ನೀವು ಸರಿಯಾಗಿ ಮೇಕಪ್ ಮಾಡಿಕೊಂಡಿದ್ದೇ ಆದರೆ, ಅದು ನಿಮ್ಮ ವ್ಯಕ್ತಿತ್ವದ ಪ್ರತಿಷ್ಠೆ ಹೆಚ್ಚಿಸಿ, ನಿಮ್ಮ ಆತ್ಮವಿಶ್ವಾಸವನ್ನೂ ಎತ್ತರಕ್ಕೇರಿಸುತ್ತದೆ. ಈ ಹೊಸ ವರ್ಷದಲ್ಲಿ ಮೇಕಪ್ ಮಾಡಿಕೊಳ್ಳುವಾಗ, ಇಲ್ಲಿ ಸೌಂದರ್ಯ ತಜ್ಞೆಯರು ನೀಡಿರುವ ಸಲಹೆಗಳನ್ನು ಅಗತ್ಯ ಅನುಸರಿಸಿ.
ನಿಯಾನ್ ಬ್ರೈಟ್ ಐಸ್ : ಅತ್ಯಾಕರ್ಷಕ ಕಂಗಳಿಗಾಗಿ 2 ವಿಭಿನ್ನ ಬಣ್ಣಗಳನ್ನು ಬಳಸಿ ಮೇಕಪ್ ಮಾಡಿ. ಒಂದು ಬಣ್ಣ ಕಣ್ಣಿನ ಮೇಲು ರೆಪ್ಪೆಗೆ, ಇನ್ನೊಂದು ಕೆಳಭಾಗಕ್ಕೆ. ನೀವು ಬಯಸಿದರೆ ಎರಡಕ್ಕೂ ಸೇರಿ ಒಂದೇ ಬಣ್ಣ ಬಳಸಬಹುದು. ಫ್ಯಾಷನ್‌ಪ್ರಿಯ ಲಲನಾಮಣಿಗಳಿಗೆ ಈ ನಿಯಾನ್ ಬ್ರೈಟ್ ಐ ಮೇಕಪ್ ಹೆಚ್ಚು ಇಷ್ಟ. ಇವರು ತಮ್ಮ ಲುಕ್ಸ್ ಕುರಿತಾಗಿ ಪ್ರಯೋಗ ನಡೆಸಲು ಹಿಂಜರಿಯುವುದಿಲ್ಲ.
ಮೆಟಾಲಿಕ್ ಸ್ಯಾಟಿನ್ ಐಸ್ : ಕಂಗಳಿಗೆ ಸ್ಮೋಕಿ ಟಚ್ ನೀಡಲು ಇದು ಆಧುನಿಕ ವಿಧಾನವಾಗಿದೆ. ತಮ್ಮ ಲುಕ್ಸ್ ನ್ನು ಸಿಂಪಲ್ ಕ್ಲಾಸಿ ಆಗಿರಿಸಿಕೊಳ್ಳಲು ಇಂದಿಗೂ ಮಹಿಳೆಯರ ಬಳಿ ಇರುವ ಏಕೈಕ ಸಾಧನವೆಂದರೆ, ಮೆಟಾಲಿಕ್ ಸ್ಯಾಟಿನ್ ಸ್ಮೋಕಿ ಐಸ್ ಆಗಿದೆ. ಇದು ಲೈಟ್ ಕಲರ್‌ನ ಔಟ್‌ಫಿಟ್ಸ್ ಜೊತೆ ಬಲು ಸೊಗಸಾಗಿ ಹೊಂದುತ್ತದೆ. ಕಂಗಳಿಗೆ ಸ್ಮೋಕಿ ಲುಕ್ಸ್ ನೀಡಲು ಶಿಮರ್ ಮ್ಯಾಟ್ ಎರಡನ್ನೂ ಸೇರಿಸಿ ಬಳಸಿಕೊಳ್ಳಿ. ಸಾಮಾನ್ಯವಾಗಿ ನೈಟ್ ಪಾರ್ಟಿಗೆ ಹೋಗುವ ಹೆಂಗಸರು ಇದನ್ನು ಹೆಚ್ಚು ಬಳಸುತ್ತಾರೆ, ಏಕೆಂದರೆ ಪಾರ್ಟಿಯ ಕಣ್ಣು ಕೋರೈಸುವ ಬೆಳಕು ಇದರ ಮೇಲೆ ಅತ್ಯಧಿಕ ಪ್ರತಿಫಲನಗೊಳ್ಳುತ್ತದೆ.
