ಮಾಲಿನ್ಯ ತಪ್ಪಿಸುವುದು ಎಲ್ಲರ ಜವಾಬ್ದಾರಿ
ಹೆಚ್ಚುತ್ತಿರುವ ಮಾಲಿನ್ಯ, ಕಸದ ರಾಶಿ, ದುರ್ವಾಸನೆ, ಪೈಪು ನಿಂತು ಹೋಗುವುದು, ರಸ್ತೆಗಳಲ್ಲಿ ದಟ್ಟ ಜನಸಂದಣಿ, ಭರಿಸಲಾಗದ ಟ್ರಾಫಿಕ್….. ಇವೆಲ್ಲದರಿಂದ ಜನ ಬೇಸತ್ತು ಹೋಗುತ್ತಾರೆ. ತಾವೆಲ್ಲರೂ ಇದಕ್ಕೆ ಸಮಾನ ಜವಾಬ್ದಾರರು ಎಂಬುದನ್ನು ಅವರು ಮರೆತುಬಿಡುತ್ತಾರೆ. ಇದರಲ್ಲಿ ಹೆಂಗಸರ ಪಾತ್ರ ಹಿರಿದು, ಏಕೆಂದರೆ ಮನೆಯ ಕಸ ಅತ್ತಿತ್ತ ಎಸೆಯುವವರು ಅವರೇ!
ಯಾವಾಗಿನಿಂದ ಯಂತ್ರಗಳು ಎಲ್ಲ ಕೆಲಸವನ್ನೂ ಸುಲಭವಾಗಿಸಿ, ಹೆಚ್ಚು ಉತ್ಪನ್ನ ನೀಡುತ್ತಿವೆಯೋ? ಜನರಿಗೆ ಕೊಳ್ಳು ಬಾಕ ಸಂಸ್ಕೃತಿ ತೀರಾ ಹೆಚ್ಚಾಗಿದೆ. ದೆಹಲಿಯ ಕರೋಲ್ ಬಾಗ್, ಬೆಂಗಳೂರಿನ ಮೆಜೆಸ್ಟಿಕ್, ಚೆನ್ನೈನ ಟೀನಗರ್ ಇರಲಿ, ಶಾಪಿಂಗ್ ಹಾಳಿ ಅತ್ಯಧಿಕ. ಇಲ್ಲೆಲ್ಲ ಗಾಡಿ ಪಾರ್ಕಿಂಗ್ ಅಥವಾ ಸಾಮಗ್ರಿ ಇಡುವುದು ಅಸಾಧ್ಯವೇ ಸರಿ.
ಈ ಎಲ್ಲ ಸಾಮಗ್ರಿ ಕೊನೆಗೆ ನಮ್ಮ ಮನೆಗಳಿಗೇ ಬರುತ್ತವೆ. ಮನೆಯಲ್ಲಿ ತುರುಕಿಕೊಳ್ಳಲು ಜಾಗವಿಲ್ಲ ಎಂಬ ಬೊಬ್ಬೆ ಏಳುತ್ತದೆ. ಹೊಸ ಹೊಸ ವಾರ್ಡ್ ರೋಬ್, ಅದರ ಮೇಲೆ ಅಟ್ಟಗಳು, ಬೀರುಗಳು ಹೆಚ್ಚುತ್ತವೆ. ಅದರಲ್ಲಿ ಅಷ್ಟೆಲ್ಲ ಸಾಮಗ್ರಿ ತುರುಕಿದರೂ ಮನೆಯಲ್ಲಿ ಜಾಗವೇ ಇಲ್ಲ ಎಂದು ಗೊಣಗುತ್ತಿರುತ್ತಾರೆ.
ಇನ್ನೊಂದು ಕಡೆ ಬಳಸದೆ ಇರುವ ಅಥವಾ ಕನಿಷ್ಠ ಬಳಕೆಯ ಸಾಮಗ್ರಿ, ಮನೆಯಲ್ಲಿ ದೊಡ್ಡ ಕಸದ ರಾಶಿಯಾಗಿ ಬೆಳೆಯುತ್ತಿರುತ್ತದೆ. ಆದರೆ ನಗರವಾಸಿಗಳು ಮಾತ್ರ ಇದೆಲ್ಲದಕ್ಕೆ ಕಾರಣಕರ್ತರಾಗಿ, ತಮ್ಮ ನಗರ ಅಂದಗೆಡುತ್ತಿದೆ ಎಂದು ದೂಷಿಸುತ್ತಿರುತ್ತಾರೆ.
