ನೀವು ಸರಿಯಾಗಿ ಮೇಕಪ್ ಮಾಡಿಕೊಂಡಿದ್ದೇ ಆದರೆ, ಅದು ನಿಮ್ಮ ವ್ಯಕ್ತಿತ್ವದ ಪ್ರತಿಷ್ಠೆ ಹೆಚ್ಚಿಸಿ, ನಿಮ್ಮ ಆತ್ಮವಿಶ್ವಾಸವನ್ನೂ ಎತ್ತರಕ್ಕೇರಿಸುತ್ತದೆ. ಈ ಹೊಸ ವರ್ಷದಲ್ಲಿ ಮೇಕಪ್ ಮಾಡಿಕೊಳ್ಳುವಾಗ, ಇಲ್ಲಿ ಸೌಂದರ್ಯ ತಜ್ಞೆಯರು ನೀಡಿರುವ ಸಲಹೆಗಳನ್ನು ಅಗತ್ಯ ಅನುಸರಿಸಿ.
ನಿಯಾನ್ ಬ್ರೈಟ್ ಐಸ್ : ಅತ್ಯಾಕರ್ಷಕ ಕಂಗಳಿಗಾಗಿ 2 ವಿಭಿನ್ನ ಬಣ್ಣಗಳನ್ನು ಬಳಸಿ ಮೇಕಪ್ ಮಾಡಿ. ಒಂದು ಬಣ್ಣ ಕಣ್ಣಿನ ಮೇಲು ರೆಪ್ಪೆಗೆ, ಇನ್ನೊಂದು ಕೆಳಭಾಗಕ್ಕೆ. ನೀವು ಬಯಸಿದರೆ ಎರಡಕ್ಕೂ ಸೇರಿ ಒಂದೇ ಬಣ್ಣ ಬಳಸಬಹುದು. ಫ್ಯಾಷನ್‌ಪ್ರಿಯ ಲಲನಾಮಣಿಗಳಿಗೆ ಈ ನಿಯಾನ್ ಬ್ರೈಟ್ ಐ ಮೇಕಪ್ ಹೆಚ್ಚು ಇಷ್ಟ. ಇವರು ತಮ್ಮ ಲುಕ್ಸ್ ಕುರಿತಾಗಿ ಪ್ರಯೋಗ ನಡೆಸಲು ಹಿಂಜರಿಯುವುದಿಲ್ಲ.
ಮೆಟಾಲಿಕ್ ಸ್ಯಾಟಿನ್ ಐಸ್ : ಕಂಗಳಿಗೆ ಸ್ಮೋಕಿ ಟಚ್ ನೀಡಲು ಇದು ಆಧುನಿಕ ವಿಧಾನವಾಗಿದೆ. ತಮ್ಮ ಲುಕ್ಸ್ ನ್ನು ಸಿಂಪಲ್ ಕ್ಲಾಸಿ ಆಗಿರಿಸಿಕೊಳ್ಳಲು ಇಂದಿಗೂ ಮಹಿಳೆಯರ ಬಳಿ ಇರುವ ಏಕೈಕ ಸಾಧನವೆಂದರೆ, ಮೆಟಾಲಿಕ್ ಸ್ಯಾಟಿನ್ ಸ್ಮೋಕಿ ಐಸ್ ಆಗಿದೆ. ಇದು ಲೈಟ್ ಕಲರ್‌ನ ಔಟ್‌ಫಿಟ್ಸ್ ಜೊತೆ ಬಲು ಸೊಗಸಾಗಿ ಹೊಂದುತ್ತದೆ. ಕಂಗಳಿಗೆ ಸ್ಮೋಕಿ ಲುಕ್ಸ್ ನೀಡಲು ಶಿಮರ್ ಮ್ಯಾಟ್ ಎರಡನ್ನೂ ಸೇರಿಸಿ ಬಳಸಿಕೊಳ್ಳಿ. ಸಾಮಾನ್ಯವಾಗಿ ನೈಟ್ ಪಾರ್ಟಿಗೆ ಹೋಗುವ ಹೆಂಗಸರು ಇದನ್ನು ಹೆಚ್ಚು ಬಳಸುತ್ತಾರೆ, ಏಕೆಂದರೆ ಪಾರ್ಟಿಯ ಕಣ್ಣು ಕೋರೈಸುವ ಬೆಳಕು ಇದರ ಮೇಲೆ ಅತ್ಯಧಿಕ ಪ್ರತಿಫಲನಗೊಳ್ಳುತ್ತದೆ.