ಕ್ಯಾಟ್ ಐಸ್ : ನೀವು ಈ ಹೊಸ ವರ್ಷದಲ್ಲಿ ಒಂದು ವಿಭಿನ್ನ ರೀತಿಯಲ್ಲಿ ತಯಾರಾಗಲು ಕ್ಯಾಟ್ ಐಸ್‌ನ ಪ್ರಯೋಗ ಮಾಡಬಹುದು. ಇದು ಕ್ಲಾಸಿಕ್ ಮತ್ತು ಹಳೆ ದಿನಗಳ ಲುಕ್ಸ್ ನ್ನು ವಾಪಸ್ಸು ತರುವ ಒಂದು ಪ್ರಯತ್ನ. ಯಾರು ತಮ್ಮ ಕಂಗಳನ್ನು ದೊಡ್ಡದಾಗಿಯೂ, ಅತಿ ಚೂಪಾಗಿ ಚುರುಕಾಗಿ ತೋರಿಸಿಕೊಳ್ಳ ಬಯಸುವರೋ, ಕ್ಯಾಟ್ ಐಸ್ ಅಂಥವರಿಗೆ ಟ್ರೆಂಡಿಂಗ್‌ಫೇಮಸ್ ಎನಿಸುತ್ತದೆ. ಕ್ಯಾಟ್ ಐಸ್ ಲುಕ್ಸ್, ಮೆಟ್ರೋ ಲುಕ್ಸ್ ನ್ನು ನೆನಪಿಸುತ್ತದೆ. ಇದನ್ನು ಟಿ.ವಿ ನಟಿಯರು ಅತ್ಯಧಿಕ ಇಷ್ಟಪಡುತ್ತಾರೆ. ಕ್ಯಾಟ್ ಐಸ್ ಲುಕ್ಸ್ ಕೆಲವು ಹೊಸ ವೆರೈಟಿಗಳೊಂದಿಗೆ ಟ್ರೆಂಡಿಗೆ ಮರಳಿದೆ.
ಟ್ರೆಂಡಿ ಲಿಪ್ಸ್ : ನೈಸರ್ಗಿಕ, ಸ್ವಸ್ಥ, ಹೊಳೆಹೊಳೆಯುವ ತುಟಿಗಳ ಟ್ರೆಂಡ್ ವಾಪಸ್ಸು ಬಂದಿದೆ. ಲೈಟ್, ಐಸಿ ಶೇಡ್ಸ್, ಚರ್ಮದ ಬಣ್ಣಕ್ಕೆ ಮ್ಯಾಚ್ ಆಗುವಂತಾದಾಗ, ಪಾರ್ಟಿಯ ಜನರ ಕಣ್ಣೋಟವೆಲ್ಲ ನಿಮ್ಮ ಮೇಲೆ ಕೇಂದ್ರೀಕೃತವಾಗುತ್ತದೆ.
ಆ್ಯಕ್ಸೆಸರೀಸ್ : ನಕ್ಷತ್ರ, ಮುತ್ತು, ಮಣಿಗಳ ಜೊತೆ ಝಿಪರ್, ಪೈಪಿಂಗ್ ಯಾ ಲೇಸ್ ಇತ್ಯಾದಿ ಆ್ಯಕ್ಸೆಸರೀಸ್ ಬಳಸಿ ನೀವು ಸುಪರ್ಬಾದ ಲುಕ್ಸ್ ಗಳಿಸುವಿರಿ. ಇವು ನಿಮ್ಮ ಉಡುಗೆ, ಸ್ಯಾಂಡಲ್ಸ್ ಜೊತೆಗೆ ಓವರ್ ಆಲ್ ಫ್ಯಾಷನೆಬಲ್ ಆಗಿ ಕಾಣಿಸಿಕೊಳ್ಳಲು ನೆರವಾಗುತ್ತದೆ.
ಕ್ಲಾಸಿಕ್ ಬೋಲ್ಡ್ ಲಿಪ್ಸ್ : ಪಾರ್ಟಿಯಲ್ಲಿ ಎಲ್ಲರಿಗಿಂತ ವಿಭಿನ್ನವಾಗಿ ಕಂಡುಬರಲು ಬಹಳಷ್ಟು ವಸ್ತುಗಳ ಅಗತ್ಯವೇನೂ ಇಲ್ಲ. ಅತ್ಯುತ್ತಮ ಬ್ರಾನ್ಝ್, ಕನ್ಸೀಲರ್, ಡಾರ್ಕ್ ರೆಡ್ ಲಿಪ್‌ಸ್ಟಿಕ್ ಇದ್ದರೆ ಸಾಕು, ನೀವು ಪಾರ್ಟಿಗೆ ರೆಡಿ ಆಗಬಹುದು. ಬ್ರೈಟ್‌ಬೋಲ್ಡ್ ಲಿಪ್ಸ್ ನ ಮಾಧ್ಯಮದಿಂದ ನೀವು ನಿಮ್ಮ ಸ್ಟೈಲ್ ಸ್ಟೇಟ್‌ಮೆಂಟ್‌ನ್ನು ಜನರ ಎದುರು ಪ್ರಸ್ತುತಪಡಿಸಬಹುದು. ಕೆಂಪು, ಗುಲಾಬಿ, ಕಿತ್ತಳೆ ಬಣ್ಣಗಳ ಜೊತೆ ಕಪ್ಪು, ಬದನೆ ಬಣ್ಣದ ಲಿಪ್‌ಸ್ಟಿಕ್ಸ್ ಕೂಡ ಬಳಸಬಹುದು.