ಆಹಾರ ನಿಮ್ಮ ಚರ್ಮದ ಬಣ್ಣ, ಕೂದಲಿನ ಸ್ವಾಸ್ಥ್ಯ, ಮೂಡ್‌ನ್ನು ಸಹ ಪ್ರಭಾವಿತಗೊಳಿಸುತ್ತದೆ. ನೀವು ಆಂತರಿಕವಾಗಿ ಆರೋಗ್ಯವಂತರಾಗಿದ್ದರೆ, ನಿಮ್ಮ ಚರ್ಮ ಸಹಜವಾಗಿಯೇ ಹೊಳೆಯತೊಡಗುತ್ತದೆ. ಅದಕ್ಕೆ ಕೃತಕ ಸಾಧನಗಳ ಅಗತ್ಯವೇ ಇಲ್ಲ. ನಿಮ್ಮ ಚರ್ಮವನ್ನು ನೋಡಿದಾಗ ನಿಮ್ಮ ಆರೋಗ್ಯದ ಗುಟ್ಟು ತಿಳಿಯುತ್ತದೆ. ಆಹಾರದಲ್ಲಿ ಧಾರಾಳವಾಗಿ ಆ್ಯಂಟಿ ಆಕ್ಸಿಡೆಂಟ್ಸ್ ಮತ್ತು ಮಿನರಲ್ಸ್ ಬಳಸುವುದರಿಂದ ಅದು ನಿಮ್ಮ ಮಾನಸಿಕ ಒತ್ತಡವನ್ನು ನಿಯಂತ್ರಿಸುವುದು ಮಾತ್ರವಲ್ಲದೆ, ನಿಮ್ಮ ಚರ್ಮವನ್ನೂ ಹೊಳೆಹೊಳೆಯುವಂತೆ ಮಾಡಬಲ್ಲದು. ಚರ್ಮವನ್ನು ಸುಂದರ, ಸ್ವಸ್ಥಗೊಳಿಸುವುದು ಅಸಾಧ್ಯದ ಕೆಲಸವೇನಲ್ಲ.
ಸರಿಯಾದ ಆಹಾರ ಕ್ರಮ ತೂಕವನ್ನು ನಿಯಂತ್ರಿಸುತ್ತದೆ : ಹೆಚ್ಚಿನ ಆಹಾರ ಸೇವನೆ ಅಥವಾ ತಪ್ಪಾದ ಆಹಾರ ಸೇವನೆಯಿಂದ ದೇಹ ತೂಕ ಹೆಚ್ಚುತ್ತದೆ. ಆದರೆ ಇದರರ್ಥ ನೀವು ಮಾಡೆಲ್‌ನಂತೆ ನಿಮ್ಮ ದೇಹವನ್ನು ಬಿಲ್‌ಕುಲ್ ತೆಳುವಾಗಿಟ್ಟುಕೊಳ್ಳಲೇಬೇಕು ಎಂದೇನಲ್ಲ. ಅದೇ ತರಹ ಸ್ಥೂಲತೆಯೂ ಒಳ್ಳೆಯದಲ್ಲ. ಏಕೆಂದರೆ ಇದು ಶುಗರ್, ಬಿಪಿ, ಹೃದ್ರೋಗಗಳ ತವರು.
ಸಮರ್ಪಕ ಆಹಾರ ಬಳಸದಿರುವುದರಿಂದ ಕೂದಲು ಶುಷ್ಕ ಮತ್ತು ನಿರ್ಜೀವ ಆಗಿಬಿಡುತ್ತದೆ : ನಿಮ್ಮ ಕೂದಲಿಗೂ ಸಹ ಪೋಷಣೆಯ ಅಗತ್ಯ ಖಂಡಿತಾ ಇದೆ. ಹೀಗಾಗಿ ಆಹಾರದ ನೇರ ಪರಿಣಾಮ ಕೂದಲಿನ ಮೇಲಾಗುತ್ತದೆ. ನಿಮ್ಮ ಆಹಾರದಲ್ಲಿ ವಿಟಮಿನ್ಸ್, ಮಿನರಲ್ಸ್ ನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸುತ್ತಿಲ್ಲವಾದರೆ, ಹೇರ್ ಫಾಲಿಕ್ಸ್ ದುರ್ಬಲವಾಗುತ್ತದೆ. ಇದರಿಂದ ಕೂದಲು ದುರ್ಬಲಗೊಂಡು ತೆಳುವಾಗುತ್ತಾ, ಉದುರತೊಡಗುತ್ತದೆ.
