ಮದುವೆಯ ದಿನದಂದು ಸುಂದರವಾಗಿ ಕಾಣಲು ಹುಡುಗಿಯರು ಹಲವು ತಿಂಗಳ ಮುಂಚೆಯೇ ಸಿದ್ಧತೆ ಆರಂಭಿಸುತ್ತಾರೆ. ಅದಕ್ಕಾಗಿ ಬ್ರೈಡಲ್ ಡ್ರೆಸಸ್‌, ಬ್ರೈಡಲ್ ಜ್ಯೂವೆಲರಿ, ಫುಟ್‌ವೇರ್‌ ಮೇಕಪ್‌ ಮುಂತಾದವುಗಳ ಬಗ್ಗೆ ಹೆಚ್ಚು ಗಮನ ಕೊಡಲಾರಂಭಿಸುತ್ತಾರೆ. ಆದರೆ ಮದುವೆಯ ದಿನದಂದು ಮಾತ್ರ ಸುಂದರವಾಗಿ ಕಾಣುವುದು ಮುಖ್ಯವಲ್ಲ. ಮದುವೆಯ ಬಳಿಕ ನಿಮ್ಮ ಈ ಸೌಂದರ್ಯವನ್ನು ಮೇಕಪ್‌, ಡ್ರೆಸಸ್‌ ಹಾಗೂ ಜ್ಯೂವೆಲರಿಗಳ ಮುಖಾಂತರ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಬಹುದು.

ಮದುವೆಯ ಬಳಿಕ ಏನನ್ನು ಧರಿಸಬೇಕು?

ಈ ಕುರಿತಂತೆ ಫ್ಯಾಷನ್‌ ಡಿಸೈನರ್‌ ಜ್ಯೋತಿ ಹೀಗೆ ಹೇಳುತ್ತಾರೆ, “ಮದುವೆಯ ಬಳಿಕ ನವ ವಧುವಿನ ಬಗ್ಗೆ ಎಲ್ಲರ ಗಮನ ಇದ್ದೇ ಇರುತ್ತದೆ. ಹೀಗಾಗಿ ಆಕೆ ವರ್ಣರಂಜಿತ ಬಟ್ಟೆಗಳನ್ನೇ ಆಯ್ದುಕೊಳ್ಳಬೇಕು. ಭಾರತೀಯ ಪರಂಪರೆಗನುಗುಣವಾಗಿ ನವ ವಧುವಿಗೆ ಪಾರಂಪರಿಕ ಡ್ರೆಸ್‌ಗಳೇ ಚಿನ್ನಾಗಿ ಒಪ್ಪುತ್ತವೆ. ಪಾರಂಪರಿಕ ಉಡುಗೆಗಳಲ್ಲಿ ಸೀರೆ ವಧುವಿನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುವಂತಹ ಪೋಷಾಕು ಆಗಿದೆ. ಆದರೆ ಇದು ಚಿಕ್ಕ ಕುಟುಂಬಗಳ ವಿಶ್ವ. ಅಂದರೆ ಗಂಡಹೆಂಡತಿ ಇಬ್ಬರೇ. ಇಲ್ಲಿ ನವ ವಧು ತನಗೆ ಬೇಕಾದಂತಹ ಉಡುಪುಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಸೀರೆಯನ್ನು ಕೂಡ ಫ್ಯಾಷನ್‌ಗನುಗುಣವಾಗಿ ಸ್ಟೈಲಿಶ್‌ ಆಗಿ ಧರಿಸಬಹುದು.

ಸ್ಟೈಲಿಶ್‌ ಸೀರೆ ಹೇಗೆ ಧರಿಸುವುದು?

ಟಿಶ್ಶೂ, ಸಿಲ್ಕ್, ಶಿಫಾನ್‌, ಕ್ರೇಪ್‌, ಜಾರ್ಜೆಟ್‌ನ ಟೆಕ್ಸ್ ಚರ್‌ ಸೀರೆಗಳ ಜೊತೆಗೆ ಡಿಸೈನ್‌ ಬ್ಲೌಸ್‌ ಧರಿಸಿ. ಏಕೆಂದರೆ ಯಾವುದೇ ಸೀರೆಯ ಮೇಲೆ ಸೆಕ್ಸಿ ಬ್ಲೌಸ್‌ ನಿಮ್ಮ ಸೌಂದರ್ಯಕ್ಕೆ ಮೆರುಗು ನೀಡುತ್ತದೆ. ಪ್ಲೇನ್‌ ಶಿಫಾನ್‌ ಸೀರೆಯ ಜೊತೆಗೆ ಡಿಸೈನರ್‌ ಬ್ಲೌಸ್ ದೊಡ್ಡ ನೆಕ್‌ ಲೈನ್‌ ಮತ್ತು ಶಾರ್ಟ್‌ ಸ್ಲೀವ್ಸ್ ಇರುವಂಥದ್ದನ್ನು ಧರಿಸಿ. ಸಿಂಪಲ್ ಜಾರ್ಜೆಟ್‌ನ ಸೀರೆಯೊಂದಿಗೆ ಡಿಸೈನರ್‌ ಬ್ಲೌಸ್ ಧರಿಸಿದರೆ ನೀವು ಸಿಂಪ್ಲಿಸಿಟಿಯಲ್ಲೂ ಗ್ರೇಸ್‌ ಫುಲ್ ಆಗಿರಬಹುದು.