ಕ್ಯಾಟ್ ಐಸ್ : ನೀವು ಈ ಹೊಸ ವರ್ಷದಲ್ಲಿ ಒಂದು ವಿಭಿನ್ನ ರೀತಿಯಲ್ಲಿ ತಯಾರಾಗಲು ಕ್ಯಾಟ್ ಐಸ್‌ನ ಪ್ರಯೋಗ ಮಾಡಬಹುದು. ಇದು ಕ್ಲಾಸಿಕ್ ಮತ್ತು ಹಳೆ ದಿನಗಳ ಲುಕ್ಸ್ ನ್ನು ವಾಪಸ್ಸು ತರುವ ಒಂದು ಪ್ರಯತ್ನ. ಯಾರು ತಮ್ಮ ಕಂಗಳನ್ನು ದೊಡ್ಡದಾಗಿಯೂ, ಅತಿ ಚೂಪಾಗಿ ಚುರುಕಾಗಿ ತೋರಿಸಿಕೊಳ್ಳ ಬಯಸುವರೋ, ಕ್ಯಾಟ್ ಐಸ್ ಅಂಥವರಿಗೆ ಟ್ರೆಂಡಿಂಗ್‌ಫೇಮಸ್ ಎನಿಸುತ್ತದೆ. ಕ್ಯಾಟ್ ಐಸ್ ಲುಕ್ಸ್, ಮೆಟ್ರೋ ಲುಕ್ಸ್ ನ್ನು ನೆನಪಿಸುತ್ತದೆ. ಇದನ್ನು ಟಿ.ವಿ ನಟಿಯರು ಅತ್ಯಧಿಕ ಇಷ್ಟಪಡುತ್ತಾರೆ. ಕ್ಯಾಟ್ ಐಸ್ ಲುಕ್ಸ್ ಕೆಲವು ಹೊಸ ವೆರೈಟಿಗಳೊಂದಿಗೆ ಟ್ರೆಂಡಿಗೆ ಮರಳಿದೆ.
ಟ್ರೆಂಡಿ ಲಿಪ್ಸ್ : ನೈಸರ್ಗಿಕ, ಸ್ವಸ್ಥ, ಹೊಳೆಹೊಳೆಯುವ ತುಟಿಗಳ ಟ್ರೆಂಡ್ ವಾಪಸ್ಸು ಬಂದಿದೆ. ಲೈಟ್, ಐಸಿ ಶೇಡ್ಸ್, ಚರ್ಮದ ಬಣ್ಣಕ್ಕೆ ಮ್ಯಾಚ್ ಆಗುವಂತಾದಾಗ, ಪಾರ್ಟಿಯ ಜನರ ಕಣ್ಣೋಟವೆಲ್ಲ ನಿಮ್ಮ ಮೇಲೆ ಕೇಂದ್ರೀಕೃತವಾಗುತ್ತದೆ.
ಆ್ಯಕ್ಸೆಸರೀಸ್ : ನಕ್ಷತ್ರ, ಮುತ್ತು, ಮಣಿಗಳ ಜೊತೆ ಝಿಪರ್, ಪೈಪಿಂಗ್ ಯಾ ಲೇಸ್ ಇತ್ಯಾದಿ ಆ್ಯಕ್ಸೆಸರೀಸ್ ಬಳಸಿ ನೀವು ಸುಪರ್ಬಾದ ಲುಕ್ಸ್ ಗಳಿಸುವಿರಿ. ಇವು ನಿಮ್ಮ ಉಡುಗೆ, ಸ್ಯಾಂಡಲ್ಸ್ ಜೊತೆಗೆ ಓವರ್ ಆಲ್ ಫ್ಯಾಷನೆಬಲ್ ಆಗಿ ಕಾಣಿಸಿಕೊಳ್ಳಲು ನೆರವಾಗುತ್ತದೆ.
