ಬಾಡಿ ಲ್ಯಾಂಗ್ವೇಜ್
ಯಾವುದೇ ಹುಡುಗಿ ಅವಶ್ಯವಾಗಿ ಗಮನಿಸುವ ಸಂಗತಿಯೆಂದರೆ, ಹುಡುಗರ ನಿಲ್ಲುವ ಭಂಗಿ ಹೇಗಿದೆ? ಹೇಗೆ ಕುಳಿತುಕೊಳ್ಳುತ್ತಾರೆ, ಇನ್ನೊಬ್ಬರ ಜೊತೆ ಮಾತನಾಡುವಾಗ ನಿಮ್ಮ ಧ್ವನಿಯ ಏರಿಳಿತ ಹೇಗಿದೆ? ನಿಮ್ಮ ನಡಿಗೆ ಹೇಗೆ? ಭುಜ ಎತ್ತಿ ಆತ್ಮವಿಶ್ವಾಸದಿಂದ ನಡೆಯುತ್ತೀರೊ ಇಲ್ಲವೋ, ಬೇರೆಯವರೊಂದಿಗೆ ನಿಮ್ಮ ವರ್ತನೆ ಹೇಗೆ ಎಂಬುದೆಲ್ಲ ನೋಡುತ್ತಾರೆ. ಹುಡುಗಿಯನ್ನು ಭೇಟಿಯಾಗಲು ಹೋಗುತ್ತಿದ್ದರೆ ನಿಮ್ಮ ಬಾಡಿ ಲ್ಯಾಂಗ್ವೇಜ್ ಬಗ್ಗೆ ಗಮನ ಕೊಡಿ. ದೇಹದಿಂದ ದುರ್ಗಂಧ ಬರುತ್ತಿದ್ದರೆ ಹುಡುಗಿ ನಿಮ್ಮನ್ನು ಇಷ್ಟಪಡುವುದಿಲ್ಲ ಎನ್ನುವುದು ನಿಮ್ಮ ಗಮನದಲ್ಲಿರಲಿ.
ಉದ್ದನೆಯ ಕಾಲು
ಯೂನಿರ್ಸಿಟಿ ಆಫ್ ಕೇಂಬ್ರಿಜ್‌ನಲ್ಲಿ ನಡೆದ ಒಂದು ಅಧ್ಯಯನದ ಪ್ರಕಾರ, ಮಹಿಳೆಯರು ಹಾಗೂ ಹುಡುಗಿಯರಿಗೆ ಉದ್ದನೆಯ ಕಾಲಿನ ಪುರುಷರು ಇಷ್ಟವಾಗುತ್ತಾರೆ. ಈ ಆನ್ ಲೈನ್ ಸಮೀಕ್ಷೆಯಲ್ಲಿ ಕಂಡು ಬಂದ ಸಂಗತಿಯೆಂದರೆ, ಅಮೆರಿಕದ 800 ಮಹಿಳೆಯರು ಎಂತಹ ಪುರುಷರಿಗೆ ಮಹತ್ವ ಕೊಟ್ಟರೆಂದರೆ, ಅವರು ಸಾಮಾನ್ಯಕ್ಕಿಂತ ತುಸು ಉದ್ದ ಕಾಲು ಹೊಂದಿದ್ದರು.