ತದ್ವಿರುದ್ಧ ಸೆರಗಿನ ಸೀರೆ

ಇದು ಸೀರೆ ಧರಿಸುವ ಪಾರಂಪರಿಕ ರೀತಿಯಾಗಿದೆ. ಇದು ಎಂದೂ ಫ್ಯಾಷನ್‌ನಿಂದ ಔಟ್‌ ಆಗಲ್ಲ. ಈ ಸ್ಟೈಲ್‌‌ನಲ್ಲಿ ನೆರಿಗೆಗಳನ್ನು ಮಾಡಿಕೊಂಡ ಬಳಿಕ ಸೆರಗನ್ನು ಭುಜದ ಮೇಲೆ ತಂದು ಅಲ್ಲಿ ಪಿನ್‌ ಅಪ್‌ ಮಾಡಲಾಗುತ್ತದೆ. ಇದರ ಹೊರತಾಗಿ ಮುಕ್ತ ಸೆರಗಿನ ಸೀರೆ ಡೀಪ್‌ ನೆಕ್‌ ಬ್ಲೌಸ್‌ ಜೊತೆಗೆ ಚೆನ್ನಾಗಿ ಒಪ್ಪುತ್ತವೆ. ಇದು ಸುಂದರ ಲುಕ್‌ ನೀಡುತ್ತದೆ.

ಬ್ಲೌಸ್‌ನ ಸ್ಟೈಲ್ ‌ಯಾವುದೇ ಸೀರೆಯನ್ನು ಗ್ರೇಸ್‌ ಫುಲ್ ಆಗಿಸಲು ಬ್ಲೌಸ್‌ ಮಹತ್ವದ ಪಾತ್ರ ವಹಿಸುತ್ತದೆ. ಅದು ಸಿಂಪಲ್ ಆಗಿರುವ ಸೀರೆಗೂ ಕೂಡ ಹಾಟ್‌ ಲುಕ್‌ ಕೊಡುತ್ತದೆ. ಬ್ಲೌಸ್‌ನ ಕಟ್‌ನ್ನು ಹೈಲೈಟ್‌ ಮಾಡಲು ಕೂದಲನ್ನು ಮೇಲೆ ಕಟ್ಟಿಕೊಳ್ಳಿ.

ಬಿಕಿನಿ ಬ್ಲೌಸ್‌, ಬ್ಯಾಕ್‌ ಲೆಸ್‌ ಬ್ಲೌಸ್‌, ಬೋಲಿ ಸ್ಟೈಲ್ ಬ್ಲೌಸ್‌ ಸೀರೆಗೆ ಸೆಕ್ಸಿ ಲುಕ್ಸ್ ನೀಡುತ್ತವೆ. ಅದೇ ಸೀರೆಯಲ್ಲಿ ಲೆಹಂಗಾ ಸೀರೆ, ಸ್ಟಿಚ್‌ ಸೀರೆ, ಕಾಕ್‌ ಟೇಲ್ ವ‌ರ್ಷನ್‌ ಮುಂತಾದವು ಇದ್ದು, ಅವನ್ನು ಧರಿಸಿ ವಧು ವಿಶಿಷ್ಟ ಲುಕ್ಸ್ ಪಡೆದುಕೊಳ್ಳುತ್ತಾಳೆ. ವೇಸ್ಟ್ ಶೇಪಿಂಗ್‌ಗಾಗಿ ಕೋರ್ಸೆಟ್‌ ಬ್ಲೌಸ್‌ ಧರಿಸಿ.

ಪಾರ್ಟಿ ಲುಕ್ಸ್ ಗಾಗಿ

ಪಾರ್ಟಿ ಲುಕ್ಸ್ ಗಾಗಿ ಥ್ರೀಡಿ ಲೆಹಂಗಾ ಸೀರೆ ಧರಿಸಿ. ಅವು 3 ಪ್ರತ್ಯೇಕ ವರ್ಣಗಳದ್ದಾಗಿರುತ್ತವೆ. ಅದನ್ನು ಲೆಹಂಗಾ ಹಾಗೂ ಸೀರೆ ಎರಡೂ ರೀತಿಯಲ್ಲಿ ಧರಿಸಬಹುದು. ಇದರ ಸೆರಗನ್ನು ಕೆಳಭಾಗದಲ್ಲಿನ ಸುತ್ತಳತೆಯೊಂದಿಗೆ ಜೋಡಿಸಿಕೊಂಡು ಧರಿಸಬಹುದು. ಜೊತೆಗೆ ಡಿಸೈನರ್‌ ಸೆಕ್ಸಿ ಬ್ಲೌಸ್‌ ಇದರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇದರ ಜೊತೆಗೆ ನೆಟ್‌ನ ದುಪಟ್ಟಾ ಇರುತ್ತದೆ. ಅದು ಪಾರಂಪರಿಕ ಆಗಿರುವುದರ ಜೊತೆ ಜೊತೆಗೆ ಆಧುನಿಕ ಎನ್ನುವುದನ್ನು ಬಿಂಬಿಸುತ್ತದೆ. ಇದರ ಹೊರತಾಗಿ ಡಿಸೈನರ್‌ಸೀರೆಯನ್ನು ಹಗುರ ಜ್ಯೂವೆಲರಿ ಮತ್ತು ಸಾಧಾರಣ ಮೇಕಪ್‌ನೊಂದಿಗೆ ಧರಿಸಿ. ನೆಟ್‌ನ ಸೀರೆಯ ಜೊತೆಗೆ ಜ್ಯೂಡಿಕ್ ‌ಲುಕ್‌ ಇರುವ ಜಾಕೆಟ್‌ ಧರಿಸಿ.

