ದೇಶದಲ್ಲಿ ಉದ್ಯೋಗ ಮಾಡುವ ಮಹಿಳೆಯರ ಸಂಖ್ಯೆಯಲ್ಲಿ ಗಮನಾರ್ಹ ಬೆಳವಣಿಗೆ ಆಗುತ್ತಿದೆ. ಸ್ವಾತಂತ್ರ್ಯ ದೊರೆತ 7 ದಶಕಗಳ ಬಳಿಕ ಮೊದಲ ಬಾರಿಗೆ ನೌಕರಿಯಲ್ಲಿ ನಗರ ಪ್ರದೇಶದಲ್ಲಿ ಮಹಿಳೆಯರ ಸಂಖ್ಯೆ ಪುರುಷರಿಗಿಂತ ಹೆಚ್ಚಾಗಿರುವುದು ಕಂಡುಬಂದಿದೆ. ಅದಕ್ಕೆ ಸಂಬಂಧಪಟ್ಟ ಸಚಿವಾಲಯದ ಅಂಕಿಅಂಶಗಳ ಪ್ರಕಾರ, 52.1%ರಷ್ಟು ಮಹಿಳೆಯರು ಹಾಗೂ 45.7%ರಷ್ಟು ಪುರುಷರು ಉದ್ಯೋಗಿಗಳಾಗಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರು ಈಗಲೂ ಪುರುಷರಿಗಿಂತ ಹಿಂದೆ ಇದ್ದಾರೆ.

ಮಹಿಳೆಯರಲ್ಲಿ ಹೆಚ್ಚುತ್ತಿರುವ ಪ್ರೊಫೆಶನ್‌ ಹಾಗೂ ಟೆಕ್ನಿಕ್‌ ಎಜುಕೇಶನ್‌

ಅವರಲ್ಲಿನ ಈ ಬದಲಾವಣೆಗೆ ಕಾರಣವಾಗಿದೆ ಎನ್ನಬಹುದು. ಈಗ ಪುರುಷರು ಕೂಡ ಮಹಿಳೆಯರಿಗೆ ಸಹಕಾರ ನೀಡುತ್ತಿದ್ದಾರೆ. ಅವರ ಮಾನಸಿಕತೆ ಮಹಿಳಾ ಸಪೋರ್ಟಿವ್ ಆಗುತ್ತಿದೆ.

ಮನೆಗಿಂತ ಹೆಚ್ಚಿನ ಸಂತೋಷ

ಮಹಿಳೆಯರು ಈಗ ಕೇವಲ ತಮ್ಮ ಅವಶ್ಯಕತೆಗಾಗಿ ಅಲ್ಲ, ತಮ್ಮ ಮನಸ್ಸಿನ ಖುಷಿಗಾಗಿಯೂ ಉದ್ಯೋಗಸ್ಥೆಯರಾಗಲು ಇಷ್ಟಪಡುತ್ತಾರೆ. ಆಫೀಸಿನ ನೆಪದಲ್ಲಿ ಅವರು ಮನೆಯ ಒತ್ತಡಗಳಿಂದ ಹೊರಬರುತ್ತಾರೆ. ಆ ಮೂಲಕ ತಮ್ಮ ಪಡಿಯಚ್ಚು ಮೂಡಿಸುತ್ತಾರೆ.

ಇದಕ್ಕೆ ಮತ್ತೊಂದು ಕಾರಣವೇನೆಂದರೆ, ಮಹಿಳೆಯರಿಗೆ ತಮ್ಮ ಉದ್ಯೋಗ ಇಷ್ಟವಾಗದೇ ಹೋದರೆ ಅವರು ತಮ್ಮ ಉದ್ಯೋಗವನ್ನು ಬದಲಿಸುತ್ತಾರೆ. ಎಲ್ಲಿ ತಮಗೆ ಇಷ್ಟವಾಗುತ್ತೋ ಅಲ್ಲಿಯೇ ಅವರು ಉದ್ಯೋಗ ಮಾಡುತ್ತಾರೆ. ಆದರೆ ಪುರುಷರು ಮಾತ್ರ ಹಾಗೆ ಮಾಡುವುದಿಲ್ಲ. ತಮ್ಮ ಜಾಬ್‌ ಬಗ್ಗೆ ತೃಪ್ತಿ ಇರದೇ ಇದ್ದರೂ ಸಹ ಅವರು ಅದೇ ಕಂಪನಿಯಲ್ಲಿ ಮುಂದುವರಿಯುತ್ತಾರೆ. ಆ ಕಾರಣದಿಂದ ಅವರು ಆಫೀಸಿನಿಂದ ಖುಷಿಯಿಂದಿರುವುದಿಲ್ಲ. ಇದರ ಹೊರತಾಗಿ ಪುರುಷರಲ್ಲಿ ಹೆಚ್ಚಿನ ಅಧಿಕಾರ ಪಡೆಯುವ ಸಂಘರ್ಷ ಕೂಡ ಮುಂದುವರಿಯುತ್ತಿರುತ್ತದೆ. ಅವರ ಅಹಂಗೆ ಪೆಟ್ಟಾದರೆ ಬಹಳ ನೋವಾಗುತ್ತದೆ.