ಆರ್ಥಿಕ ಪ್ರಗತಿಯ ಹೆಸರಲ್ಲಿ ಅರ್ಥರಹಿತ ಈಜಿಪ್ಟ್ ಪಿರಮಿಡ್ ಅಥವಾ ದೆಹಲಿಯ ಕುತುಬ್ ಮಿನಾರ್‌ಗಳ ನಿರ್ಮಿಸುವ ಅಗತ್ಯವಿಲ್ಲ. ಜನರಿಗೆ ಋತುವಿಗನುಸಾರ ರಕ್ಷಿಸಿಕೊಳ್ಳಲು ತಲೆಗೊಂದು ಸೂರು ಬೇಕಷ್ಟೆ. ಅದು ಉಸಿರುಗಟ್ಟಿಸುವಂತಿರಬಾರದು. ಅಲ್ಲಿ ರಾಶಿ ರಾಶಿ ಸಾಮಾನು ಸೇರಿದಷ್ಟೂ ಕಸ ಹೆಚ್ಚುತ್ತದೆ. ಅದು ಮನೆಯ ವಾತಾವರಣ ಕೆಡಿಸಿ, ಹೊರಗಿನ ಪರಿಸರ ಮಾಲಿನ್ಯಕ್ಕಿಂತ ಘೋರವೆನಿಸುತ್ತದೆ.
ಅಮೆರಿಕಾದ ಗಾಯಕಿ ಮೆಡೋನಾ, ತಾನು ಅನಗತ್ಯ ಶಾಪಿಂಗ್ ಮಾಡುವುದೇ ಇಲ್ಲ ಎಂದು ಹೊಸ ವರ್ಷದ ಸಂಕಲ್ಪ ತೊಟ್ಟಿದ್ದಾಳೆ. ಕಳೆದ ವರ್ಷವಿಡೀ ಕೋವಿಡ್ ಹೋರಾಟದಲ್ಲಿ ಈಕೆ ಎಲ್ಲರಿಗೆ ನೆರವಾಗಿದ್ದಾಳೆ. ಹಾಗೆಯೇ ಕೊರೋನಾ ಸಹ ಲಾಕ್‌ಡೌನ್ ಆಗಿದೆ, ಪಾರ್ಟಿಗಳನ್ನು ಸ್ಥಗಿತಗೊಳಿಸಿ ಎಂದಿದೆ. ಈಗಂತೂ ಎಲ್ಲರಿಗೂ 3-4 ಜೊತೆ ಬಟ್ಟೆ ಇರಿಸಿಕೊಂಡು, ಒಗೆದು ಉಡುವ ಪಾಠ ಕಲಿಸಿದೆ.
ಮಹಾತ್ಮಾ ಗಾಂಧೀಜಿಯವರ ಸಾಮಾನುಗಳಂತೂ ಅತಿ ಕನಿಷ್ಠ ಆಗಿದ್ದವು. ಅವರಂತೂ ಆ ಕಾಲದಲ್ಲಿ 100 ಕೋಟಿ ಜನರ ಆರಾಧ್ಯರಾಗಿದ್ದರು, 1-1 ಪಿನ್‌ಸಹ ಎಚ್ಚರಿಕೆಯಿಂದ ಬಳಸುತ್ತಿದ್ದರು.
