ಸಹ್ಯಾದ್ರಿ ನೋನಿ ಚಹಾದ ಸೇರ್ಪಡೆಯೊಂದಿಗೆ ಆಯುರ್ವೇದದ ಔಷಧಿಗಳಲ್ಲೇ ಅತಿ ಹೆಚ್ಚಿನ ಆರೋಗ್ಯ ವೃದ್ಧಿ ಅಂಶಗಳನ್ನು ಹೊಂದಿರುವ ನೋನಿಹಣ್ಣು ಹಾಗೂ ಪಾರಂಪರಿಕ ಆಯುರ್ವೇದ ಗಿಡಮೂಲಿಕೆಗಳನ್ನು ಬಳಸಿ ಆಯುರ್ವೇದ ಉತ್ಪನ್ನಗಳಾದ ಅಮೃತ್ ನೋನಿ ಡಿಪ್ಲಸ್, ಅಮೃತ್ ನೋನಿ ಆರ್ಥೋಪ್ಲಸ್, ಅಮೃತ್ ನೋನಿ ಪವರ್ ಪ್ಲಸ್ ಹಾಗೂ ಅಮೃತ್ ನೋನಿ ಪೇನ್ಆಯಿಲ್ಗಳನ್ನು ಜನರಿಗೆ ನೀಡಿ ಈಗಾಗಲೇ ಲಕ್ಷಾಂತರ ಜನರ ಆರೋಗ್ಯ ವೃದ್ಧಿಗೆ ಹೆಸರುವಾಸಿಯಾಗಿರುವ ವ್ಯಾಲ್ಯೂ ಪ್ರಾಡೆಕ್ಟ್ ಮುಡಿಗೆ ಮತ್ತೊಂದು ಗರಿಮೆ ಸಿಕ್ಕಿದೆ. ಸಹ್ಯಾದ್ರಿ ನೋನಿ ಚಹಾದ ತಂತ್ರಜ್ಞಾನವನ್ನು ಕೃಷಿ ವಿಶ್ವವಿದ್ಯಾಲಯ ವ್ಯೂಲ್ಯೂ ಪ್ರಾಡೆಕ್ಟ್ ಸಂಸ್ಥೆಗೆ ನೀಡುತ್ತಿರುವುದಕ್ಕೆ ಮುಖ್ಯ ಕಾರಣ ವ್ಯಾಲ್ಯೂ ಪ್ರಾಡೆಕ್ಟ್ ಸಂಸ್ಥೆಯ ಜನಪರ ಕಾಳಜಿ ಹಾಗೂ ಸಂಸ್ಥೆಯಿಂದ ಹೊರಬಂದಿರುವ ಉತ್ಪನ್ನಗಳ ಯಶಸ್ಸು. ಪ್ರಾರಂಭದಿದಂಲೂ ಸಂಸ್ಥೆಯೇ ಸ್ವತಃ ನೂರಾರು ಎಕರೆ ಪ್ರದೇಶದಲ್ಲಿ ನೈಸರ್ಗಿಕ ವಿಧಾನದಲ್ಲಿ ನೋನಿಹಣ್ಣು ಹಾಗೂ ಆಯುರ್ವೇದ ಗಿಡಮೂಲಿಕೆಗಳನ್ನು ಬೆಳೆದು ಹಲವಾರು ರೀತಿಯ ಸಂಶೋಧನೆಗಳ ಮೂಲಕ ಅತ್ಯುತ್ತಮ ತಂತ್ರಜ್ಞಾನದಲ್ಲಿ ತಯಾರಾಗುವ ಅಮೃತ್ ನೋನಿಯನ್ನು ಜನರಿಗೆ ನೀಡುತ್ತಿದೆ.