ಪ್ಲೇನ್‌ ಶಿಫಾನ್‌ ಸೀರೆಯೊಂದಿಗೆ ಚಂಕಿ ಬೀಡೆಡ್‌ ಜ್ಯೂವೆಲರಿ ಸ್ಟೈಲಿಶ್‌ ಲುಕ್‌ ನೀಡುತ್ತದೆ. ಅದೇ ವರ್ಕ್‌ ಮಾಡಲ್ಪಟ್ಟ ಸೀರೆಯೊಂದಿಗೆ ಆ್ಯಂಟಿಕ್‌ ಸ್ಟೋನ್‌ ಜ್ಯೂವೆಲರಿ ನಿಮಗೆ ಗ್ಲಾಮರಸ್‌ ಲುಕ್‌ ನೀಡುವುದರೊಂದಿಗೆ ಇತರರಿಗಿಂತ ನಿಮ್ಮನ್ನು ಭಿನ್ನ ಎಂಬಂತೆ ತೋರಿಸುತ್ತವೆ.

ಫುಟ್‌ವೇರ್‌

ಈ ಸೀರೆಗಳ ಜೊತೆಗೆ ಹೈಹೀಲ್ಡ್ ಸ್ಯಾಂಡಲ್ ಧರಿಸಿ. ಅದು ನಿಮಗೆ ಪರ್ಫೆಕ್ಟ್ ಲುಕ್‌ ನೀಡುತ್ತದೆ. ಅದರ ಜೊತೆ ಜೊತೆಗೆ ಪ್ಲ್ಯಾಟ್ ಫಾರ್ಮ್ ಹೀಲ್ ವಧುವಿಗೆ ಅತ್ಯುತ್ತಮ ಲುಕ್‌ ನೀಡುತ್ತದೆ.

ಯಾವ ಸೂಟ್‌ ಧರಿಸಬೇಕು?

shadi-ke-bad-dikhain-khas

ನವ ವಧು ಅನಾರ್ಕಲಿ ಸೂಟ್‌ ಧರಿಸಬಹುದು. ಇದು ಕೆಳಭಾಗದಲ್ಲಿ ಹೆಚ್ಚು ಅಥವಾ ಕಡಿಮೆ ವಿಸ್ತಾರ ಹೊಂದಿದ್ದಾಗಿರಬಹುದು ಇದು ಹೆವಿ ವರ್ಕ್‌ನದ್ದು ಅಥವಾ ಕಡಿಮೆ ವರ್ಕನದ್ದು.

ಹೀಗೆ ಎರಡೂ ರೀತಿಯಲ್ಲಿ ದೊರಕುತ್ತದೆ. ಇದರ ಹೊರತಾಗಿ ಪಟಿಯಾಲಾ ಸಲ್ವಾರ್‌ ಸೂಟ್‌, ಬೀಡ್‌ ಸೂಟ್‌, ಎಥ್ನಿಕ್‌ ಫ್ಯಾಬ್ರಿಕ್ ಇರುವ ಸೂಟ್‌ ಕೂಡ ಧರಿಸಬಹುದು. ಚಳಿಗಾಲದ ದಿನಗಳಲ್ಲಿ ಸಿಲ್ಕ್, ಸ್ಯಾಟಿನ್‌ ಹೆಣಿಗೆ ಕೆಲಸದ ಸಲ್ವಾರ್‌ ಕಮೀಜ್‌ ಬಹಳ ಚೆನ್ನಾಗಿ ಒಪ್ಪುತ್ತವೆ. ಇವೆಲ್ಲವನ್ನು ಬ್ರೈಟ್‌ ಕಲರಿನ ಸೂಟ್‌ನೊಂದಿಗೆ ಧರಿಸಿ. ನಿಮ್ಮ ಮೇಕಪ್‌ ಲೈಟ್‌ ಕಲರಿನದ್ದಾಗಿರಲಿ.