ಈ ವಿಶ್ವ ಮಾಲಿನ್ಯದಿಂದ ದೂರವಾಗ ಬಯಸಿದರೆ ಮನೆಯ, ಮಕ್ಕಳ, ಇನ್ನಿತರ ಹೆಚ್ಚಿನ ಸಾಮಾನು ಖರೀದಿಸಲೇಬಾರದು. ಮನೆಯಲ್ಲಿ ಯಾವ ಹಳೆಯ ಸಾಮಗ್ರಿ ಇದೆಯೋ ಅದರಲ್ಲಿ ಕೆಲಸ ನಿಭಾಯಿಸಿ. ವಸ್ತು ಕೆಡುವವರೆಗೂ ಅದರ ಬದಲಿಗೆ ಇನ್ನೊಂದು ಖರೀದಿಸಬೇಡಿ. ಉತ್ಪಾದಕರಿಗೆ ನಾವು ಹೇಳಬೇಕಾದ ಮಾತು, `ತಾತಾ ಖರೀದಿಸಿದ್ದನ್ನೇ ನಾವು ಬಳಸುತ್ತೇವೆ, ಸಾಕು!’ ಹೀಗೆ ಮಾಡಿದಾಗ ಮಾತ್ರ ಮನೆಯ ಕಸದ ರಾಶಿ ಕಡಿಮೆ ಆದೀತು.
ಉತ್ಪಾದಕರಿಗೆ ಚೆನ್ನಾಗಿ ಗೊತ್ತಾಗಿರುವ ವಿಚಾರ, ಜನರಿಗೆ ದಿನನಿತ್ಯ ಹೊಸ ಹೊಸ ವಸ್ತು ಬೇಕು ಅಂತ. ಹೀಗಾಗಿ ಅಲ್ಪ ಸ್ವಲ್ಪ ಬದಲಾವಣೆ ಮಾಡಿ ತಮ್ಮ ಉತ್ಪನ್ನವನ್ನು `ಇದೀಗ ಹೊಚ್ಚ ಹೊಸತು…. ಹೊಸ ಫೀಚರ್ಸ್’ ಎಂದು ಬುರುಡೆ ಬಿಡುತ್ತಾ ತಮ್ಮ ಹೊಸ ಉತ್ಪನ್ನ ಹೇರುವ ಸಲುವಾಗಿ ಅಬ್ಬರದ ಪ್ರಚಾರ ಮಾಡುತ್ತಾರೆ. ಈ ಮಾಲಿನ್ಯದ ಚಿಂತೆ ಅವರಿಗೆ ಎಳ್ಳಷ್ಟೂ ಇಲ್ಲ.
ಉತ್ಪಾದಕರು, ಕಂಪನಿಗಳು, ವಿದ್ಯುತ್ ಕೇಂದ್ರ, ಪೆಟ್ರೋಲ್ ರಿಫೈನರಿ ಇತ್ಯಾದಿಗಳು ಮಾಲಿನ್ಯಕ್ಕೆ ಕಾರಣವಲ್ಲ, ಇದಕ್ಕೆ ಮೂಲ ಕಾರಣಕರ್ತರು ಸಾಮಾನ್ಯ ಜನರು. ಮನೆಯ ಹೆಂಗಸರು ಇನ್ನಾದರೂ ರಾಶಿ ರಾಶಿ ಸಾಮಾನು ತಂದು ಅಟ್ಟ ತುಂಬಿಸುವ ಹುಚ್ಚನ್ನು ಬಿಡಲಿ. ಪ್ರತಿದಿನ ಡ್ರಮ್ ಗಟ್ಟಲೆ ಕಸ ಸುರಿಯುವುದೇ ಇವರ ಕೆಲಸ. ಎಲ್ಲಕ್ಕೂ ಹೆಚ್ಚು ಕಸ ಸುರಿಯುವವರನ್ನು ನೋಡಬೇಕೇ? ನಿಮ್ಮ ಕನ್ನಡಿ ಎದುರು ನಿಂತುಕೊಳ್ಳಿ, ನಿಮಗೇ ಗೊತ್ತಾಗುತ್ತೆ!
ಮಹಿಳೆ ಏಕೆ ಟಾರ್ಗೆಟ್ ಆಗುತ್ತಿದ್ದಾಳೆ?
