ಕನ್ನಡ ಧಾರಾವಾಹಿ ಲೋಕದಲ್ಲಿ ಇತ್ತೀಚೆಗೆ `ಸತ್ಯಾ' ಕ್ರಾಂತಿಯನ್ನೇ ಮಾಡಿದ್ದಾಳೆ. ಧೈರ್ಯಶಾಲಿ ಹುಡುಗಿ ಹೇಗಿರಬೇಕೆಂದರೆ, ಸತ್ಯಾ ಥರ ಇರಬೇಕೆನ್ನುವಷ್ಟರ ಮಟ್ಟಿಗೆ `ಸತ್ಯಾ' ಮನೆ ಮಾತಾಗಿದ್ದಾಳೆ.

ಸತ್ಯಾ ಒಂಥರ ಚಾಲೇಂಜಿಂಗ್‌ ಪಾತ್ರ. ಅದಕ್ಕೆ ಜೀವ ತುಂಬಿದವರು ಗೌತಮಿ ಜಾಧವ್. ಗೌತಮಿಗೆ `ಸತ್ಯಾ' ಮೊದಲ ಧಾರಾವಾಹಿಯೇನಲ್ಲ. ಅದಕ್ಕೂ ಮುಂಚೆ 2012ರಲ್ಲಿಯೇ `ನಾಗರಪಂಚಮಿ' ಧಾರಾವಾಹಿಯಲ್ಲಿ ಅಭಿನಯಿಸಿದ್ದರು. ಆಗಿನ್ನೂ ಗೌತಮಿ ಪಿಯು ವಿದ್ಯಾರ್ಥಿನಿ. `ಎಕ್ಸಿನ್ಸಿ' ಎಂಬ ಡ್ಯಾನ್, ಕಂಪನಿಯಲ್ಲಿ ಡ್ಯಾನ್ಸರ್‌ ಆಗಿ ಹೆಸರು ಮಾಡಿದ್ದರು.

ಸಿನಿಮಾ ಅಕಾಶ ಡ್ಯಾನ್ಸ್ ನಲ್ಲಿನ ಅವರ ಪ್ರತಿಭೆ ಗಮನಿಸಿ `ಲೂಟಿ' ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತ್ತು. ಆ ಬಳಿಕ `ಆದ್ಯ, ಕಿನಾರೆ' ಚಿತ್ರಗಳಲ್ಲೂ ನಟಿಸುವ ಅವಕಾಶಗಳು ಹುಡುಕಿಕೊಂಡು ಬಂದಿದ್ದ. ಒಂದು ತಮಿಳು ಸಿನಿಮಾದಲ್ಲೂ ಗೌತಮಿ ನಟಿಸಿದ್ದರು. ಡಿಗ್ರಿ ಮುಗಿಸಲೇ ಬೇಕೆಂಬ ಛಲದಿಂದ ಗೌತಮಿ ಮುಂದೆ ಯಾವುದೇ ಸಿನಿಮಾಗಳನ್ನು ಒಪ್ಪಿಕೊಳ್ಳಲಿಲ್ಲ.

ಗಂಡುಬೀರಿ ಪಾತ್ರಕ್ಕೆ ಆಯ್ಕೆ

19

2019ರ ಕೊನೆಯ ಹೊತ್ತಿಗೆ `ಸತ್ಯಾ' ಧಾರಾವಾಹಿಗೆ ಗೌತಮಿ ಆಯ್ಕೆಯಾದರು. ಅದು ಗಂಡುಬೀರಿ ಹುಡುಗಿಯೊಬ್ಬಳ ಕಥೆ. ಸಾಮಾನ್ಯ ಹುಡುಗಿ ಆ ಪಾತ್ರಕ್ಕೆ ಜೀವ ಕೊಡುವುದು ಕಷ್ಟಕರವೇ ಹೌದು. `ಸತ್ಯಾ' ಪಾತ್ರಕ್ಕೆ ತದ್ವಿರುದ್ಧ ವ್ಯಕ್ತಿತ್ವದ ಗೌತಮಿ ಮಾತ್ರ ತಾನು ಆ ಪಾತ್ರಕ್ಕೆ ಜೀವ ಕೊಡಲೇಬೇಕೆಂದು ನಿರ್ಧರಿಸಿ, ಆ ಗಂಡುಬೀರಿ ಹುಡುಗಿಯ ಮ್ಯಾನರಿಸಂಗಳನ್ನೆಲ್ಲ ಕಲಿತು, ಆ ಪಾತ್ರಕ್ಕೆ ಸೂಕ್ತ ಹುಡುಗಿ ಎನ್ನುವುದನ್ನು ಈಗಾಗಲೇ ಪ್ರೂವ್ ‌ಮಾಡಿಬಿಟ್ಟಿದ್ದಾರೆ.

