ಎಲ್ಲೆಲ್ಲೂ ಪ್ರಾಣಿಗಳಿಂದ ತಯಾರಾದ ವಸ್ತುಗಳು ಮಾರಾಟ ಆಗುತ್ತಿರುವಾಗ ಶುದ್ಧ ಸಸ್ಯಾಹಾರಿ ವ್ಯಕ್ತಿಗೆ ತನ್ನ ಅಸ್ತಿತ್ವ ಕಾಪಾಡಿಕೊಳ್ಳುವುದು ಕಷ್ಟಕರ. ಶುದ್ಧ ಸಸ್ಯಾಹಾರಿ ವ್ಯಕ್ತಿಗೆ ಯೂರೋಪ್‌ನಲ್ಲಿ `ವೇಗನ್' ಎಂದು ಕರೆಯಲಾಗುತ್ತದೆ. ಪ್ರಾಣಿಗಳಿಂದ ತಯಾರಾದ ಪದಾರ್ಥಗಳನ್ನು `ವೆಜ್' ಎಂದು ಹೇಳಿ ತನಗೆ ಬಡಿಸಲಾಗುತ್ತಿಲ್ಲ ತಾನೇ ಎಂದು ಆತ ಸದಾ ಎಚ್ಚರದಿಂದ ಇರಬೇಕಾಗುತ್ತದೆ. ಹೀಗಾಗಿ ಅವರು ವೆಜ್ ಜೊತೆ ನಾನ್‌ವೆಜ್ ಆಹಾರ ಇರುವ ಹೋಟೆಲ್‌ಗೆ ಹೋಗಲು ಕೂಡ ಇಚ್ಛಿಸುದಿಲ್ಲ.
ನರಾಸ್ ಕ್ರಾಕರಿ ತಯಾರಿಸುವ ಒಂದು ಕಂಪನಿ ಇದ್ದು, ಅದರ ಪ್ಲೇಟುಗಳ ಕೆಳಭಾಗದಲ್ಲಿ 100% ವೆಜಿಟೇರಿಯನ್ ಎಂಬ ಮೊಹರು ಹಾಕಲಾಗಿರುತ್ತದೆ. ಏಕೆಂದರೆ ಬೋನ್ ಚೈನಾ ಪ್ಲೇಟ್‌ಗಳ ಮೇಲೆ ಮೂಳೆಗಳ ತುಂಡುಗಳು ಬೇಕಾಗುತ್ತವೆ. ಆದರೆ ಶಾಂಪೂವಿನ ಬಾಟಲ್‌ನ ಮೇಲೆ 100% ಶುದ್ಧ ಸಸ್ಯಾಹಾರಿ ಎಂದು ಹಾಕಲಾಗಿರುತ್ತದೆಯೇ?
ಯಾವುದೂ ಸಸ್ಯಾಹಾರವಲ್ಲ
ಪ್ರಾಣಿಗಳ ಮೂಳೆಗಳು, ಅಂಡಾಶಯ, ಕರುಳು, ಶ್ವಾಸಕೋಶ, ಗ್ರಂಥಿ, ಮೆದುಳು, ಬೆನ್ನುಮೂಳೆ ಅವುಗಳ ದೇಹದ ಕೆಮಿಕಲ್‌ನ್ನು ಬಹಳಷ್ಟು ದೈನಂದಿನ ಬಳಕೆಯ ವಸ್ತುಗಳಲ್ಲಿ ಸೇರಿಸಲಾಗಿರುತ್ತದೆ. `ವೇಗನ್'ಗಳು ಅವನ್ನು ಶುದ್ಧ ಸಸ್ಯಾಹಾರಿ ಎಂದು ಭಾವಿಸಿ ಖುಷಿಯಿಂದ ಸೇವಿಸುತ್ತಿರುತ್ತಾರೆ. ಔಷಧಗಳಲ್ಲೂ ಕೂಡ ಈ ಪ್ರಾಣಿಗಳ ರಾಸಾಯನಿಕ ಅಂಶಗಳನ್ನು ಸೇರಿಸಲಾಗಿರುತ್ತದೆ. ಕೆಲವು ಬಗೆಯ ಔಷಧಿಗಳು ಹಾಗೂ ಸೌಂದರ್ಯ ಪ್ರಸಾಧನಗಳಲ್ಲಿ ತೀರಾ ಈಚೆಗಷ್ಟೇ ಸತ್ತ ಅಥವಾ ಸಾಯಿಸಲ್ಪಟ್ಟ ಪ್ರಾಣಿಗಳ ಕೆಮಿಕಲ್ಸ್ ಬಳಸಲಾಗಿರುತ್ತದೆ. ಗೋವುಗಳ ಲಿವರ್‌ನಿಂದ ವಿಟಮಿನ್ ಬಿ12 ತಯಾರಿಸಲ್ಪಡುತ್ತದೆ.
ಗ್ಲೈಕೋಜಿನ್‌ನ್ನು ಪ್ಯಾಂಕ್ರಿಯಾಸ್‌ನಿಂದ ತೆಗೆಯಲಾಗುತ್ತದೆ. ಅದನ್ನು ಬ್ಲಡ್ ಶುಗರ್ ಹೆಚ್ಚಿಸಲು ಬಳಸಲಾಗುತ್ತದೆ.
