ಜೊತೆ ಜೊತೆಗೆ ಸುತ್ತುವುದು, ತಿನ್ನುವುದು, ಕೆಲವು ದಿನ ಜೊತೆ ಜೊತೆಗೆ ಕಳೆಯುವುದು ಒಂದೆಡೆಯಾದರೆ, ಮದುವೆಯ ಭರವಸೆ ನಿಭಾಯಿಸುವುದು ಮತ್ತೊಂದೆಡೆ.

`ಮಕಡಿ' ಹಾಗೂ `ಮರ್ದ್‌ಕೋ ಬಿ ದರ್ದ್‌ ಹೋತಾ ಹೈ' ಚಿತ್ರಗಳ ನಾಯಕಿ ಶ್ವೇತಾ ಪ್ರಸಾದ್‌, ರೋಹಿತ್‌ ಮಿತ್ತಲ್ ಜೊತೆ ಪ್ರೀತಿಸಿ 2018ರಲ್ಲಿ  ಮದುವೆಯಾಗಿದ್ದಳು. 8-9 ತಿಂಗಳ ಬಳಿಕ ವಿಚ್ಛೇದನ ನೀಡಿದ್ದಳು.

ಸಿನಿಮಾದವರ ವಿಚ್ಛೇದನ ಸಾಮಾನ್ಯ ಸಂಗತಿ ಎಂದು ಹೇಳಲಾಗುತ್ತದೆ. ಶೋ ಬಿಸ್‌ನೆಸ್‌ನಲ್ಲಿ ಮುಕ್ತ ಸೆಕ್ಸ್ ಇರುತ್ತದೆ. ಹಾಗಾಗಿ ಮದುವೆ ಮುರಿದು ಬೀಳುತ್ತದೆ ಎಂದೆಲ್ಲ ಹೇಳಲಾಗುತ್ತದೆ.

ಆದರೆ ವಾಸ್ತವ ಸಂಗತಿ ಬೇರೆಯೇ ಆಗಿರುತ್ತದೆ. ಸಿನಿಮಾ ನಟಿಯರು ಗಳಿಸುತ್ತಿರುತ್ತಾರೆ. ಆದರೆ ಮದುವೆಯ ಬಳಿಕ ಪತಿಯಂದಿರು ಅವರ ಮೇಲೆ ತಮ್ಮ ದರ್ಪ ತೋರಿಸುತ್ತಾರೆ. ಅದು ನಟಿಯರಿಗೆ ಇಷ್ಟವಾಗುವುದಿಲ್ಲ.

ಸಾಮಾನ್ಯ ಮನೆಗಳಲ್ಲಿ ಮಹಿಳೆಯನ್ನು ಮಾನಸಿಕವಾಗಿ, ದೈಹಿಕವಾಗಿ, ಆರ್ಥಿಕವಾಗಿ ಅತ್ಯಂತ ದುರ್ಬಲರನ್ನಾಗಿ ಮಾಡಲಾಗುತ್ತದೆ. ಅವರ ಸ್ಥಿತಿ ಗೊಂಬೆಯ ರೀತಿ ಆಗಿಬಿಡುತ್ತದೆ. ಬಿಸಿಲು, ನೀರು ಹಾಗೂ ಇತರರ ದೃಷ್ಟಿಯಿಂದ ರಕ್ಷಿಸಿಕೊಳ್ಳಲು ಅವರ ಮೇಲೆ ಮನೆ, ಗಂಡ, ಮಕ್ಕಳ ಜವಾಬ್ದಾರಿ ಹೊರಿಸಲಾಗುತ್ತದೆ. ಅವರಿಗೆ ತಮ್ಮದೇನನ್ನೂ ಹೇಳುವ ಧೈರ್ಯ ಇರುವುದಿಲ್ಲ. ಅವರು ಮಾನಸಿಕ ಹಾಗೂ ದೈಹಿಕ ಗುಲಾಮರಾಗಿ ಇರಬೇಕಾಗುತ್ತದೆ. ಗಂಡನ ದಾಸಿಯಂತೆ, ಸೇವಕಿಯಂತೆ ಇರುತ್ತಾಳೆ.

ನಮ್ಮ ಧರ್ಮಗ್ರಂಥಗಳು ಇಂತಹ ಸಂಗತಿಗಳಿಂದ ತುಂಬಿಹೋಗಿವೆ. ಕೂದಲು ಬಿಟ್ಟುಕೊಂಡು ಇರುವುದನ್ನು ಪತಿಗೆ ರಿಸರ್ವ್ ಇಡಲಾಗಿದೆ. ರಾಮಾಯಣದ ಉಲ್ಲೇಖ ಮಾಡುತ್ತ ಒಂದು ಸಂಗತಿ ಹೇಳಲಾಗುತ್ತದೆ. ಸೀತೆಗೆ ಆಕೆಯ ತಾಯಿ ಸುನೈನಾ `ಕಟ್ಟಿದ ಕೂದಲು ಸೌಭಾಗ್ಯದ ಸಂಕೇತ. ಪತಿಯ ಮುಂದಷ್ಟೇ ಅವನ್ನು ಬಿಚ್ಚಬೇಕು,' ಎಂದು ಹೇಳುತ್ತಾಳೆ.

