ಹಲವು ಜನರು ಹೇಳುವುದೇನೆಂದರೆ ಮಹಿಳೆಯರಿಗೆ ವಾಹನಗಳ ಬಗ್ಗೆ ಯಾವುದೇ ಆಸಕ್ತಿ ಇರುವುದಿಲ್ಲವಂತೆ. ಅವರು ವಾಹನ ಚಲಾಯಿಸುವುದರ ಬಗೆಗಾಗಲಿ, ಖರೀದಿಯ ಬಗೆಗಾಗಲಿ ಉತ್ಸುಕತೆ ತೋರಿಸುವುದಿಲ್ಲವಂತೆ.

ಮಹಿಳೆಯರು ಡ್ರೈವಿಂಗ್‌ ಮಾಡುತ್ತಿದ್ದರೆ, ಜನರು ಅವರ ಬಗ್ಗೆ ಕಮೆಂಟ್‌ ಮಾಡಲು ಕೂಡ ಹಿಂದೇಟು ಹಾಕುವುದಿಲ್ಲ. ಜನರ ಮನಸ್ಸಿನಲ್ಲಿ ಒಂದು ಸಂಗತಿ ಅಚ್ಚಳಿಯದೇ ಕುಳಿತಿರುತ್ತದೆ. ಅದೇನೆಂದರೆ ಮಹಿಳೆಯರು ಒಳ್ಳೆಯ ಡ್ರೈವರ್‌ಗಳಾಗಲು ಸಾಧ್ಯವಿಲ್ಲ. ಅವರಿಗೆ ವಾಹನಗಳ ಬಗೆಗೆ ತಿಳಿವಳಿಕೆ ಇರುವುದಿಲ್ಲ.ಇನ್ನೊಂದೆಡೆ ದೇಶದ ಬೇರೆ ಬೇರೆ ಕಡೆ ನಡೆಯುವ ಪೆವಿಲಿಯನ್‌ನಲ್ಲಿ ಸೇರಿದ ಮಹಿಳೆಯರ ಗುಂಪು ಮಾತ್ರ ಆ ಸಂಗತಿಯನ್ನು ನಿರಾಕರಿಸುತ್ತದೆ. ಜನರು ಒಂದು ಸಂಗತಿಯನ್ನು ಬಹುಶಃ ಮರೆತುಬಿಡುತ್ತಾರೆ. ಅದೇನೆಂದರೆ, ಮಹಿಳೆಯರು ಕೇವಲ ನೆಲದ ಮೇಲಿನ ವಾಹನಗಳನ್ನಷ್ಟೇ ಅಲ್ಲ, ಆಕಾಶದಲ್ಲಿ ವಿಮಾನ ಕೂಡ ಹಾರಿಸುವ ಸಾಮರ್ಥ್ಯ ಹೊಂದಿದ್ದಾರೆ. ಮಹಿಳಾ ಕ್ಯಾಬ್‌ ಡ್ರೈವರ್‌ಗಳು ಅದಕ್ಕೊಂದು ಸೂಕ್ತ ಉದಾಹರಣೆ. ನಿಜವಾಗಿಯೂ ಆ ಸಮಯ ಈಗ ಬದಲಾಗಿದೆ. ಮಹಿಳೆಯರು ವಾಹನ ಖರೀದಿಸುತ್ತಾರೆ ಹಾಗೂ ಸಮರ್ಥವಾಗಿ ಚಲಾಯಿಸುವ ಚಾಕಚಕ್ಯತೆ ಕೂಡ ಹೊಂದಿದ್ದಾರೆ.

ವಾಹನಗಳು ಕೇವಲ ಉದ್ಯೋಗಸ್ಥೆಯರಿಗೆ ಮಾತ್ರವಲ್ಲ, ಗೃಹಿಣಿಯರ ಜೀವನದ ಒಂದು ಭಾಗ ಕೂಡ ಆಗಿಬಿಟ್ಟಿದೆ. ಆಫೀಸಿಗೆ ಹೋಗುವುದಾಗಿರಬಹುದು, ಮಕ್ಕಳನ್ನು ಶಾಲೆಗೆ ಬಿಡಲು ಹೋಗಬೇಕಿರಬಹುದು, ಇದಾದಕ್ಕೂ ಮಹಿಳೆಯರು ಬೇರೆಯವರ ಮೇಲೆ ಅವಲಂಬಿಸಲು ಇಷ್ಟಪಡುವುದಿಲ್ಲ.