ಅನಾರ್ಕಲಿ ಸೂಟ್‌ನ್ನು ಹೈಹೀಲ್ಡ್ ಸ್ಯಾಂಡಲಿನ ಜೊತೆಗೆ ಧರಿಸಿ. ಪಟಿಯಾಲಾ ಸಲ್ವಾರ್‌ ಸೂಟ್‌ನ್ನು ಕೊಲ್ಹಾಪುರಿ ಚಪ್ಪಲಿಯ ಜೊತೆಗೆ ಧರಿಸಿ.

ಅರ್ನಾಕಲಿ ಸೂಟ್

ಇತ್ತೀಚಿನ ವರ್ಷಗಳಲ್ಲಿ ಅನಾರ್ಕಲಿ ಸೂಟ್‌ ಹೆಚ್ಚು ಫ್ಯಾಷನ್‌ನಲ್ಲಿದೆ. ಅದನ್ನು ಧರಿಸಿದಾಗ ವಧುವಿನ ವ್ಯಕ್ತಿತ್ವ ಸಾಕಷ್ಟು ಎದ್ದು ಕಾಣುತ್ತದೆ. ನೀವು ಇದನ್ನು ಟ್ರೆಡಿಶನಲ್ ಮತ್ತು ಟ್ರೆಂಡಿ ಮಿಕ್ಸ್ ಅಂಡ್‌ ಮ್ಯಾಚ್‌ ಮಾಡಿ ಕೂಡ ಧರಿಸಬಹುದು. ವಧು ಎತ್ತರ ಕಾಯದವಳಾಗಿದ್ದರೆ ಚಪ್ಪಲಿಗಳು ಸೂಕ್ತ ಎನಿಸುತ್ತವೆ. ಇಲ್ಲದಿದ್ದರೆ ಎತ್ತರದ ಹಿಮ್ಮಡಿಯ ಸ್ಯಾಂಡಲ್‌ಗಳನ್ನೇ ಧರಿಸಿ.

ನೀವು ಅನಾರ್ಕಲಿ ಸೂಟ್‌ ಜೊತೆ ದುಪಟ್ಟಾ ತೆಗೆದುಕೊಳ್ಳುತ್ತಿದ್ದಲ್ಲಿ, ಯಾವುದೇ ಪಾರ್ಟಿಗೆ ಹೋಗುವಾಗ ಅದನ್ನು ಕೊರಳಲ್ಲಿ ಹಾಕಿಕೊಳ್ಳುವ ಬದಲು ಹಿಂದಿನಿಂದ ಹಾಕಿಕೊಂಡು ಕೈಗಳಲ್ಲಿ ಹಿಡಿದುಕೊಳ್ಳಬಹುದು. ನಿಮ್ಮ ಕತ್ತು ಹೆಚ್ಚು ಉದ್ದವಾಗಿದ್ದರೆ, ದುಪಟ್ಟಾವನ್ನು ಮುಂಭಾಗದತ್ತ ತೆಗೆದುಕೊಳ್ಳಬಹುದು.

ಅನಾರ್ಕಲಿ ಸೂಟ್‌ ಜೊತೆಗೆ ಹೆಚ್ಚು ಆಭರಣಗಳನ್ನು ಧರಿಸುವುದು ಸೂಕ್ತವಲ್ಲ. ಈ ಸೂಟ್‌ ಜೊತೆಗೆ ಹಗುರ ನೆಕ್‌ ಪೀಸ್‌ ಧರಿಸಿ. ದೊಡ್ಡ ದೊಡ್ಡ ಝುಮುಕಿ ಅಥವಾ ವಿಂಟೇಜ್‌, ಡ್ಯಾಂಗಲ್ಸ್ ಇಯರ್‌ ರಿಂಗ್ಸ್ ಬಹಳ ಆಕರ್ಷಕವಾಗಿ ಗೋಚರಿಸುತ್ತವೆ. ಈ ಸೂಟ್ ನ್ನು ದುಪಟ್ಟಾ ಹೊರತಾಗಿಯೂ ಧರಿಸಬಹುದು. ನವ ವಧುವಿಗೆ ಬ್ರೊಕೆಟ್‌ ಕುರ್ತಿ ಲೆಗಿಂಗ್‌ನ ಜೊತೆಗೆ ಬಹಳ ಸುಂದರವಾಗಿ ಒಪ್ಪುತ್ತದೆ. ಬ್ರೈಟ್‌ ಕಲರಿನ ಎಂಬ್ರಾಯಿಡರಿಯ ಅನಾರ್ಕಲಿ ಸೂಟ್‌ನಲ್ಲಿ ಮೇಕಪ್‌ ಸಾಧಾರಣವಾಗಿಯೇ ಇರಲಿ. ಇವುಗಳ ಹೊರತಾಗಿ ಕಲರ್‌ಫುಲ್ ಕುರ್ತಿಗಳನ್ನು ಲೆಗಿಂಗ್ಸ್ ಜೊತೆಗೆ ಧರಿಸಿ. ಇವು ವಧುವಿಗೆ ಸ್ಮೂತ್‌ ಲುಕ್‌ ನೀಡುತ್ತವೆ.

