ಮಾಲಿನ್ಯ ತಪ್ಪಿಸುವುದು ಎಲ್ಲರ ಜವಾಬ್ದಾರಿ

ಹೆಚ್ಚುತ್ತಿರುವ ಮಾಲಿನ್ಯ, ಕಸದ ರಾಶಿ, ದುರ್ವಾಸನೆ, ಪೈಪು ನಿಂತು ಹೋಗುವುದು, ರಸ್ತೆಗಳಲ್ಲಿ ದಟ್ಟ ಜನಸಂದಣಿ, ಭರಿಸಲಾಗದ ಟ್ರಾಫಿಕ್‌..... ಇವೆಲ್ಲದರಿಂದ ಜನ ಬೇಸತ್ತು ಹೋಗುತ್ತಾರೆ. ತಾವೆಲ್ಲರೂ ಇದಕ್ಕೆ ಸಮಾನ ಜವಾಬ್ದಾರರು ಎಂಬುದನ್ನು ಅವರು ಮರೆತುಬಿಡುತ್ತಾರೆ. ಇದರಲ್ಲಿ ಹೆಂಗಸರ ಪಾತ್ರ ಹಿರಿದು, ಏಕೆಂದರೆ ಮನೆಯ ಕಸ ಅತ್ತಿತ್ತ ಎಸೆಯುವವರು ಅವರೇ!

ಯಾವಾಗಿನಿಂದ ಯಂತ್ರಗಳು ಎಲ್ಲ ಕೆಲಸವನ್ನೂ ಸುಲಭವಾಗಿಸಿ, ಹೆಚ್ಚು ಉತ್ಪನ್ನ ನೀಡುತ್ತಿವೆಯೋ? ಜನರಿಗೆ ಕೊಳ್ಳು ಬಾಕ ಸಂಸ್ಕೃತಿ ತೀರಾ ಹೆಚ್ಚಾಗಿದೆ. ದೆಹಲಿಯ ಕರೋಲ್ ‌ಬಾಗ್‌, ಬೆಂಗಳೂರಿನ ಮೆಜೆಸ್ಟಿಕ್‌, ಚೆನ್ನೈನ ಟೀನಗರ್‌ ಇರಲಿ, ಶಾಪಿಂಗ್‌ ಹಾಳಿ ಅತ್ಯಧಿಕ. ಇಲ್ಲೆಲ್ಲ ಗಾಡಿ ಪಾರ್ಕಿಂಗ್‌ ಅಥವಾ ಸಾಮಗ್ರಿ ಇಡುವುದು ಅಸಾಧ್ಯವೇ ಸರಿ.

ಈ ಎಲ್ಲ ಸಾಮಗ್ರಿ ಕೊನೆಗೆ ನಮ್ಮ ಮನೆಗಳಿಗೇ ಬರುತ್ತವೆ. ಮನೆಯಲ್ಲಿ ತುರುಕಿಕೊಳ್ಳಲು ಜಾಗವಿಲ್ಲ ಎಂಬ ಬೊಬ್ಬೆ ಏಳುತ್ತದೆ. ಹೊಸ ಹೊಸ ವಾರ್ಡ್‌ ರೋಬ್‌, ಅದರ ಮೇಲೆ ಅಟ್ಟಗಳು, ಬೀರುಗಳು ಹೆಚ್ಚುತ್ತವೆ. ಅದರಲ್ಲಿ ಅಷ್ಟೆಲ್ಲ ಸಾಮಗ್ರಿ ತುರುಕಿದರೂ ಮನೆಯಲ್ಲಿ ಜಾಗವೇ ಇಲ್ಲ ಎಂದು ಗೊಣಗುತ್ತಿರುತ್ತಾರೆ.

ಇನ್ನೊಂದು ಕಡೆ ಬಳಸದೆ ಇರುವ ಅಥವಾ ಕನಿಷ್ಠ ಬಳಕೆಯ ಸಾಮಗ್ರಿ, ಮನೆಯಲ್ಲಿ ದೊಡ್ಡ ಕಸದ ರಾಶಿಯಾಗಿ ಬೆಳೆಯುತ್ತಿರುತ್ತದೆ. ಆದರೆ ನಗರವಾಸಿಗಳು ಮಾತ್ರ ಇದೆಲ್ಲದಕ್ಕೆ ಕಾರಣಕರ್ತರಾಗಿ, ತಮ್ಮ ನಗರ ಅಂದಗೆಡುತ್ತಿದೆ ಎಂದು ದೂಷಿಸುತ್ತಿರುತ್ತಾರೆ.

ಆರ್ಥಿಕ ಪ್ರಗತಿಯ ಹೆಸರಲ್ಲಿ ಅರ್ಥರಹಿತ ಈಜಿಪ್ಟ್ ಪಿರಮಿಡ್‌ ಅಥವಾ ದೆಹಲಿಯ ಕುತುಬ್‌ ಮಿನಾರ್‌ಗಳ ನಿರ್ಮಿಸುವ ಅಗತ್ಯವಿಲ್ಲ. ಜನರಿಗೆ ಋತುವಿಗನುಸಾರ ರಕ್ಷಿಸಿಕೊಳ್ಳಲು ತಲೆಗೊಂದು ಸೂರು ಬೇಕಷ್ಟೆ. ಅದು ಉಸಿರುಗಟ್ಟಿಸುವಂತಿರಬಾರದು. ಅಲ್ಲಿ ರಾಶಿ ರಾಶಿ ಸಾಮಾನು ಸೇರಿದಷ್ಟೂ ಕಸ ಹೆಚ್ಚುತ್ತದೆ. ಅದು ಮನೆಯ ವಾತಾವರಣ ಕೆಡಿಸಿ, ಹೊರಗಿನ ಪರಿಸರ ಮಾಲಿನ್ಯಕ್ಕಿಂತ ಘೋರವೆನಿಸುತ್ತದೆ.

