ಒಂದು ಉತ್ಸಾಹಿ ಅನುಭವ : ಮೆಮೋರಿಯಲ್ ಕೇರ್‌ ಮಿಲರ್ಸ್‌ ಆಸ್ಪತ್ರೆ, ಲಾಂಗ್‌ ಬೀಚ್‌, ಅಮೆರಿಕಾದಲ್ಲಿ ಒಂದು ಪ್ರಯೋಗದಲ್ಲಿ ಪೇಶೆಂಟ್ಸ್, ಡಾಕ್ಟರ್ಸ್‌, ಪ್ರೊಫೆಶನಲ್ ಡ್ಯಾನ್ಸರ್ಸ್‌ ಜೊತೆ ಒಂದು ಪಾಪ್ಯುಲರ್‌ ಟಿವಿ ಶೋ ಕಾಪಿ ಮಾಡಿ ಒಂದು ಡ್ಯಾನ್ಸ್ ಕಾಂಪಿಟಿಶನ್‌ ಶುರು ಮಾಡಿದರು. ಆಸ್ಪತ್ರೆ ಮತ್ತು ರೋಗಗಳಿಂದ ನರಳುತ್ತಿರುವ ರೋಗಿಗಳು, ಚಿಂತಿತ ಮನೆಮಂದಿ, ಓಟಿ ಮಾಡಿ ಮಾಡಿ ದಣಿದ ವೈದ್ಯರುಗಳಿಗೆ ಇದೊಂದು ಉತ್ಸಾಹಿ ಅನುಭವವಾಗಿತ್ತು. ಅವರುಗಳು ರೋಗಿಗಳನ್ನು ಅಧೋಗತಿಯಿಂದ ಮೇಲೆತ್ತಲು, ಸಿಬ್ಬಂದಿಗೆ ಹೆಚ್ಚಿನ ಉತ್ಸಾಹ, ಸ್ಛೂರ್ತಿ ತುಂಬಲು ಇದೂ ವರದಾನವಾಗಿದೆ. ಇದರಿಂದ ಎಷ್ಟೋ ರೋಗಗಳು ತಗ್ಗುತ್ತಿವೆ, ರೋಗಿ ವೈದ್ಯರ ಸಂಬಂಧ ವಾತ್ಸಲ್ಯದಿಂದ ಬಂಧಿಸಲ್ಪಡುತ್ತಿದೆ!

Lovua5-1-1536x1024

ವಿಜ್ಞಾನದ ವರದಾನ : ಜರ್ಮನಿ ಸಹ ವಿಶ್ವಸಂಸ್ಥೆ ಘೋಷಿಸಿದ 6ನೇ `ಮೋರ್‌ ವುಮನ್‌ ಗರ್ಲ್ಸ್ ಇನ್‌ ಸೈನ್ಸ್' ದಿನಕ್ಕಾಗಿ ಫೆಬ್ರವರಿ 11 ರಂದು ಬೇಕಾದಷ್ಟು ಕುತೂಹಲ ಎಬ್ಬಿಸಿತು. ಹುಡುಗಿಯರಿಗೆ ಸೈನ್ಸ್, ಮ್ಯಾತ್ಸ್, ಕಂಪ್ಯೂಟರ್‌ ಇತ್ಯಾದಿ ಕನಿಷ್ಠ ಮಾತ್ರ ಕಲಿಸಲಾಗುತ್ತದೆ. ಏಕೆಂದರೆ ಹೆಣ್ಣಾಗಿ ಹುಟ್ಟಿರುವುದೇ ಅವಳು ಮಗು ಹೆರಲಿಕ್ಕೆ ಎಂಬ ದುರಾಲೋಚನೆಯಿಂದ. ಇಂಥ ಮೂಢನಂಬಿಕೆಗಳ ಕೂಪದಿಂದ ಹೊರಬರಲು ಸಾವಿರಾರು ಕಾರ್ಯಕ್ರಮಗಳನ್ನು ರೂಪಿಸಲಾಯಿತು. ಇದರಲ್ಲಿ ಯಶಸ್ವೀ ಮಹಿಳಾ ವಿಜ್ಞಾನಿಗಳ ಜೀವನಗಾಥೆ ಪರಿಚಯಿಸಲಾಯಿತು. ಯಾವ ರೀತಿ ವಿಜ್ಞಾನ ಮಾತ್ರವೇ ಇಂದು ಮಾನಸಿಕ ಗುಲಾಮಗಿರಿಯಿಂದ ದೂರವಿಡಬಲ್ಲದು ಎಂದು ಸ್ಪಷ್ಟಪಡಿಸಲಾಯಿತು. ಆದರೆ ಧರ್ಮ ಮಾತ್ರ ಹೆಂಗಸರನ್ನು ಹಳೇ ಕಾಲದ ಕಾಗಕ್ಕಾ ಗುಬ್ಬಕ್ಕಾ ಕಥೆ ಕೇಳಿ ಎನ್ನುತ್ತದೆ.