ಟೆಲ್ ಹೆವೈವ್ ಡ್ರೆಸ್‌

ಇದು ಕೆಳಭಾಗದಲ್ಲಿ ಅಗಲ ಪರಿಧಿ ಹೊಂದಿದ್ದು, ಮುಂಭಾಗದಲ್ಲಿ ಕಿರಿದು ಹಾಗೂ ಹಿಂಭಾಗದಲ್ಲಿ ತುಸು ಉದ್ದವಾಗಿರುತ್ತದೆ. ವಧುವನ್ನು ಮತ್ತಷ್ಟು ಆಕರ್ಷಕಗೊಳಿಸುವ ಇದು ಟ್ರೆಡಿಶನಲ್ ಅಥವಾ ಫ್ಯೂಜನ್‌ ಔಟ್‌ಫಿಟ್‌ನಲ್ಲಿ ಗೋಚರಿಸುತ್ತದೆ.

ಫ್ಯಾಷನ್‌ ಡಿಸೈನರ್‌ ಮೀನಾಕ್ಷಿ ಅವರು ಹೇಳುವುದೇನೆಂದರೆ, `ಈಚೆಗೆ ವಧು ಟ್ರೆಡಿಶನಲ್ ಡ್ರೆಸ್‌ಗಳ ಹೊರತಾಗಿ ತನ್ನ ಜಾತಿ, ಧರ್ಮ, ರಾಜ್ಯಕ್ಕನುಗುಣವಾಗಿ ಮದುವೆಯ ಡ್ರೆಸ್‌ಗಳನ್ನು ಆಯ್ಕೆ ಮಾಡುತ್ತಾಳೆ. ಇದರಲ್ಲಿನ ಪಾರಂಪರಿಕ ಡ್ರೆಸ್‌ಗಳ ಹೊರತಾಗಿ ವೆಸ್ಟರ್ನ್‌ ಔಟ್‌ಫಿಟ್‌ಗಳು ಸಾಕಷ್ಟು ಪ್ರಕಾರಗಳಲ್ಲಿ ದೊರೆಯುತ್ತವೆ. ಅವು ವಧುವಿಗೆ ವಿಶಿಷ್ಟ ಲುಕ್ಸ್ ನೀಡುತ್ತವೆ.

ವೆಸ್ಟರ್ನ್‌ ಡ್ರೆಸೆಸ್‌ಗಳಲ್ಲಿ ಏನು ಧರಿಸಬೇಕು?

ರಫ್ಡ್ ಸ್ಕರ್ಟ್‌ನ್ನು ಪ್ಲೇನ್‌ ಶೋಲ್ಡರ್‌ ಬ್ಲೌಸ್‌ ಜೊತೆಗೆ ಮಿಕ್ಸ್ ಅಂಡ್‌ ಮ್ಯಾಚ್‌ ಮಾಡಿ ಧರಿಸಿ ಜೊತೆಗೆ ಆ್ಯಕ್ಸೆಸರೀಸ್‌ನಲ್ಲಿ ಸ್ಟೇಟ್‌ಮೆಂಟ್‌ ಇಯರ್‌ ರಿಂಗ್ಸ್ ಹಾಕಿಕೊಳ್ಳಿ.

ಪ್ಲೇರ್‌ ಪ್ರಿಂಟ್‌ ಹ್ಯಾರಮ್ ಪ್ಯಾಂಟ್‌ನ ಜೊತೆಗೆ ಟ್ಯೂಬ್‌ ಟಾಪ್‌ ಬಹಳ ಸ್ಮಾರ್ಟ್‌ ಆಗಿ ಕಾಣುತ್ತದೆ. ಉದ್ದನೆಯ ಚೇನ್‌, ಬೇಜ್‌ ಹೀಲ್ಸ್ ಮತ್ತು ಸನ್‌ ಗ್ಲಾಸ್‌ ಧರಿಸಿ.

ಕಾಲುಗಳನ್ನು ಸೆಕ್ಸಿಯಾಗಿ ಕಂಡು ಬರುವಂತೆ ಮಾಡಲು ಮಿನಿ ಸ್ಕರ್ಟ್‌ ಮತ್ತು ರಾಂಪ್‌ ರೌಂಡ್‌ ಸ್ಕರ್ಟ್‌ ಧರಿಸಿ.

ಜಂಪ್‌ ಸೂಟ್‌ ಜೊತೆಗೆ ಡಂಗರೀಸ್‌ ಧರಿಸಿ.

ರೇನ್‌ ಬೋ ಕಲರ್‌ನ ಮಿನಿ ಸ್ಕರ್ಟ್‌ನ್ನು ಲೈಟ್‌ ಟಾಪ್‌ನೊಂದಿಗೆ ಧರಿಸಿ.

ಹಗಲು ಹೊತ್ತು ಶಾರ್ಟ್‌ ಡ್ರೆಸ್‌ನ್ನು ಟೈಟ್ಸ್ ಅಥವಾ ಲೆಗಿಂಗ್ಸ್ ಜೊತೆಗೆ ಧರಿಸಿ.