ಗಂಡನಿಂದ ದೂರಾದ ಬಳಿಕ ಕೂದಲು ಮುಕ್ತವಾಗಿಟ್ಟುಕೊಳ್ಳುವುದು ಅಥವಾ ಚಿಕ್ಕ ಕೂದಲು ಇಟ್ಟುಕೊಳ್ಳಲು ಕೂಡ ಶಾಸ್ತ್ರೀಯ ಬಂಧನಗಳಿವೆ. ಗಂಡನ ಜೊತೆ ಜಟಾಪಟಿಯಾದ ಬಳಿಕ, ಅವನು ಹೇಳಿದಂತೆ ತಿನ್ನಬೇಕು, ಇರಬೇಕು. ಎಲ್ಲಿಗಾದರೂ ಹೋಗಬೇಕು, ಅವನ ಹೊಡೆತ ತಿನ್ನಬೇಕು, ಪಾದಪೂಜೆ ಮಾಡಬೇಕೆಂಬ ಸ್ಥಿತಿಯಲ್ಲಿ ಹೆಣ್ಣು ಅವನಿಂದ ವಿಚ್ಛೇದನ ಪಡೆಯಲು ಇಚ್ಛಿಸುತ್ತಾಳೆ.

ಸಿನಿಮಾ ನಟಿಯರು ಗಳಿಸುತ್ತಿರುತ್ತಾರೆ. ಪುರುಷ ಪ್ರಾಬಲ್ಯದ ಕ್ಷೇತ್ರದಲ್ಲಿ ತಮ್ಮ ಕಲೆ ಹಾಗೂ ಸೌಂದರ್ಯದ ಬಲದಿಂದ ತಮ್ಮ ಅಸ್ತಿತ್ವ ಕಂಡುಕೊಳ್ಳುತ್ತಾರೆ. ಹಣ, ಹೆಸರು ಮಾಡುತ್ತಾರೆ. ಅವರ ಆದಾಯ ಅವರ ಸ್ವಂತದ್ದು. ಅವರು ಯಾರನ್ನೇ ಮದುವೆಯಾದರೂ ಗಂಡನ ಮೇಲೆ ಅವಲಂಬಿತರಾಗಿರುವುದಿಲ್ಲ.

ಸುಶಿಕ್ಷಿತ ಮಹಿಳೆಯರ ಹೆಚ್ಚುತ್ತಿರುವ ವಿಚ್ಛೇದನಗಳಿಗೆ ಕಾರಣವೇನೆಂದರೆ, ಪುರುಷತ್ವದ ಭಾವನೆ ಪತಿಯಂದಿರ ತಲೆಯಿಂದ ಇನ್ನೂ ಹೋಗಿಲ್ಲ. ಪತ್ನಿಯರು ಮಾತ್ರ ಕೆರಿಯರ್‌ ಹಾಗೂ ಮಕ್ಕಳನ್ನು ಸಂಭಾಳಿಸುತ್ತಿದ್ದಾರೆ.

ಹಾಲಿವುಡ್‌ ಆಗಿರಲಿ, ಬಾಲಿವುಡ್‌ ಇರಲಿ ತಮ್ಮ ಹೆಂಡತಿಯರನ್ನು ಗುಲಾಮರೆಂದು ಭಾವಿಸುವವರೇ ಅನೈತಿಕತೆಯ ಹಣೆಪಟ್ಟಿ ಹೊರಬೇಕಾಗುತ್ತದೆ. ಶೇ.95ರಷ್ಟು ಯಶಸ್ವಿ ವಿವಾಹಗಳಲ್ಲೂ ಕೂಡ ಹೀಗೆಯೇ ಆಗುತ್ತದೆ. ಹೆಂಡತಿ ಗಂಡನ ಪ್ರತಿಯೊಂದು ಸಂಗತಿಗೂ ಪತಿಯ ಮರ್ಜಿ ಕಾಯಬೇಕಾಗುತ್ತದೆ. ಅವಳು ಸೂಕ್ತ ಸಲಹೆ ಕೊಡುತ್ತಾಳೆ, ಸಮಾನ ಪಾಲುದಾರಳು ಎಂಬುದು ಮಾತ್ರ ಗಂಡನ ಗಮನಕ್ಕೆ ಬರುವುದಿಲ್ಲ. ತಾನು ಆಕೆಯ ದೇಹ ಹಾಗೂ ಮನಸ್ಸಿನ ಮಾಲೀಕ ಎಂಬುದಷ್ಟೇ ಅವನ ಮನಸ್ಸಿನಲ್ಲಿರುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