ಅಮೆರಿಕಾದ ಗಾಯಕಿ ಮೆಡೋನಾ, ತಾನು ಅನಗತ್ಯ ಶಾಪಿಂಗ್‌ ಮಾಡುವುದೇ ಇಲ್ಲ ಎಂದು ಹೊಸ ವರ್ಷದ ಸಂಕಲ್ಪ ತೊಟ್ಟಿದ್ದಾಳೆ. ಕಳೆದ ವರ್ಷವಿಡೀ ಕೋವಿಡ್‌ ಹೋರಾಟದಲ್ಲಿ ಈಕೆ ಎಲ್ಲರಿಗೆ ನೆರವಾಗಿದ್ದಾಳೆ. ಹಾಗೆಯೇ ಕೊರೋನಾ ಸಹ ಲಾಕ್‌ಡೌನ್‌ ಆಗಿದೆ, ಪಾರ್ಟಿಗಳನ್ನು ಸ್ಥಗಿತಗೊಳಿಸಿ ಎಂದಿದೆ. ಈಗಂತೂ ಎಲ್ಲರಿಗೂ 3-4 ಜೊತೆ ಬಟ್ಟೆ ಇರಿಸಿಕೊಂಡು, ಒಗೆದು ಉಡುವ ಪಾಠ ಕಲಿಸಿದೆ.

ಮಹಾತ್ಮಾ ಗಾಂಧೀಜಿಯವರ ಸಾಮಾನುಗಳಂತೂ ಅತಿ ಕನಿಷ್ಠ ಆಗಿದ್ದವು. ಅವರಂತೂ ಆ ಕಾಲದಲ್ಲಿ 100 ಕೋಟಿ ಜನರ ಆರಾಧ್ಯರಾಗಿದ್ದರು, 1-1 ಪಿನ್‌ಸಹ ಎಚ್ಚರಿಕೆಯಿಂದ ಬಳಸುತ್ತಿದ್ದರು.

ಈ ವಿಶ್ವ ಮಾಲಿನ್ಯದಿಂದ ದೂರವಾಗ ಬಯಸಿದರೆ ಮನೆಯ, ಮಕ್ಕಳ, ಇನ್ನಿತರ ಹೆಚ್ಚಿನ ಸಾಮಾನು ಖರೀದಿಸಲೇಬಾರದು. ಮನೆಯಲ್ಲಿ ಯಾವ ಹಳೆಯ ಸಾಮಗ್ರಿ  ಇದೆಯೋ ಅದರಲ್ಲಿ ಕೆಲಸ ನಿಭಾಯಿಸಿ. ವಸ್ತು ಕೆಡುವವರೆಗೂ ಅದರ ಬದಲಿಗೆ ಇನ್ನೊಂದು ಖರೀದಿಸಬೇಡಿ. ಉತ್ಪಾದಕರಿಗೆ ನಾವು ಹೇಳಬೇಕಾದ ಮಾತು, `ತಾತಾ ಖರೀದಿಸಿದ್ದನ್ನೇ ನಾವು ಬಳಸುತ್ತೇವೆ, ಸಾಕು!' ಹೀಗೆ ಮಾಡಿದಾಗ ಮಾತ್ರ ಮನೆಯ ಕಸದ ರಾಶಿ ಕಡಿಮೆ ಆದೀತು.

ಉತ್ಪಾದಕರಿಗೆ ಚೆನ್ನಾಗಿ ಗೊತ್ತಾಗಿರುವ ವಿಚಾರ, ಜನರಿಗೆ ದಿನನಿತ್ಯ ಹೊಸ ಹೊಸ ವಸ್ತು ಬೇಕು ಅಂತ. ಹೀಗಾಗಿ ಅಲ್ಪ ಸ್ವಲ್ಪ ಬದಲಾವಣೆ ಮಾಡಿ ತಮ್ಮ ಉತ್ಪನ್ನವನ್ನು `ಇದೀಗ  ಹೊಚ್ಚ ಹೊಸತು.... ಹೊಸ ಫೀಚರ್ಸ್‌' ಎಂದು ಬುರುಡೆ ಬಿಡುತ್ತಾ ತಮ್ಮ ಹೊಸ ಉತ್ಪನ್ನ ಹೇರುವ ಸಲುವಾಗಿ ಅಬ್ಬರದ ಪ್ರಚಾರ ಮಾಡುತ್ತಾರೆ. ಈ ಮಾಲಿನ್ಯದ ಚಿಂತೆ ಅವರಿಗೆ ಎಳ್ಳಷ್ಟೂ ಇಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