ಬಾಡಿ ಲ್ಯಾಂಗ್ವೇಜ್

ಯಾವುದೇ ಹುಡುಗಿ ಅವಶ್ಯವಾಗಿ ಗಮನಿಸುವ ಸಂಗತಿಯೆಂದರೆ, ಹುಡುಗರ ನಿಲ್ಲುವ ಭಂಗಿ ಹೇಗಿದೆ? ಹೇಗೆ ಕುಳಿತುಕೊಳ್ಳುತ್ತಾರೆ, ಇನ್ನೊಬ್ಬರ ಜೊತೆ ಮಾತನಾಡುವಾಗ ನಿಮ್ಮ ಧ್ವನಿಯ ಏರಿಳಿತ ಹೇಗಿದೆ? ನಿಮ್ಮ ನಡಿಗೆ ಹೇಗೆ? ಭುಜ ಎತ್ತಿ ಆತ್ಮವಿಶ್ವಾಸದಿಂದ ನಡೆಯುತ್ತೀರೊ ಇಲ್ಲವೋ, ಬೇರೆಯವರೊಂದಿಗೆ ನಿಮ್ಮ ವರ್ತನೆ ಹೇಗೆ ಎಂಬುದೆಲ್ಲ ನೋಡುತ್ತಾರೆ. ಹುಡುಗಿಯನ್ನು ಭೇಟಿಯಾಗಲು ಹೋಗುತ್ತಿದ್ದರೆ ನಿಮ್ಮ ಬಾಡಿ ಲ್ಯಾಂಗ್ವೇಜ್‌ ಬಗ್ಗೆ ಗಮನ ಕೊಡಿ. ದೇಹದಿಂದ ದುರ್ಗಂಧ ಬರುತ್ತಿದ್ದರೆ ಹುಡುಗಿ ನಿಮ್ಮನ್ನು ಇಷ್ಟಪಡುವುದಿಲ್ಲ ಎನ್ನುವುದು ನಿಮ್ಮ ಗಮನದಲ್ಲಿರಲಿ.

‌ಉದ್ದನೆಯ ಕಾಲು

ಯೂನಿರ್ಸಿಟಿ ಆಫ್‌ ಕೇಂಬ್ರಿಜ್‌ನಲ್ಲಿ ನಡೆದ ಒಂದು ಅಧ್ಯಯನದ ಪ್ರಕಾರ, ಮಹಿಳೆಯರು ಹಾಗೂ ಹುಡುಗಿಯರಿಗೆ ಉದ್ದನೆಯ ಕಾಲಿನ ಪುರುಷರು ಇಷ್ಟವಾಗುತ್ತಾರೆ. ಈ ಆನ್‌ ಲೈನ್‌ ಸಮೀಕ್ಷೆಯಲ್ಲಿ ಕಂಡು ಬಂದ ಸಂಗತಿಯೆಂದರೆ, ಅಮೆರಿಕದ 800 ಮಹಿಳೆಯರು ಎಂತಹ ಪುರುಷರಿಗೆ ಮಹತ್ವ ಕೊಟ್ಟರೆಂದರೆ, ಅವರು ಸಾಮಾನ್ಯಕ್ಕಿಂತ ತುಸು ಉದ್ದ ಕಾಲು ಹೊಂದಿದ್ದರು.

ಸ್ವಚ್ಛತೆ ಹಾಗೂ ವ್ಯವಸ್ಥಿತ ಜೀವನಶೈಲಿ

ಹುಡುಗಿಯರ ದೃಷ್ಟಿಯಲ್ಲಿ ಸೈ ಎನ್ನಿಸಿಕೊಳ್ಳಲು ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಗಮನಕೊಡುವುದು ಅಗತ್ಯ. ಅವರ ಗಮನ ಎಲ್ಲಕ್ಕೂ ಮೊದಲು ತಲೆಗೂದಲು ಹಾಗೂ ಗಡ್ಡದ ಮೇಲೆ ಹೋಗುತ್ತದೆ. ಎರ್ರಾಬಿರ್ರಿಯಾಗಿ ಹರಡಿಕೊಂಡು, ಕೊಳೆಯಿಂದ ಕೂಡಿದ ಕೂದಲು ಅವರಿಗೆ ಇಷ್ಟವಾಗುವುದಿಲ್ಲ. ದಿನ ಶೇವ್ ‌ಮಾಡಿಕೊಳ್ಳದೆ ಸರಿಯಾದ ಹೇರ್‌ ಸ್ಟೈಲ್ ಮೇಂಟೇನ್‌ ಮಾಡದ ಹುಡುಗರ ಬಗ್ಗೆ ಆಕರ್ಷಣೆ ಕಡಿಮೆ. ನೀವು ಮೊದಲ ಬಾರಿಗೆ ಹುಡುಗಿಯನ್ನು ಭೇಟಿಯಾಗಲು ಹೋಗುತ್ತಿದ್ದರೆ, ನಿಮ್ಮ ಉಗುರುಗಳ ಬಗ್ಗೆ ಗಮನಕೊಡಿ. ಏಕೆಂದರೆ ಹುಡುಗಿಯರಿಗೆ ಕೊಳಕಾದ ಉಗುರುಗಳು ಇಷ್ಟ ಆಗುವುದಿಲ್ಲ. ನೀವು ಧರಿಸಿರುವ ಬಟ್ಟೆ, ಅದು ಐರನ್ ಆಗಿದೆಯೋ ಇಲ್ಲವೋ ಎನ್ನುವುದನ್ನು ಅವರು ಗಮನಿಸುತ್ತಾರೆ.