ಕಡಕ್ ಸರ್ಕಾರ ನೀಡುತ್ತೇವೆ ಎಂದು ಹೇಳುವುದೇನೋ ಸುಲಭ, ಆದರೆ ಅದನ್ನು ನಡೆಸಿಕೊಂಡು ಹೋಗುವುದು, ಹೋಮ ಮಾಡುತ್ತಾ ಮಂತ್ರ ಪಠಿಸಿದಂತಲ್ಲ. ಅದರಲ್ಲಿ ಪುರೋಹಿತರು 501 ಸಾಮಗ್ರಿ ಹೋಮ ಕುಂಡಕ್ಕೆ ಅರ್ಪಿಸುತ್ತಾ, ಎಲ್ಲ ಸರಿಹೋಯ್ತು ಎಂದು ಹೇಳುವಷ್ಟು ಖಂಡಿತಾ ಸಲೀಸಲ್ಲ.
ಸರ್ಕಾರ ನಡೆಸುವುದು ಎಂದರೆ ಲಕ್ಷಾಂತರ ಸರ್ಕಾರಿ ಸಿಬ್ಬಂದಿ ನಿಭಾಯಿಸಬೇಕು, ಕಾನೂನು ಕೋರ್ಟುಗಳ ಕುರಿತು ಜನರಲ್ಲಿ ನಂಬಿಕೆ ಮೂಡಿಸಬೇಕು. ಇತ್ತೀಚಿನ ದಿನಗಳ ಯಾವುದೇ ದೈನಿಕ ತೆರೆದು ನೋಡಿ, ರೇಪ್ ಕೇಸ್ ಬಿಟ್ಟರೆ ಬೇರೇನಿರಲ್ಲ. ಇದರಲ್ಲಿ ಹುಡುಗಿ, ಹೆಂಗಸು ಮಾತ್ರವಲ್ಲದೆ ಸಣ್ಣ ಬಾಲಕಿಯರೂ ಬಲಿಯಾಗುತ್ತಿದ್ದಾರೆ. ತಮ್ಮ ಹಾಗೂ ಪರಿವಾರದ ಮೇಲೆ ಕಪ್ಪು ಮಸಿ ಬಳಿಸಿಕೊಳ್ಳಲು ಮಾನಸಿಕವಾಗಿ ಸಿದ್ಧವಾದಾಗ ಮಾತ್ರ ಪೊಲೀಸರ ಬಳಿ ದೂರು ಕೊಡಲು ಹೋಗುತ್ತಾರೆ.
ದೇಶದ ಕಾನೂನು ವ್ಯವಸ್ಥೆ ಹೇಗಿದೆ ಅಂದ್ರೆ, ಹಠಮಾರಿ ಸರ್ಕಾರ ಲಕ್ಷಾಂತರ ರೈತರನ್ನು ಓಲೈಸಲಾಗುತ್ತಿಲ್ಲ. ಪರಿಣಾಮ ಈ ರೈತರು ತಮ್ಮ ರಾಜ್ಯದ ಮುಖ್ಯಮಂತ್ರಿಯನ್ನೇ ಒಂದು ಹಳ್ಳಿಗೆ ಬಾರದಂತೆ ಬಹಿಷ್ಕಾರ ಹಾಕಿರುವುದು!
ಕಾನೂನು ವ್ಯವಸ್ಥೆಯಂತೂ ಎಲ್ಲರ ದೃಷ್ಟಿಯಲ್ಲಿ ಹೇಗಾಗಿದೆ ಎಂದರೆ, ಸಣ್ಣದರಿಂದ ಅತಿ ದೊಡ್ಡ ಕೋರ್ಟ್ ಸಹ, ಸರ್ಕಾರದ ವಿರುದ್ಧ ಮಾಹಿತಿ ನೀಡುವ ಸಾಮಾನ್ಯ ಜನರನ್ನು ಬಂಧಿಸುತ್ತದೆ ಅಂತ. ಆದರೆ ಕುತ್ತಿಗೆಯಲ್ಲಿ ಭಗವಾ ದುಪಟ್ಟಾ ಕಟ್ಟಿಕೊಂಡು ಬೀದಿ ಬೀದಿಗಳಲ್ಲಿ ಹಫ್ತಾ ವಸೂಲಿ ಮಾಡುವವರನ್ನು ಏನೂ ಮಾಡದೆಂದು!