ashley

ಹೊಸ ಪ್ರಯೋಗ : ಶಾಲೆಗಳನ್ನು ಶಿಸ್ತುಬದ್ಧಾಗಿ ಡಿಸೈನ್‌ ಗೊಳಿಸುವುದು ಸುಲಭದ ಕೆಲಸವಲ್ಲ, ಹೀಗಾಗಿ ಆರ್ಕಿಟೆಕ್ಚರ್‌ನ ಒಂದು ವಿಶೇಷ ವಿಭಾಗ ಇದಕ್ಕಾಗಿ ರೂಪಿಸಲಾಗಿದೆ. ಅಮೆರಿಕಾದ ಟೆಕ್ಸಾಸ್‌ ರಾಜ್ಯದಲ್ಲಿ ಒಂದು ವಿಶೇಷ ಸ್ಪರ್ಧೆ ಇರುತ್ತದೆ, ಇದರಲ್ಲಿ ಶಾಲೆಯ ಆರ್ಕಿಟೆಕ್ಚರ್‌ನ ಹೊಸ ಹೊಸ ಪ್ರಯೋಗಗಳಿರುತ್ತವೆ. ನಮ್ಮಲ್ಲಿಯೂ ಸ್ಪರ್ಧೆ ಇದೆ, ಆದರದು ಕೇವಲ ಫೀಸ್‌ ಹೆಚ್ಚಿಸಲು ಹಾಗೂ ಖಾಸಗಿ ಕೋಚಿಂಗ್‌ ಕ್ಲಾಸಸ್‌ ನದ್ದಾಗಿದೆ. ನಮ್ಮಲ್ಲಿ ದ್ರೋಣಾಚಾರ್ಯರು ಏಕಲವ್ಯನಿಗೆ ಕಲಿಸದ ಗುರುವಾದ ಹಾಗೆ, ತಮ್ಮಲ್ಲಿರುವುದನ್ನೆಲ್ಲ ಶಿಷ್ಯರಿಗೆ ಧಾರೆ ಎರೆಯುವಂತೆ ಧರ್ಮ ಹೇಳುತ್ತದೆ.

