ಜೊತೆ ಜೊತೆಗೆ ಸುತ್ತುವುದು, ತಿನ್ನುವುದು, ಕೆಲವು ದಿನ ಜೊತೆ ಜೊತೆಗೆ ಕಳೆಯುವುದು ಒಂದೆಡೆಯಾದರೆ, ಮದುವೆಯ ಭರವಸೆ ನಿಭಾಯಿಸುವುದು ಮತ್ತೊಂದೆಡೆ.

`ಮಕಡಿ’ ಹಾಗೂ `ಮರ್ದ್‌ಕೋ ಬಿ ದರ್ದ್‌ ಹೋತಾ ಹೈ’ ಚಿತ್ರಗಳ ನಾಯಕಿ ಶ್ವೇತಾ ಪ್ರಸಾದ್‌, ರೋಹಿತ್‌ ಮಿತ್ತಲ್ ಜೊತೆ ಪ್ರೀತಿಸಿ 2018ರಲ್ಲಿ  ಮದುವೆಯಾಗಿದ್ದಳು. 8-9 ತಿಂಗಳ ಬಳಿಕ ವಿಚ್ಛೇದನ ನೀಡಿದ್ದಳು.

ಸಿನಿಮಾದವರ ವಿಚ್ಛೇದನ ಸಾಮಾನ್ಯ ಸಂಗತಿ ಎಂದು ಹೇಳಲಾಗುತ್ತದೆ. ಶೋ ಬಿಸ್‌ನೆಸ್‌ನಲ್ಲಿ ಮುಕ್ತ ಸೆಕ್ಸ್ ಇರುತ್ತದೆ. ಹಾಗಾಗಿ ಮದುವೆ ಮುರಿದು ಬೀಳುತ್ತದೆ ಎಂದೆಲ್ಲ ಹೇಳಲಾಗುತ್ತದೆ.

ಆದರೆ ವಾಸ್ತವ ಸಂಗತಿ ಬೇರೆಯೇ ಆಗಿರುತ್ತದೆ. ಸಿನಿಮಾ ನಟಿಯರು ಗಳಿಸುತ್ತಿರುತ್ತಾರೆ. ಆದರೆ ಮದುವೆಯ ಬಳಿಕ ಪತಿಯಂದಿರು ಅವರ ಮೇಲೆ ತಮ್ಮ ದರ್ಪ ತೋರಿಸುತ್ತಾರೆ. ಅದು ನಟಿಯರಿಗೆ ಇಷ್ಟವಾಗುವುದಿಲ್ಲ.

ಸಾಮಾನ್ಯ ಮನೆಗಳಲ್ಲಿ ಮಹಿಳೆಯನ್ನು ಮಾನಸಿಕವಾಗಿ, ದೈಹಿಕವಾಗಿ, ಆರ್ಥಿಕವಾಗಿ ಅತ್ಯಂತ ದುರ್ಬಲರನ್ನಾಗಿ ಮಾಡಲಾಗುತ್ತದೆ. ಅವರ ಸ್ಥಿತಿ ಗೊಂಬೆಯ ರೀತಿ ಆಗಿಬಿಡುತ್ತದೆ. ಬಿಸಿಲು, ನೀರು ಹಾಗೂ ಇತರರ ದೃಷ್ಟಿಯಿಂದ ರಕ್ಷಿಸಿಕೊಳ್ಳಲು ಅವರ ಮೇಲೆ ಮನೆ, ಗಂಡ, ಮಕ್ಕಳ ಜವಾಬ್ದಾರಿ ಹೊರಿಸಲಾಗುತ್ತದೆ. ಅವರಿಗೆ ತಮ್ಮದೇನನ್ನೂ ಹೇಳುವ ಧೈರ್ಯ ಇರುವುದಿಲ್ಲ. ಅವರು ಮಾನಸಿಕ ಹಾಗೂ ದೈಹಿಕ ಗುಲಾಮರಾಗಿ ಇರಬೇಕಾಗುತ್ತದೆ. ಗಂಡನ ದಾಸಿಯಂತೆ, ಸೇವಕಿಯಂತೆ ಇರುತ್ತಾಳೆ.