ಹ್ಯಾರಮ್ ಪ್ಯಾಂಟ್‌ನ್ನು ಸ್ಟೈಲಿಶ್‌ ಆಗಿಸಲು ಟ್ಯೂಬ್‌ ಟಾಪ್‌ ಮತ್ತು ಕೋರ್ಸೆಟ್‌ನಿಂದ ಫ್ಯೂಷನ್‌ ಟಚ್‌ ಕೊಡಿ. ಶಾರ್ಟ್‌ ಮತ್ತು ಲಾಂಗ್‌ ಶ್ರಗ್‌ ಧರಿಸಿ ಯಾವುದೇ ವಧು ಸ್ಟೈಲಿಶ್‌ ಆಗಿ ಗೋಚರಿಸಬಲ್ಲಳು.

ವೆಸ್ಟರ್ನ್‌ ಔಟ್‌ಫಿಟ್‌ನ ಜೊತೆಗೆ ಬೂಟ್ಸ್ ಅವಶ್ಯವಾಗಿ ಧರಿಸಿ.

ಕ್ಯಾಪ್ರೀಜ್‌ ಥ್ರೀಪೋರ್ಥ್‌ ಪ್ಯಾಂಟ್‌ ಅಥವಾ ಶಾರ್ಟ್‌ ಪ್ಯಾಂಟ್‌ನ್ನೇ ಧರಿಸಿ.

ರೋಮ್ಯಾನ್ಸ್ ನ ಮೂಡ್‌ ಬರುವಂತಹ, ಬೋಲ್ಡ್ ಆಗಿರುವಂತಹ, ಪ್ರೆಶ್‌ನೆಸ್‌ ಅನಿಸುವಂತಹ, ಫನ್‌ ಆಗಿಸುವ ಕಲರ್‌ ಮತ್ತು ಪ್ರಿಂಟ್‌ಗಳನ್ನೇ ಆಯ್ದುಕೊಳ್ಳಿ. ಸ್ಮಾರ್ಟ್‌ ಲುಕ್ಸ್ ಗಾಗಿ ನೀಲೆಂಥ್‌ ಡ್ರೆಸ್‌ ಅಥವಾ ಶಾರ್ಟ್‌ ಸ್ಲೀವ್ಸ್ ಶರ್ಟ್‌ ಅಥವಾ ಜಾಕೆಟ್‌ ಧರಿಸಿ. ಅದು ನಿಮಗೆ ವಿಭಿನ್ನ ಲುಕ್‌ ನೀಡುತ್ತದೆ.

ಯಾವ ಜ್ಯೂವೆಲರಿ ಧರಿಸಬೇಕು?

shadi-ke-bad-dikhain-khas-2

ಒಂದು ವೇಳೆ ನೀವು ಕಲರ್‌ಫುಲ್ ಔಟ್‌ಫಿಟ್‌ ಧರಿಸುವವರಿದ್ದರೆ, ಮೆಟಲ್, ಗೋಲ್ಡ್ ಅಥವಾ ಸಿಲ್ವರ್‌ ಜ್ಯೂವೆಲರಿ ಧರಿಸಿ.

ಒಂದು ವೇಳೆ ಡ್ರೆಸ್‌ ಮೆಟಾಲಿಕ್‌ ಅಥವಾ ಬ್ಲ್ಯಾಕ್‌ ಆಗಿದ್ದರೆ ದೊಡ್ಡ ಗಾತ್ರದ ಜ್ಯೂವೆಲರಿಗಿಂತ ಸಿಂಪಲ್ ಸ್ಟೋನ್‌ ಜ್ಯೂವೆಲರಿ ಧರಿಸಿ.

ಬ್ಲ್ಯಾಕ್‌ ಕಲರ್‌ ಸೊಫಿಸ್ಟಿಕೇಶನ್‌ನ ಸಂಕೇತ. ಅದು ಸೆಕ್ಸಿ ಲುಕ್‌ ನೀಡುತ್ತದೆ. ಇಂತಹ ಡ್ರೆಸ್‌ ಜೊತೆಗೆ ಸ್ವರೋಸ್ಕಿ ಬ್ರೇಸ್‌ಲೆಟ್ ಧರಿಸಿ.

ವೆಸ್ಟರ್ನ್‌ ಔಟ್‌ಫಿಟ್‌ ಜೊತೆಗೆ ಕಲರ್‌ಪುಲ್ ವು‌ಡನ್‌ ಜ್ಯೂವೆಲರಿ ಧರಿಸಿ. ಫಂಕಿ ಬ್ಯಾಂಗಲ್ಸ್ ಫ್ಲರಿ ಡ್ರೆಸ್‌ ಜೊತೆಗೆ ಹಾಕಿಕೊಳ್ಳಿ.

ಮಲ್ಟಿಕಲರ್‌ನ ಲಾಂಗ್‌ ಬೀಡೆಡ್‌ ನೆಕ್‌ ಪೀಸ್‌ ಪ್ಲೇನ್‌ ಟಾಪ್‌ ಜೊತೆಗೆ ಧರಿಸಿ.

ಯಾವ ಟಾಪ್‌ ಧರಿಸಬೇಕು?