ಇತ್ತೀಚಿನ ವರ್ಷಗಳಲ್ಲಿ ಮಹಿಳಾ ಚಾಲಕರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಿದೆ. ಈ ಸಂಗತಿಯನ್ನು ಉತ್ಪಾದನಾ ಕಂಪನಿಗಳು ಕೂಡ ಗಮನಿಸಿವೆ. ಹೀಗಾಗಿ ಕಂಪನಿಗಳು ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ಮಹಿಳಾ ಸ್ನೇಹಿ ವಾಹನಗಳ ನಿರ್ಮಾಣ ಮಾಡುತ್ತಿವೆ.

ಮಹಿಳೆಯರಿಗಾಗಿಯೇ ನಿರ್ಮಾಣವಾದ ಅಂತಹ ಕೆಲವು ಕಾರುಗಳು ವಿಶೇಷತೆಗಳ ಬಗ್ಗೆ ತಿಳಿದುಕೊಳ್ಳೋಣವೇ :

ಆಟೋಮ್ಯಾಟಿಕ್‌ ಗೇರ್‌ ಬಾಕ್ಸ್

Automatic-Gear

ಮಾರುತಿ ಸೆಲೆರಿಯೊ ಹುಂಡೈನ ಕ್ರೆಟಾರ್ನಾ ಹಾಗೂ ಟೊಯೋಟಾದ ಇನೋವಾದಲ್ಲಿ ಆಟೊಮ್ಯಾಟಿಕ್‌ ಗೇರ್‌ ಬಾಕ್ಸ್ ಕೊಡಲಾಗಿದೆ. ಅದು ಡ್ರೈವಿಂಗ್‌ನ್ನು ಸುಲಭಗೊಳಿಸುತ್ತದೆ. ಮಹಿಳೆಯರಲ್ಲಿ ಈ ಗೇರ್‌ ಬಾಕ್ಸ್ ಹೆಚ್ಚು ಪ್ರಚಲಿತವಾಗುತ್ತಿದೆ. ಅದರಲ್ಲೂ ಉದ್ಯೋಗಸ್ಥ ಮಹಿಳೆಯರಿಗೆ ಆಫೀಸ್‌ ರೈಡ್‌ಗೆ ಈ ಸಿಸ್ಟಮ್ ಬಹಳಷ್ಟು ಸುಲಭ ಮಾಡಿದೆ. ಮೆಟ್ರೋ ನಗರಗಳಲ್ಲಿ ಕಾರುಗಳ ಹವ್ಯಾಸವುಳ್ಳ ಜನರು ಆಟೋಮ್ಯಾಟಿಕ್‌ ಗೇರ್‌ ಬಾಕ್ಸ್ ಇರುವ ಕಾರುಗಳನ್ನು ಬಹಳ ಇಷ್ಟಪಡುತ್ತಿದ್ದಾರೆ.

ಬ್ಲೂ ಟೂಥ್‌ ಸ್ಟೀರಿಯೋ ಸಿಸ್ಟಮ್

ರೈಡ್‌ನ ಜೊತೆಗೆ ಮ್ಯೂಸಿಕ್‌ನ ಆನಂದ ಪಡೆಯಲಾಗದಿದ್ದರೆ ಹೇಗೆ? ಬ್ಲೂ ಟೂಥ್‌ ಸ್ಟೀರಿಯೊ ಸಿಸ್ಟಮ್ ನ್ನು ಮಹಿಳೆಯರು ಬಹಳ ಇಷ್ಟಪಡುತ್ತಾರೆ. ಆರಂಭಿಕ ಶ್ರೇಣಿಯ ಮಾರುತಿ ಆಲ್ಟೋ ಹಾಗೂ ಇಗ್ಗಿಸ್‌ನಲ್ಲಿ ನಿಮಗೆ ಬ್ಲೂ ಟೂಥ್‌ನ ಜೊತೆ ಜೊತೆಗೆ ಸ್ಟೀರಿಯೊ ಸಿಸ್ಟಮ್ ನ ಸೌಲಭ್ಯ ಕೂಡ ದೊರಕುತ್ತದೆ. ನಿಮಗಿಷ್ಟವಾದ ಸಂಗೀತದ ಜೊತೆಗೆ ನಿಮ್ಮ ಪ್ರವಾಸ ಮತ್ತಷ್ಟು ಖುಷಿದಾಯಕ ಆಗಿರುತ್ತದೆ.

