ಉತ್ತಮ ಅವಕಾಶ : ಮಾಸ್ಕೋ ದೇಶಕ್ಕೆ ಅಖಂಡ ಶ್ರೀರಕ್ಷೆ ಎಂದರೆ ಅದರ ಕೊರೆ ಕೊರೆಯುವ ಮಂಜು. ಇದನ್ನು ಅತಿಕ್ರಮಣಕಾರರಾದ ನೆಪೋಲಿಯನ್‌ ಅಥವಾ ಅಡಾಲ್ಫ್ ಹಿಟ್ಲರ್‌ ಸಹ ಎದುರಿಸಲಾಗಲಿಲ್ಲ. ಆದರೆ ನೀವು ಅಲ್ಲಿಗೆ ಹೋಗಲು ಏನೂ ತೊಂದರೆ ಇಲ್ಲ. ಮಾಲ್ಡೀವ್ಸ್ ನ ಫ್ಲೈಟ್‌ ಹಿಡಿದು ಹೊರಟು, ಭವ್ಯ ಪಂಚತಾರಾ ಹೋಟೆಲ್‌ನಲ್ಲಿ ಹೋಗಿ ಸ್ಟೇ ಮಾಡಿ. ರಷ್ಯನ್‌ ಟಿವಿ ನಟಿ ಅಗಾಥಾ ಮ್ಯೂಕಿನಿಸ್‌ ಇದನ್ನೇ ಮಾಡಿದಳು. ದೆಹಲಿ, ಕಾಶ್ಮೀರದ ಚಳಿಯನ್ನೇ ತಡೆಯಲಾಗದು ಅಂತೀರಾ? ಹಾಗಿದ್ದರೆ ಗೋವಾ, ಪಾಂಡಿಚೆರಿಗೆ ಹೊರಡಿ.

ಅವರವರ ಐಡೆಂಟಿಟಿ : ಆಫ್ಗಾನಿಸ್ತಾನ್‌ ಎಂದಿನ ಪುರಾತನ ಧಾರ್ಮಿಕ ಕಂದಾಚಾರದ ಕಪಿಮುಷ್ಟಿಯಿಂದ ಇನ್ನೂ ಹೊರಬಂದಿಲ್ಲ. ಪರಿಣಾಮ? ಅಲ್ಲಿನ ಹೆಂಗಸರು ಇಂದಿಗೂ ಸಹ ಗಂಡಸರ ಶೋಷಣೆಯಿಂದ ಹೊರಬರಲಾಗಿಲ್ಲ. ಈಗ ಯೂರೋಪಿಯನ್‌ಯೂನಿಯನ್‌ ಅಲ್ಲಿನ ಕೆಲವು ಹುಡುಗಿಯರಿಗೆ ವಿಶೇಷ ಸ್ಕಾಲರ್‌ಶಿಪ್‌ ಕೊಡುತ್ತಿದೆ, ಅದರಿಂದ ಅವರು ಇತರ ದೇಶಗಳಿಗೆ ಹೋಗಿ ಉನ್ನತ ಶಿಕ್ಷಣ ಪಡೆಯಬಹುದು. ಇವರ ಮುಖದ ಮೇಲಿನ ಹೊಳಪು ನೋಡಿ, ಇವರುಗಳಿಗೆ ಕಝಕಿಸ್ತಾನಿನ ಅಲ್‌ಮ್ಯಾಟಿ ಯೂನಿವರ್ಸಿಟಿಯಲ್ಲಿ ಕಲಿಯುವ ಉತ್ತಮ ಅವಕಾಶ ದೊರಕಿದೆ. ಈಗ ನಮ್ಮ ದೇಶದ ಹುಡುಗಿಯರಿಗೂ ವಿದೇಶದಲ್ಲೇ ಉನ್ನತ ಜ್ಞಾನ ಸಿಗಬೇಕು, ಇಲ್ಲಂತೂ 23 ಸಾವಿರ ವರ್ಷಗಳ ಪುರಾತನ ಕಲಿಕೆಯನ್ನೇ ಮುಂದವರಿಸಲಾಗುತ್ತಿದೆ.