ಮಹಿಳೆಯರಂತೂ ಇಂಥ ಪತನಕ್ಕಿಳಿಯುತ್ತಿರುವ ಕಾನೂನಿನ ವ್ಯವಸ್ಥೆಯ ಅತಿ ಶೋಷಿತರು, ಏಕೆಂದರೆ ಈ ಹೆಂಗಸರೇ ತಮ್ಮ ಮನೆಗಳಲ್ಲಿ ನಡೆಯುವ ಅನ್ಯಾಯ ಪ್ರತಿಭಟಿಸುವವರು ಅಥವಾ ತಾವು ನಿರಪರಾಧಿ ಎಂದು ಸಾಬೀತುಪಡಿಸಲು ತಿಂಗಳುಗಟ್ಟಲೇ ಕೋರ್ಟುಗಳಿಗೆ ಅಲೆದಾಡುತ್ತಿರಬೇಕು. ಹೀಗೆ ಪ್ರತಿ ದಿನ ರೇಪ್, ಕೊಲೆ, ಸರಗಳ್ಳತನ, ಲೂಟಿ, ಫ್ರಾಡ್ ಪ್ರಕರಣ ಹೆಚ್ಚುತ್ತಲೇ ಇಧ್ದರೆ, ಪ್ರತಿದಿನ ಕೋರ್ಟ್ ಎದುರು ತೀರ್ಪಿನ ಪ್ರಕರಣಗಳ ಸಂಖ್ಯೆ ಪೆಂಡಿಂಗ್ ಉಳಿಯುತ್ತಾ, ತಿಂಗಳುಗಟ್ಟಲೇ ಜೇಲಿನಲ್ಲಿ ಕೊಳೆಯುತ್ತಿರುವ ವ್ಯಕ್ತಿಯ ವಿರುದ್ಧ ಯಾವುದೇ ಸಾಕ್ಷ್ಯಾಧಾರ ಇಲ್ಲ ಎಂದು, ಹೀಗಾಗಿ ಅಂಥವರನ್ನು ಅಪರಾಧಿ ಎಂದು ಸಾರುವುದು ಹೇಗೆ? ಇದರರ್ಥ ಪೊಲೀಸರು ನಾಯಕ ಧುರೀಣರ ಬಳಿ ಅಪಾರ ಶಕ್ತಿ ಇದೆ, ತಿಂಗಳುಗಟ್ಟಲೇ ಅವರು ಯಾರನ್ನಾದರೂ ಜೇಲಿನಲ್ಲಿ ಬಂಧಿಸಿಡಬಹುದು, ಯಾರೂ ಏಕೆಂದು ಕೇಳುವ ಹಾಗೂ ಇಲ್ಲ.
ಹೆಂಗಸರಿಗಂತೂ ಇಂದಿನ ಸರ್ಕಾರ, ಶಾಸನಗಳು ಅತ್ತೆ ಮಾವ ಮತ್ತು ತವರಿಗೆ ಮರಳಿದ ನಾದಿನಿಯ ಕಾಟದಂತೆಯೇ ಆಗಿದೆ. ಅಂಥವರು ಕೇವಲ ದೋಷ ಗುರುತಿಸುತ್ತಾರೆಯೇ ಹೊರತು ಹೊಸ ಸೊಸೆಯನ್ನು ನೆಮ್ಮದಿಯಾಗಿ ಇರಲು ಬಿಡಲೊಲ್ಲರು.
ಮದುವೆ ಸಂದರ್ಭದಲ್ಲಂತೂ ಇವರುಗಳು ದೊಡ್ಡ ಮೊತ್ತದ ವರದಕ್ಷಿಣೆ ಗಿಟ್ಟಿಸಿರುತ್ತಾರೆ, ಪ್ರತಿ ದಿನ ಹೊಸ ತೆರಿಗೆ ಹೆಸರಲ್ಲಿ ದಿನೇ ದಿನೇ ಟ್ಯಾಕ್ಸ್ ಹೆಚ್ಚಿಸುತ್ತಿರುತ್ತಾರೆ. ಸೊಸೆಯಂತೂ ಯಾವತ್ತೂ ಸರಿಯಾಗಿ ಕೆಲಸ ಮಾಡೋದೇ ಇಲ್ಲ ಎಂದು ಗೊಣಗುವ ಅತ್ತೆಯಂತೆ.