ರಿಯಲ್ ಪಾರ್ಕಿಂಗ್‌ ಕ್ಯಾಮೆರಾ ಮತ್ತು ಆಟೋಮ್ಯಾಟಿಕ್‌ ವೈಫರ್ಸ್‌ :  ಮಳೆಯಾಗಲು ಶುರುವಾದಾಗ, ಮಳೆಯ ಹನಿಗಳು ವಿಂಡೋ ಸ್ಕ್ರೀನ್‌ ಮೇಲೆ ಬೀಳಲು ಆರಂಭಿಸಿದಾಗ ವೈಫರ್ಸ್‌ ತಂತಾನೇ ಚಲಾಯಿಸತೊಡಗುತ್ತವೆ. ಅದರ ಜೊತೆ ಜೊತೆಗೆ ರಿಯಲ್ ಪಾರ್ಕಿಂಗ್‌ ಕ್ಯಾಮೆರಾ ಪ್ರತಿಯೊಬ್ಬ ಮಹಿಳಾ ಡೈವರ್‌ಗಳ ಅವಶ್ಯಕತೆಯಾಗಿದೆ. ಡ್ರೈವಿಂಗ್‌ ಎಷ್ಟು ಸುಲಭವಾಗಿರುತ್ತದೋ, ಡ್ರೈವ್ ‌ಅಷ್ಟೇ ಮಜದಾಯಕವಾಗಿರುತ್ತದೆ. ಮಳೆಗಾಲದಲ್ಲಿ ವಿಂಡೋ ಸ್ಕ್ರೀನ್‌ ಕ್ಲಿಯರ್‌ ಮಾಡಲು ಮೇಲಿಂದ ಮೇಲೆ ವೈಫರ್ಸ್‌ನ್ನು ಮ್ಯಾನುವಲಿ ಆನ್‌ ಆಫ್‌ ಮಾಡುತ್ತಿರಬೇಕಾಗುತ್ತದೆ. ಇದು ಸಾಕಷ್ಟು ಕಿರಿಕಿರಿ ಅನಿಸುತ್ತದೆ. ಇಂತಹ ಸ್ಥಿತಿಯಲ್ಲಿ ಆಟೋಮ್ಯಾಟಿಕ್‌ ವೈಫರ್ಸ್‌ ಬಹಳಷ್ಟು ಸೌಲಭ್ಯದಾಯಕ ಎನಿಸುತ್ತದೆ.

ಕ್ರೂಸ್‌ ಕಂಟ್ರೋಲ್ ಟೆಕ್ನಿಕ್‌

Rear-Parking

ಇತ್ತೀಚಿನ ದಿನಗಳಲ್ಲಿ ಕಾರುಗಳಲ್ಲಿ ಕ್ರೂಸ್‌ ಕಂಟ್ರೋಲ್ ‌ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಈ ತಂತ್ರಜ್ಞಾನದ ಮುಖಾಂತರ ಎಂಜಿನ್‌ ಸ್ಪೀಡ್‌ ಮೇಲೆ ಸ್ವನಿಯಂತ್ರಣ ಇರುತ್ತದೆ. ಅದರಿಂದಾಗಿ ಆ್ಯಕ್ಸಿವೇಟರ್‌ ಹಾಗೂ ಕ್ಲಚ್‌ ನಡುವೆ ಸಂಯೋಜನೆ ಕಾಯ್ದುಕೊಂಡು ಹೋಗಲು ಸಾಧ್ಯವಾಗುತ್ತದೆ. ಈಗ ಸೀ ಸೆಗ್ಮೆಂಟ್‌ ಕಾರುಗಳು ಕೂಡ ಕ್ರೂಸ್‌ ಕಂಟ್ರೋಲ್ ಬಂದಿದೆ. ಈ ವ್ಯವಸ್ಥೆ ಟಾಟಾದ ಅಲ್ಟ್ರೋಸ್‌, ನೆಕ್ಸನ್‌, ಎಚ್‌ಬಿಎಕ್ಸ್, ಕಿಯಾನಾ, ಸೈಲೋನ್‌, ಹೂಂಡೈನ ಓರಾ ಕ್ರೇಟಾ ಹಾಗೂ ಮಾರುತಿ ಇಗ್ನಿಸ್‌ನಲ್ಲೂ ಲಭ್ಯವಿದೆ.

ಈ ವಾಹನಗಳು ಮಹಿಳೆಯರಿಗೆ ಡ್ರೈವಿಂಗ್‌ನ್ನು ಸುಲಭ ಮಾಡಿಕೊಟ್ಟಿವೆ. ಮಹಿಳೆಯರು ಈಗ ಕಾರು ಖರೀದಿಸಲು ಮತ್ತು ಚಲಾಯಿಸಲು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಆಟೋ ಎಕ್ಸ್ ಪೊ 2020ಯ ಪೆವಿಲಿಯನ್‌ ಮಹಿಳೆಯರು ಹಾಗೂ ಮಹಿಳೆಯರಿಗಾಗಿ ಸಿದ್ಧಪಡಿಸಿದ ವಾಹನಗಳು ಅದಕ್ಕೆ ಪುರಾವೆಯಂತಿದ್ದವು.

– ಜ್ಯೋತಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