ನಾವು ಹೋಗುವ ಹೊತ್ತಿಗಾಗಲೇ ಅಲ್ಲಿ ಜನಜಂಗುಳಿ ತುಂಬಿಹೋಗಿತ್ತು. ಅದೊಂದು ದೊಡ್ಡ ಜಾತ್ರೆಯಂತೆ! ಬಗೆ ಬಗೆಯ ಹಣ್ಣುಗಳು, ತರಕಾರಿ, ಸೊಪ್ಪು ಎಲ್ಲವೂ ಅಲ್ಲಿ ತಾಜಾ ತಾಜಾ! ಎಲ್ಲ ಮಿರಮಿರನೇ ಮಿನುಗುತ್ತಿದ್ದವು.

ಸಾಲು ಸಾಲು ಅಂಗಡಿಗಳು. ರಾಶಿ ರಾಶಿ ತರಕಾರಿ, ಸೊಪ್ಪು ಮತ್ತು ಹಣ್ಣುಗಳು. ಪ್ರತಿ ಅಂಗಡಿಯ ಮುಂದೆ ಹೆಚ್ಚಿಟ್ಟ ಹಣ್ಣುಗಳನ್ನು ಬಂದವರೆಲ್ಲರಿಗೂ ರುಚಿ ತೋರಿಸುತ್ತಿದ್ದರು. ಇಷ್ಟವಾದರೆ ತೆಗೆದುಕೊಳ್ಳಬಹುದು, ಇಲ್ಲವಾದರೆ ಬರಿ ರುಚಿಯನ್ನೂ ನೋಡಬಹುದು. ನಮಗೆ ಎಲ್ಲಾ ಹಣ್ಣುಗಳ ರುಚಿ ನೋಡಿ ಸ್ವಲ್ಪ ಹೊಟ್ಟೆ ತುಂಬಿದಂತೆಯೇ ಆಯಿತು. ಕೊಳ್ಳುವವರಿಗೂ ಸುಗ್ಗಿ, ಮಾರುವ ರೈತರ ಮುಖಗಳಲ್ಲೂ ಸಂತಸ ಮಿನುಗುತ್ತಿತ್ತು.

ರೈತ ಶ್ರೀಮಂತನಾಗಿರುವಲ್ಲಿ ನಮ್ಮ ಅನ್ನದಾತ ಸಂತೋಷವಾಗಿದ್ದ ದೇಶ ಸಮೃದ್ಧಿಯನ್ನು ಹೊಂದುತ್ತದೆ ಎನ್ನುತ್ತಾರೆ. ಖಂಡಿತ ನಿಜವಾದ ಮಾತು. ರೈತರು ಮತ್ತು ಕೊಳ್ಳುವವರ ಮಧ್ಯೆ ಯಾವುದೇ ಮಧ್ಯವರ್ತಿಗಳಿಲ್ಲ. ಇಲ್ಲಿ ರೈತ ಬಹಳ ಶ್ರೀಮಂತನೂ ಹೌದು.

ಒಂದಷ್ಟು ರೈತರು ಒಟ್ಟುಗೂಡಿ ವಾರದಲ್ಲಿ ಒಮ್ಮೆ ಅಥವಾ ಎರಡು ಬಾರಿ ಸಾರ್ವಜನಿಕ ಸ್ಥಳಗಳಲ್ಲಿ, ಪಾರ್ಕ್‌ಗಳಲ್ಲಿ, ಪಾರ್ಕಿಂಗ್‌ತಾಣಗಳಲ್ಲಿ ತಾವು ಬೆಳೆದ ವಸ್ತುಗಳನ್ನು ಮಾರಾಟಕ್ಕಿಡುತ್ತಾರೆ. ಕೆಲವೆಡೆ ಮನರಂಜನೆಯನ್ನೂ ಯೋಜಿಸಲಾಗಿರುತ್ತದೆ. ತಾಜಾ ತರಕಾರಿಗಳ ಜೊತೆಗೆ ರೈತರನ್ನು ನೇರವಾಗಿ ನೋಡುವ ಅವಕಾಶ ಲಭಿಸುತ್ತದೆ. ಇದನ್ನು ಫಾಮರ್ಸ್‌ ಮಾರ್ಕೆಟ್‌ ಎನ್ನುತ್ತಾರೆ.

ಕೆಲವು ಫಾರ್ಮ್ ಗಳಲ್ಲಿ ಕೊಯ್ಲಿನ ಕಾಲದಲ್ಲಿ ನಿಮಗೆ ಬೇಕಾದ ಹಣ್ಣು ಹಂಪಲುಗಳನ್ನು ಸ್ವತಃ ನೀವೇ ಕೊಯ್ದುಕೊಳ್ಳಲು ಅವಕಾಶವಿರುತ್ತದೆ. ಉದಾ. ಸ್ಟ್ರಾಬೆರಿ, ಕಿವೀ ಮತ್ತು ಕಲ್ಲಂಗಡಿ ಹಣ್ಣುಗಳನ್ನು ಬೇಸಿಗೆಯಲ್ಲಿ ನೀವೇ ಕೀಳಬಹುದು. ಅದು ಯು ಪಿಕ್ ಯುವರ್‌ ಥಿಂಗ್ಸ್ ಪದ್ಧತಿ.