ಕ್ಲಾಸಿಕ್ ಬೋಲ್ಡ್ ಲಿಪ್ಸ್ : ಪಾರ್ಟಿಯಲ್ಲಿ ಎಲ್ಲರಿಗಿಂತ ವಿಭಿನ್ನವಾಗಿ ಕಂಡುಬರಲು ಬಹಳಷ್ಟು ವಸ್ತುಗಳ ಅಗತ್ಯವೇನೂ ಇಲ್ಲ. ಅತ್ಯುತ್ತಮ ಬ್ರಾನ್ಝ್, ಕನ್ಸೀಲರ್, ಡಾರ್ಕ್ ರೆಡ್ ಲಿಪ್‌ಸ್ಟಿಕ್ ಇದ್ದರೆ ಸಾಕು, ನೀವು ಪಾರ್ಟಿಗೆ ರೆಡಿ ಆಗಬಹುದು. ಬ್ರೈಟ್‌ಬೋಲ್ಡ್ ಲಿಪ್ಸ್ ನ ಮಾಧ್ಯಮದಿಂದ ನೀವು ನಿಮ್ಮ ಸ್ಟೈಲ್ ಸ್ಟೇಟ್‌ಮೆಂಟ್‌ನ್ನು ಜನರ ಎದುರು ಪ್ರಸ್ತುತಪಡಿಸಬಹುದು. ಕೆಂಪು, ಗುಲಾಬಿ, ಕಿತ್ತಳೆ ಬಣ್ಣಗಳ ಜೊತೆ ಕಪ್ಪು, ಬದನೆ ಬಣ್ಣದ ಲಿಪ್‌ಸ್ಟಿಕ್ಸ್ ಕೂಡ ಬಳಸಬಹುದು.
ಮಲ್ಟಿ ಸ್ಟಿಕ್ಸ್ : ಈ ಕಲರ್ ಕರೆಕ್ಟರ್ ನಿಮ್ಮ ಕಣ್ಣು, ಕೆನ್ನೆ, ತುಟಿಗಳನ್ನು ಸುಂದರಗೊಳಿಸುತ್ತದೆ. ಬ್ಯೂಟಿಫುಲ್ ಫ್ಲಾಲೆಸ್ ಲುಕ್ಸ್ ಗಳಿಸಲು ಮಲ್ಟಿ ಸ್ಟಿಕ್ಸ್ ಮೇಕಪ್ ಟೂಲ್ ನಿಮಗೆ ಹೆಚ್ಚಿನ ಸಹಾಯ ಮಾಡುತ್ತದೆ. ಮಲ್ಟಿ ಸ್ಟಿಕ್ಸ್ ಐ ಶ್ಯಾಡೋ ಲಿಪ್‌ಸ್ಟಿಕ್ ಯಾ ಬ್ಲಶರ್‌ನ ರೂಪದಲ್ಲಿ ಲಭ್ಯವಿದ್ದು, ಅದು ಒಂದೇ ನಿಮಿಷದಲ್ಲಿ ನಿಮ್ಮ ಮೇಕಪ್ ಸುಧಾರಿಸಿ, ನಿಮಗೆ ನ್ಯಾಚುರಲ್ ಫ್ರೆಶ್ ಲುಕ್ಸ್ ಗಳಿಸಲು ಸಾಕಷ್ಟು ಉಪಯುಕ್ತ ಆಗಿದೆ.
