ಹುಮಾ ಆದಳು ರಾಬಡೀ

ಹುಮಾ ಇದೀಗ ಒಂದು ವೆಬ್‌ ಸೀರೀಸ್‌ನಲ್ಲಿ `ಮಹಾರಾಣಿ’ ಆಗಿ ಮಿಂಚುತ್ತಿದ್ದಾಳೆ. ಇದರಲ್ಲಿ ಇವಳು ಅಪ್ಪಟ ದೇಸೀ ಲುಕ್ಸ್ ನೊಂದಿಗೆ ರಾಬಡೀ ದೇವಿ ತರಹ ಕಾಣಿಸುತ್ತಿದ್ದಾಳೆ. ಬಲ್ಲ ಮೂಲಗಳು ಈ ಚಿತ್ರ, ಬಿಹಾರದ ಮಾಜಿ ಮುಖ್ಯ ಮಂತ್ರಿ ಲಾಲೂ ಪ್ರಸಾದ್‌ ಯಾದವ್ ರ ಪತ್ನಿ ರಾಬಡೀ ದೇವಿ (ಈಕೆಯೂ ಮಾಜಿ ಮುಖ್ಯಮಂತ್ರಿಯೇ!) ಬಯೋಪಿಕ್‌ ಎಂದೇ ಹೇಳುತ್ತಿವೆ. ಆದರೆ ಕೋರ್ಟ್‌ ‌ಪ್ರಕಾರ ಯಾವುದೇ ರಾಜಕೀಯ ಧುರೀಣರ ಕಥೆ ಯಥಾವತ್‌ ಹೇಳುವಂತಿಲ್ಲ. ಆದ್ದರಿಂದ ಈಕೆಗೆ ಈ ಚಿತ್ರದಲ್ಲಿ ಹುಮಾಳ ಪಾತ್ರದ ಹೆಸರು ರಾಣಿ ಭಾರತಿ ದೇವಿ ಅಂತಿದೆ. ಅದೇನೇ ಇರಲಿ, ಹುಮಾ ಅಂತೂ ರಾಬಡೀ ದೇವಿಯನ್ನು ತನ್ನ ಪಾತ್ರದಲ್ಲಿ ಆವಾಹಿಸಿಕೊಂಡುಬಿಟ್ಟಿದ್ದಾಳೆ! ಇವಳ ನಟನೆ ಹೇಗೆ ಎಂಬದನ್ನು ಈ ಚಿತ್ರದ ಯಶಸ್ಸು ಹೇಳಬೇಕಷ್ಟೆ.

ಜ್ಯಾಸ್ಮಿನ್‌ ಹೊರಟಳು ದುಬೈ ಟೂರಿಗೆ

jasmin

ಹಿಂದಿಯ `ಬಿಗ್‌ ಬಾಸ್‌’ ಸೀರೀಸ್‌ನ ಭಾಗವಾಗಿದ್ದ ಜ್ಯಾಸ್ಮಿನ್‌ ಭಸೀನ್‌ ಇತ್ತೀಚೆಗೆ ತನ್ನ ಬಾಯ್ ಫ್ರೆಂಡ್‌ ಅಲೀ ಗೋವಿ ಜೊತೆ ದುಬೈನ ಮರುಭೂಮಿಯಲ್ಲಿ ಮರಳಿನಲ್ಲಿ ಚಿನ್ನಾಟವಾಡುತ್ತಿದ್ದಾಳೆ. ಅಸಲಿ ವಿಷಯ ಈ ಅಲಿಜ್ಯಾಸ್ಮಿನ್‌ ಇಬ್ಬರ ಬಳಿಯೂ ಹೇಳಿಕೊಳ್ಳುವಂಥ ಚಿತ್ರಗಳಿಲ್ಲ. ಇದರ ಮೇಲೆ ಕೊರೋನಾ ಮಾರಿಯ ಕಾಟ….. ಇಡೀ ಬಾಲಿವುಡ್‌ ಕಂಗೆಟ್ಟಿದೆ. ಇಂಥ ಕಷ್ಟಕಾಲದಲ್ಲಿ ಇವರು ಕೆರಿಯರ್‌ ಕಡೆ ಗಮನಹರಿಸದೆ ಲವ್ವಿಡವ್ವಿಯಾಗಿ ಮರಳಾಟ ಆಡುತ್ತಿದ್ದರೆ, ಮರುಭೂಮಿಯಲ್ಲಿ ಓಯಸಿಸ್ ಕಾಣಿಸುವಷ್ಟೇ ಕಷ್ಟ ಇವರಿಗೆ ಮುಂದಿನ ಚಿತ್ರ ಸಿಗುವುದು. ಸಮಯ ಇರುವಾಗಲೇ ಎಚ್ಚೆತ್ತುಕೊಂಡರೆ ಬದುಕಿಕೊಂಡಾರು!