ನಮ್ಮ ಧರ್ಮಗ್ರಂಥಗಳು ಇಂತಹ ಸಂಗತಿಗಳಿಂದ ತುಂಬಿಹೋಗಿವೆ. ಕೂದಲು ಬಿಟ್ಟುಕೊಂಡು ಇರುವುದನ್ನು ಪತಿಗೆ ರಿಸರ್ವ್ ಇಡಲಾಗಿದೆ. ರಾಮಾಯಣದ ಉಲ್ಲೇಖ ಮಾಡುತ್ತ ಒಂದು ಸಂಗತಿ ಹೇಳಲಾಗುತ್ತದೆ. ಸೀತೆಗೆ ಆಕೆಯ ತಾಯಿ ಸುನೈನಾ `ಕಟ್ಟಿದ ಕೂದಲು ಸೌಭಾಗ್ಯದ ಸಂಕೇತ. ಪತಿಯ ಮುಂದಷ್ಟೇ ಅವನ್ನು ಬಿಚ್ಚಬೇಕು,’ ಎಂದು ಹೇಳುತ್ತಾಳೆ.

ಗಂಡನಿಂದ ದೂರಾದ ಬಳಿಕ ಕೂದಲು ಮುಕ್ತವಾಗಿಟ್ಟುಕೊಳ್ಳುವುದು ಅಥವಾ ಚಿಕ್ಕ ಕೂದಲು ಇಟ್ಟುಕೊಳ್ಳಲು ಕೂಡ ಶಾಸ್ತ್ರೀಯ ಬಂಧನಗಳಿವೆ. ಗಂಡನ ಜೊತೆ ಜಟಾಪಟಿಯಾದ ಬಳಿಕ, ಅವನು ಹೇಳಿದಂತೆ ತಿನ್ನಬೇಕು, ಇರಬೇಕು. ಎಲ್ಲಿಗಾದರೂ ಹೋಗಬೇಕು, ಅವನ ಹೊಡೆತ ತಿನ್ನಬೇಕು, ಪಾದಪೂಜೆ ಮಾಡಬೇಕೆಂಬ ಸ್ಥಿತಿಯಲ್ಲಿ ಹೆಣ್ಣು ಅವನಿಂದ ವಿಚ್ಛೇದನ ಪಡೆಯಲು ಇಚ್ಛಿಸುತ್ತಾಳೆ.

ಸಿನಿಮಾ ನಟಿಯರು ಗಳಿಸುತ್ತಿರುತ್ತಾರೆ. ಪುರುಷ ಪ್ರಾಬಲ್ಯದ ಕ್ಷೇತ್ರದಲ್ಲಿ ತಮ್ಮ ಕಲೆ ಹಾಗೂ ಸೌಂದರ್ಯದ ಬಲದಿಂದ ತಮ್ಮ ಅಸ್ತಿತ್ವ ಕಂಡುಕೊಳ್ಳುತ್ತಾರೆ. ಹಣ, ಹೆಸರು ಮಾಡುತ್ತಾರೆ. ಅವರ ಆದಾಯ ಅವರ ಸ್ವಂತದ್ದು. ಅವರು ಯಾರನ್ನೇ ಮದುವೆಯಾದರೂ ಗಂಡನ ಮೇಲೆ ಅವಲಂಬಿತರಾಗಿರುವುದಿಲ್ಲ.

ಸುಶಿಕ್ಷಿತ ಮಹಿಳೆಯರ ಹೆಚ್ಚುತ್ತಿರುವ ವಿಚ್ಛೇದನಗಳಿಗೆ ಕಾರಣವೇನೆಂದರೆ, ಪುರುಷತ್ವದ ಭಾವನೆ ಪತಿಯಂದಿರ ತಲೆಯಿಂದ ಇನ್ನೂ ಹೋಗಿಲ್ಲ. ಪತ್ನಿಯರು ಮಾತ್ರ ಕೆರಿಯರ್‌ ಹಾಗೂ ಮಕ್ಕಳನ್ನು ಸಂಭಾಳಿಸುತ್ತಿದ್ದಾರೆ.