2016-DFOS

ಶೋಷಣೆ ನಿಲ್ಲಿಸಿ : ವಿಶ್ವಸಂಸ್ಥೆಯ ಮತ್ತೊಂದು ಪ್ರಶಂಸನೀಯ ಹೆಜ್ಜೆ ಎಂದರೆ ದುರ್ಬಲ, ಅಸಹಾಯಕ, ಶೋಷಿತ ಹೆಂಗಸರಿಗೆ ಸಹಾಯ ಮಾಡಿ ಸಾಂತ್ವನಗೊಳಿಸುವುದಾಗಿದೆ. ಮಾರ್ಟಿನ್‌ ಲೂಥರ್‌ ಕಿಂಗ್‌ ದಿನಾಚರಣೆಯಂದು ವಿಶ್ವದ ಲಕ್ಷಾಂತರ ಮಹಿಳೆಯರಿಗೆ ಬ್ಲ್ಯಾಕ್‌ ಹಿಸ್ಟರಿ ನೆನಪಿಸುವ ಕಿಟ್‌ನ್ನು ಹಂಚಲಾಯಿತು. ಆಗ ಇಂಥ ಶೋಷಿತ ಮಂದಿ ಇತಿಹಾಸ ಸ್ಮರಿಸಿ, ಆತ್ಮವಿಶ್ವಾಸದಿಂದ ಭೇದಭಾವ ಖಂಡಿಸಿ ಮುಂದುವರಿಯಲಿ ಅಂತ. ವಿಷಾದನೀಯ ಎಂದರೆ ಯಾರು ಹೀಗೆ ಶೋಷಿಸಿದ್ದರೋ, ಪೀಳಿಗೆಗಳ ನಂತರ ಅವರು ಎಚ್ಚೆತ್ತುಕೊಳ್ಳದೆ ಆ ಶೋಷಣೆ ಮುಂದುವರಿಸುತ್ತಿದ್ದಾರೆ.

pembroke

ಇದಲ್ಲವೇ ಮಾನವೀಯತೆ! : ಅಮೆರಿಕಾದಲ್ಲಿ ಕೇವಲ ಬಹುಮಾನ ಗಿಟ್ಟಿಸಲಷ್ಟೇ ಯಾರೂ ಆಟ ಆಡುವುದಿಲ್ಲ, ದೇಣಿಗೆ ನೀಡಲೆಂದು ಆಡುತ್ತಾರೆ. ರೋಚೆಸ್ಟರ್‌ ಪ್ಯಾರಂಬೋಕ್‌ ಶಾಲೆಯ ಬಾಸ್ಕೆಟ್‌ ಬಾಲ್ ‌ತಂಡ ಬ್ರೆಸ್ಟ್ ಕ್ಯಾನ್ಸರ್‌ ಪೀಡಿತರಿಗಾಗಿ ಈ ರೀತಿ 48 ಸಾವಿರ ಡಾಲರ್‌ ಸಂಗ್ರಹಿಸಿತು. ಇದರಲ್ಲಿ ಕ್ರೀಡಾಪಟುಗಳು ಒಂದು ಪೈಸೆಗೂ ಆಸೆಪಡದೆ ರೋಚಕ ಆಟ ನೀಡುತ್ತಾರೆ, ಆಗ ವೀಕ್ಷಕರು ಖುಷಿಯಿಂದ ಗರಿಷ್ಠ ಮೊತ್ತದ ದಾನ ನೀಡುತ್ತಾರೆ. ನಮ್ಮಲ್ಲಿರುವ ಧರ್ಮಬೀರು ಸಂಸ್ಥೆಗಳು ಜನರ ಪಾಪನಿವಾರಣೆ, ಮುಕ್ತಿಯ ಹೆಸರಲ್ಲಿ ದೇಣಿಗೆ ಸಂಗ್ರಹಿಸುತ್ತದೆ. ಬದಲಾಗಿ ಜನಸಾಮಾನ್ಯರ ಇಂಥ ಏಳಿಗೆಗೆ ಶ್ರಮಿಸಬೇಕಲ್ಲವೇ? ನಮ್ಮಲ್ಲಿನ ಅಧಿಕ ಮೂಢನಂಬಿಕೆಗಳಿಂದ ಚರ್ಚು, ಮಸೀದಿ, ಮಂದಿರಗಳ ಹೆಸರಲ್ಲಿ ಹಣ ಸಂಗ್ರಹಿಸುವುದೇ ಘನಕಾರ್ಯವಾಗಿದೆ. ಪ್ರಧಾನಮಂತ್ರಿಯ ಕೇರ್‌ ಫಂಡ್‌ ಲೆಕ್ಕ ವಿಚಾರಿಸುವ ಹಾಗಿಲ್ಲ ಎಂದ ಮೇಲೆ ಇಂಥ ನಿಧಿ ಸಂಗ್ರಹಣೆಯ ವಿವರ ಕೊಡುವವರಾರು?

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