sunil

ಕೆರಿಯರ್‌ ಭದ್ರಪಡಿಸಿಕೊಂಡ ಸುನೀಲ್ ‌ದಿ. ಜಸ್‌ ಪಾಲ್ ‌ಭಟ್ಟಿಯವರ ಜೊತೆ ತನ್ನ ಕೆರಿಯರ್‌ ಪ್ರಾರಂಭಿಸಿದ ಡಾ. ಗುಲಾಟಿ ಅಂದ್ರೆ ಸುನೀಲ್ ಗ್ರೋವರ್‌ಗೆ ಇಂಡಸ್ಟ್ರಿಯಲ್ಲಿ ಸ್ಥಾನ ಸುಭದ್ರವಾಗಿದೆ, ಆದರೆ ಈ ಮಟ್ಟಕ್ಕೇರಲು ಆತ ಪಟ್ಟ ಪಾಡು ಅಷ್ಟಿಷ್ಟಲ್ಲ.

ದಬಂಗ್‌ ಖಾನ್‌

akshay-khanna

ಅಕ್ಷಯ್‌ ಕುಮಾರ್‌ರಂಥ ದಿಗ್ಗಿಜರ ಜೊತೆ ಕೆಲಸ ನಿರ್ವಹಿಸಿರುವ ಸುನೀಲ್‌, `ತಾಂಡ್‌’ ಚಿತ್ರದ ನಂತರ OTTಯಲ್ಲಿ ಶೈನ್‌ಆಗ್ತಿದ್ದಾನೆ. ಇತ್ತೀಚೆಗೆ ಈತನ `ಸನ್‌ ಫ್ಲವರ್‌’ ವೆಬ್‌ ಸೀರೀಸ್‌ ಚಿತ್ರದ ಟೀಸರ್‌ಪ್ರಚಂಡ ಯಶಸ್ಸು ಗಳಿಸಿದೆ. ಸುದ್ದಿಗಾರರ ಪ್ರಕಾರ ಈ ಚಿತ್ರದಲ್ಲಿ  ಸುನೀಲ್ ಪಾತ್ರ ಬಹಳ ರೊಮ್ಯಾಂಟಿಕ್‌ ಅಂತೆ. ಇಲ್ಲಿ ಈತನ ಜೊತೆ ರಣವೀರ್‌ ಶೌರಿ, ಆಶಿಶ್‌ ವಿದ್ಯಾರ್ಥಿಗಳಂಥ ನುರಿತ ಕಲಾವಿದರ ದಂಡೇ ಇದೆ. ಈತನ ಪ್ರಗತಿಪರ ಕೆರಿಯರ್‌ ಕಂಡು ಈ ಕಿರುತೆರೆಯ ನಟನ ಸ್ಥಾನ ಬಾಲಿವುಡ್‌ನಲ್ಲಿ ಸುಭದ್ರ ಎಂದೇ ಹೇಳಬಹುದು.

ಶ್ರದ್ಧಾಳ ಮನದಾಸೆ ಏನು?