DSC_2045

ಟಾಪ್‌ನ್ನು ಡ್ರೆಸ್‌ಗನುಸಾರವಾಗಿ ಆಯ್ಕೆ ಮಾಡಿಕೊಳ್ಳಿ. ಸ್ಲೀವ್ ಲೆ‌ಸ್‌ ಶಾರ್ಟ್‌ ಟಾಪ್‌ ಮತ್ತು ಬಾಡಿ ಹ್ಯಾಂಗಿಂಗ್‌ ಕಾಟನ್‌ ಟಾಪ್ ಧರಿಸಿ. ಇದರ ಹೊರತಾಗಿ ಸ್ಲೀವ್ ಲೆ‌ಸ್‌ ಸ್ಟ್ರ್ಯಾಪಿ ಟಾಪ್‌ ಮತ್ತು ಪ್ಲೇರ್‌ ಪ್ರಿಂಟ್‌ ಧರಿಸಿ. ಇದರಲ್ಲಿ ನೀವು ಹಾಟ್‌ ಆಗಿ ಕಂಡುಬರುವಿರಿ.

ಬ್ರೈಟ್‌ ಕಲರ್‌ನ ಶಾರ್ಟ್ಸ್ ಜೊತೆಗೆ ನ್ಯೂಟ್ರಲ್ ಜಿಪ್ಸಿ ಟಾಪ್‌ ಧರಿಸಿ. ಶಾರ್ಟ್‌ ಬ್ಲ್ಯಾಕ್‌ ಡ್ರೆಸ್‌ ಜೊತೆಗೆ ಸ್ಟೇಟ್‌ಮೆಂಟ್‌ ಕಲರ್ಡ್‌ ಶೂಸ್‌ ಮತ್ತು ಪ್ಲೇರ್‌ ಲಾಂಗ್‌ ಇಯರ್‌ ರಿಂಗ್‌ ಧರಿಸಿ. ಫ್ಲವರಿ ಟಾಪ್‌ ಮತ್ತು ಲೆಗಿಂಗ್ಸ್ ನಿಮ್ಮ ವಾರ್ಡ್‌ ರೋಬ್‌ನಲ್ಲಿ ಅವಶ್ಯವಾಗಿ ಸೇರ್ಪಡೆ ಮಾಡಿಕೊಳ್ಳಿ.

ಇವುಗಳ ಹೊರತಾಗಿ ಮೋಟೊ ಪ್ಯಾಂಟ್‌, ಜ್ಯಾಗಿಂಗ್ಸ್ ಸೀಕ್ವೆನ್ಸ್ಡ್ ಲೆಗಿಂಗ್ಸ್, ಫ್ಲೇಯರ್ಡ್‌ ಪ್ಯಾಂಟ್‌ ಫ್ಯೂಷನ್‌ ಧೋತಿ, ಹ್ಯಾರಮ್ ಪ್ಯಾಂಟ್‌ ಅವಶ್ಯವಾಗಿ ಇಟ್ಟುಕೊಳ್ಳಿ. ಪ್ಲಾಜೊ ಪ್ಯಾಂಟ್‌ ಮತ್ತು ವೈಡ್‌ ಲೆಗ್‌ ಪ್ಯಾಂಟ್‌ ಜೊತೆಗೆ ಸ್ಮಾರ್ಟ್‌ ಟಾಪ್‌ ಅಥವಾ ಜಾಕೆಟ್ ಧರಿಸಿ. ಪ್ಲಾಜೊ ಪ್ಯಾಂಟ್‌ನ್ನು ಸೊಂಟದ ಮೇಲ್ಭಾಗ ಧರಿಸಿ ಅಥವಾ ಹೈ ವೇಸ್ಟ್ ಧರಿಸಿ. ಇದರಿಂದ ಕಾಲುಗಳು ಸುಂದರವಾಗಿ ಕಾಣುತ್ತವೆ.

ಟ್ಯೂಲಿಪ್‌ ಸ್ಕರ್ಟ್‌ನ್ನು ಪೋಲ್ಕಾ ಡಾಟ್‌ ಟಾಪ್‌ ಮತ್ತು ಸೀಟೆಡ್‌ ಸ್ಕಾರ್ಫ್‌ ಜೊತೆಗೆ ಧರಿಸಿ. ಟ್ಯೂಲಿಪ್‌ ಸ್ಕರ್ಟ್‌ ಜೊತೆಗೆ ಹೈ ಹೀಲ್ಡ್ ಧರಿಸಿ. ಟ್ಯೂನಿಕ್‌, ಕಾಪ್ತಾನ್‌ನ್ನು ಸ್ಟೈಲಿಶ್‌ ರೀತಿಯಲ್ಲಿಯೇ ಧರಿಸಿ. ಕಾಪ್ತಾನ್‌ ಜೀನ್ಸ್ ಅಥವಾ ಲೆಗಿಂಗ್ಸ್ ಜೊತೆಗೂ ಧರಿಸಬಹುದು. ಶಾರ್ಟ್‌ ಕಾಪ್ತಾನ್‌ನ್ನು ಜೀನ್ಸ್ ಜೊತೆಗೆ ಧರಿಸಿ.