ಮೆಲಾಟಾನಿಕ್‌ನ್ನು ಪ್ರಾಣಿಗಳ ಪೀನಲ್ ಗ್ಲ್ಯಾಂಡ್‌ನಿಂದ ಹೊರತೆಗೆಯಲಾಗುತ್ತದೆ. ಅದನ್ನು ನಿದ್ರಾಹೀನತೆಯ ಔಷಧಿಯಾಗಿ ಉಪಯೋಗಿಸಲಾಗುತ್ತದೆ. ಪ್ರಾಣಿಗಳು ಹಾಗೂ ಹಂದಿಯ ಹೊಟ್ಟೆಯ ವೈರ್‌ನ್ನು ಲಿವರ್‌ನ ರೋಗಗಳು, ಮಲಬದ್ಧತೆ ಮುಂತಾದ ತೊಂದರೆಗಳಲ್ಲಿ ಬಳಸಲಾಗುತ್ತದೆ. ಹ್ಯಾಲುರೋನಿಕ್ ಆ್ಯಸಿಡ್‌ನ್ನು ಸೌಂದರ್ಯ ಉತ್ಪಾದನೆಗಳಲ್ಲಿ ಬಳಸಲಾಗುತ್ತದೆ. ಅದನ್ನು ಪ್ರಾಣಿಗಳ ಕೀಲುಗಳಿಂದ ತೆಗೆಯಲಾಗುತ್ತದೆ.
ಪ್ರಾಣಿಗಳೊಂದಿಗೆ ಕ್ರೂರತೆ
ಸುವಾಸನಾಯುಕ್ತ ಪದಾರ್ಥಗಳಲ್ಲಿ ಪ್ರಾಣಿಜನ್ಯ ಉತ್ಪನ್ನಗಳು ಸಾಕಷ್ಟು ಬಳಸಲ್ಪಡುತ್ತವೆ. ಮಸ್ಕ್, ಕಸ್ತೂರಿ ದುಬಾರಿ ಪರ್ಫ್ಯೂಮ್ ಗಳಲ್ಲಿ ಬಳಸಲ್ಪಡುತ್ತದೆ. ಅದನ್ನು ಹಿಮಾಲಯದ ಮಸ್ಕ್ ತಳಿಯ ಜಿಂಕೆಗಳಿಂದ ಪಡೆಯಲಾಗುತ್ತದೆ. ಜಿಂಕೆಯನ್ನು ಸಾಯಿಸಿ ಅದರ ಗ್ರಂಥಿಯನ್ನು ಒಣಗಿಸಲಾಗುತ್ತದೆ. ಬಳಿಕ ಅದನ್ನು ಆಲ್ಕೋಹಾಲ್‌ನಲ್ಲಿ ಮುಳುಗಿಸಲಾಗುತ್ತದೆ. ಆ ಬಳಿಕವೇ ಕಸ್ತೂರಿ ಲಭಿಸುತ್ತದೆ.
ಕೆಸ್ಟೊರಿಯಂ ಪೇಸ್ಟ್ ಜೆಲ್ ಒಂದು ಬಗೆಯ ಕೆಮಿಕಲ್ ಆಗಿದ್ದು, ಅದನ್ನು ಪ್ರಾಣಿಗಳ ಲಿವರ್‌ನಿಂದ ತೆಗೆಯಲಾಗುತ್ತದೆ. ಹೊಸ ಲೆದರ್‌ಗೆ ಸುವಾಸನೆ ನೀಡಲು ಹಾಗೂ ವಾಹನಗಳ ಅಪ್ ಹೋಲ್ ಸ್ಟ್ರೀನಲ್ಲಿ ಬಳಸಲಾಗುತ್ತದೆ.
ಪ್ರಾಣಿಗಳ ಗುದದಿಂದ ಹೊರಹೊಮ್ಮುವ ಕೆಮಿಕಲ್ಸ್ ಕೂಡ ಸುಗಂಧ ದ್ರವ್ಯಗಳಲ್ಲಿ ಬಳಸಲಾಗುತ್ತದೆ. ಈ ಕೆಮಿಕಲ್ ಲಭ್ಯವಾಗುವುದು ಪ್ರಾಣಿಗಳು ಜೀವಂತವಾಗಿರುವಾಗ ಹಾಗೂ ಅವುಗಳೊಂದಿಗೆ ಕ್ರೂರವಾಗಿ ನಡೆದುಕೊಂಡಾಗ, ನಿಸರ್ಗ ಆ ವಾಸನೆಯನ್ನು ಕೊಟ್ಟಿರುವುದು ಬೇರೆ ಪ್ರಾಣಿಗಳನ್ನು ಹೆದರಿಸಲು ಅಥವಾ ತಮ್ಮ ಸಂಗಾತಿಗಳನ್ನು ಎಚ್ಚರಿಸಲು. ಆದರೆ ಈಗ ಅದನ್ನು ಔದ್ಯಮಿಕವಾಗಿ ಬಳಸಲಾಗುತ್ತದೆ. ಆಫ್ರಿಕಾದಲ್ಲಿ ಇಂತಹ ಅದೆಷ್ಟೋ ಫಾರ್ಮ್ ಗಳಿದ್ದು, ಅಲ್ಲಿಂದ ಈ ಬಗೆಯ ಕೆಮಿಕಲ್ಸ್ ಜಗತ್ತಿನಾದ್ಯಂತ ರವಾನಿಸಲಾಗುತ್ತದೆ.