ಲೈಂಗಿಕ ಸಂಬಂಧಗಳನ್ನೇಕೆ ಸಾಮಾನ್ಯ ಎಂದು ಭಾವಿಸಬಾರದು?

ದೆಹಲಿಯ ಸೆಂಟ್ರಲ್ ರಿಸರ್ವ್ ‌ಪೊಲೀಸ್‌ ಫೋರ್ಸ್‌ನ 30 ವರ್ಷದ ಮಹಿಳಾ ಕಾನ್‌ಸ್ಟೆಬಲ್ ತನ್ನ ಒಬ್ಬ ಸಹೋದ್ಯೋಗಿಯ ವಿರುದ್ಧ ಬಲಾತ್ಕಾರದ ದೂರು ನೀಡಿದಳು.

ತನ್ನ ಡ್ಯೂಟಿ ಜೊತೆಗೆ ಕುಸ್ತಿ ಅಭ್ಯಾಸ ಮಾಡುವ ಈ ಯುವತಿ ಸಿಆರ್‌ಪಿಎಫ್‌ನಲ್ಲಿ ಒಂದು ಸೆಕ್ಸ್ ರಾಕೆಟ್‌ ನಡೆಯುತ್ತಿದೆ. ಮಹಿಳಾ ಕಾನ್‌ಸ್ಟೆಬಲ್‌ಳು ಸ್ನಾನ ಮಾಡುವಾಗ, ಬಟ್ಟೆ ಬದಲಿಸುವಾಗ ವಿಡಿಯೋ ಮಾಡಲಾಗುತ್ತದೆ ಹಾಗೂ ಆ ಬಳಿಕ ಅವರನ್ನು ಬ್ಲ್ಯಾಕ್ ಮೇಲ್ ‌ಮಾಡಲಾಗುತ್ತದೆ ಎಂದು ತನ್ನ ದೂರಿನಲ್ಲಿ ತಿಳಿಸಿದ್ದಳು.

ಇದರಿಂದ ಸ್ಪಷ್ಟವಾಗುವ ಒಂದು ವಿಷಯವೆಂದರೆ, ಸೇನೆಯಿಂದಾಗಿ ದೇಶದ ಮಹಿಳೆಯರು ಸುರಕ್ಷಿತವಾಗಿದ್ದಾರಾ....?

ಸೈನ್ಯದ ಯುದ್ಧದ ಮುಂಚೂಣಿಯಲ್ಲಿ ಮಹಿಳೆಯರ ಉಪಸ್ಥಿತಿಯ ಬಗ್ಗೆ ಕೆಲವು ಅಧಿಕಾರಿಗಳೇ ಅಪಸ್ಪರ ಎತ್ತಿದ್ದರು. ಅವರಿಗಿದ್ದ ಹೆದರಿಕೆಯೆಂದರೆ, ಸೈನಿಕರು ಹುಡುಗಿಯರನ್ನು ಬಿಟ್ಟುಕೊಡುವುದಿಲ್ಲ ಎನ್ನುವುದಾಗಿತ್ತು. ಮಹಿಳೆಯರ ಬಗ್ಗೆ ಕಾನೂನು ಹಾಗೂ ಸುವ್ಯವಸ್ಥೆಯನ್ನು ಜಾರಿಗೊಳಿಸವವರ ನಿಸ್ಸಹಾಯಕತೆ ಹಾಗೂ ಕುಕೃತ್ಯದ ಬಗ್ಗೆ ಖೇದವಾಗುತ್ತದೆ.

ವಾಸ್ತವದಲ್ಲಿ ಮಹಿಳೆಯರನ್ನು ಹೇಗಾದರೂ ಮಾಡಿ ಮನೆಯಲ್ಲಿ ಬಂಧಿಯಾಗಿಡಬೇಕು ಎನ್ನುವುದು ಎಲ್ಲರ ಯೋಚನೆಯಾಗಿರುತ್ತದೆ. ಧರ್ಮ ಆರಂಭದಿಂದಲೇ ಮನೆಯಲ್ಲಿ ಕೂಡಿ ಹಾಕುವ ಆಮಿಷ ತೋರಿಸಿ, ಧರ್ಮದ ಹೆಸರಿನಲ್ಲಿ ಧನ ಸಂಪತ್ತು, ಪ್ರಾಣ ಕೊಡುವುದು ಹಾಗೂ ತೆಗೆಯಲು ಕೂಡ ಅವರನ್ನು ಸನ್ನದ್ದುಗೊಳಿಸಿತು. ಪುರುಷರಿಗೆ ಲೈಂಗಿಕ ಸುಖಕ್ಕಾಗಿ ಮಹಿಳೆಯರು ಹಾಗೂ ಕಡಿಮೆ ಹಣದಲ್ಲಿ ಗುಲಾಮರು ದೊರೆಯುತ್ತಿದ್ದಾಗ ಅವರೇಕೆ ಧರ್ಮವನ್ನು ಹೊಗಳುವುದಿಲ್ಲ. ರಾಜರಿಗೆ ಹಾಗೂ ಆಡಳಿತಗಾರರಿಗೆ ಪ್ರಾಚೀನ ಕಾಲದಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಕೊಡುವ ಬಗ್ಗೆ ಯಾವುದೇ ಆಕ್ಷೇಪ ಇರಲಿಲ್ಲ. ಏಕೆಂದರೆ ಉತ್ಪಾದನೆ ಹೇಗಾದರೂ ಹೆಚ್ಚಬೇಕು, ತೆರಿಗೆ ಜಾಸ್ತಿ ಬರಬೇಕು ಎನ್ನುವುದು ಅವರ ಧೋರಣೆಯಾಗಿತ್ತು. ಕಂದಾಚಾರಿಗಳು, ಅತ್ಯಾಚಾರಕ್ಕೆ ಹೊಣೆ ಮಹಿಳೆಯರೇ ಎಂದು ಹೇಳಬೇಕು ಎನ್ನುವುದರ ಮೂಲಕ ತಮ್ಮ ಅಭಿಲಾಷೆಯನ್ನು ಈಡೇರಿಸಿಕೊಳ್ಳತೊಡಗಿದರು.