ಐ ಬ್ರೋಸ್ ಆನ್‌ಪಾಯಿಂಟ್ : ನೀಡಲ್ಸ್ ಬಳಸದೇ ದಿ ಬೆಸ್ಟ್ ಐ ಬ್ರೋಸ್ ಮಾಡಿಸಿಕೊಳ್ಳಲು ಇದು ಉತ್ತಮ ವಿಧಾನ. ಅತ್ಯುತ್ತಮ ಹಾಗೂ ಶೇಪ್ಡ್ ಐ ಬ್ರೋಸ್ ನಿಮ್ಮ ಕಂಗಳ ಆಕಾರ ಹೆಚ್ಚಿಸುತ್ತದೆ ಹಾಗೂ ಮುಖಕ್ಕೆ ಪರ್ಫೆಕ್ಟ್ ಶೇಪ್ ನೀಡಿ ಅದನ್ನು ಮತ್ತಷ್ಟು ಅಂದಗೊಳಿಸುತ್ತದೆ.
ವಿಸಿಬಲ್ ಲಿಪ್ ಲೈನರ್ : 90ರ ದಶಕದ ಈ ಲುಕ್ಸ್ ನ್ನು ಕಳೆದ ವರ್ಷ ಭಾರತೀಯ ಮಹಿಳೆಯರು ಬಹಳ ಇಷ್ಟಪಟ್ಟಿದ್ದರು. ಈ ವರ್ಷ ಈ ಲುಕ್ಸ್ ಮತ್ತೆ ಮರಳಲಿವೆ. ವಿಸಿಬಲ್ ಲಿಪ್ ಲೈನರ್ ಮೇಕಪ್, ಕಳೆದುಹೋದ ದಿನಗಳ ಫೆಂಟಾಸ್ಟಿಕ್ ಮೇಕಪ್‌ನ್ನು ನೆನಪಿಸುತ್ತದೆ. 90ರ ದಶಕದ ಮೇಕಪ್ ಇದೀಗ ಫ್ಯಾಷನ್ನಿನ ಆಧುನಿಕ ಯುಗದಲ್ಲಿ ತುಸು ಬದಲಾವಣೆಗಳೊಂದಿಗೆ ಮತ್ತೆ ಮರಳಿದೆ.
ಕ್ಲೀನ್ ಮೆನಿಕ್ಯೂರ್ : ಮೆನಿಕ್ಯೂರ್ ಮೂಲಕ ನೀವು ನಿಮ್ಮ ಉಗುರುಗಳನ್ನು ಕ್ಯೂಟ್‌ಗೊಳಿಸಬಹುದು. ಈ ವಿಧಾನದಲ್ಲಿ ಉಗುರನ್ನು ಸದೃಢ ಹಾಗೂ ಸೆಟ್‌ಗೊಳಿಸಲು ನೈಸರ್ಗಿಕ ಕೆರ್ಯಾಟಿನ್‌ನ್ನು ಸಹ ಬಳಸಲಾಗುತ್ತದೆ. ಕೈಗಳ ಮಸಾಜ್, ಕ್ಯೂಟಿಕಲ್ ಟ್ರೀಟ್‌ಮೆಂಟ್, ಕ್ಲಿಪಿಂಗ್, ಫೈಲಿಂಗ್, ಶೇಪಿಂಗ್, ಪುಶಿಂಗ್, ಎಕ್ಸ್ ಫಾಲಿಯೇಶನ್, ವ್ಯಾಕ್ಸ್ ಟ್ರೀಟ್‌ಮೆಂಟ್, ಬಫಿಂಗ್, ಡ್ರಿಪ್ ಡ್ರೈ, ನೇಲ್ ಗ್ರೂಮಿಂಗ್, ನೇಲ್ ಪಾಲಿಶ್, ನೇಲ್ ಆರ್ಟ್ ಇತ್ಯಾದಿಗಳಿಂದ ನೀವು ಉಗುರಿನ ಸೌಂದರ್ಯ ಹೆಚ್ಚಿಸಬಹುದು.