ಈ ಕಾರ್ಯಕ್ರಮದಲ್ಲಿ ಕೃಷಿ ವಿಶ್ವವಿದ್ಯಾಲಯ ಪ್ರಾರಂಭದಿಂದಲೂ ವ್ಯಾಲ್ಯೂ ಪ್ರಾಡೆಕ್ಟ್ ನ ಬೆನ್ನೆಲುಬಾಗಿ ನಿಂತಿದೆ. ಈ ನಿಟ್ಟಿನಲ್ಲಿ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ, ಶಿವಮೊಗ್ಗ ಹಲವು ಸಂಶೋಧನೆಗಳ ಮೂಲಕ ತಾನೇ ಅಭಿವೃದ್ಧಿಪಡಿಸಿರುವ ಸಹ್ಯಾದ್ರಿ ನೋನಿ ಚಹಾದ ತಂತ್ರಜ್ಞಾನವನ್ನು ವ್ಯಾಲ್ಯೂ ಪ್ರಾಡೆಕ್ಟ್ ಗೆ ನೀಡುವುದರ ಮೂಲಕ ದೇಹದ ಜೀವಕೋಶಗಳನ್ನು ಇನ್ನಷ್ಟು ಆರೋಗ್ಯಪೂರ್ಣವಾಗಿಸುವ ವ್ಯಾಲ್ಯೂ ಪ್ರಾಡೆಕ್ಟ್ನ ಆಶಯಕ್ಕೆ ಮತ್ತಷ್ಟು ಬಲ ನೀಡಿದಂತಾಗಿದೆ. ಫೆಬ್ರವರಿ 17 ರಂದು ಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲಿ ಹಸ್ತಾಂತರ ಆದ ಸಹ್ಯಾದ್ರಿ ನೋನಿ ಚಹಾದ ತಂತ್ರಜ್ಞಾನ ಮುಂಬರುವ ದಿನಗಳಲ್ಲಿ ಅಮೃತ್ ನೋನಿ ಸಹ್ಯಾದ್ರಿ ಟೀ ಹೆಸರಿನಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ.
ನೋನಿ ಹಣ್ಣಿನ ಸಂಸ್ಕರಿತ ಪೇಯಗಳ ಮೂಲಕ ಶಿವಮೊಗ್ಗ ಜಿಲ್ಲೆಯನ್ನು ದೇಶದಲ್ಲೇ ಹೆಸರುವಾಸಿ ಮಾಡುವಲ್ಲಿ ವ್ಯಾಲ್ಯೂ ಪ್ರಾಡಕ್ಟ್ ಸಂಸ್ಥೆಯ ಪಾತ್ರ ಬಹಳ ಮುಖ್ಯವಾಗಿದೆ. ರೈತ ಸಂಘಟನೆಗಳ ಮೂಲಕ ನೋನಿಯ ಬೆಳೆ, ಉತ್ತಮ ಬೆಳೆ ಪಡೆಯಲು ಅಗತ್ಯವಿರುವ ಕ್ರಮಗಳ ಬಗ್ಗೆ ರೈತರಿಗೆ ತಿಳಿವಳಿಕೆ ಹೀಗೆ ಹತ್ತು ಹಲವಾರು ಕ್ರಾಂತಿಕಾರಕ ಯೋಜನೆಗಳನ್ನು ಈ ಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳಲಾಗಿದೆ.
ನೋನಿ ಹಣ್ಣಿನ ಲಾಭವನ್ನು ಎಲ್ಲ ರೀತಿಯಲ್ಲೂ ಎಲ್ಲರೂ ಪಡೆಯುವಂತಾಗಬೇಕು ಎನ್ನುವ ಉದ್ದೇಶದಿಂದ ಚಹಾ ತಯಾರಿಕೆ ಮಾಡುವ ತಂತ್ರಜ್ಞಾನವನ್ನು ಸಿದ್ಧಪಡಿಸಬೇಕು ಎನ್ನುವುದು ಅಮೃತ್ ನೋನಿ ಉತ್ಪನ್ನಗಳ ಕಂಪನಿಯಾದ ವ್ಯಾಲ್ಯೂ ಪ್ರಾಡಕ್ಟ್ ಪ್ರೈ ಲಿ.,ನ ವ್ಯವಸ್ಥಾಪಕ ನಿರ್ದೇಶಕ ಡಾ. ಶ್ರೀನಿವಾಸಮೂರ್ತಿರವರ ಬಹಳ ದಿನಗಳ ಕನಸಾಗಿತ್ತು. ಇದಕ್ಕಾಗಿ ಶ್ರೀನಿವಾಸಮೂರ್ತಿಯವರು ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದಲ್ಲಿ ಇದರ ತಂತ್ರಜ್ಞಾನಕ್ಕಾಗಿ ಅರ್ಜಿಯನ್ನು ಸಲ್ಲಿಸಿದ್ದರು.