ಇಂದು ಜನಸಾಮಾನ್ಯರ ಸ್ಥಿತಿ, ಬಡವರ ಮನೆಯ ಹೆಣ್ಣು ಹೊಸ ಸೊಸೆಯಾಗಿ ಬಂದಂತೆ ಇದೆ. ಹೆಣ್ಣಿನ ಹಕ್ಕಿನ ಕುರಿತು ಮಾತಂತೂ ಕೇಳಿಸುತ್ತಿರುತ್ತದೆ, ಆದರೆ ಈ ಸರ್ಕಾರ ಮಾತ್ರ ಸಂಸ್ಕಾರ, ಸಂಸ್ಕೃತಿ, ಸಂಪ್ರದಾಯ, ಧರ್ಮದ ಹೆಸರಲ್ಲಿ ಸತಾಯಿಸಲ್ಪಡುತ್ತಿರು ಹೆಣ್ಣಿನ ಬಾಯಿ ಮುಚ್ಚಿಸಿಬಿಡುತ್ತದೆ.
ತಮ್ಮನ್ನು ತಾವು ಬದಲಿಸಿಕೊಳ್ಳುವ ಅಗತ್ಯ
ಕೋರೋನಾದಿಂದ ಕಾಟ ಒಂದೇ ಅಲ್ಲ, ಅಲ್ಪ ಸ್ವಲ್ಪ ಒಳ್ಳೆಯದೂ ಆಗಿದೆ. ಜನರ ಅನಗತ್ಯ ಹೊರಗಿನ ಓಡಾಟ, ಯೂಸ್‌ಲೆಸ್ ಶಾಪಿಂಗ್, ಥಳುಕು ಬಳುಕಿಲ್ಲದ ಮದುವೆಗಳು, ಪಾರ್ಟಿಗಳು ಅವಾಂತರ ಕಡಿಮೆ ಆಗಿವೆ. ಆದರೆ ಈ ಸದ್ಭಾವನೆ ಬಹಳ ದಿನ ಉಳಿಯುತ್ತದೆ ಅಂತ ಯಾವ ಗ್ಯಾರಂಟಿಯೂ ಇಲ್ಲ. ಆದರೂ ಕೊರೋನಾ ಇರುವವರೆಗೂ ಜನರಿಗೆ ಹೀಗೆ ನೆಟ್ಟಗೆ ನಡೆದುಕೊಳ್ಳುವ ಬುದ್ಧಿ ಇರುತ್ತದೆ, ಮದುವೆಗಳಲ್ಲಂತೂ ಹೆಚ್ಚು ಜನರಿರದ ಕಾರಣ ಹೆಣ್ಣಿನ ಕಡೆಯವರಿಗೆ ಬೋನಸ್ ಎನ್ನಬಹುದು.
ಈಗೀಗ ಮದುವೆಗಳಲ್ಲಿ ಹೆಚ್ಚಿನ ದುಂದುವೆಚ್ಚಗಳಿಲ್ಲ. ವಧೂವರರ ನಿಕಟವರ್ತಿಗಳು ಮಾತ್ರವೇ ಬಂದು ಶುಭಾಶಯ ಕೋರುವಂತಾಗಿದೆ. ಮದುವೆ ಕಲಾಪ ಮಂಗಳಕರವಾಗಿ, ನಸುನಗುತ್ತಾ ನಡೆಯಲು ಇಷ್ಟು ಕಡಿಮೆ ಜನರಿದ್ದರೆ ಬೇಕಾದಷ್ಟಾಯಿತು.