ಹಾಲಿವುಡ್‌ ಆಗಿರಲಿ, ಬಾಲಿವುಡ್‌ ಇರಲಿ ತಮ್ಮ ಹೆಂಡತಿಯರನ್ನು ಗುಲಾಮರೆಂದು ಭಾವಿಸುವವರೇ ಅನೈತಿಕತೆಯ ಹಣೆಪಟ್ಟಿ ಹೊರಬೇಕಾಗುತ್ತದೆ. ಶೇ.95ರಷ್ಟು ಯಶಸ್ವಿ ವಿವಾಹಗಳಲ್ಲೂ ಕೂಡ ಹೀಗೆಯೇ ಆಗುತ್ತದೆ. ಹೆಂಡತಿ ಗಂಡನ ಪ್ರತಿಯೊಂದು ಸಂಗತಿಗೂ ಪತಿಯ ಮರ್ಜಿ ಕಾಯಬೇಕಾಗುತ್ತದೆ. ಅವಳು ಸೂಕ್ತ ಸಲಹೆ ಕೊಡುತ್ತಾಳೆ, ಸಮಾನ ಪಾಲುದಾರಳು ಎಂಬುದು ಮಾತ್ರ ಗಂಡನ ಗಮನಕ್ಕೆ ಬರುವುದಿಲ್ಲ. ತಾನು ಆಕೆಯ ದೇಹ ಹಾಗೂ ಮನಸ್ಸಿನ ಮಾಲೀಕ ಎಂಬುದಷ್ಟೇ ಅವನ ಮನಸ್ಸಿನಲ್ಲಿರುತ್ತದೆ.

ಶ್ವೇತಾ ಪ್ರಸಾದ್‌ 8-9 ತಿಂಗಳಲ್ಲಿ ವಿಚ್ಛೇದನ ಕೊಟ್ಟಳೆಂದರೆ, ಅದು ಪತಿಯಂದಿರಿಗೆ ಒಂದು ಎಚ್ಚರಿಕೆಯ ಸಂಕೇತ. ಅವಳನ್ನು ಗುಲಾಮಳೆಂದು ಭಾವಿಸದೆ, ಅವಳನ್ನು ಸುರಕ್ಷಿತವಾಗಿ ಕಾಪಾಡಿ, ಅವಳು ಸೆಕ್ಸ್ ಡಾಲ್ ‌ಅಲ್ಲ ಎಂಬುದನ್ನು ಮನವರಿಕೆ ಮಾಡಿಕೊಡುವುದಾಗಿದೆ.

ಸೆಲೆಬ್ರಿಟಿಯೊಬ್ಬಳು ವಿಚ್ಛೇದನ ಪಡೆಯುತ್ತಾಳೆಂದರೆ, ವಾಸ್ತವದಲ್ಲಿ ಆಕೆ ತನ್ನ ದೇಹ ಹಾಗೂ ಮನಸ್ಸಿಗೆ ಹಾಕಿದ ಬಂಧನವನ್ನೂ ಕಳಚುತ್ತಿರುತ್ತಾಳೆ. ಅಂತಹ ಮಹಿಳೆಯನ್ನು ಗೌರವಿಸಬೇಕೆ ಹೊರತು ಅವಮಾನಿಸಬಾರದು. ವಿವಾಹವೆನ್ನುವುದು ಮಹಿಳೆಯರ ಸಂಖ್ಯೆಗೆ ಪುರುಷರ ಸುಖಕ್ಕೆ ಮಾಡಿದ ಒಂದು ಧಾರ್ಮಿಕ ವ್ಯವೆಸ್ಥೆ. ಅದರಿಂದ ಧರ್ಮಕ್ಕೆ ಹಣ ದೊರಕುತ್ತದೆ. ಪುರುಷರಿಗೆ ಆಸರೆ ಹಾಗೂ ಮಹಿಳೆಯರ ಸುಖ ಕೂಡ.