Maggie-2BO-2527Carroll-252C-2BCEO-2Bof-2BThe-2BWomen-2527s-2BOrganisation-300x200-1

ದೇವಿದೇವತೆ ಇದ್ದಾರಲ್ಲ : ನಟೂರಿ ನಾಟನ್‌ ಎಂಬ ಈಕೆ ಸುಂದರ, ಸೆಕ್ಸಿ ಮಾತ್ರವಲ್ಲದೆ, ಬಹುಚರ್ಚಿತ ಗಾಯಕಿ, ನಟಿ ಮಾತ್ರವಲ್ಲ, ಫಿನ್‌ ಟ್ಯಾಕ್‌ ಕಂಪನಿಯ ಪಾರ್ಟ್‌ನರ್‌ ಆಗಿ, ಇದೀಗ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಹ ಡೆವಲಪ್‌ ಮಾಡುತ್ತಿದ್ದಾಳೆ. ಅವಳು ಸ್ಟೂಡೆಂಟ್‌ ಲೈಫ್‌ನಲ್ಲಿ ಶೈಕ್ಷಣಿಕ ಸಾಲ ಪಡೆದು ಬಹಳ ಕಷ್ಟಪಡುತ್ತಿದ್ದಳು. ಅದಕ್ಕೆ ಈಗ ಪರಿಹಾರ ಹುಡುಕುತ್ತಿದ್ದಾಳೆ. ಇಂಥ ಆರ್ಟ್‌ ಭಾರತದ ಕಲಿಕೆಯಲ್ಲಿ ಕೆಲಸಕ್ಕೆ ಬಾರದು. ಇಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕುರಿತು ಜ್ಞಾನ ಪಡೆಯಲು ಖರ್ಚು ಮಾಡಲ್ಲ, ಮಂದಿರ ಕಟ್ಟಿಸಿ ಆ ದೇವಿ ದೇವತೆಗಳಿಂದ ವರ ಪಡೆಯುವ ತಯಾರಿ ನಡೆಸುತ್ತಾರೆ.

press_release_distribution_0477844_159260

ಇಂಥ ಮಧುರ ದಿನಗಳು ಮತ್ತೆಲ್ಲಿ? : ಬೀಚ್‌ ವೆಡ್ಡಿಂಗ್‌ ಇದೀಗ ಮತ್ತೆ ಫ್ಯಾಷನ್‌ ಎನಿಸಿದೆ. ಏಕೆಂದರೆ ಕೊರೋನಾದಿಂದಾಗಿ ಜನ ಮುಚ್ಚಿದ ಕೋಣೆಗಳಲ್ಲಿರಲು ಹೆದರುತ್ತಾರೆ. ಬೀಚ್‌ನಲ್ಲಾದರೆ ದೂರ ದೂರ ನಿಂತು ಸೋಶಿಯಲ್ ಡಿಸ್ಟೆನ್ಸಿಂಗ್‌ ಮೇಂಟೇನ್ ಮಾಡಬಹುದು, ಹೊಸ ಜೋಡಿಗಳಿಗೆ ಧಾರಾಳ ಅವಕಾಶ ಸಹ! ನಿಮ್ಮ ಮದುವೆ ಈಗಾಗಲೇ ಆಗಿಹೋಗಿದ್ದರೆ, ಮತ್ತೊಮ್ಮೆ ಹೀಗೆ ಟ್ರೈ ಮಾಡಿ. ಇಂಥ ಅವಕಾಶ ಮತ್ತೆ ಬರದು, ನೀವು 200 ಜನರನ್ನು ಕರೆದರೆ 20 ಮಂದಿ ಬರ್ತಾರಷ್ಟೆ. ಡೆಸ್ಟಿನೇಶನ್‌ ವೆಡ್ಡಿಂಗ್‌ನ ಮೋಜು ಮಸ್ತಿ ಜೊತೆ ಹಣದ ಉಳಿತಾಯ ಕೂಡ!

