹಾಗೂ ಮೀಡಿಯಂ ಸೈಜ್‌ನಲ್ಲಿರುತ್ತದೆ. ಕೆಲವು ಕಡೆ ಚೇನ್‌ ಇಲ್ಲದೆ ಮೂಗುತಿ ಧರಿಸುತ್ತಾರೆ. ಕೆಲವರು ಕೂದಲಿನೊಂದಿಗೆ ಅಟ್ಯಾಚ್‌ ಮಾಡುವ ಚೇನ್‌ ಇರುವ ಮೂಗುತಿಯನ್ನು ಧರಿಸುತ್ತಾರೆ. ಕಾಲ ಬದಲಾದಂತೆ ಮೂಗುತಿಯ ಸ್ಟೈಲ್‌ನಲ್ಲೂ ಬದಲಾವಣೆ ಬರುತ್ತಿದ್ದು, ಅದು ಫ್ಯಾಷನ್‌ ಸ್ಟೇಟ್‌ಮೆಂಟ್‌ ಆಗುತ್ತಿದೆ. ಮೂಗುತಿ ಗೋಲ್ಡ್, ಮೀನಾಕಾರಿ, ರೂಬಿ, ಡೈಮಂಡ್‌ ಅಥವಾ ಮಲ್ಚಿಕಲರ್ಡ್‌ ಸ್ಟೋನ್‌ನದ್ದೂ ಕೂಡ ಆಗಬಹುದು. ರಾಜಾಸ್ಥಾನಿ ಮೂಗುತಿಯನ್ನು ಡಾಂಡಾ ಎನ್ನುತ್ತಾರೆ. ಮೂಗುತಿಯಲ್ಲಿ ಅಳವಡಿಸಿದ 2 ಕೆಂಪು ಮುತ್ತಿನ ಮಧ್ಯೆ ಬಿಳಿ ಮುತ್ತು ಬಹಳ ಸುಂದರವಾಗಿ ಕಾಣುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