ಉಗುರುಗಳಿಗೂ ಬೇಕು ಪೋಷಣೆ : ನಿಮ್ಮ ಉಗುರು ಸುಲಭವಾಗಿ ಮುರಿಯುವ ಹಾಗಿದ್ದರೆ, ಇದರರ್ಥ ನೀವು ನಿಮ್ಮ ಆಹಾರದಲ್ಲಿ ಅಗತ್ಯವಾಗಿ ಬದಲಾವಣೆ ಮಾಡಿಕೊಳ್ಳಬೇಕು ಅಂತ. ಕೂದಲಿನ ತರಹವೇ ಉಗುರಿಗೂ ಸಹ ಪೋಷಣೆಯ ಅಗತ್ಯವಿದೆ. ಹೀಗಾಗಿ ತಾಜಾ ತರಕಾರಿ, ಮೊಳಕೆಕಾಳು, ಕಡಿಮೆ ಕೊಬ್ಬಿನಂಶದ ಡೇರಿ ಪ್ರಾಡಕ್ಟ್ಸ್, ಮೊಟ್ಟೆ, ವೈಟ್‌ಲೀನ್ ಮೀಟ್ ಸೇವಿಸಬೇಕು. ಇದರಿಂದ ಉಗುರಿಗೆ ಸಾಕಷ್ಟು ಪ್ರಮಾಣದಲ್ಲಿ ಪ್ರೋಟೀನ್ ಅಂಶ ಸಿಗುತ್ತದೆ.
ಪೋಷಕ ಪದಾರ್ಥಗಳ ಅಭಾವ ದಲ್ಲಿ ಮಾಂಸಖಂಡಗಳು ದುರ್ಬಲ ಹಾಗೂ ಚಿಕ್ಕದಾಗುತ್ತವೆ : ನಿಮ್ಮ ಮಾಂಸಖಂಡಗಳು ಹಾಗೂ ಸೌಂದರ್ಯಕ್ಕೆ ನೇರ ಸಂಬಂಧವಿದೆ. ನಿಮ್ಮ ಮಾಂಸಖಂಡಗಳು ಕ್ರಮೇಣ ದುರ್ಬಲವಾಗತೊಡಗಿದಂತೆ ನೀವು ಯಾವುದೇ ವರ್ಕ್‌ಔಟ್ ಮಾಡಲಾಗದು, ದೂರದ ವಾಕಿಂಗ್ ಆಗದು. ಇದರ ಪರಿಣಾಮ ನಿಮ್ಮ ದೇಹದ ಮುದ್ರೆಗಳ ಮೇಲೆ ಆಗುತ್ತದೆ. ಹೀಗಾಗಿ ನಿಮ್ಮ ಮಾಂಸಖಂಡಗಳನ್ನು ಅಗತ್ಯ ಸಶಕ್ತಗೊಳಿಸಿ. ಇದಕ್ಕಾಗಿ ಧಾರಾಳ ಪ್ರೋಟೀನ್ ಅಂಶವುಳ್ಳ ಹಾಲು, ಮೊಳಕೆಕಾಳು, ಸೋಯಾ ಇತ್ಯಾದಿ ಸೇವಿಸಿ. ಆಗ ಅವು ತಮ್ಮ ಕೆಲಸವನ್ನು ಸರಿಯಾಗಿ ಮಾಡುತ್ತವೆ.