shradha

ಕೆಲವು ದಿನಗಳ ಹಿಂದೆ ಪ್ರಸಿದ್ಧ ಟಿವಿ ನಟಿ ಶ್ರದ್ಧಾ ಆರ್ಯಾ, ಸೋಶಿಯಲ್ ಮೀಡಿಯಾಗೆ ತನ್ನ ಬ್ಲ್ಯಾಕ್‌ ಬಿಕಿನಿಯ ಫೋಟೋಗಳನ್ನು ಬಿಟ್ಟಿದ್ದೇ ತಡ, ಪಡ್ಡೆಗಳ ವಲಯದಲ್ಲಿ ಕೋಲಾಹಲ ಉಂಟಾಗಿದೆ! ಹಿಂದೆ ಮಾಡಿದ್ದಂತೆಯೇ ಮತ್ತೊಮ್ಮೆ ಗ್ಲಾಮರ್‌ನಿಂದ ಎಲ್ಲರ ಕಣ್ಣು ಕುಕ್ಕುವಂತೆ ಮಿಂಚುತ್ತಿದ್ದಾಳೆ. ಈಗಂತೂ ಇವಳ ಫ್ಯಾನ್ಸ್ ಗೆ, ಶ್ರದ್ಧಾಳ ಮನದಾಸೆ ಏನು? ಎಂಬ ಕನ್‌ಫ್ಯೂಶನ್‌ ಉಂಟಾಗಿದೆ. ಸುದ್ದಿಗಾರರ ಪ್ರಕಾರ ಪ್ರೀತಾ ಮೂಲ ಹೆಸರಿನ ಈ ಶ್ರದ್ಧಾ ಹೀಗೆ ಮಾಡಿ ಬಾಲಿವುಡ್‌ನ ಬಿಗ್‌ನಿರ್ಮಾಪಕರ ಗಮನ ಸೆಳೆಯಲು ಸರ್ಕಸ್‌ ನಡೆಸಿದ್ದಾಳಂತೆ. ಅದೇ ನಿಜವಾಗಿದ್ದರೆ, ಈ ಕೊರೋನಾ ಸಂದರ್ಭದಲ್ಲಿ ಹೀಗಾಡುವುದು ಸರಿಯಲ್ಲ. ನಿರ್ಮಾಪಕರು ಸಿನಿಮಾಗೆ ದುಡ್ಡು ಸುರಿಯೋಣ ಎಂದು ನಿರ್ಧರಿಸುವ ಕಾಲ ಬರುವವರೆಗೂ ಶ್ರದ್ಧಾಳಂಥವರು ಕಾಯದೇ ವಿಧಿ ಇಲ್ಲ.

ಕರಣನ ಹೊಸ ನಾಯಕಿ

ananya1

ನಿರ್ದೇಶಕ ಕರಣ್‌ ಜೋಹರ್‌ ಹಲವು ದಿನಗಳಿಂದ ತನ್ನ ಧರ್ಮ ಪ್ರೊಡಕ್ಷನ್ಸ್ ಗಾಗಿ ಹೊಸ ಮುಖ ಹುಡುಕುತ್ತಿದ್ದ. ಸುದ್ದಿಗಾರರ ಪ್ರಕಾರ, ಈತನ ಹುಡುಕಾಟ ತಮನ್ನಾ ಭಾಟಿಯಾ ಎಂಬ ನಾಯಕಿ ಸಿಗುವಲ್ಲಿಗೆ ಮುಗಿದಿದೆಯಂತೆ. ಅಸಲಿಗೆ ಈತನ ಹೊಸ ಪರಿಚಯಗಳಲ್ಲಿ ಇದುವರೆಗೂ ನೆಲಕಚ್ಚಿ ನಿಂತಳೆಂದರೆ ಆಲಿಯಾ ಒಬ್ಬಳೇ! ಇದೀಗ ಧರ್ಮ ಪ್ರೊಡಕ್ಷನ್ಸ್ ಫಿಲ್ಮಿ ಡಿಜಿಟಲ್ ಫ್ಯಾಕ್ಟರಿ ಚುರುಕಾಗಿಸಲು ಹೊಸ ಮುಖ ಖಂಡಿತಾ ಬೇಕಿತ್ತು. ತಮನ್ನಾಳಿಗಾಗಿ ಹೊಸ ಸ್ಕ್ರಿಪ್ಟ್ ಕೂಡ ರೆಡಿ ಆಗ್ತಿದೆಯಂತೆ. ಇನ್ನು ಕೆಲವೇ ದಿನಗಳಲ್ಲಿ ಈಕೆ ಹೊಸ ಅವತಾರದಲ್ಲಿ ಬೆಳ್ಳಿ ಪರದೆ ಮೇಲೆ ಕಾಣಿಸಿದರೆ ಆಶ್ಚರ್ಯವಿಲ್ಲ.