ವಿಶ್ವವಿದ್ಯಾಲಯ ಈ ಸಂಶೋಧನೆಗೆ ಒಪ್ಪಿಗೆ ನೀಡಿ ಬಳಿಕ ಸುಮಾರು ಒಂದು ವರ್ಷ ಸಂಶೋಧನೆ ನಡೆಸಿ ಅಂತಿಮವಾಗಿ ನೋನಿ ಚಹಾದ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿತು. ಕೃಷಿ ವಿವಿ ಸಂಶೋಧಿಸಿದ ಈ ಟೀ ಇಂದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು ಜನರು ಕೂಡಾ ಇದನ್ನು ಉತ್ತಮವಾಗಿ ಸ್ವೀಕರಿಸುತ್ತಾರೆ ಎಂಬ ಭರವಸೆ ಇದೆ ಎಂದು ವ್ಯಾಲ್ಯೂ ಪ್ರಾಡಕ್ಟ್ ನ ವ್ಯವಸ್ಥಾಪಕ ನಿರ್ದೇಶಕ ಡಾ. ಶ್ರೀನಿವಾಸಮೂರ್ತಿ ತಿಳಿಸಿದ್ದಾರೆ.
ಸಹ್ಯಾದ್ರಿ ನೋನಿ ಟೀ ಸೇವನೆಯಿಂದ ಆರೋಗ್ಯ ಸುಧಾರಣೆಯ ಜೊತೆಗೆ ಮಾನಸಿಕ ಸ್ಥಿಮಿತತೆ ಹೆಚ್ಚುತ್ತದೆ. ಇದು ಮಾನಸಿಕ ಉದ್ವೇಗ ಕಡಿಮೆ ಮಾಡಿ ಶಾಂತಯುತ ಮನಸ್ಸನ್ನು ರೂಢಿಸುತ್ತದೆ. ದೇಹದಲ್ಲಿನ ಸುಸ್ತು ನಿವಾರಣೆಯಾಗಿ ಲವಲವಿಕೆ ಮೂಡುತ್ತದೆ. ಮುಂಜಾನೆ ಬೇರೆ ಪೇಯ ಸೇವಿಸುವುದರ ಬದಲಿಗೆ ನೋನಿ ಚಹಾ ಸೇವನೆ ಉತ್ತಮ ಎಂದರು.
ಈ ಚಹಾಕ್ಕೆ ಯಾವುದೇ ರೀತಿಯ ರಾಸಾಯನಿಕ ಬಣ್ಣ, ಸುಗಂಧ, ಪ್ರಿಸರ್ವೇಟಿವ್ ಬಳಸಲಾಗಿಲ್ಲ. ಬದಲಾಗಿ ಎಲ್ಲ ಪ್ರಕೃತಿದತ್ತ ಸಹಜ ಅಂಶಗಳೇ ಇದರಲ್ಲಡಗಿವೆ. ಸ್ಯಾಚೆಟ್ ಮಾದರಿಯಲ್ಲೂ ಇದನ್ನು ತರಲು ಸಿದ್ಧತೆ ನಡೆಸಲಾಗಿದೆ. ಮಲೆನಾಡಿನಲ್ಲಿ ನೈಸರ್ಗಿಕವಾಗಿ ದೊರಕುವ ಅಮೂಲ್ಯ ಮತ್ತು ಆರೋಗ್ಯದಾಯಕ ಗಿಡಮೂಲಿಕೆಗಳನ್ನು, ಚಕ್ಕೆ, ಕಾಳುಮೆಣಸು ಇತ್ಯಾದಿಯನ್ನು ಬಳಸಿಕೊಂಡು ಚಹಾವನ್ನು ಸಿದ್ಧಪಡಿಸಲಾಗಿದ್ದು, ರುಚಿಯ ಜೊತೆಗೆ ಉತ್ತಮ ವಾಸನೆಯೂ ಈ ಚಹಾಗೆ ಇರಲಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಗ್ರಾಮೀಣಾಭಿೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಸ್. ಈಶ್ವರಪ್ಪ, ಕೃಷಿ ಸಚಿವರಾದ ಬಿ.ಸಿ. ಪಾಟೀಲ್ ಹಾಗೂ ಲೋಕಸಭಾ ಸದಸ್ಯರುಗಳಾದ ಬಿ.ವೈ. ರಾಘವೇಂದ್ರರವರು ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.