ನೋ ಮೇಕಪ್ ಲುಕ್ಸ್ : ಫ್ಯಾಷನ್ ಮತ್ತು ಮೇಕಪ್‌ನ ಬದಲಾಗುತ್ತಿರುವ ಈ ಕಾಲಘಟ್ಟದಲ್ಲಿ, ಹೆಂಗಸರು ನೋ ಮೇಕಪ್ ಲುಕ್ಸ್ ಗೆ ಪುಷ್ಟಿ ನೀಡುತ್ತಿದ್ದಾರೆ. ತಾವು ಮೇಕಪ್ ಮಾಡಿಕೊಂಡಿದ್ದರೂ ಸಹ ಅದು ಓವರ್ ರೇಟೆಡ್ ಆಗಿರಬಾರದು ಎಂಬುದು ಇವರ ಆಸೆ. ಹೀಗಾಗಿ ಇದು ಸಿಂಪಲ್ ಬೆಟರ್ ಲುಕ್ಸ್ ನೀಡುತ್ತದೆ. ಇದು ಯಾವುದೇ ಸಂದರ್ಭವಿರಲಿ, ಎಂಥ ಉಡುಗೆಯೇ ಇರಲಿ, ನಿಮಗೆ ಚೆನ್ನಾಗಿ ಸೂಟ್ ಆಗುತ್ತದೆ.
ನ್ಯೂಡ್ ಮೇಕಪ್ : ಇದು ನಮ್ಮ ನ್ಯಾಚುರಲ್ ಸ್ಕಿನ್ ಟೋನ್‌ಗೆ ಬಹಳ ಹತ್ತಿರವಾಗಿದೆ. ಹೀಗಾಗಿ ಚರ್ಮ ಮೇಕಪ್‌ಫ್ರೀ ಹಾಗೂ ಸಿಂಗಲ್ ಟೋನ್ಡ್ ಕಲರ್ ಸ್ಕೀಂ ಇರುವಂಥ ಭ್ರಮೆ ಹುಟ್ಟಿಸುತ್ತದೆ. ನ್ಯೂಡ್ ಮೇಕಪ್ ಕ್ರೀಂ ಹಾಗೂ ಬೂದು ಬಣ್ಣದ ಸ್ಪೆಕ್ಟ್ರಂ ತೀರ ನಿಕಟ ಆಗಿರುವಂತೆ ಕಾಣುತ್ತದೆ.
ಸ್ಪಾರ್ಕ್ ಗ್ಲಿಟರ್ : ಕಂಗಳಿಗೆ ಸ್ಪಾರ್ಕ್‌ಗ್ಲಿಟರ್ ಸಿಂಪಡಿಸುವ ರೂಢಿ, ಒಂದು ಮಜವಾದ ಟ್ರೆಂಡ್ ಆಗಿದೆ. ಗ್ಲಿಟರೀ ಟಚ್ ಹೆಂಗಸರಿಗೆ ಡ್ರಾಮಾ ಪಾಪ್ ಲುಕ್ಸ್ ನೀಡುತ್ತವೆ. ಇದರ ಹೆಚ್ಚಿನ ಬಳಕೆ ನಿಮಗೆ ಮೆಸ್ಸಿ ಲುಕ್ಸ್ ನೀಡುತ್ತದೆ.
ಸ್ಮೋಕಿ ಐಸ್ : ಇಂದು ಮಹಿಳೆಯರ ಮಧ್ಯೆ ಸ್ಮೋಕಿ ಐಸ್ ಎಲ್ಲಕ್ಕೂ ಹೆಚ್ಚಿನ ಟ್ರೆಂಡಿಂಗ್ ಮಮತ್ತು ಸ್ಟ್ರೈಕ್ಲಿಂಗ್ ಮೇಕಪ್ ಲುಕ್ಸ್ ನೀಡುತ್ತವೆ. ಇದಕ್ಕಾಗಿ ನೀವು ಲೈಟ್, ಡಾರ್ಕ್, ವಾರ್ಮ್ ನಂಥ 3 ಬಣ್ಣಗಳ ಆಯ್ಕೆ ಮಾಡಿಕೊಳ್ಳಬಹುದು. ಸ್ಮೋಕಿ ಐಸ್‌ಗಾಗಿ ಗ್ರೇ ಬ್ಲ್ಯಾಕ್ ಎರಡೂ ಇರಬೇಕಾದುದು ಅನಿವಾರ್ಯ ಅಲ್ಲವೇ. ನೀವು ವಾರ್ಮ್ ಬ್ರೌನ್ ಬಣ್ಣ, ಕಿತ್ತಳೆ, ಗೋಲ್ಡ್, ಬ್ಲೂ, ಗ್ರೀನ್ ಬಣ್ಣಗಳನ್ನೂ ಬಳಸಿಕೊಳ್ಳಬಹುದು. ಇದು ಎಲ್ಲಾ ಔಟ್‌ಫಿಟ್ಸ್ ಗೂ ಚೆನ್ನಾಗಿ ಒಪ್ಪುತ್ತದೆ.