ಅಕ್ಷಯ್‌ ಮತ್ತು ರವೀನಾ ಜೋಡಿ

raveena-2

ಅಕ್ಷಯ್‌ ಜೊತೆ ರವೀನಾ ಹೆಸರು ಕೇಳಿದೊಡನೆ ನೀವು ಅಕ್ಷಯ್‌ ಕುಮಾರ್‌ ತಾನೇ ಎಂದುಕೊಂಡರೆ ಆಶ್ಚರ್ಯವಿಲ್ಲ. ಹಾಗಲ್ಲ, ಈತ ಅಕ್ಷಯ್‌ ಖನ್ನಾ! ಅಕ್ಷಯ್‌ ಖನ್ನಾ ರವೀನಾ ಮೊದಲ ಬಾರಿಗೆ ಒಟ್ಟಾಗಿ `ದಿ ಆ್ಯಕ್ಸಿಡೆಂಟ್‌ ಪ್ರೈಮ್ ಮಿನಿಸ್ಟರ್‌’ ಹೆಸರಿನಿಂದ ಖ್ಯಾತರಾದ ನಿರ್ದೇಶಕ ವಿಜಯ್‌ರ ಮುಂದಿನ OTT `ಲೆಗೆಸಿ’ ಚಿತ್ರದಲ್ಲಿ ಕಾಣಿಸಲಿದ್ದಾರೆ. ಅಕ್ಷಯ್‌ ಈ ಚಿತ್ರದಲ್ಲಿ ರವೀನಾಳ ಶತ್ರುವಾಗಲಿದ್ದಾನೆ. ತನ್ನ ಸೆಕೆಂಡ್‌ ಇನ್ನಿಂಗನ್ಸ್ ನಲ್ಲಿ ಅಕ್ಷಯ್‌ ಪ್ರೇಕ್ಷಕರಿಗೆ ಮತ್ತೆ ಮತ್ತೆ ಮೋಡಿ ಮಾಡುತ್ತಿರುವುದು ಬಾಲಿವುಡ್‌ನ್ನು ಬೆರಗಾಗಿಸಿದೆ, ಹೀಗಾಗಿ ಈ ಚಿತ್ರದ ಬಗ್ಗೆ ಹೈ ಹೋಪ್ಸ್ ಇದೆ.ಅನನ್ಯಾಳ ನಂಬರ್‌ ಲೀಕ್‌ ಆದಾಗ ಇತ್ತೀಚೆಗಷ್ಟೇ ಅನನ್ಯಾ ಪಾಂಡೆಯ ಕಸಿನ್‌ ಅಲಾನಾ, ವಿಡಿಯೋ ಸಂದೇಶದ ಮೂಲಕ, ತನ್ನ ಒಂದು ಸಣ್ಣ ತಪ್ಪಿನಿಂದಾಗಿ ಅನನ್ಯಾಳ ನಂಬರ್‌ ಇಂಟರ್‌ನೆಟ್‌ನಲ್ಲಿ ಲೀಕಾದ ಸ್ವಾರಸ್ಯಕರ ಪ್ರಸಂಗದ ಬಗ್ಗೆ ತಿಳಿಸಿದಳು. ಇದಾದ ಮೇಲೆ ಸಾವಿರಾರು ಕರೆಗಳಿಂದ ಅನನ್ಯಾ ಸುಸ್ತಾದಳಂತೆ. ಅದಾದ ಮೇಲೆ ಅಲಾನಾ ಅನನ್ಯಾ  ಬಳಿ ಮತ್ತೆ ಮತ್ತೆ ಕ್ಷಮೆ ಕೋರಿದಳು. ತಕ್ಷಣ ನಂಬರ್‌ ಇದ್ದ ಆ ವಿಡಿಯೋವನ್ನು ಡಿಲೀಟ್‌ ಮಾಡಿದಳಂತೆ. ಆದರೆ ಈ ತೊಂದರೆ ಮಧ್ಯೆಯೂ, ತನ್ನ ಫ್ಯಾನ್‌ ಫಾಲೋಯರ್ಸ್‌ ಸಂಖ್ಯೆ ಎಷ್ಟು ದೊಡ್ಡದು ಎಂಬುದು ಅನನ್ಯಾಳಿಗೆ ಗೊತ್ತಾದುದೇ ಒಂದು ಗುಡ್‌ ನ್ಯೂಸ್‌!

