ನಮ್ಮ ಮಕ್ಕಳಿಗೆ ಹಾಲಿನಿಂದ ಮಾಡುವ ಹಾಲುಕೋವಾ, ಐಸ್‌ ಕ್ರೀಮ್, ಮೊಸರು, ತುಪ್ಪ, ಬೆಣ್ಣೆ, ಪನೀರ್‌, ಚೀಸ್‌ ಎಲ್ಲಾ ಪದಾರ್ಥಗಳೂ ಇಷ್ಟ. ಆದರೆ ಹಾಲನ್ನು ಕೊಡುವ ಹಸುವನ್ನು ಬಹಳಷ್ಟು ಮಕ್ಕಳು ನೋಡಿಲ್ಲ. ಹಸುವಿನ ಕಂದ ಕರು ಹೇಗಿರುತ್ತದೆ? ತಾಯಿಯ ಹಾಲು ಹೇಗೆ ಕುಡಿಯುತ್ತದೆ, ನೆಗೆದು ಆಟವಾಡುತ್ತದೆ, ಹಾಲನ್ನು ಯಾವ ರೀತಿ ಕರೆಯುತ್ತಾರೆ, ಹಾಲು ಪ್ಯಾಕೆಟ್‌ಗಳಿಂದ ಅಲ್ಲ ಹಸುವಿನ ಕೆಚ್ಚಲಿನಿಂದ ಬರುತ್ತದೆ ಎನ್ನುವುದು ಬಹಳಷ್ಟು ನಗರದ ಮಕ್ಕಳಿಗೆ ಗೊತ್ತಿಲ್ಲ.

IMG-20210110-155546

ಅಂತೆಯೇ ಮಾವಿನ ಹಣ್ಣನ್ನು ತಿಂದು ಸಂತಸ ಪಡುತ್ತಾರಷ್ಟೇ ಹೊರತು ಮಾವಿನ ಮರ ಹೇಗಿರುತ್ತದೆ? ಮಾವಿನ ಮರದಲ್ಲಿ ಬಿಡುವ ಹೂ, ಹೀಚು, ಕಾಯಿ ನಂತರ ಹಣ್ಣಾಗುವ ಪ್ರಕ್ರಿಯೆಯ ಬಗ್ಗೆ ಅವರಿಗೆ ಖಂಡಿತಾ ಗೊತ್ತಿಲ್ಲ. ಆದರೆ ನಗರಗಳ ದೊಡ್ಡ ದೊಡ್ಡ ಕಟ್ಟಡಗಳ ಮಧ್ಯೆ ಬೆಳೆದ ಅವರಿಗೆ ಮರ, ಗಿಡ, ಬಳ್ಳಿ, ಹೂಗಳ ಪರಿಚಯ ಖಂಡಿತ ಅಗತ್ಯ. ಆಗಾಗ ಶಾಲೆಯಿಂದ ಕಬ್ಬನ್‌ ಪಾರ್ಕ್, ಲಾಲ್‌ ಬಾಗ್‌ ಗಳಿಗೆ ಕರೆದುಕೊಂಡು ಹೋಗುತ್ತಾರೆ. ಆದರೂ ಈ ಎಲ್ಲದರ ಪರಿಚಯ ಅವರಿಗೆ ಪೂರ್ಣವಾಗಿ ಇಲ್ಲ.

IMG_20210110_172941

ಕೊರೋನಾ ಸ್ವಲ್ಪ ಹದಕ್ಕೆ ಬಂದಿದೆಯೆಂದು ಮನೆಯವರ ಭಾವನೆ ಹಾಗಾಗಿ ಒಂದು ಭಾನುವಾರ ಹೊರಗೆ ಹೋಗುವ ಕಾರ್ಯಕ್ರಮ ಸಿದ್ಧವಾಯಿತು. ಆದರೆ ಎಲ್ಲಿಗೆ ಹೋಗಬೇಕು? ಹೆಚ್ಚು ಜನರಿದ್ದರೆ ಅಪಾಯ, ಹಾಗೆಂದುಕೊಂಡಾಗ ಪ್ರಕೃತಿಯ ಮಡಿಲು ಸ್ವಲ್ಪ ಕ್ಷೇಮ ಅಂದುಕೊಂಡು ಯಾವುದಾದರೂ ಫಾರ್ಮ್ಗೆ ಹೋಗೋಣವೆಂದಾಗ ಒಂದು ಬಾರಿಗೆ ಒಂದೇ ಬ್ಯಾಚನ್ನು ತೆಗೆದುಕೊಳ್ಳುವ ಸವಿ ಫಾರ್ಮ್ ಗೆ ಹೋಗೋಣವೆಂದು ನಿರ್ಧಾರವಾಯಿತು. ಅಲ್ಲಿಗೆ ಹೊರಟಿತು ನಮ್ಮ ದಂಡು.