ಸ್ವಚ್ಛತೆ ಹಾಗೂ ವ್ಯವಸ್ಥಿತ ಜೀವನಶೈಲಿ
ಹುಡುಗಿಯರ ದೃಷ್ಟಿಯಲ್ಲಿ ಸೈ ಎನ್ನಿಸಿಕೊಳ್ಳಲು ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಗಮನಕೊಡುವುದು ಅಗತ್ಯ. ಅವರ ಗಮನ ಎಲ್ಲಕ್ಕೂ ಮೊದಲು ತಲೆಗೂದಲು ಹಾಗೂ ಗಡ್ಡದ ಮೇಲೆ ಹೋಗುತ್ತದೆ. ಎರ್ರಾಬಿರ್ರಿಯಾಗಿ ಹರಡಿಕೊಂಡು, ಕೊಳೆಯಿಂದ ಕೂಡಿದ ಕೂದಲು ಅವರಿಗೆ ಇಷ್ಟವಾಗುವುದಿಲ್ಲ. ದಿನ ಶೇವ್ ಮಾಡಿಕೊಳ್ಳದೆ ಸರಿಯಾದ ಹೇರ್ ಸ್ಟೈಲ್ ಮೇಂಟೇನ್ ಮಾಡದ ಹುಡುಗರ ಬಗ್ಗೆ ಆಕರ್ಷಣೆ ಕಡಿಮೆ. ನೀವು ಮೊದಲ ಬಾರಿಗೆ ಹುಡುಗಿಯನ್ನು ಭೇಟಿಯಾಗಲು ಹೋಗುತ್ತಿದ್ದರೆ, ನಿಮ್ಮ ಉಗುರುಗಳ ಬಗ್ಗೆ ಗಮನಕೊಡಿ. ಏಕೆಂದರೆ ಹುಡುಗಿಯರಿಗೆ ಕೊಳಕಾದ ಉಗುರುಗಳು ಇಷ್ಟ ಆಗುವುದಿಲ್ಲ. ನೀವು ಧರಿಸಿರುವ ಬಟ್ಟೆ, ಅದು ಐರನ್ ಆಗಿದೆಯೋ ಇಲ್ಲವೋ ಎನ್ನುವುದನ್ನು ಅವರು ಗಮನಿಸುತ್ತಾರೆ.
ರಿಯಲ್ ಪರ್ಸನಾಲಿಟಿ
ಕೆಲವು ಹುಡುಗರ ಹವ್ಯಾಸ ಹೇಗಿರುತ್ತದೆಂದರೆ, ಅವರು ತಮ್ಮ ಪ್ರಭಾವ ಹೆಚ್ಚಿಸಿಕೊಳ್ಳಲು ಹುಡುಗಿಯರ ಮುಂದೆ ಬಡಾಯಿ ಕೊಚ್ಚಿಕೊಳ್ಳುತ್ತಾರೆ. ತಮ್ಮ ಜ್ಞಾನ, ಆದಾಯ ಹಾಗೂ ಲುಕ್ಸ್ ಗೆ ಸಂಬಂಧಪಟ್ಟಂತೆ ಬಹಳಷ್ಟು ಉತ್ಪ್ರೇಕ್ಷೆಯ ವಿಷಯಗಳನ್ನು ಹೇಳುತ್ತಾರೆ. ಏಕೆಂದರೆ ಹುಡುಗಿಯರು ತಮಗೆ ಒಲಿಯಬೇಕು ಎನ್ನುವುದು ಅವರ ಅಪೇಕ್ಷೆಯಾಗಿರುತ್ತದೆ. ಆದರೆ ಆಗುವುದು ತದ್ವಿರುದ್ಧ. ಖೊಟ್ಟಿ ಸ್ವಭಾವದ ಹುಡುಗರು ಅವರಿಗೆ ಇಷ್ಟವಾಗುವುದಿಲ್ಲ. ಸದಾ ವಾಸ್ತವ ಮನೋಭಾವದ ಹುಡುಗರು ಅವರಿಗೆ ಇಷ್ಟವಾಗುತ್ತಾರೆ.
ಪ್ಲೇನ್ ಹೊಟ್ಟೆ ಫಿಟ್ ದೇಹ
ಸೈಂಟಿಫಿಕ್ ಜನರಲ್ ಸೆಕ್ಸಿಯಾಲಜಿಯಲ್ಲಿ ಪ್ರಕಟವಾದ ಒಂದು ಅಧ್ಯಯನದ ಪ್ರಕಾರ, ಹುಡುಗಿಯರು ಹುಡುಗರ ಬೈಸೆಪ್ಸ್ ಗಿಂತ ಮೊದಲು ಅವರ ಹೊಟ್ಟೆಯ ಮೇಲೆ ಗಮನ ಹರಿಸುತ್ತಾರೆ. ನಿಮ್ಮ ಹೊಟ್ಟೆ ಮುಂದೆ ಬಂದಿರದಿದ್ದರೆ, ನೀವು ಫಿಟ್ ಮತ್ತು ಸ್ಮಾರ್ಟ್ ಆಗಿದ್ದರೆ ನಿಮ್ಮೊಂದಿಗೆ ನಿಕಟರಾಗಲು ಇಷ್ಟಪಡುತ್ತಾರೆ. ದೊಡ್ಡ ಹೊಟ್ಟೆ ನಿಮ್ಮ ಆಲಸ್ಯ ಸ್ವಭಾವ ಹಾಗೂ ಸಡಿಲ ಧೋರಣೆ, ಅಧಿಕ ಸೇವನೆಯ ಅಭ್ಯಾಸವನ್ನು ಪರಿಚಯಿಸುತ್ತದೆ. ಹೀಗಾಗಿ ನೀವು ಯಾರನ್ನಾದರೂ ಪಡೆಯಲು ಇಚ್ಛಿಸುತ್ತಿದ್ದರೆ, ಎಲ್ಲಕ್ಕೂ ಮೊದಲು ನಿಮ್ಮ ಹೊಟ್ಟೆಯ ಬಗ್ಗೆ ಗಮನಹರಿಸಿ.