ನೀವು ಏನೇ ಸೇವಿಸಿದರೂ, ಅದು ನಿಮ್ಮ ಚರ್ಮದಲ್ಲಿ ಪ್ರತಿಫಲಿಸುತ್ತದೆ : ಶುಷ್ಕ ಮತ್ತು ನಿರ್ಜೀವ ತ್ವಚೆ ನಿಮ್ಮ ಆಹಾರದ್ದೇ ಪರಿಣಾಮವಾಗಿದೆ. ನೀವು ಪ್ರೋಟೀನ್‌ನ್ನು ಧಾರಾಳ ಸೇವಿಸಿದ್ದೇ ಆದಲ್ಲಿ, ತಾಜಾ ಹಸಿ ತರಕಾರಿ, ಹಣ್ಣುಗಳನ್ನು ಹೆಚ್ಚು ಸೇವಿಸಿದರೆ, ಆಗ ಮಾತ್ರ ನಿಮ್ಮ ಚರ್ಮ ಯೌವನಭರಿತ ಆಗಿರುತ್ತದೆ, ಸದಾ ತಾರುಣ್ಯಕಾಂತಿ ಚೆಲ್ಲುತ್ತದೆ. ಪ್ರೋಸೆಸ್ಡ್ ಫುಡ್, ಕೊಬ್ಬು ತುಂಬಿದ ಆಹಾರ ಪದಾರ್ಥಗಳಿಂದ ಆದಷ್ಟೂ ದೂರವಿರಿ. ಇದರಿಂದ ಚರ್ಮ ಜಿಡ್ಡುಜಿಡ್ಡಾಗುತ್ತದೆ. ಆಗ ಸಹಜವಾಗಿಯೇ ಆ್ಯಕ್ನೆ ಮೊಡವೆಗಳು ಹೆಚ್ಚುತ್ತವೆ.
ಆರೋಗ್ಯಕರ ಆಹಾರ ಏಜಿಂಗ್ ಪ್ರಕ್ರಿಯೆ ತಡೆಯಬಲ್ಲದು : ನಿಮ್ಮ ಆಹಾರದ ಪರಿಣಾಮ ನಿಮ್ಮ ದೇಹದ ಮೇಲಾಗುತ್ತಿರುವ ಏಜಿಂಗ್ ಪ್ರಕ್ರಿಯೆಯ ಮೇಲೂ ಆಗುತ್ತದೆ. ಆ್ಯಂಟಿ ಆಕ್ಸಿಡೆಂಟ್ಸ್ ಯುಕ್ತ ಆಹಾರ, ಆರ್ಗ್ಯಾನಿಕ್ ಹಣ್ಣು ತರಕಾರಿಗಳು ಫ್ರೀ ರಾಡಿಕಲ್ಸ್ ನ್ನು ದೂರ ಮಾಡಿ ಚರ್ಮವನ್ನು ಸುಕ್ಕು, ನೆರಿಗೆಗಳಿಂದ ರಕ್ಷಿಸುತ್ತದೆ.
ಆಹಾರದ ಪರಿಣಾಮ ಕಂಗಳು, ರೆಪ್ಪೆಗಳ ಮೇಲೂ ಆಗುತ್ತದೆ : ನೀವು ಸಮರ್ಪಕ ಆಹಾರ ಸೇವಿಸುತ್ತಿಲ್ಲವಾದರೆ ಹಾಗೂ ನೀರು ಕುಡಿಯುತ್ತಿಲ್ಲವಾದರೆ, ಇದರ ನೇರ ದುಷ್ಪರಿಣಾಮ ನಿಮ್ಮ ಕಂಗಳು ಹಾಗೂ ರೆಪ್ಪೆಗಳ ಮೇಲಾಗುತ್ತದೆ. ರೆಪ್ಪೆಗಳ ಹಾಗೂ ಹುಬ್ಬಿನ ಕೂದಲು ಸಹ ಉದುರ ತೊಡಗುತ್ತವೆ. ಸರಿಯಾದ ಆಹಾರ ಸೇವಿಸದಿದ್ದರೆ ಕಂಗಳ ಕಾಂತಿ ಕ್ರಮೇಣ ಕುಗ್ಗುತ್ತದೆ.
