ಮದುವೆಯ ದಿನದಂದು ಸುಂದರವಾಗಿ ಕಾಣಲು ಹುಡುಗಿಯರು ಹಲವು ತಿಂಗಳ ಮುಂಚೆಯೇ ಸಿದ್ಧತೆ ಆರಂಭಿಸುತ್ತಾರೆ. ಅದಕ್ಕಾಗಿ ಬ್ರೈಡಲ್ ಡ್ರೆಸಸ್‌, ಬ್ರೈಡಲ್ ಜ್ಯೂವೆಲರಿ, ಫುಟ್‌ವೇರ್‌ ಮೇಕಪ್‌ ಮುಂತಾದವುಗಳ ಬಗ್ಗೆ ಹೆಚ್ಚು ಗಮನ ಕೊಡಲಾರಂಭಿಸುತ್ತಾರೆ. ಆದರೆ ಮದುವೆಯ ದಿನದಂದು ಮಾತ್ರ ಸುಂದರವಾಗಿ ಕಾಣುವುದು ಮುಖ್ಯವಲ್ಲ. ಮದುವೆಯ ಬಳಿಕ ನಿಮ್ಮ ಈ ಸೌಂದರ್ಯವನ್ನು ಮೇಕಪ್‌, ಡ್ರೆಸಸ್‌ ಹಾಗೂ ಜ್ಯೂವೆಲರಿಗಳ ಮುಖಾಂತರ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಬಹುದು.

ಮದುವೆಯ ಬಳಿಕ ಏನನ್ನು ಧರಿಸಬೇಕು?

ಈ ಕುರಿತಂತೆ ಫ್ಯಾಷನ್‌ ಡಿಸೈನರ್‌ ಜ್ಯೋತಿ ಹೀಗೆ ಹೇಳುತ್ತಾರೆ, ``ಮದುವೆಯ ಬಳಿಕ ನವ ವಧುವಿನ ಬಗ್ಗೆ ಎಲ್ಲರ ಗಮನ ಇದ್ದೇ ಇರುತ್ತದೆ. ಹೀಗಾಗಿ ಆಕೆ ವರ್ಣರಂಜಿತ ಬಟ್ಟೆಗಳನ್ನೇ ಆಯ್ದುಕೊಳ್ಳಬೇಕು. ಭಾರತೀಯ ಪರಂಪರೆಗನುಗುಣವಾಗಿ ನವ ವಧುವಿಗೆ ಪಾರಂಪರಿಕ ಡ್ರೆಸ್‌ಗಳೇ ಚಿನ್ನಾಗಿ ಒಪ್ಪುತ್ತವೆ. ಪಾರಂಪರಿಕ ಉಡುಗೆಗಳಲ್ಲಿ ಸೀರೆ ವಧುವಿನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುವಂತಹ ಪೋಷಾಕು ಆಗಿದೆ. ಆದರೆ ಇದು ಚಿಕ್ಕ ಕುಟುಂಬಗಳ ವಿಶ್ವ. ಅಂದರೆ ಗಂಡಹೆಂಡತಿ ಇಬ್ಬರೇ. ಇಲ್ಲಿ ನವ ವಧು ತನಗೆ ಬೇಕಾದಂತಹ ಉಡುಪುಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಸೀರೆಯನ್ನು ಕೂಡ ಫ್ಯಾಷನ್‌ಗನುಗುಣವಾಗಿ ಸ್ಟೈಲಿಶ್‌ ಆಗಿ ಧರಿಸಬಹುದು.

ಸ್ಟೈಲಿಶ್‌ ಸೀರೆ ಹೇಗೆ ಧರಿಸುವುದು?