ಫ್ಲೋಟಿಂಗ್ ಲೈನರ್ : ವಿಂಗ್ಡ್ ಲೈನರ್‌ನಂತರ ಈ ಫ್ಲೋಟಿಂಗ್ ಲೈನರ್ ಇದೀಗ ಕಂಗಳಿಗೆ ಹೊಸ ಲುಕ್ಸ್ ನೀಡುವ ಕಾರಣ ಟ್ರೆಂಡಿ ಎನಿಸಿದೆ. ಫ್ಲೋಟಿಂಗ್ ಐ ಲೈನರ್ ಲ್ಯಾಶ್ ಲೈನ್‌ಗೆ ಬದಲಾಗಿ ಕಂಗಳ ಕ್ರೀಸ್ ಜೊತೆ ಎಳೆಯಾದ ಗ್ರಾಫಿಕ್ ಲೈನ್ ಎನಿಸುತ್ತದೆ. ಈ ಲುಕ್ಸ್ ಗಳಿಸಲು ನಿಮ್ಮ ಗಲ್ಲವನ್ನು ತುಸು ಮೇಲೇರಿಸಿಕೊಂಡು, ಆದರೆ ಕನ್ನಡಿಯಲ್ಲಿ ಕೆಳಗೆ ನೋಡಿ ಕಂಗಳ ಬಗ್ಗೆ ಮಾಹಿತಿ ಪಡೆಯಿರಿ. ಏಕೆಂದರೆ ಇದು ಅಧಿಕವಾದರೆ ನೀವು ನೋಡಲು ಕೆಟ್ಟದಾಗಿ ಕಾಣುವಿರಿ. ಬಹಳ ಕಡಿಮೆ ಆದರೆ ಈ ಲೈನ್ ಕಾಣಿಸುವುದೇ ಇಲ್ಲ.
ವಾಟರ್ ಕಲರ್ ಐ ಶ್ಯಾಡೋ : ಇದು ಮೇಕಪ್ ಲೋಕಕ್ಕೆ ಮತ್ತೆ ವಾಪಸ್ಸು ಮರಳುತ್ತಿದೆ, ಜೊತೆಗೆ ಟ್ರೆಂಡಿ ಆಗಿದೆ. ಲೈಟ್ ಗ್ರೀನ್, ಸ್ಕೈ ಬ್ಲೂ ಮತ್ತು ಆರೆಂಜ್‌ನಂಥ ಬಣ್ಣ ಬಳಸಿ ಕಂಗಳ ಆಸುಪಾಸಿನಲ್ಲಿ ವಾಟರ್ ಕಲರ್ ಶೇಡ್ಸ್ ಮಾಡಬಹುದು. ಈ ಲುಕ್ಸ್ ಪಡೆಯಲು, ನೀವು ಒಂದೇ ಬೇಸ್‌ಗೆ 2 ಬಗೆಯ ಕಲರ್ಸ್ ಬಳಸಬೇಕಾಗುತ್ತದೆ.