ಸೌಂದರ್ಯಕ್ಕಾಗಿ ಪೋಷಕಾಂಶಗಳು ವಿಟಮಿನ್ಸ್ : ಇತರ ವಿಟಮಿನ್‌ಗಿಂತ ಇದು ಹೆಚ್ಚು ಶಕ್ತಿಶಾಲಿ ಆ್ಯಂಟಿ ಆಕ್ಸಿಡೆಂಟ್ ಆಗಿದೆ. ಇಕೊಲೋಜೆನ್ ತಯಾರಿಯಲ್ಲಿ ನೆರವಾಗುತ್ತದೆ. ಅದು ಚರ್ಮವನ್ನು ಆದಷ್ಟೂ ಮೃದುವಾಗಿಡಲು ಸಹಕರಿಸುತ್ತದೆ. ಬ್ರೋಕ್ಲಿ, ಮೊಳಕೆಕಾಳು, ಸೀಬೆಕಾಯಿ, ದ್ರಾಕ್ಷಿ, ನೆಲ್ಲಿಕಾಯಿ, ಸ್ಟ್ರಾಬೆರಿ, ನಿಂಬೆ, ಹುಳಿಹಣ್ಣುಗಳು, ಪಾರ್ಸ್ಲೆ ಇತ್ಯಾದಿಗಳಲ್ಲಿ ವಿಟಮಿನ್ಸ್ ಧಾರಾಳ ಅಡಗಿದೆ.
ಸಿಲೆನಿಯಮ್ : ಇದೂ ಸಹ ಶಕ್ತಿಶಾಲಿ ಆ್ಯಂಟಿ ಆಕ್ಸಿಡೆಂಟ್ ಆಗಿದೆ, ಇದು ಚರ್ಮದ ಬಳುಕುವಿಕೆಯನ್ನು ಕಾಪಿಡುತ್ತದೆ. ಅಖರೋಟ್, ಟ್ಯೂನಾ, ಲಿವರ್, ವೀಟ್ ಜೆರ್ಮ್, ಈರುಳ್ಳಿ, ಬೆಳ್ಳುಳ್ಳಿ, ಸೀಫುಡ್, ಇಡಿಯಾದ ದವಸಧಾನ್ಯ, ಬ್ರೌನ್ ರೈಸ್, ಪೌಲ್ಟ್ರಿ ಪ್ರಾಡಕ್ಟ್ಸ್ ಇತ್ಯಾದಿಗಳಲ್ಲಿ ಸಿಲೆನಿಯಮ್ ಧಾರಾಳ ಅಡಗಿದೆ.
ವಿಟಮಿನ್ : ಇದಂತೂ ಚರ್ಮದ ಸ್ವಾಸ್ಥ್ಯ, ಸೌಂದರ್ಯಕ್ಕೆ ಅತಿ ಅಗತ್ಯ. ಇದನ್ನು ವಿಟಮಿನ್ ಜೊತೆ ಬೆರೆಸಿಕೊಂಡು ಚರ್ಮವನ್ನು ಕ್ಯಾನ್ಸರ್‌ನಿಂದ ರಕ್ಷಿಸಬಹುದು. ವಿಟಮಿನ್‌ನಲ್ಲಿ ಆ್ಯಂಟಿ ಆಕ್ಸಿಡೆಂಟ್ಸ್ ಧಾರಾಳವಾಗಿದ್ದು, ಅದು ಮಾಲಿನ್ಯ, ಹೊಗೆ, ಪ್ರೋಸೆಸ್ಡ್ ಫುಡ್‌ಮತ್ತು ಬಿಸಿಲಿನ ಕಾರಣ ಚರ್ಮದಲ್ಲಿ ಉಂಟಾಗುವ ಫ್ರೀ ರಾಡಿಕಲ್ಸ್ ನ್ನು ನಾಶಪಡಿಸುತ್ತದೆ. ಬಾದಾಮಿ, ಮೊಟ್ಟೆ, ಅಖರೋಟ್, ಅವಕಾಡೋ, ಆ್ಯಸ್ಪೆರಾಗಸ್, ಸೂರ್ಯಕಾಂತಿ ಬೀಜ, ಪೈನ್ ನಟ್ಸ್, ಪಾಲಕ್ ಸೊಪ್ಪು, ಓಟ್‌ಮೀಲ್ ಮತ್ತು ಹಿಪ್ಪೆ ಎಣ್ಣೆ ವಿಟಮಿನ್‌ತುಂಬಿರುವ ಪದಾರ್ಥಗಳು.