ಇದೆಂಥಾ ಮಾನಸಿಕತೆ?

aurat-gudia-nahi-2

ಹಿಂದೂ ಮಾನಸಿಕತೆ ಒಂದು ರೀತಿಯಲ್ಲಿ ಇಸ್ಲಾಮಿಕ್‌ ಮಾನಸಿಕತೆಯ ರೀತಿಯಲ್ಲಿದೆ. ಹಿಂದೂ ಮತಾಂಧರು ಅಂತಾರಾಷ್ಟ್ರೀಯ ಗಾಯಕಿ ರಿಹಾನಾ ಹಾಗೂ ಟೀನಾ ಏಜರ್‌, ಕ್ಲೈಮೇಟ್‌ ಆ್ಯಕ್ಟಿವಿಸ್ಟ್ ಗ್ರೇಟ್‌ ಗನ್‌ ಬಗಳದವರನ್ನು ಹೇಗೆ ಟ್ರೋಲ್ ಮಾಡಿದರೆಂದರೆ, ಅವರಿಬ್ಬರೂ ಮಹಿಳೆಯರಾಗಿರುವುದರಿಂದ ಬಾಯ್ಮುಚ್ಚಿಕೊಂಡು ಸುಮ್ಮನಾಗಿರಬೇಕು ಎಂದು. ಅದೇ ರೀತಿ ಟರ್ಕಿ ದೇಶದ ರಾಷ್ಟ್ರಪತಿ ರೇಚಪ್‌ ತೈಯಪ್‌ ಎರಡೊಂಗಾನ್‌ ಕೂಡ ಮಾಡುತ್ತಿದ್ದಾರೆ.

ಒಬ್ಬ ಆ್ಯಕ್ಟಿವಿಸ್ಟ್ ಐಸೆ ಬುಗ್ರಾರ, ಎಂಡೋಗಾನ್‌ನ ಹೆಸರು ಹೇಳಲಿಚ್ಛಿಸದೆ, ಗಂಡನ ಹೆಸರಿನೊಂದಿಗೆ ಜೋಡಿಸಿ ಸಂಬೋಧಿಸುತ್ತಾರೆ ಮತ್ತು ಮೋದಿ ಭಕ್ತರಿಗೆ ಮಹಿಳೆಯರ ಜಾಗ ಗಂಡ ಅಥವಾ ಪತಿಯಿಂದಾಗಿಯೇ ಇರುತ್ತದೆ ಎಂಬುದು ತಿಳಿಯಲಿ ಎನ್ನುತ್ತಾರೆ. ಆಯ್‌ ಸೆ ಬುಗ್ರಾ ಟರ್ಕಿಯಲ್ಲಿ ಪ್ರೊಫೆಸರ್‌ ಮತ್ತು ವಿದ್ವಾನರಾಗಿದ್ದಾರೆ. ಆದರೆ ಆ್ಯಕ್ಟಿವಿಸ್ಟ್ ಎರಡೋಗಾನ್‌ಗಂಡನ ಸಂಪತ್ತು ಆಗಿರುವಂತೆ ಭಗವಾ ಗ್ಯಾಂಗ್‌ಗೆ ಸೋನಿಯಾ ಗಾಂಧಿ ಬಾರ್‌ ಡ್ಯಾನ್ಸರ್‌ ಆಗಿದ್ದಾರೆ.

ಮಹಿಳೆಯರ ಬಗೆಗಿನ ಅಮಾನಕರ ಯೋಚನೆ ಮನೆ ಮನೆಯಲ್ಲೂ ಅಸ್ತಿತ್ವದಲ್ಲಿದೆ ಹಾಗೂ ಅದು ಅವರ ವ್ಯಕ್ತಿತ್ವದ ದೋಷವನ್ನು ಹೊರಹೊಮ್ಮಿಸುತ್ತದೆ. ಸ್ವಲ್ಪ ದಿನಗಳಲ್ಲಿಯೇ ಮದುವೆಯಾಗುತ್ತದೆ, ಅಲ್ಲಿಯೇ ಪತಿಯ ಪಾದ ತೊಳೆದು ಅದನ್ನೇ ಅಮೃತವೆಂದು ಕುಡಿ ಎಂದು ಹೇಳುವುದು ನೆನಪಿಲ್ಲವೆಂದರೆ ಹೇಗೆ? ತ್ರಿವಳಿ ತಲಾಖ್‌ ಬಗ್ಗೆ ಭಾರಿ ಸದ್ದು ಮಾಡಿದ ಭಾರತೀಯ ಜನತಾ ಪಕ್ಷ 2014ರ ಬಳಿಕ ಹಿಂದೂ ಮಹಿಳೆಯರ ಸುಧಾರಣೆಯ ಬಗ್ಗೆ, ಒಂದು ಹೆಜ್ಜೆಯನ್ನೂ ಮುಂದಿಡಲಿಲ್ಲ. ಅವರಿಗೆ ನೌಕರಿ ಸಹ ಕೊಡಲಿಲ್ಲ. ಗಂಡ ಅಥವಾ ತಂದೆಯ ಆಸ್ತಿಯಲ್ಲಿ ಹೆಚ್ಚುವರಿ ಹಕ್ಕನ್ನೂ ಕೊಡಿಸಲಿಲ್ಲ. ಅವರು ಕಡಿಮೆ ಆದಾಯ ಕರ ಅಥವಾ ಆಸ್ತಿ ತೆರಿಗೆ ಕೊಡಲಿ, ಅವರು ಮುಕ್ತ ವಿಚಾರದವರಾಗಲೂ ಏನನ್ನೂ ಪ್ರಯತ್ನ ಮಾಡಲಿಲ್ಲ.