ಹಿಂದೆ ಬೀಳುವವನಾಗಿರಬಾರದು
ಸದಾ ತಮ್ಮ ಹಿಂದೆಯೇ ಬೀಳುವ ಹುಡುಗರು ಹುಡುಗಿಯರಿಗೆ ಇಷ್ಟ ಆಗುವುದಿಲ್ಲ. ಒಂದಿಷ್ಟು ರಿಸರ್ವ್ ಹಾಗೂ ದೃಢ ನಿರ್ಧಾರದ ಹುಡುಗರು ಅವರಿಗೆ ಹಿಡಿಸುತ್ತಾರೆ. ಯಾವ ಹುಡುಗರು ಮೇಲಿಂದ ಮೇಲೆ ಸಂಪರ್ಕಿಸಲು ಪ್ರಯತ್ನಿಸುತ್ತಾರೊ, ಗಮನ ಸೆಳೆಯಲು ನೋಡುತ್ತಾರೊ, ಅವರು ಹುಡುಗಿಯರನ್ನು ಬಹಳ ಹಗುರವಾಗಿ ಕಾಣುತ್ತಾರೆ. ಇಂತಹ ಸ್ಥಿತಿಯಲ್ಲಿ ನೀವು ಧೈರ್ಯ ಕಾಪಾಡಬೇಕು, ಇಲ್ಲದಿದ್ದರೆ ಪರಿಸ್ಥಿತಿ ನಿಮ್ಮ ಕೈ ಮೀರಬಹುದು ಒತ್ತಡದ ಸ್ಥಿತಿ ಉಂಟಾಗಬಹುದು.
ಗೌರವದ ಅಪೇಕ್ಷೆ
ಪ್ರತಿಯೊಬ್ಬ ಹುಡುಗಿ ತನ್ನ ಪ್ರೇಮಿ ಅಥವಾ ತನ್ನ ಮದುವೆಯಾಗುವ ವ್ಯಕ್ತಿ ತನ್ನನ್ನು ಗಮನಿಸಬೇಕು, ಗೌರವಿಸಬೇಕು, ತನ್ನ ಮನೆಯವರ ಬಗೆಗೂ ಪ್ರೀತಿಯಿದ ವರ್ತಿಸಬೇಕೆಂದು ಬಯಸುತ್ತಾಳೆ. ನಿಮ್ಮ ಕಣ್ಣಲ್ಲಿ ಕಣ್ಣಿಟ್ಟು ನೋಡಿದಾಗ ಅದರಲ್ಲಿ ಗೌರವದ ಬಿಂಬ ಕಾಣಲು ಇಷ್ಟಪಡುತ್ತಾಳೆ. ಅದರಿಂದ ಆಕೆಗೆ ಒಂದಿಷ್ಟು ನೆಮ್ಮದಿಯ ಅನುಭವವಾಗುತ್ತದೆ. ಇದೇ ನಿಮ್ಮನ್ನು ಅವಳ ದೃಷ್ಟಿಯಲ್ಲಿ ವಿಶೇಷವಾಗಿಸುತ್ತದೆ.