ಒಮೇಗಾ 3 : ಇ ಎಸೆನ್ಶಿಯ್ ಫ್ಯಾಟಿ ಆ್ಯಸಿಡ್ ಎನಿಸುತ್ತವೆ. ಇದು ಚರ್ಮದ ಅನೇಕ ರೋಗಗಳಾದ ಎಗ್ಸಿಮಾದಂಥವಕ್ಕೆ ಪರಿಣಾಮಕಾರಿ. ಇವು ಚರ್ಮದಲ್ಲಿ ಮೃದುತ್ವ, ಬಳುಕುವಿಕೆ ಉಳಿಸುತ್ತದೆ. ನಮ್ಮ ದೇಹಕ್ಕೆ ನಿರ್ಮಿಸಲಾಗದು. ಹೀಗಾಗಿ ಇದನ್ನು ಆಹಾರದ ಮೂಲಕ ನಾವು ತೆಗೆದುಕೊಳ್ಳಬೇಕಾಗುತ್ತದೆ. ಅಖರೋಟ್, ಸಾಲ್ಮನ್ ಫಿಶ್, ಅಗಸೆಬೀಜ (ಫ್ಲ್ಯಾಕ್ ಸೀಡ್ಸ್), ಚಿಯಾ ಸೀಡ್ಸ್ ಮುಂತಾದವುಗಳಲ್ಲಿ ಇದು ಧಾರಾಳವಾಗಿದೆ.
ವಿಟಮಿನ್ ಬೀಟಾ ಕೆರೋಟಿನ್ : ವಿಟಮಿನ್ ನಮ್ಮ ಚರ್ಮವನ್ನು ರಿಪೇರಿ ಮಾಡಲು ಪೋಷಣೆ ಒದಗಿಸಲು ಬೇಕೇ ಬೇಕು. ನಿಮ್ಮದು ಡ್ರೈ ಸ್ಕಿನ್ ಆಗಿದ್ದರೆ ಅದರಿಂದ ಮೇಲ್ಪದರ ಉದುರುತ್ತಿದ್ದರೆ, ನಿಮ್ಮ ದೇಹದಲ್ಲಿ ವಿಟಮಿನ್ ಕೊರತೆ ಇದೆ ಎಂದು ತಿಳಿಯಿರಿ. ಬಿಸಿಲಿನಿಂದ ಚರ್ಮದ ಮೇಲಾಗುವ ದುಷ್ಪರಿಣಾಮಗಳನ್ನೂ ಇದು ತಪ್ಪಿಸುತ್ತದೆ. ವಿಟಮಿನ್‌ಬೀಟಾ ಕೆರೊಟಿನ್ ದೊರಕುವ ಮೂಲಗಳೆಂದರೆ ಕ್ಯಾರೆಟ್, ಹಸಿರುಸೊಪ್ಪು, ನುಗ್ಗೇಕಾಯಿ, ಲಿವರ್, ಆ್ಯಸ್ಪೆರಾಗಸ್, ಊಟಿ ಆ್ಯಪಲ್, ಬೀಟ್ ಗ್ರೀನ್, ಸಿಹಿ ಗೆಣಸು, ರೆಡ್ ಪೆಪ್ಪರ್, ಮೊಟ್ಟೆ ಇತ್ಯಾದಿ.
ಸತು : ಇದೊಂದು ಮಹತ್ವಪೂರ್ಣ ಟ್ರೆಸ್ ಮಿನರಲ್. ಇದು ಚರ್ಮದ ಹಾನಿಗೊಂಡ ಭಾಗಗಳನ್ನು ರಿಪೇರಿ ಮಾಡುತ್ತದೆ, ಗಾಯ ಮಾಗಲು ನೆರವಾಗುತ್ತದೆ. ನೀವು ಆ್ಯಕ್ನೆ ಮೊಡವೆಗಳಿಂದ ರೋಸಿಹೋಗಿದ್ದರೆ, ನಿಮ್ಮ ದೇಹದಲ್ಲಿ ಸತು (ಝಿಂಕ್) ಕಡಿಮೆ ಇದೆ ಎಂದರ್ಥ. ಇಡಿಯಾದ ದವಸಧಾನ್ಯ, ಕುಂಬಳ ಬೀಜ, ಬೇಳೆಗಳು, ಶುಂಠಿ, ಅಣಬೆ, ಸೀಫುಡ್, ಆಯಿಸ್ಟರ್, ಪೇಕಾನ್, ಪೌಲ್ಟ್ರಿ ಫುಡ್ ಇತ್ಯಾದಿಗಳಲ್ಲಿ ಧಾರಾಳ ಸತು ಅಡಗಿದೆ.