ರೈತನೊಬ್ಬ ತಾನು ಬೆಳೆದದ್ದನ್ನು ತಮ್ಮ ಟ್ರಕ್‌ನಲ್ಲಿ ತುಂಬಿಸಿಕೊಂಡು ತಂದು ಯಾವುದಾದರೂ ರಸ್ತೆಯ ಬದಿಯಲ್ಲಿ ಅಥವಾ ಅವನ ತೋಟದ ಹತ್ತಿರವೇ ರಸ್ತೆಯಲ್ಲಿ ನಿಲ್ಲಿಸಿ ಮಾರುತ್ತಾನೆ. ಇದರ ಬಗ್ಗೆ ಜನರಿಗೆ ಅರಿವು ಮೂಡಿಸುವ ಪ್ರಕ್ರಿಯೆ ಸಾಕಷ್ಟು ನಡೆದಿದೆ. ಈ ಸ್ಥಳಕ್ಕೆ ಫಾರ್ಮರ್ ಸ್ಟಾಂಡ್‌ ಎನ್ನುತ್ತಾರೆ.

ಫುಡ್‌ಕೋ ಆಪರೇಟಿವ್ಸ್ ಸ್ಥಳೀಯ ರೈತರ ಸಹಕಾರಿ ಸಂಘಗಳಿವೆ. ಬೆಳೆದ ದಿನಸಿ ಸಾಮಾನುಗಳನ್ನು ಮಾರುವುದು, ಕೊನೆಗೆ ಮಾಂಸ, ಹಾಲಿನ ಉತ್ಪನ್ನ, ಮೊಟ್ಟೆಗಳನ್ನೂ ಸಹ ನೇರವಾಗಿ ತಲುಪಿಸುವ ಅನೇಕ ಮಾರ್ಗಗಳನ್ನು ಕಂಡುಕೊಂಡಿದ್ದಾರೆ.

ಇಡೀ ಯು.ಎಸ್‌.ಎ.ನಲ್ಲಿ 2 ಮಿಲಿಯನ್‌ ಅರ್ಥಾತ್‌ 20 ಲಕ್ಷ ತೋಟಗಳಿವೆ (ಫಾರ್ಮ್ಸ್). ಅದರಲ್ಲಿ ಶೇ.80 ಸಣ್ಣ ಪ್ರಮಾಣದ ರೈತರು, ವ್ಯವಸಾಯದಲ್ಲಿ ಇಡೀ ಕುಟುಂಬದವರು ತೊಡಗಿಕೊಂಡು ಬೆಳೆಸುವರು, ಇರಲ್ಲಿ ಬಹಳಷ್ಟು ರೈತರು ನೇರವಾಗಿ ಸಾರ್ವಜನಿಕರಿಗೆ ತಮ್ಮ ಉತ್ಪನ್ನಗಳನ್ನು ತಲುಪಿಸುತ್ತಾರೆ. ಇದಕ್ಕಾಗಿ ಹಲವಾರು ವಿಧಗಳನ್ನು ಪಾಲಿಸುತ್ತಾರೆ.

IMG-0068

 

ಸಿ.ಎಸ್‌.ಎ ಜನ ಬಳಗದ ಸಹಕಾರದಿಂದ ಮಾಡುವ ವ್ಯವಸಾಯವೆನ್ನಬಹುದು. ಕಳೆದ ಇಪ್ಪತ್ತು ವರ್ಷಗಳಿಂದ ಜನರಿಗೆ ನೇರವಾಗಿ ಸ್ಥಳೀಯ ರೈತರಿಂದ ಆಯಾ ಕಾಲಕ್ಕನುಗುಣವಾಗಿ ಆಹಾರ ಪದಾರ್ಥ, ತರಕಾರಿ, ದಿನಸಿ ವಸ್ತುಗಳನ್ನು ಕೊಳ್ಳಲು ರೂಪಿಸಿಕೊಂಡ ಸಂಸ್ಥೆಯೆನ್ನಬಹುದು. ಸದಸ್ಯತ್ವವನ್ನು ಪಡೆದ ಭಾಗೀದಾರನಿಗೆ ಪ್ರತಿ ವಾರ ಒಂದು ಚೀಲದ ತುಂಬಾ ಅಥವಾ ಬುಟ್ಟಿಯ ತುಂಬಾ ಆಯಾ ಕಾಲಕ್ಕನುಗುಣವಾಗಿ ಬೆಳೆದ ಉತ್ಪನ್ನಗಳನ್ನು ತಲುಪಿಸಲಾಗುವುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