ಬಹು ಸಂಖ್ಯೆಯಲ್ಲಿ ಜನರನ್ನು ಆಹ್ವಾನಿಸುವ, ಅವರು ತಂಗಲು ವ್ಯವಸ್ಥೆ, ಅವರ ಊಟ ತಿಂಡಿ….. ಇತ್ಯಾದಿ ಎಲ್ಲಾ ಢೋಂಗಿ. ಈ ಪರಂಪರೆ ಯಾಕಾದರೂ ಶುರುವಾಯ್ತೋ? ಎಲ್ಲರನ್ನೂ ಕರೆದು ಗ್ರಾಂಡಾಗಿ ಮಾಡಿದರೇನೇ ಮದುವೆ ಎಂಬುದು ವ್ಯರ್ಥ ಆರ್ಭಟ. ಎರಡು ಜೀವಮನಸ್ಸುಗಳ ಸಂಗಮವೇ ಮದುವೆ. ಮೊದಲು ಇವರು ಪರಸ್ಪರ ಅಪರಿಚಿತವಾಗಿದ್ದರೂ ಅಥವಾ ಲವ್ ಮಾಡಿ, ಡೇಟಿಂಗ್ ಮುಗಿಸಿ ನಂತರ ಬಂಧುಬಾಂಧವರನ್ನು ಕರೆಸಿ ಗ್ರಾಂಡಾಗಿ ಮದುವೆ ನಡೆಸಿದರೂ….. ಎಲ್ಲ ವೇಸ್ಟೇ!
ಮದುವೆ ಈಗ ದೊಡ್ಡ ಬಿಸ್‌ನೆಸ್ ಆಗಿದೆ. ವಧೂವರರ ಹುಡುಕಾಟಕ್ಕಾಗಿಯೇ ದೊಡ್ಡ ಕಂಪನಿಗಳು ಸಿದ್ಧವಾಗಿವೆ. ಅದರ ಬಳಿ 67 ಮಾತ್ರವಲ್ಲ ಸಾವಿರಾರು ಸಿಬ್ಬಂದಿ ಇರುತ್ತಾರೆ. ಯೋಗ್ಯ ವ್ಯಕ್ತಿ ಸಿಕ್ಕಿದ ತಕ್ಷಣ ಈ ಮಂದಿ ವಸೂಲಿಗೆ ಧಾವಿಸುತ್ತಾರೆ.
ಸಾಮಾನ್ಯ ವ್ಯಕ್ತಿ ವರ್ಷಗಳ ತನ್ನ ಆದಾಯವನ್ನು ಇದಕ್ಕಾಗಿ ವ್ಯರ್ಥ ಖರ್ಚ ಮಾಡಬೇಕಾಗುತ್ತದೆ, ಇದು ಕೇವಲ ಎಲ್ಲರೂ ಒಂದೆಡೆ ಒಗ್ಗೂಡುವ ಕೆಲವು ಘಂಟೆಗಳ ಸುಖ ಮಾತ್ರ. ನವ ವಿವಾಹಿತರಿಗೆ ಇದರಿಂದ ಸುಖ ಸಿಗುತ್ತದೆ ಎಂಬ ಯಾವ ಗ್ಯಾರಂಟಿಯೂ ಇಲ್ಲ.
ಇದರ ಬದಲು ಕುಟುಂಬ ಸುಖಿಯಾಯ್ತು ಎಂದು ಮೊದಲ ಮಗುವಿನ ಬರ್ತ್‌ಡೇ ಗ್ರಾಂಡಾಗಿ ಮಾಡಲಿ ಅಥವಾ ಮದುವೆಯ 10-20 ವರ್ಷಗಳ ವಾರ್ಷಿಕೋತ್ಸವದಲ್ಲಿ. ಅದಂತೂ ಸುಖೀ ವೈವಾಹಿಕ ಜೀವನದ ಗ್ಯಾರಂಟಿ ಆಗಿರುತ್ತದೆ, ಆಗಿಲ್ಲವೇ ಬೇಡವೇ ಬೇಡ! ನಿಜ ಖುಷಿ ದೊರೆತಾಗ ಎಲ್ಲರನ್ನೂ ಕರೆಯಲಿ. ಕೊರೋನಾ ಪೀಡೆ ಹೋಗುವಾಗ ಮಾನವರಿಗೆ ಪಾಠ ಕಲಿಸಿ ಹೋದರೆ ಎಷ್ಟೋ ಉಪಕಾರವಾಗುತ್ತದೆ.