ಟಿಶ್ಶೂ, ಸಿಲ್ಕ್, ಶಿಫಾನ್‌, ಕ್ರೇಪ್‌, ಜಾರ್ಜೆಟ್‌ನ ಟೆಕ್ಸ್ ಚರ್‌ ಸೀರೆಗಳ ಜೊತೆಗೆ ಡಿಸೈನ್‌ ಬ್ಲೌಸ್‌ ಧರಿಸಿ. ಏಕೆಂದರೆ ಯಾವುದೇ ಸೀರೆಯ ಮೇಲೆ ಸೆಕ್ಸಿ ಬ್ಲೌಸ್‌ ನಿಮ್ಮ ಸೌಂದರ್ಯಕ್ಕೆ ಮೆರುಗು ನೀಡುತ್ತದೆ. ಪ್ಲೇನ್‌ ಶಿಫಾನ್‌ ಸೀರೆಯ ಜೊತೆಗೆ ಡಿಸೈನರ್‌ ಬ್ಲೌಸ್ ದೊಡ್ಡ ನೆಕ್‌ ಲೈನ್‌ ಮತ್ತು ಶಾರ್ಟ್‌ ಸ್ಲೀವ್ಸ್ ಇರುವಂಥದ್ದನ್ನು ಧರಿಸಿ. ಸಿಂಪಲ್ ಜಾರ್ಜೆಟ್‌ನ ಸೀರೆಯೊಂದಿಗೆ ಡಿಸೈನರ್‌ ಬ್ಲೌಸ್ ಧರಿಸಿದರೆ ನೀವು ಸಿಂಪ್ಲಿಸಿಟಿಯಲ್ಲೂ ಗ್ರೇಸ್‌ ಫುಲ್ ಆಗಿರಬಹುದು.

ತದ್ವಿರುದ್ಧ ಸೆರಗಿನ ಸೀರೆ

ಇದು ಸೀರೆ ಧರಿಸುವ ಪಾರಂಪರಿಕ ರೀತಿಯಾಗಿದೆ. ಇದು ಎಂದೂ ಫ್ಯಾಷನ್‌ನಿಂದ ಔಟ್‌ ಆಗಲ್ಲ. ಈ ಸ್ಟೈಲ್‌‌ನಲ್ಲಿ ನೆರಿಗೆಗಳನ್ನು ಮಾಡಿಕೊಂಡ ಬಳಿಕ ಸೆರಗನ್ನು ಭುಜದ ಮೇಲೆ ತಂದು ಅಲ್ಲಿ ಪಿನ್‌ ಅಪ್‌ ಮಾಡಲಾಗುತ್ತದೆ. ಇದರ ಹೊರತಾಗಿ ಮುಕ್ತ ಸೆರಗಿನ ಸೀರೆ ಡೀಪ್‌ ನೆಕ್‌ ಬ್ಲೌಸ್‌ ಜೊತೆಗೆ ಚೆನ್ನಾಗಿ ಒಪ್ಪುತ್ತವೆ. ಇದು ಸುಂದರ ಲುಕ್‌ ನೀಡುತ್ತದೆ.

ಬ್ಲೌಸ್‌ನ ಸ್ಟೈಲ್ ‌ಯಾವುದೇ ಸೀರೆಯನ್ನು ಗ್ರೇಸ್‌ ಫುಲ್ ಆಗಿಸಲು ಬ್ಲೌಸ್‌ ಮಹತ್ವದ ಪಾತ್ರ ವಹಿಸುತ್ತದೆ. ಅದು ಸಿಂಪಲ್ ಆಗಿರುವ ಸೀರೆಗೂ ಕೂಡ ಹಾಟ್‌ ಲುಕ್‌ ಕೊಡುತ್ತದೆ. ಬ್ಲೌಸ್‌ನ ಕಟ್‌ನ್ನು ಹೈಲೈಟ್‌ ಮಾಡಲು ಕೂದಲನ್ನು ಮೇಲೆ ಕಟ್ಟಿಕೊಳ್ಳಿ.

ಬಿಕಿನಿ ಬ್ಲೌಸ್‌, ಬ್ಯಾಕ್‌ ಲೆಸ್‌ ಬ್ಲೌಸ್‌, ಬೋಲಿ ಸ್ಟೈಲ್ ಬ್ಲೌಸ್‌ ಸೀರೆಗೆ ಸೆಕ್ಸಿ ಲುಕ್ಸ್ ನೀಡುತ್ತವೆ. ಅದೇ ಸೀರೆಯಲ್ಲಿ ಲೆಹಂಗಾ ಸೀರೆ, ಸ್ಟಿಚ್‌ ಸೀರೆ, ಕಾಕ್‌ ಟೇಲ್ ವ‌ರ್ಷನ್‌ ಮುಂತಾದವು ಇದ್ದು, ಅವನ್ನು ಧರಿಸಿ ವಧು ವಿಶಿಷ್ಟ ಲುಕ್ಸ್ ಪಡೆದುಕೊಳ್ಳುತ್ತಾಳೆ. ವೇಸ್ಟ್ ಶೇಪಿಂಗ್‌ಗಾಗಿ ಕೋರ್ಸೆಟ್‌ ಬ್ಲೌಸ್‌ ಧರಿಸಿ.

ಪಾರ್ಟಿ ಲುಕ್ಸ್ ಗಾಗಿ

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