ಮೋನೋಕ್ರೊಮ್ಯಾಟಿಕ್ ಮೇಕಪ್ ಲುಕ್ಸ್ : ಬೋಲ್ಡ್, ಮೋನೋಕ್ರೊಮ್ಯಾಟಿಕ್ ಮೇಕಪ್‌ನ ಟ್ರೆಂಡ್ ಮತ್ತೆ ವಾಪಸ್ಸು ಮರಳಿದೆ. ಮೋನೋಕ್ರೋಮ್ ಮೇಕಪ್ ಕಂಗಳು, ತುಟಿಗಳು ಹಾಗೂ ನೀವು ಪಾರ್ಟಿಗೆ ಧರಿಸುವ ಡ್ರೆಸ್‌ಗೆ ಮ್ಯಾಚಿಂಗ್ ಆಗುವ ಶೇಡ್ಸ್ ಹಾಗಿರಬೇಕು.
ಹನಿ ಲೋಯರ್ ಲೈನರ್ : ಈ ಸ್ಟೈಲ್ ಕೂಲ್‌ಇಂಟೆನ್ಸ್ ಎರಡೂ ರೀತಿಯಲ್ಲಿ ಕಾಣಿಸುತ್ತದೆ. ಇದಕ್ಕಾಗಿ ಕಂಗಳ ಕೆಳಗೆ ಕಾಜಲ್ ಯಾ ಲೈನರ್‌ನ ಎಕ್ಸ್ ಟ್ರಾ ಲೈನ್ ತೀಡಿರಿ. ಆಗ ಇದು ದಪ್ಪ, ಅಗಲ ಲುಕ್ಸ್ ಸಿಗುತ್ತದೆ. ನೀವು ಬಣ್ಣಗಳೊಂದಿಗೆ ಪ್ರಯೋಗ ಮಾಡುತ್ತಾ ಫಂಕಿ ಪಾಪ್ ಸ್ಟಾರ್‌ನಂಥ ಲುಕ್ಸ್ ಸಹ ಪಡೆಯಬಹುದು.
ಲೈಟ್ ಲೈನರ್ : ನೀವು ಕ್ಯಾಶ್ಯುಯೆಲ್ ಲುಕ್ಸ್ ಬಯಸಿದರೆ ಅಥವಾ ಇನ್‌ಫಾರ್ಮ್ ಮೀಟಿಂಗ್ಸ್ ಗಾಗಿ ಹೊರಟಿದ್ದರೆ, ಆಗ ಕೇವಲ ಬಿಳಿಯ ಲೈನರ್‌ನ ಲೈಟ್ ಶೇಡ್ಸ್ ಬಳಸುತ್ತಾ, ನಿಮ್ಮ ಲುಕ್ಸ್ಗೆ ಹೊಸತನ ನೀಡಬಹುದು.
ಮಿಸ್ ಮ್ಯಾಚ್ ಐ ಶ್ಯಾಡೋ : ನೀವು ನಿಮ್ಮ ಲುಕ್ಸ್ ಕುರಿತಾಗಿ ಪ್ರಯೋಗ ಮಾಡಬಯಸಿದರೆ, ಆಗ ಈ ಹೊಸ ವರ್ಷದ ಮೇಕಪ್ ಟ್ರೆಂಡ್ ನಿಮಗಾಗಿಯೇ ಎಂದು ತಿಳಿಯಿರಿ. ಕೇವಲ ಒಂದೇ ಐ ಶ್ಯಾಡೋಗೆ ಅಂಟಿಕೊಂಡಿರುವ ಬದಲು, ನೀವು ನಿಮ್ಮ ಎರಡು ಕಂಗಳಿಗೂ ವಿಭಿನ್ನ ಬಣ್ಣಗಳನ್ನು ಬಳಸಬಹುದು. ನಿಮ್ಮ ಕಂಗಳಿಗೆ 2 ಬಣ್ಣಗಳ ಬಳಕೆಯಿಂದ, ಕಾಂಟ್ರಾಸ್ಟ್ ಎಫೆಕ್ಟ್ ಬರುವಂತೆ ಎಚ್ಚರಿಕೆ ವಹಿಸಿ, ಆಗ ಲುಕ್ಸ್ ನ ಪ್ರಭಾವ ನೋಡಿ!
– ಪಿ. ಗಿರಿಜಾ