ಆರೋಗ್ಯಕರ ಚರ್ಮಕ್ಕಾಗಿ ಸಲಹೆಗಳು
ಧಾರಾಳ ನೀರು ಕುಡಿಯಿರಿ : ಹೆಚ್ಚು ನೀರು ಕುಡಿಯುವುದರಿಂದ ಚರ್ಮದ ಆರ್ದ್ರತೆ ನಿರಂತರ ಉಳಿಯುತ್ತದೆ. ದೇಹದಲ್ಲಿನ ಅನಗತ್ಯ ವಿಷಕಾರಿ ವಸ್ತು ಹೊರಹೋಗಲು ದಾರಿಯಾಗುತ್ತದೆ, ಇದರಿಂದ ಚರ್ಮ ಮೃದುವಾಗುತ್ತದೆ.
ಸಲಾಡ್ ಸೇವಿಸಿ : ಆಹಾರದಲ್ಲಿ ಯಾವಾಗಲೂ ತಾಜಾ ಹಸಿ ತರಕಾರಿಯ ಸಲಾಡ್ ಇರಬೇಕು. ಇದಕ್ಕೆ ಮೊಳಕೆಕಾಳು, ಬೆಂದ ಮೊಟ್ಟೆ ಸೇರಿಸಿದರೆ ಇನ್ನೂ ಒಳ್ಳೆಯದು. ಇದರಲ್ಲಿ ಕೆರೋಟಿನಾಯ್ಡ್, ಆ್ಯಂಟಿ ಆಕ್ಸಿಡೆಂಟ್ಸ್ ತುಂಬಿದೆ.
ಅರಿಶಿನದ ಸೇವನೆ : ಭಾರತೀಯ ಅಡುಗೆಯಲ್ಲಿ ಮಸಾಲೆ ರೂಪದಲ್ಲಿ ಅರಿಶಿನದ ಸೇರ್ಪಡೆ ಸರ್ವೇಸಾಮಾನ್ಯ. ಆದರೆ ವಿದೇಶಿಗರು ಇದನ್ನು ಕೃತಕವಾಗಿ ಬೆರೆಸಿ ಸೇವಿಸಬೇಕಾಗುತ್ತದೆ.
ಆರೋಗ್ಯಕರ ಮಾಂಸಾಹಾರ : ವಾರದಲ್ಲಿ 1-2 ಸಲ ಸಾಲ್ಮನ್ ಫಿಶ್ ಸೇವಿಸಿ. ಇದರಲ್ಲಿ ಉತ್ತಮ ಗುಣಮಟ್ಟದ ಒಮೇಗಾ-3 ಫ್ಯಾಟಿ ಆ್ಯಸಿಡ್ ಇರುತ್ತದೆ. ಗ್ರಾಸ್ ಫೆಡ್ ಮೀಟ್, ಗ್ರಾಸ್ ಫೆಡ್ ಬಟರ್ ಸೇವಿಸಿ.
ಆದಷ್ಟೂ ಕಡಿಮೆ ಸಕ್ಕರೆ ಸೇವಿಸಿ : ಸಕ್ಕರೆ ಮತ್ತು ಸಕ್ಕರೆಯಿಂದಾದ ಸಿಹಿ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸದಿರಿ. ಇದು ರಕ್ತದ ಗ್ಲೈಸೆಶನ್ ಹೆಚ್ಚಿಸುತ್ತದೆ. ಇದರಿಂದ ಚರ್ಮದ ಮೇಲ್ಪದರಕ್ಕೆ ಹೆಚ್ಚಿನ ಹಾನಿ ಇದೆ.
– ಡಾ. ಶೃತಿ ಶರ್ಮ