DriveThruTesting-COVID-Press-Release

ಬದಲಾಗುತ್ತಿರುವ ವಾತಾವರಣ : ಇಂಗ್ಲೆಂಡ್‌ನ ಬರ್ಮಿಂಗ್‌ ಹ್ಯಾಂ ರಾಯಲ್ ಬ್ಯಾಲೆಯ, ದಿ ನಟ್‌ ಕ್ರಾಕರ್‌ ಮ್ಯೂಸಿಕ್ ಪ್ರೊಡಕ್ಷನ್ನಿನರಿಗೆ ಕ್ರಿಸ್‌ಮಸ್‌ ಹಬ್ಬದ ನಿರೀಕ್ಷೆ ಜಾಸ್ತಿ. ಆದರೆ ಈ ವರ್ಷ ಮೊಬೈಲ್‌, ಲ್ಯಾಪ್‌ಟಾಪ್‌ ಅಥವಾ ಟಿವಿ ಸ್ಕ್ರೀನಿನಲ್ಲಿ ಮಾತ್ರ ಈ ವೈಭವ ಕಾಣಲು ಸಾಧ್ಯ. ಅದೂ ಹಣ ನೀಡಬೇಕು. ವ್ಯತ್ಯಾಸ ಇಷ್ಟೆ, ಒಬ್ಬಿಬ್ಬರು ನೋಡುತ್ತಿದ್ದಾರೋ 10 ಮಂದಿಯೋ, ಒಬ್ಬರು ಹಣ ಕಟ್ಟಿದರೆ ಆಯ್ತು. ಇದೀಗ ಭಾರತದಲ್ಲೂ ಸಿನಿಮಾವನ್ನು ಒಂದೇ ಸಲ ನೋಡು ಹಾಗಾಗುತ್ತಿದೆ. OTT ಮೂಲಕ ಇನ್ನು ನಿಗದಿತ ಸಮಯದಲ್ಲಿ ತಂತಮ್ಮ ಟಿವಿ, ಕಂಪ್ಯೂಟರಿನಲ್ಲಿ ನೋಡಬಹುದಷ್ಟೆ.

ಹೊಸ ಮಾಹಿತಿ : ಮೆನೋಪಾಸ್‌ ನಂತರ ಬ್ರೆಸ್ಟ್ ಕ್ಯಾನ್ಸರ್‌ಗಾಗಿ ಸತತ ಹೊಸ ಮಾಹಿತಿಗಳು ಸಿಗುತ್ತಿವೆ. ಕೆಲವು ಪ್ರಕರಣಗಳಲ್ಲಂತೂ ಬಹುಪ್ರಚಲಿತ ಕೀಮೋಥೆರಪಿಯ ಅನಗತ್ಯ ಲೆಕ್ಕಾಚಾರ ತೋರಿಸಲಾಗುತ್ತಿದೆ. ಬೇರೆ ಚಿಕಿತ್ಸೆಗಳ ಜೊತೆ ಕೀಮೋಥೆರಪಿ ಅನಗತ್ಯ ಅಂತಾದಾಗ, ಹೆಂಗಸರ ಎಷ್ಟೋ ದುಡ್ಡು ಉಳಿಯುತ್ತದೆ, ಚಿಂತೆ ದೂರಾಗುತ್ತದೆ. ಅಮೆರಿಕಾದ ನ್ಯಾಷನಲ್ ಕ್ಯಾನ್ಸರ್‌ ಇನ್‌ಸ್ಟಿಟ್ಯೂಟ್‌ ಈ ಕುರಿತು ಅನೇಕ ಮಾಹಿತಿ ಸಂಗ್ರಹಿಸಿದೆ. ಬ್ರೆಸ್ಟ್ ಕ್ಯಾನ್ಸರ್‌ ಅಂತೂ ಭಯಾನಕ ಎಂಬಷ್ಟು ಹರಡುತ್ತಿದೆ.

51665355

ಟೈಗರ್‌ ಮಾಮ್ ಆಗುವುದು ಸುಲಭವಲ್ಲ : ಬಾಲ್ಯದಿಂದಲೇ ಕಲಿತಾಗ ಮಾತ್ರ ಒರಿಜಿನಲ್ ಆ್ಯಕ್ಟಿಂಗ್‌ ಸುಲಭವಾದೀತು. ನ್ಯೂಯಾರ್ಕಿನ ಕ್ಯಾರೋಲ್ ‌ಕ್ರಿಸ್ಟೀನ್‌ ಥಿಯೇಟರ್‌ ಆ್ಯಕ್ಟಿಂಗ್‌ ಸ್ಕೂಲ್ ಕೇವಲ ನಟನೆಯಷ್ಟೇ ಅಲ್ಲದೆ, ಮೇಕಪ್‌ ಕಲೆಯನ್ನೂ ಕಲಿಸುತ್ತದೆ. ಈ ಶಾಲೆಯ ಸ್ಟೂಡೆಂಟ್ಸ್ ಗೆ ಬ್ರಾಡ್‌ ವೇಯ ಪ್ರಸಿದ್ಧ ವೇದಿಕೆಯೂ ಲಭಿಸುತ್ತದೆ. ಇದರಲ್ಲಿ ಆಪತ್ತು ಬರುವುದೆಲ್ಲ ತಾಯಂದಿರಿಗೇ, ಅವರುಗಳಂತೂ ಶಾಲೆಯ ಲೈಬ್ರೆರಿ, ಅಲ್ಲಿಂದ ಡ್ಯಾನ್ಸ್ ಪರ್ಫಾರ್ಮೆನ್ಸ್, ಮುಂದೆ ಜೂಡೋ ಕರಾಟೆ, ನಂತರ ಬೆಳೆಯುತ್ತಿರುವ ಮಕ್ಕಳ ಮೈದಾನಗಳಿಗೆ ಎಡತಾಕುತ್ತಲೇ ಇರಬೇಕಾಗುತ್ತದೆ.