ಬೆಂಗಳೂರಿನಿಂದ ಕೋಲಾರ ಮಾರ್ಗದಲ್ಲಿ ಒಂದೂ ಮುಕ್ಕಾಲು ಘಂಟೆ ಪಯಣ. ಆದರೆ ಹೋಗುವ ಹಾದಿಯಲ್ಲಿ ಮನೆಯಿಂದಲೇ ಕಟ್ಟಿಸಿಕೊಂಡು ಹೋದ ತಿಂಡಿ ತಿನ್ನಲು ಯಾವುದೇ ಮರದ ನೆರಳು ನಮಗೆ ಸಿಗಲೇ ಇಲ್ಲ. ಅಲ್ಲೇ ಒಂದೆಡೆ ನಿಂತು ತಿಂಡಿ ತಿಂದ ಶಾಸ್ತ್ರ ಮಾಡಿದೆ. ಹಾಗೆಯೇ ಮುಂದೆ ಹೋದಾಗ ನಾವ ಹೋಗುವ ಸ್ಥಳಕ್ಕೆ ತಲುಪುವ ಮುಂಚೆ ಒಂದು ಸುಂದರವಾದ ದೊಡ್ಡ ಕೆರೆ ಬಹಳ ಸಂತೋಷ ಕೊಟ್ಟಿತು. ಅಲ್ಲಿಂದ ಸ್ವಲ್ಪ ದೂರದಲ್ಲೇ ನಾವು ಹೋಗಬೇಕೆಂದಿದ್ದ ತಾಣವಿತ್ತು. ಅಂತೂ ತಲುಪಿದ್ದಾಯಿತು. ಹಸಿರು ಮರ ಗಿಡಗಳ ಸಾಂಗತ್ಯ ಮನಕ್ಕೆ ಮುದವೆನಿಸಿತು.

IMG_20210110_164232

ಒಂದು ಸುಂದರವಾದ ಮಂಗಳೂರು ಹೆಂಚಿನ ಪುರಾತನ ಮನೆ, ಮನೆಯ ಮುಂದೆ ಹುಲ್ಲು ಹಾಸು. ಕಮಾನಿನ ಬಾಗಿಲಿನ ಸುತ್ತಲೂ ಕಲ್ಲಿನ ಗೋಡೆ. ಅಲ್ಲಿಗೆ ತಲುಪಿದ ತಕ್ಷಣ ಮನಸ್ಸಿಗೆ ಆನಂದವಾಯಿತು. ಆ ಮನೆಯ ಒಳ ಹೊಕ್ಕರೆ ಅದೊಂದು ತೊಟ್ಟಿ ಮನೆ. ಸುಂದರವಾಗಿ ರೂಪಿಸಿದ್ದಾರೆ. ಯಾವುದೇ ಇಟ್ಯಾಲಿಯನ್‌ ಮಾರ್ಬಲ್ಸ್ ಗಿಂತಾ ನುಣುಪಾದ ಸುಂದರವಾದ ಚಿನ್ನದ ಬಣ್ಣದ ಕಾವಿಯ ನೆಲಹಾಸು. ಅಲ್ಲಲ್ಲಿ ಕೆಂಪು ಮತ್ತು ಹಸಿರು ಬಣ್ಣದ ರಂಗೋಲಿಯಂತಹ ಚಿತ್ರಗಳು ಎದ್ದು ಕಾಣತ್ತಿದ್ದವು.

ಸುತ್ತಲೂ ಮನೆ, ಮಧ್ಯೆ ತೊಟ್ಟಿಲೊಳಗೆ ಹುಲ್ಲು ಹಾಸು, ಮಧ್ಯೆ ಒಂದು ಪುಟ್ಟ ನೀರಿನ ಕೊಳ, ಅದರೊಳಗೆ ತಾವರೆಗಳು. ಅಲ್ಲಲ್ಲಿ ಕೆಂಪು ಕಾವಿಯ ನೆಲದ ಬೆಂಚುಗಳು, ಅದರ ಮಧ್ಯದಲ್ಲಿ ಬಣ್ಣದ ಚಿತ್ತಾರಗಳು, ಅಲ್ಲೇ ಒಂದು ತೂಗುಯ್ಯಾಲೆ, ಒಳಗಡೆ ಸೂರಿಗೆ ಒಣಗಿದ ಹುಲ್ಲಿನ ಹಾಸು, ಅಲ್ಲೇ ಸೂರಿಲ್ಲದ ಬಚ್ಚಲು ಮನೆ, ಹಳೆಯ ಕಾಲದ ಸ್ವಿಚ್‌ಗಳು, ಜೊತೆಗೆ ಕೆಲವು ಅಗತ್ಯವಾದ ನವೀನ ಪರಿಕರಗಳು, ಉದಾ: ಎತ್ತರದ ಊಟದ ಮೇಜು, ನಲ್ಲಿಗಳು, ವೆಸ್ಟ್ರನ್‌ ಶೌಚಾಲಯ. ಈ ರೀತಿ ಬಹಳಷ್ಟು ಪುರಾತನ ಒಂದಷ್ಟು ಅಗತ್ಯದ ನವೀನತೆ. ಹಳತು ಮತ್ತು ಹೊಸತಿನ ಸಂಗಮದಂತಿತ್ತು. ಮಕ್ಕಳು ಕುರಿಮರಿ ಮತ್ತು ನಾಯಿಯ ಮರಿಗಳ ಜೊತೆ ಆಟವಾಡಿದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