ರಿಯಲ್ ಪರ್ಸನಾಲಿಟಿ

ಕೆಲವು ಹುಡುಗರ ಹವ್ಯಾಸ ಹೇಗಿರುತ್ತದೆಂದರೆ, ಅವರು ತಮ್ಮ ಪ್ರಭಾವ ಹೆಚ್ಚಿಸಿಕೊಳ್ಳಲು ಹುಡುಗಿಯರ ಮುಂದೆ ಬಡಾಯಿ ಕೊಚ್ಚಿಕೊಳ್ಳುತ್ತಾರೆ. ತಮ್ಮ ಜ್ಞಾನ, ಆದಾಯ ಹಾಗೂ ಲುಕ್ಸ್ ಗೆ ಸಂಬಂಧಪಟ್ಟಂತೆ ಬಹಳಷ್ಟು ಉತ್ಪ್ರೇಕ್ಷೆಯ ವಿಷಯಗಳನ್ನು ಹೇಳುತ್ತಾರೆ. ಏಕೆಂದರೆ ಹುಡುಗಿಯರು ತಮಗೆ ಒಲಿಯಬೇಕು ಎನ್ನುವುದು ಅವರ ಅಪೇಕ್ಷೆಯಾಗಿರುತ್ತದೆ. ಆದರೆ ಆಗುವುದು ತದ್ವಿರುದ್ಧ. ಖೊಟ್ಟಿ ಸ್ವಭಾವದ ಹುಡುಗರು ಅವರಿಗೆ ಇಷ್ಟವಾಗುವುದಿಲ್ಲ. ಸದಾ ವಾಸ್ತವ ಮನೋಭಾವದ ಹುಡುಗರು ಅವರಿಗೆ ಇಷ್ಟವಾಗುತ್ತಾರೆ.

‌ಪ್ಲೇನ್‌ ಹೊಟ್ಟೆ ಫಿಟ್‌ ದೇಹ

ಸೈಂಟಿಫಿಕ್‌ ಜನರಲ್ ಸೆಕ್ಸಿಯಾಲಜಿಯಲ್ಲಿ ಪ್ರಕಟವಾದ ಒಂದು ಅಧ್ಯಯನದ ಪ್ರಕಾರ, ಹುಡುಗಿಯರು ಹುಡುಗರ ಬೈಸೆಪ್ಸ್ ಗಿಂತ ಮೊದಲು ಅವರ ಹೊಟ್ಟೆಯ ಮೇಲೆ ಗಮನ ಹರಿಸುತ್ತಾರೆ. ನಿಮ್ಮ ಹೊಟ್ಟೆ ಮುಂದೆ ಬಂದಿರದಿದ್ದರೆ, ನೀವು ಫಿಟ್‌ ಮತ್ತು ಸ್ಮಾರ್ಟ್ ಆಗಿದ್ದರೆ ನಿಮ್ಮೊಂದಿಗೆ ನಿಕಟರಾಗಲು ಇಷ್ಟಪಡುತ್ತಾರೆ. ದೊಡ್ಡ ಹೊಟ್ಟೆ ನಿಮ್ಮ ಆಲಸ್ಯ ಸ್ವಭಾವ ಹಾಗೂ ಸಡಿಲ ಧೋರಣೆ, ಅಧಿಕ ಸೇವನೆಯ ಅಭ್ಯಾಸವನ್ನು ಪರಿಚಯಿಸುತ್ತದೆ. ಹೀಗಾಗಿ ನೀವು ಯಾರನ್ನಾದರೂ ಪಡೆಯಲು ಇಚ್ಛಿಸುತ್ತಿದ್ದರೆ, ಎಲ್ಲಕ್ಕೂ ಮೊದಲು ನಿಮ್ಮ ಹೊಟ್ಟೆಯ ಬಗ್ಗೆ ಗಮನಹರಿಸಿ.

ಹಿಂದೆ ಬೀಳುವವನಾಗಿರಬಾರದು

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