12240869_1685722391671979_4256542526573561293_o

ಹೊಸ ಯೋಚನೆ ಹುಟ್ಟಿಬರಲಿ : ಗ್ಲೋಬಲ್ ಎಂಟರ್‌ ಪ್ರೈಸಸ್‌ ಮಾನಿಟರ್‌ನ ಮ್ಯಾಗಿ ಕಾರ್ನ್‌ಳ ದುಃಖವೆಂದರೆ, ಇಂಗೆಂಡ್‌ನಂಥ ಉನ್ನತ ದೇಶದಲ್ಲೂ ಸಣ್ಣಪುಟ್ಟ ಉದ್ಯಮಗಳಲ್ಲೂ ಹೆಂಗಸರೇ ಮಾಲೀಕರಾಗಿರುವುದು ಅಪರೂಪ ಎಂಬುದು. 12%-18% ಬೇರೆ ಬೇರೆ ದೇಶಗಳಲ್ಲಿ. ಹೆಂಗಸರಿಗೆ ಈಗಲೂ ಇಂಥ ಉದ್ಯಮ ನಡೆಸುವಲ್ಲಿ ಸಾವಿರಾರು ಅಡ್ಡಿಗಳಿವೆ, ಅವರು ಗಂಡ ಮನೆ, ಮಕ್ಕಳ ಸೇವೆಯಲ್ಲೇ ಇದ್ದುಬಿಡುತ್ತಾರೆ. ಯಾವ ಉದ್ಯಮಗಳಲ್ಲಿ ಹೆಂಸಗರು ಮಾಲೀಕರೋ, ಅಲ್ಲೂ ದುಡಿಯುವ ಮಹಿಳೆಯರು ಕೇವಲ 50% ಮಾತ್ರ. ಧರ್ಮದ ನೆಪವೊಡ್ಡಿ ಗಂಡಸರು ಈಗಲೂ ಹೆಂಗಸರಿಗೆ ಅವಕಾಶವಿಲ್ಲದಂತೆ ಮಾಡುತ್ತಿದ್ದಾರೆ.? ಈಗಾದರೂ ಹೊಸ ಯೋಚನೆ ಮೂಡುತ್ತಿದೆಯೇ? ಕೋವಿಡ್‌ ನಂತರ ಹಾಗಾಗಬಹುದೆಂದು ಮ್ಯಾಗಿ ನಂಬುತ್ತಾಳೆ.

3osb7nhu-large

ಉತ್ತಮ ವಿಧಾನ : ಹಾಲೆಂಡಿನಲ್ಲಿ ಕೋವಿಡ್‌ ಟೆಸ್ಟಿಂಗ್‌ಗಾಗಿ ಸಿಬ್ಬಂದಿ, ವಾಹನಗಳ ಕೊರತೆ ನೀಗಿಸಲು ಹೊಸ ವಿಧಾನ ಹುಡುಕಲಾಗಿದೆ. ಹಾಲೆಂಡಿನ ಆಸ್ಪತ್ರೆಗಳಲ್ಲಿ ಫೋನಿನಲ್ಲಿ ಟೆಸ್ಟಿಂಗಿಗಾಗಿ ಟೈಂ ಫಿಕ್ಸ್ ಮಾಡಿಕೊಳ್ಳಿ, ಸಮಯಕ್ಕೆ ಸರಿಯಾಗಿ ಅಲ್ಲಿಗೆ ತಲುಪಿರಿ. ಇದರಲ್ಲಿ ಸೋಂಕಿನ ಭಯ ಇಲ್ಲ, ಅನುಕೂಲ ಹೆಚ್ಚು. ನೀವು ಸ್ಯಾನಿಟೈಸ್‌ ಮಾಡಿಕೊಳ್ಳಬೇಕಾದ ಚಿಂತೆ ಸಹ ಇಲ್ಲ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