ಮಹಿಳೆಯರ ಮೇಲೆ ಆರೋಪ ಹೊರಿಸುವವರನ್ನು ಗುಣಗಾನ ಮಾಡುವ ಪದ್ಧತಿ ಎಲ್ಲ ಧರ್ಮಗಳಲ್ಲೂ ಕಂಡುಬಂದಿದೆ. ರಾಮ ಸೀತೆಯನ್ನು ರಾಣನ ಲಂಕೆಯಿಂದ ವಾಪಸ್‌ ಕರೆದುಕೊಂಡು ಬಂದಾಗ, ಆಡಿದ ಮಾತುಗಳು ನಿಂದನಾರ್ಹ. ಆದರೆ ರಾಮನನ್ನು ಈಗಲೂ ಪೂಜಿಸುವುದಷ್ಟೇ ಅಲ್ಲ, ಕೇಂದ್ರದ ಶಕ್ತಿಯ ಕೇಂದ್ರಬಿಂದುವನ್ನಾಗಿ ಮಾಡಿಕೊಳ್ಳಲಾಗಿದೆ.

ಪೊಲೀಸ್‌ ವ್ಯವಸ್ಥೆ ಸರಿಯಾಗಿದ್ದರೆ ಅತ್ಯಾಚಾರಗಳನ್ನು ತಡೆಹಿಡಿಯಬಹುದು ಎಂದು ಯಾವ ಮಹಿಳೆಯರು ಹೇಳುತ್ತಾರೊ, ಅವರು ತಪ್ಪುಕಲ್ಪನೆಯಲ್ಲಿ ಈ ಮಾತು ಆಡಿರಬಹುದು ಎನಿಸುತ್ತದೆ. ಪೊಲೀಸ್‌ ಪಡೆಯಲ್ಲಿ ಒಳಗೊಳಗೇ ಮಹಿಳಾ ಪೊಲೀಸ್‌ ಕಾನ್‌ಸ್ಟೆಬಲ್‌ಗಳ ವಿರುದ್ಧ ದುರ್ವರ್ತನೆ ತೋರಿಸಲಾಗುತ್ತದೆ. ದೊಡ್ಡ ವೇತನ ಹಾಗೂ ಗಳಿಕೆಯ ಆಸೆಯಿಂದ ಅವರು ಬಾಯಿ ಬಿಡದೇ ಸುಮ್ಮನಿರುತ್ತಾರೆ. ಆದರೆ ಬಾಹ್ಯ ಸಮಾಜದಲ್ಲಿ ಅವರ ಬಗ್ಗೆ ಹೆದರಿಕೆಯಿರುತ್ತದೆ.

ಅತ್ಯಾಚಾರದಿಂದ ರಕ್ಷಿಸಿಕೊಳ್ಳುವ ಉಪಾಯವೆಂದರೆ, ಸೆಕ್ಸ್ ಸಂಬಂಧಗಳನ್ನು ಅತ್ಯಂತ ಸಾಮಾನ್ಯವೆಂದು ಭಾವಿಸಬೇಕು ಹಾಗೂ ಅವನ್ನು ಚಾರಿತ್ರ್ಯದೊಂದಿಗೆ ಜೋಡಿಸಿ ನೋಡಬಾರದು.

ಮಹಿಳೆಯರು ಯಾರೊಬ್ಬರ ಆಸ್ತಿ ಅಲ್ಲ ಮತ್ತು ಮಹಿಳೆಯರಿಗೆ ಸೆಕ್ಸ್ ನಿಂದಾಗಿ ಅವರ ಮದುವೆ ಹಾಗೂ ಹಕ್ಕುಗಳ ಮೇವೆ ಯಾವುದೇ ಪರಿಣಾಮ ಉಂಟಾಗದು. ಇದನ್ನೇ ಅವರ ಮನಸ್ಸಿನಲ್ಲಿ ಬೇರೂರಿಸಬೇಕು. ಏಕೆಂದರೆ ಅತ್ಯಾಚಾರ ತನಗೆ ತಾನೇ ಬ್ಲ್ಯಾಕ್‌ಮೇಲ್‌‌ನ ಒಂದು ಅಸ್ತ್ರವಾಗಬಾರದು. ಇತ್ತೀಚೆಗೆ ಅತ್ಯಾಚಾರಿಗಳು ಆ ಸಮಯದ ವಿಡಿಯೋ ಮಾಡುತ್ತಿದ್ದಾರೆ. ಏಕೆಂದರೆ ಸಂತ್ರಸ್ತೆಯನ್ನು ಮತ್ತೆ ಮತ್ತೆ ಸೆಕ್ಸ್ಗೆ ಪೀಡಿಸಲು ಸಾಧ್ಯವಾಗಬೇಕು ಎನ್ನುವುದು ಅವರ ತಂತ್ರವಾಗಿರುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