ರೈತ ಹೋರಾಟದಲ್ಲಿ ಪಾಲ್ಗೊಂಡ ಮಹಿಳೆಯರಿಗೆ ಬೇಗ ಹೊರಟು ಹೋಗಿ ಎಂದು ಮೇಲಿಂದ ಮೇಲೆ ಹೇಳಲಾಗುತ್ತದೆ. ಏಕೆಂದರೆ ಇಂದಿನ ಮತಾಂಧ ಸಂಸ್ಕೃತಿ ಮಹಿಳೆಯರು ಪುರುಷರಿಗೆ ಸರಿಸಮಾನವಾಗಿ ನಡೆಯಬೇಕೆಂದು ಇಚ್ಛಿಸುವುದಿಲ್ಲ. ನಾಗರಿಕ ತಿದ್ದುಪಡಿ ಕಾನೂನನ್ನು ವಿರೋಧಿಸಲು ದೆಹಲಿಯ ಶಹೀನ್‌ ಬಾಗ್‌ನಲ್ಲಿ ಕುಳಿತ ಮಹಿಳೆಯರ ಬಗ್ಗೆ ಇದ್ದ ಚಿಂತೆ ಏನೆಂದರೆ, ಆ ಮಹಿಳೆಯರು ರಾಜಕೀಯದಲ್ಲಿ ಪಾಲುದಾರಿಕೆ ಕೇಳದಿದ್ದರೆ ಸಾಕು ಎನ್ನುವಂತಿತ್ತು. ಮಹಿಳೆಯರನ್ನು ಗುಲಾಮರನ್ನಾಗಿ ಇಡುವ ಪ್ರಯತ್ನ ಪೂರ್ವನಿಯೋಜಿತವಾಗಿದೆ. ನೂರಾರು ಕಥೆಗಳು ಬರೆಯಲ್ಪಟ್ಟಿವೆ. ಅವುಗಳಲ್ಲಿ ಮಹಿಳೆಯರ ಪಾತ್ರ ಅಷ್ಟಾಗಿ ಇರುವುದಿಲ್ಲ. `ಶೋಲೆ’ಯ ಎರಡು ಮಹತ್ವದ ಪಾತ್ರಗಳಲ್ಲಿ ಜಯಾಬಾದುರಿ ಹಾಗೂ ಹೇಮಮಾಲಿನಿಯ ಪಾತ್ರಗಳು ಮುಗ್ಧ, ದಯನೀಯ ಎಂಬಂತೆ ತೋರಿಸಲಾಗಿತ್ತು. ಒಬ್ಬಳು ವಿಧವೆ, ಆಕೆ ಒಬ್ಬ ಪುರುಷನ ಮೇಲೆ ಮೋಹಿತಳಾಗಿರುತ್ತಾಳೆ.

ಆದರೆ ತನ್ನ ಪ್ರೀತಿಯನ್ನು ವ್ಯಕ್ತಪಡಿಸಲು ಆಗುವುದಿಲ್ಲ. ಇನ್ನೊಬ್ಬಳು ಟಾಂಗಾದವಳು, ಆದರೆ ಆಕೆಯನ್ನು ಮಾತುಗಾತಿ ಎಂಬಂತೆ ತೋರಿಸಲಾಗಿದೆ. ಆದರೆ ಅವಳನ್ನು ನರ್ತಕಿ ಎಂಬಂತೆ ತೋರಿಸಿ ಪುರುಷನ ಸೇವಕಿ ಎಂಬಂತೆ ಬಿಂಬಿಸಲಾಗಿದೆ.