ಮೆಚ್ಯುರಿಟಿ ಹುಡುಗಿಯರು
ಸದಾ ತಿಳಿವಳಿಕೆಯುಳ್ಳ ಪರಿಪಕ್ವ ವರ್ತನೆಯ ಹುಡುಗರನ್ನೇ ಇಷ್ಟಪಡುತ್ತಾರೆ. ಚೈಲ್ಡಿಶ್, ಬಾಲಿಶ ವರ್ತನೆಯ ಹುಡುಗರಿಂದ ದೂರ ಇರಲು ನೋಡುತ್ತಾರೆ. ಹೀಗಾಗಿ ನಿಮ್ಮ ವರ್ತನೆಯ ಮೇಲೆ ಗಮನವಿರಲಿ. ಅತಿಯಾಗಿ ಮಾತನಾಡುವವರು ಕೂಡ ಆಕೆಗೆ ಇಷ್ಟವಾಗುವುದಿಲ್ಲ. ಸದಾ ಆತುರದಲ್ಲಿರುವವರು ಕೂಡ ಆಕೆಗೆ ಹಿಡಿಸುವುದಿಲ್ಲ. ಯೋಚನೆ, ವಿಚಾರ, ವಿಮರ್ಶೆ ಮಾಡದೆ ನಿರ್ಧಾರ ಕೈಗೊಳ್ಳುವವರು ಕೂಡ ಮನಸ್ಸಿಗೆ ಇಷ್ಟ ಆಗುವುದಿಲ್ಲ. ಚಿಕ್ಕಪುಟ್ಟ ವಿಷಯಗಳಿಗೆ ಸ್ಥಿಮಿತ ಕಳೆದುಕೊಳ್ಳುವ ಹುಡುಗರು ಅವರಿಗೆ ಬೇಕಿರುವುದಿಲ್ಲ. ಏಕೆಂದರೆ ಅಂಥವರ ಜೊತೆ ದೀರ್ಘಾವಧಿ ಸಂಬಂಧ ಮುಂದುವರಿಸಿಕೊಂಡು ಹೋಗಲು ಆಗುವುದಿಲ್ಲ ಎಂಬುದು ಅವರಿಗೆ ತಿಳಿದಿರುತ್ತದೆ.
ಸೆನ್ಸ್ ಆಫ್ ಹ್ಯೂಮರ್
ಹುಡುಗಿಯರಿಗೆ ಹಾಸ್ಯ ಪ್ರಜ್ಞೆ ಇರುವ ಹುಡುಗರು ಇಷ್ಟವಾಗುತ್ತಾರೆ. ನೀವು ಬೇಸರ ತರಿಸುವ ವ್ಯಕ್ತಿಯಾಗಿದ್ದರೆ, ಹುಡುಗಿಯರು ನಿಮ್ಮಿಂದ ದೂರವೇ ಇರುತ್ತಾರೆ. ಗಂಭೀರ ವಾತಾವರಣವನ್ನು ನಗೆಗಡಲಲ್ಲಿ ತೇಲಿಸುವ ಸಾಮರ್ಥ್ಯ ನಿಮ್ಮಲ್ಲಿದ್ದರೆ, ನೀವು ಹುಡುಗಿಯರ ಮನಸ್ಸಲ್ಲಿ ಉಳಿಯಲು ಸಾಧ್ಯ.
ಸ್ನೇಹದ ವರ್ತನೆ
ಗರ್ವಿಷ್ಟ, ಕೋಪಿಷ್ಟ ಸ್ವಭಾವದ ಹುಡುಗರು ಹುಡುಗಿಯರ ಫೇವರಿಟ್ ಲಿಸ್ಟ್ ನಲ್ಲಿ ಸೇರಿಕೊಳ್ಳುವುದಿಲ್ಲ. ತಮ್ಮೊಂದಿಗೆ ಸ್ನೇಹದ ವರ್ತನೆ ತೋರುವ ಹುಡುಗರು ಅವರಿಗೆ ಹಿಡಿಸುತ್ತಾರೆ. ಸಂಕೋಚ ಸ್ವಭಾವದ, ಅತ್ಯಂತ ಕಡಿಮೆ ಮಾತನಾಡುವ ಹುಡುಗರಿಂದಲೂ ಅವರು ದೂರ ಇರುತ್ತಾರೆ. ಸರಾಕಾತ್ಮಕ ಯೋಚನೆ ಹಾಗೂ ಒಳ್ಳೆಯ ಹಾಸ್ಯಪ್ರಜ್ಞೆ ಇರುವ ಹುಡುಗರು ಅವರಿಗೆ ಮೊದಲು ಇಷ್ಟವಾಗುತ್ತಾರೆ. ಒತ್ತಡಮಯ ವಾತಾವರಣವನ್ನು ಖುಷಿಯಿಂದ ಕೂಡಿದ ವಾತಾವರಣವಾಗಿಸುವ ಹವ್ಯಾಸವುಳ್ಳ ಹುಡುಗರು ಅವರಿಗೆ ಹಿಡಿಸುತ್ತಾರೆ.
– ಹರಿಣಿ