ಸ್ಯಾಂಡಲ್ಸ್

ವೆಸ್ಟರ್ನ್‌ ಔಟ್‌ ಫಿಟ್‌ ಜೊತೆಗೆ ಕಲರ್‌ ಪುಲ್ ‌ಪ್ಲ್ಯಾಟ್‌ ಚಪ್ಪಲಿ ಧರಿಸಿ. ಟೀ ಸ್ಟ್ರಾಪ್‌ ಸ್ಯಾಂಡ್‌ ಅಥವಾ ಹಗುರ ಹೀಲ್‌ವು‌ಳ್ಳ ಸ್ಯಾಂಡಲ್ಸ್ ಧರಿಸಿ. ಕಲರ್‌ಫುಲ್ ಚಪ್ಪಲಿಯಲ್ಲಿ ಒಂದು ವಿಶಿಷ್ಟ ಲುಕ್‌ ಬರುತ್ತದೆ.

ನೈಟ್‌ ವೇರ್‌ ಡ್ರೆಸೆಸ್‌

ನೈಟ್‌ ವೇರ್‌ ಜೊತೆಗೆ ಪ್ಲೇರ್‌ ಪ್ರಿಂಟ್‌ ವಿತ್‌ ಟೂ ಪೀಸ್‌, ಫ್ಲವರ್‌ ನೆಟೆಡ್‌ ವಿತ್‌ ಸೈಡ್‌ ಕಟ್‌, ಪೋಲ್ಕಾ ಡಾಟ್‌ ವಿತ್‌ ಸ್ಟೈಲಿಶ್‌ ನೆಕ್‌ ಗೌನ್‌, ವಿದೌಟ್‌ ಸ್ಟ್ರಾಪ್‌ ರೇಜರ್‌ ಬ್ಯಾಕ್‌, ಬೌಂಡ್‌ ಸ್ಟ್ರೇಪ್‌ನ ಡ್ರೆಸೆಸ್‌ಗಳನ್ನು ಧರಿಸಿ. ಅ ವಧುವಿಗೆ ಮತ್ತಷ್ಟು ಹಾಟ್‌ ಆಗಿ ಕಾಣಿಸುತ್ತವೆ.

ಆಫೀಸಿನ ಮೊದಲ ದಿನದ ಡ್ರೆಸ್

ಫ್ಯಾಷನ್‌ ಡಿಸೈನರ್‌ ಮೀನಾಕ್ಷಿ ಹೇಳುವುದೇನೆಂದರೆ, ಮದುವೆಯ ಬಳಿಕ ಬಹಳಷ್ಟು ಯುವತಿಯರು ಆಫೀಸಿಗೆ ಸಾಕಷ್ಟು ಅಲಂಕರಿಸಿಕೊಂಡು ಬರುತ್ತಾರೆ. ಆಫೀಸಿನ ವಾತಾವರಣಕ್ಕೆ ಇದು ಸರಿಯಾದುದಲ್ಲ. ನಿಮ್ಮ ಮದುವೆಯಾಗಿದೆ ಎಂದಿಟ್ಟುಕೊಳ್ಳಿ, ನೀವು ಆಫೀಸಿಗೆ ಹೊಳೆಯುವ ಸೀರೆ ಹಾಗೂ ಆಭರಣ ಧರಿಸಿ ಬರಬೇಕೆಂದೇನಿಲ್ಲ.

ನೀವು ಆಫೀಸಿಗೆ ಬರುವ ಮೊದಲ ದಿನದಂದು ಶಿಫಾನ್‌ ಅಥವಾ ಜಾರ್ಜೆಟ್‌ನ ಹಗುರ ಎಂಬ್ರಾಯಿಡರಿ ಸೀರೆ ಧರಿಸಿ. ಅದರ ಜೊತೆಗೆ ಮೇಕಪ್‌ ಹೆವಿಯಾಗಿರದೆ, ಲೈಟ್‌ ಆಗಿರಲಿ. ಶಬ್ದ ಉಂಟು ಮಾಡದ ಆಭರಣಗಳನ್ನು ಧರಿಸಿ. ಒಂದೆರಡು ದಿನ ಸೀರೆ ಧರಿಸಿದ ಬಳಿಕ ನೀವು ಸೂಟ್‌ ಧರಿಸಬಹುದು. ಅದೂ ಕೂಡ ಹೆವಿ ಎಂಬ್ರಾಯಿಡರಿ ಹಾಗೂ ಪ್ರಖರ ವರ್ಣದ್ದಾಗಿರಬಾರದು. ನೀವು ಕಲರ್‌ ಫುಲ್ ‌ಕುರ್ತಾದ ಜೊತೆಗೆ ಜೀನ್ಸ್ ಧರಿಸಬಹುದು. ಇಂತಹ ಡ್ರೆಸ್‌ ಧರಿಸಿ ನೀವು ಆಫೀಸಿನಲ್ಲಿ ಸುಲಭವಾಗಿ ಕೆಲಸ ಮಾಡಬಹುದು.

– ಪ್ರಭಾ ಮಾಧವ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