ಕಮಲಾ ಹ್ಯಾರಿಸ್‌ ತಮ್ಮ ಬಲದ ಮೇಲೆ ತಂದೆ ಅಥವಾ ಗಂಡನ ನೆರವಿಲ್ಲದೆ ಪ್ರೆಸ್‌ ಪ್ರೆಸಿಡೆಂಟ್‌ ಹುದ್ದೆಯನ್ನು ಅಲಂಕರಿಸಿದರು. ಅವರ ಸಾಮರ್ಥ್ಯದ ಬಗ್ಗೆ, ಏನನ್ನೂ ಹೇಳಲಾಗಲಿಲ್ಲ. ಆದರೆ ಅವರ ಸೋದರ ಸೊಸೆ ರೈತ ಹೋರಾಟಕ್ಕೆ ಬೆಂಬಲ ಸೂಚಿಸಿದಾಗ ಅವರ ಬಗ್ಗೆ ಟೀಕಿಸಿ, ಅವಹೇಳನ ಮಾಡಲಾಯಿತು.

ಚಾರಿತ್ರ್ಯಹರಣ ಮಾಡುವ ಉನ್ನತ ವರ್ಗದ ಟ್ರೋಲ್ ‌ಕಂಪನಿಯ ಸೇವಾಕರ್ತ ಎಂತಹ ಭಾಷೆಯನ್ನು ಬಳಸುತ್ತಾರೆಂದರೆ, ಅದು ಟ್ವೀಟರ್‌ಗೆ ಅಥವಾ ಟರ್ಕಿಯ ಎರ್ಡಾಗೋನ್‌ಗೆ ಅಥವಾ ಭಾರತದ ಮೋದಿ ಆಡಳಿತಕ್ಕೆ ಗೊತ್ತಾಗುವುದಿಲ್ಲ. ಅವರು ಮಹಿಳೆಯರನ್ನು ಏನೆಂದು ಭಾವಿಸುತ್ತಾರೆ ಎಂಬುದು ನಮಗೆ ಗೊತ್ತು. ಅಮಿತ್‌ ಶಾಹ್‌ರ ಹೆಂಡತಿ ಎಲ್ಲೂ ಕಂಡುಬರುವುದಿಲ್ಲ. ಸೋಶಿಯಲ್ ಮೀಡಿಯಾದ ಪ್ರಕಾರ ಶಾಪಿಂಗ್‌ನಲ್ಲಿ ಅವರಿಗೆ ಆಸಕ್ತಿ ಇದೆಯೋ ಧಾರ್ಮಿಕ ಸಂಗತಿಯಲ್ಲಿದೆಯೋ ಗೊತ್ತಿಲ್ಲ.

ಇಸ್ಲಾಮಿ ಹಾಗೂ ಮತಾಂಧ ಹಿಂದೂಗಳು ವಾಸ್ತವದಲ್ಲಿ ಮಹಿಳೆಯರಿಗೆ ಯಾವುದೇ ಉನ್ನತ ಸ್ಥಾನ ಕೊಡಲು ಇಷ್ಟಪಡುವುದಿಲ್ಲ. ಒಬ್ಬ ಮತಾಂಧ ಮುಖಂಡನ ಕೈಯಲ್ಲಿ ಅಧಿಕಾರವಿದ್ದರೆ ಮಹಿಳೆಯರು 10ನೇ ಶತಮಾನದಲ್ಲಿಯೇ ಇರುತ್ತಾರೆ. ಅಲ್ಲಿ ಅವರ ಸ್ಥಾನ ಅಲಂಕೃತ ಗೊಂಬೆಯಂತೆಯೇ ಇರುತ್ತದೆ. ನಮ್ಮಲ್ಲಂತೂ ಅವರು ತ್ಯಾಗಬಲಿದಾನದ ಮೂರ್ತಿಯಾಗಿರುವುದು ಕೇವಲ ಪತಿಗಾಗಿ.