`ಸತ್ಯಾ' ಧಾರಾವಾಹಿ ಶೂಟಿಂಗ್‌ ಇನ್ನೇನು ಶುರುವಾಗಬೇಕು ಎನ್ನುವಷ್ಟರಲ್ಲಿ ಲಾಕ್‌ಡೌನ್‌ ಆಗಿಬಿಟ್ಟಿತು. ಅದೇ ಗೌತಮಿಗೆ ವರದಾನ ಎಂಬಂತೆ ಪರಿಣಮಿಸಿತು. ಗಂಡ ಅಭಿಷೇಕ್‌ ಕಾಸರಗೋಡು ಅವರಿಂದ ಬೈಕ್‌ ಕಲಿತುಕೊಂಡರು. ಆ ಮ್ಯಾನರಿಸಂಗೆ ಸೂಕ್ತವಾದ ಹತ್ತು ಹಲವು ಸಿನಿಮಾಗಳನ್ನು ನೋಡಿದರು. ಅದರಲ್ಲಿ ಮುಖ್ಯವಾಗಿ, ಮಂಜುಳಾರ ಚಿತ್ರಗಳು ಇವರ ಮೇಲೆ ಗಾಢ ಬೀರಿದ. ಮಾಲಾಶ್ರೀಯವರ ಸಿನಿಮಾಗಳು ಕೂಡ ಇದ್ದವು. `ಸತ್ಯಾ' ಪಾತ್ರ ಯಶ್‌ ಅಭಿಮಾನಿಯಾಗಿದ್ದರಿಂದ, ಯಶ್‌ಮ್ಯಾನರಿಸಂನ್ನು ಕೂಡ ಗೌತಮಿ ಕರಗತ ಮಾಡಿಕೊಂಡರು.

``ಸ್ವಪ್ನಾ ಮೇಡಂ `ಸತ್ಯಾ' ಪಾತ್ರಕ್ಕೆ ನನಗೆ ಹಲವು ಟ್ರಿಕ್ಸ್ ಗಳನ್ನು ಹೇಳಿಕೊಟ್ಟರು. ಲುಕ್‌ ಟೆಸ್ಟ್ ಮಾಡುತ್ತಿದ್ದರು. ಜೊತೆಗೆ ಅನೇಕ ವರ್ಕ್‌ ಶಾಪ್‌ಗಳನ್ನು ಮಾಡಿ ನನ್ನನ್ನು ಸತ್ಯಾ ಪಾತ್ರಕ್ಕೆ ಸೂಕ್ತ ಎನ್ನುವಂತೆ ಮಾಡಿದರು. ಸತ್ಯಾ ಪಾತ್ರಧಾರಿಯಾಗಿ ನಾನು ಕಾಸ್ಟ್ಯೂಮ್ ಹಾಕಿಕೊಳ್ಳುತ್ತಿದ್ದಂತೆ ನನ್ನಲ್ಲಿ `ಗೌತಮಿ' ಕಾಣೆಯಾಗಿ `ಸತ್ಯಾ' ಆವರಿಸಿಕೊಂಡುಬಿಡುತ್ತಿದ್ದಳು,'' ಎಂದು ತಮ್ಮ ಪಾತ್ರದ ಬಗ್ಗೆ ಹೇಳುತ್ತಾರೆ.

`ಸತ್ಯಾ'ದಲ್ಲಿ ಗಿರಿಜಾ ಲೋಕೇಶ್‌, ಶ್ರೀನಿವಾಸ ಮೂರ್ತಿ ಅವರಂತಹ ಹಿರಿಯ ಕಲಾವಿದರು ನಟಿಸುತ್ತಿದ್ದಾರೆ. ಅವರಿಂದ ಏನನ್ನು ಕಲಿಯಲು ಸಾಧ್ಯವಾಯಿತು ಎಂಬ ಪ್ರಶ್ನೆಗೆ, ``ಶ್ರೀನಿವಾಸ ಮೂರ್ತಿ ಸರ್‌ ನನಗೆ ಹೆಚ್ಚಿಗೆ ಸಂಪರ್ಕಕ್ಕೆ ಬಂದಿಲ್ಲ. ಗಿರಿಜಾ ಲೋಕೇಶ್‌ ಮೇಡಂ ಮಾತ್ರ ದಿನ ಭೇಟಿ ಆಗುತ್ತಾರೆ. ಸಂಜೆ ಹೊತ್ತಿಗೆ ನಾವು ಶೂಟಿಂಗ್‌ನಿಂದ ಸುಸ್ತಾಗಿ ಹೋಗುತ್ತೇವೆ. ಆದರೆ ಗಿರಿಜಾ ಮೇಡಂ ಮಾತ್ರ ಅದೇ ಆಗ ಶೂಟಿಂಗ್‌ಗೆ ಬಂದರಂತೆ ಇರುತ್ತಾರೆ. ಅವರ ಮಾತುಗಳು ನನಗೆ ಪ್ರೇರಣೆ ತುಂಬುತ್ತವೆ,'' ಎನ್ನುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