ಉದ್ಯೋಗಸ್ಥ ಹೆಂಡತಿಯರು

ಅಚ್ಚರಿದಾಯಕ ಸಂಗತಿಯೆಂದರೆ, ಜನರು ಮುಂಚೆ ಮದುವೆಯಾಗುವ ಸಂದರ್ಭದಲ್ಲಿ ಮನೆಗೆಲಸದಲ್ಲಿ ನಿಪುಣ ಹಾಗೂ ಸಂಸ್ಕಾರವಂತ ಮನೆತನದ ಹುಡುಗಿಯರನ್ನು ಇಷ್ಟಪಡುತ್ತಿದ್ದರು. ಆದರೆ ಈಗ ಆ ಟ್ರೆಂಡ್‌ ಬದಲಾಗಿ ಹೋಗಿದೆ. ಪುರುಷರು ಈಗ ಮನೆಯಲ್ಲಿ ಕುಳಿತ ಹುಡುಗಿಯನ್ನಲ್ಲ, ಉದ್ಯೋಗಸ್ಥ ಹುಡುಗಿಯರನ್ನು ಇಷ್ಟಪಡುತ್ತಿದ್ದಾರೆ. ತಮ್ಮ ಉದ್ಯೋಗಸ್ಥ ಹೆಂಡತಿಯನ್ನು ಬೇರೆಯವರ ಮುಂದೆ ಪರಿಚಯ ಮಾಡಿಕೊಡಲು ಅವರಿಗೆ ಹೆಮ್ಮೆ ಎನಿಸುತ್ತದೆ.

ಪುರುಷರ ಈ ಬದಲಾದ ಯೋಚನೆಯ ಕುರಿತು ಕಾರಣಗಳನ್ನು ಹೀಗೆ ಪಟ್ಟಿ ಮಾಡಬಹುದು :

ಗಂಡನ ಪರಿಸ್ಥಿತಿಯನ್ನು ಅರಿಯುತ್ತಾರೆ : ಒಂದು ವೇಳೆ ಹೆಂಡತಿ ಸ್ವತಃ ಉದ್ಯೋಗಸ್ಥೆಯಾಗಿದ್ದರೆ, ಆಕೆ ಗಂಡನಿಗೆ ಸಂಬಂಧಪಟ್ಟ ಪ್ರತಿಯೊಂದು ಆಗುಹೋಗುಗಳ ಬಗ್ಗೆ ಚೆನ್ನಾಗಿ ತಿಳಿದಿರುತ್ತಾಳೆ. ಆಕೆ ಗಂಡನಿಗೆ ಮೇಲಿಂದ ಮೇಲೆ ಫೋನ್‌ ಮಾಡಿ ಮನೆಗೆ ಬರಲು ಹೇಳುವುದಿಲ್ಲ. ಅಷ್ಟೇ ಅಲ್ಲ, ಮನೆಗೆ ಬಂದ ಬಳಿಕ ಪ್ರಶ್ನೆಗಳ ಸುರಿಮಳೆಗೈಯ್ಯುವುದಿಲ್ಲ. ಈ ರೀತಿಯಾಗಿ ಗಂಡ ಹೆಂಡತಿಯ ಸಂಬಂಧ ಸ್ಮೂತ್‌ ಆಗಿ ನಡೆಯುತ್ತಿರುತ್ತದೆ. ಇಬ್ಬರು ಸಾಧ್ಯವಾದಷ್ಟು ಮಟ್ಟಿಗೆ ಪರಸ್ಪರರಿಗೆ ನೆರವಾಗಲು ಸನ್ನದ್ಧರಾಗುತ್ತಾರೆ. ಅದೇ ಕಾರಣದಿಂದ ಅವರು ಉದ್ಯೋಗಸ್ಥ ಮಹಿಳೆಯರನ್ನು ಹುಡುಕುತ್ತಾರೆ.

ತಮ್ಮ ಖರ್ಚನ್ನು ತಾವೇ ಮಾಡುತ್ತಾರೆ : ಯಾವ ಮಹಿಳೆಯರು ಉದ್ಯೋಗ ಮಾಡುವುದಿಲ್ಲವೇ, ಅವರು ತಮ್ಮ ಖರ್ಚಿಗಾಗಿ ಪರಿಪೂರ್ಣವಾಗಿ ಗಂಡನನ್ನೇ ಅವಲಂಬಿಸಿರುತ್ತಾರೆ. ಚಿಕ್ಕಪುಟ್ಟ ವಸ್ತುಗಳಿಗಾಗಿಯೂ ಅವರು ಗಂಡ ಹಾಗೂ ಮನೆಯವರ ಮುಂದೆ ಕೈ ಒಡ್ಡಬೇಕಾಗುತ್ತದೆ. ಇನ್ನೊಂದೆಡೆ ಉದ್ಯೋಗಸ್ಥ ಮಹಿಳೆ ತಮ್ಮ ಖರ್ಚುಗಳನ್ನು ನಿಭಾಯಿಸಲು ಗಂಡನ ಮೇಲೆ ಅವಲಂಬಿಸಬೇಕಾಗಿ ಬರುವುದಿಲ್ಲ. ಅವಳು ಕೇವಲ ತನ್ನ ಖರ್ಚನ್ನು ತಾನೇ ಮಾಡುವುದಿಲ್ಲ, ಸಮಯ ಬಂದಾಗ ಕುಟುಂಬಕ್ಕೂ ಬೆಂಬಲವಾಗಿ ನಿಲ್ಲುತ್ತಾಳೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