ಮಹಿಳೆಯರಿಗೇನು ಸಿಗುತ್ತದೆ?

ಹಲವು ಸರ್ಕಾರಗಳು ಉದ್ಯೋಗಿಗಳಿಗೆ ತಿಂಗಳಿನಲ್ಲಿ ಒಂದು ದಿನದ ವೇತನವನ್ನು ರಾಮಮಂದಿರಕ್ಕೆ ಕೊಡಲು ಹೇಳುತ್ತವೆ. ಹಾಗೆ ಹೇಳುವುದು ತಪ್ಪು. ಹೀಗೆ ಕಡಿತವಾದ ಮೊತ್ತವನ್ನು ಎಂತಹ ಒಂದು ಖಾತೆಗೆ ಹಾಕಲಾಗುತ್ತದೆಯೆಂದರೆ, ಆ ಬಾವಿಯ ಆಳದ ಮಾಹಿತಿ ಧಾರ್ಮಿಕ ಗುತ್ತಿಗೆದಾರರನ್ನು ಹೊರತುಪಡಿಸಿ ಯಾರಿಗೂ ಗೊತ್ತಿಲ್ಲ. ಇದರ ಹೊಡೆತ ವಾಸ್ತವದಲ್ಲಿ ಮಹಿಳೆಯರ ಮೇಲೆಯೇ ಬೀಳುತ್ತದೆ. ಮನೆಯ ಖರ್ಚಿನಲ್ಲಿ ಅದು ಕಡಿತವಾಗುತ್ತದೆ.

ರಾಮಮಂದಿರವೇ ಆಗಿರಬಹುದು ಅಥವಾ ಗಲ್ಲಿಗಲ್ಲಿಗಳಲ್ಲಿ ಇರುವ 10-12 ಮಂದಿರಗಳು, ಅಲ್ಲಿಗೆ ಹೋದರೆ ಹಣ ಬರುತ್ತದೆ ಮನೆ ತುಂಬುತ್ತದೆ. ರೋಗ ನಿವಾರಣೆಯಾಗುತ್ತದೆ. ಅವಧಿಗಿಂತ ಮುನ್ನ ಸಾವು ಬರುವುದಿಲ್ಲ, ಜಗಳಗಳು ಆಗುವುದಿಲ್ಲ ಎಂದೆಲ್ಲ ಭಾವಿಸಲಾಗುತ್ತದೆ. ಆದರೆ ವಾಸ್ತವದಲ್ಲಿ ರಾಮಮಂದಿರದ ಹಾಗೆ ಬಹುತೇಕ ಮಂದಿರಗಳು ಮಹಿಳೆಯರಿಗೆ ಬಹಳ ದುಬಾರಿಯಾಗಿ ಪರಿಣಮಿಸುತ್ತದೆ. ಪುರುಷರ ಮೇಲೆ ಅಷ್ಟು ಪರಿಣಾಮ ಬೀರುವುದಿಲ್ಲ. ಅವರು ದೂರದಿಂದ ನಮಸ್ಕರಿಸಿ ಕಾಲು ಕೀಳುತ್ತಾರೆ. ಆದರೆ ಮಹಿಳೆಯರು ಸ್ನಾನ ಮುಗಿಸಿ, ಬರಿಗಾಲಲ್ಲಿ ಮಂದಿರಕ್ಕೆ ಹೋಗಬೇಕಾಗುತ್ತದೆ. ಹೊಗೆ ತುಂಬಿದ ಗರ್ಭಗೃಹದಲ್ಲಿ ಪೂಜೆ ನೆರವೇರಿಸಬೇಕಾಗುತ್ತದೆ. ಭಾರಿ ನೈವೇದ್ಯ ಅರ್ಪಿಸಬೇಕಾಗುತ್ತದೆ. ನಮಗೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿಂದ ಹೀಗೆ ಮಾಡಲಾಗುತ್ತದೆ.

ರಾಮಮಂದಿರದ ಬಗ್ಗೆಯೂ ಇದೇ ಆಶಾಭಾವನೆ ಇಟ್ಟುಕೊಳ್ಳಲಾಗಿತ್ತು. ಆದರೆ ಭಾಜಪಾದ ಸಂಸದರು, ಶಾಸಕರು, ಮುಖಂಡರು ಮನೆ ಮನೆಗೆ ಸುತ್ತಾಡಿ ಹಣ ಕೂಡಿಸುತ್ತಿದ್ದಾರೆ. ಸರ್ಕಾರ ಕಡಿತ ಮಾಡಿದ ಸಂಬಳದ ಹೊರತಾಗಿಯೂ ಮನೆ ಮುಂದೆ ಬಂದವರಿಗೆ ಕೊಡಬೇಕಾಗುತ್ತದೆ. ಮಂದಿರ ಅಯೋಧ್ಯೆಯಲ್ಲಿ ನಿರ್ಮಾಣವಾಗುವುದು. ಅದರ ರಕ್ಷಕರು ಮೋದಿ ಭಕ್ತರಾಗಿರಬಹುದು. ಅಲ್ಲಿರುವ ಪೂಜಾರಿ ಪುರೋಹಿತರು ದಕ್ಷಿಣೆ ಸ್ವೀಕರಿಸಬಹುದು. ಹತ್ತು ಹಲವು ದಾರಿಗಳಲ್ಲಿ ಹಣ ಬರುತ್ತದೆ. ಆದರೆ ವಾಸ್ತವದಲ್ಲಿ ಮಹಿಳೆಯರಿಗೇನು ದೊರಕುತ್ತದೆ? ಅವರಿಗೆ ಮುಸ್ಲಿಮರಿಂದಾಗಲಿ, ಭಗವಾ ರಾಜಕಾರಣದಿಂದಾಗಲಿ ಏನೂ ಆಗಬೇಕಾಗಿಲ್ಲ.

ಮೋದಿ ಆಡಳಿತ ಇರಬಹುದು, ಯೋಗಿಯದ್ದಾಗಿರಬಹುದು, ಮಮತಾರದ್ದಾಗಿರಬಹುದು ಮಹಿಳೆಯರಿಗೇನೂ ವ್ಯತ್ಯಾಸ ಆಗದು. ಅವರಿಗೆ ಸುರಕ್ಷತೆಯ ಚಿಂತೆ ಇದೆ. ತಮ್ಮ ಜೇಬಿನಲ್ಲಿ 4 ದುಡ್ಡು ಹೇಗೆ ಬರಬಹುದು ಎಂದು ಕಳಕಳಿ ಇದೆ. ರಾಮಮಂದಿರ ಹೀಗೆಲ್ಲ ಮಾಡಬಹುದು ಎಂದು ಭರವಸೆ ಕೊಡುವವರು ಯಾರೊಬ್ಬರೂ ಕಂಡುಬರುವುದಿಲ್ಲ. ರಾಮಮಂದಿರವಾದರೂ ಪುರುಷರ ತೆರಿಗೆಯ ಮುಖಾಂತರ, ಅದು ಮಹಿಳೆಯರ ಜೇಬಿಗೆ ಹೊರೆಯಾಗಿ ನಿರ್ಮಾಣವಾಗಬಾರದು.

ವಾಸ್ತವದಲ್ಲಿ ಮನೆ ಮನೆಗೆ ಹೋಗಿ ಧಾರ್ಮಿಕ ತೆರಿಗೆ ವಿಧಿಸುವುದನ್ನು ಸರ್ಕಾರ ನಿರ್ಬಂಧಿಸಬೇಕು. ಏಕೆಂದರೆ 16 ರೂ.ಗಳ ಧೋತಿಗಾಗಿ 2004ರಲ್ಲಿ 21 ಮಹಿಳೆಯರು ನೂಕು ನುಗ್ಗಲಿನಲ್ಲಿ ಸತ್ತು ಹೋಗಿದ್ದರು. ಆಗ ಅಟಲ್ ಬಿಹಾರಿಯವರ ಚುನಾವಣೆಯ ಸಿದ್ಧತೆ ನಡೆದಿತ್ತು. ಒಂದು ದಿನದ ವೇತನದ ಮಹತ್ವ ಭಗವಾಧಾರಿಗಳಿಗೆ ಹೇಗೆ ಗೊತ್ತಾಗಬೇಕು?

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