ಕಿರುತೆರೆಗೆ ಮತ್ತೆ ಮರಳಲಿರುವ ಕಪಿಲ್

kapil

‌ಕೊರೋನಾದ ಕಾಟದಿಂದಾಗಿ ಮನೆಯಲ್ಲೇ ಕುಳಿತಿರಬೇಕಾದ ಶಿಕ್ಷೆ ಜೊತೆ, `ದಿ ಕಪಿಲ್ ‌ಶರ್ಮ ಶೋ’ದಂಥ ಉತ್ತಮ ಶೋ ಟಿವಿಯಿಂದ ಮರೆಯಾದರೆ ಪ್ರೇಕ್ಷಕರ ತಲೆ ಕೆಟ್ಟು ಮೊಸರಾಗದೇ? ಆದರೆ ಈ ಶೋ ಅಭಿಮಾನಿಗಳಿಗೆ ಈಗ ಒಂದು ಗುಡ್‌ ನ್ಯೂಸ್‌. ಅದೆಂದರೆ ಈ ತಿಂಗಳ ಕೊನೆಯಿಂದ ಕಪಿಲ್ ‌ಶೋ ಕಿರುತೆರೆಯಲ್ಲಿ ಮತ್ತೆ ಶುರುವಾಗಲಿದೆಯಂತೆ! ಇದರಲ್ಲಿ ಮಜಾದ ವಿಚಾರವೆಂದರೆ, ಪ್ರೇಕ್ಷರಿಗಿಂತ ಹೆಚ್ಚಾಗಿ ಕಪಿಲ್ ‌ಮತ್ತು ತಂಡದವರಿಗೆ ಈ ಶೋ ಶುರುವಾಗುವುದರ ನಿರೀಕ್ಷೆ ಇದೆ. ಯಾಕೆ? ಇವರೆಲ್ಲರ ಆದಾಯದ ಮೂಲ ಇದೊಂದೇ ಅಂತಾರೆ!

ಪೈಲ್‌ಗೆ ಲಭಿಸಿದ ಗುಡ್‌ ಸ್ಟಾರ್ಟ್‌

heroin

ತಾಪಸೀ ಪನ್ನೂ ಅಮಿತಾಭ್‌ರ ಮುಂದಿನ `ಗುಡ್‌ ಬೈ’ ಚಿತ್ರ ಇಷ್ಟರಲ್ಲೇ ಸೆಟ್ಟೇರಲಿದೆ. ಈ ಚಿತ್ರಕ್ಕಾಗಿ ತಾಪಸಿಗೆ ಹೊಸ ಹೀರೋ ಬೇಕೆಂದು ಹುಡುಕಾಟ ಭರದಿಂದ ನಡೆದಿತ್ತು. ಅಂತೂ ಪೈಲ್ ಈಗಾಗಲೇ ತಾಪಸೀ ಜೊತೆ `ಥಪ್ಪಡ್‌’ ಚಿತ್ರದಲ್ಲಿ ಕೆಲಸ ಮಾಡಿದ್ದಾನೆ. ಈ ಚಿತ್ರದಿಂದಲೇ ಅವನಿಗೆ ಹೀರೋ ಎಂಬ ಐಡೆಂಟಿಟಿ ಸಿಕ್ಕಿದ್ದು. `ಗುಡ್‌ ಬೈ’ ಸಿಕ್ಕಿದ್ದು, ಈತನ ಕೆರಿಯರ್‌ಗೆ ಗುಡ್ ಸ್ಟಾರ್ಟ್‌ಆಗಿದೆ! ಲಾಕ್‌ ಡೌನ್‌ ಘೋಷಣೆಯಾಗದೆ, ಚಿತ್ರ ಸಲೀಸಾಗಿ ಮುಗಿದು ಬಿಡುಗಡೆಗೊಂಡರೆ ಈತನ ಕೆರಿಯರ್‌ ಗ್ರಾಫ್‌ ಬೇಗ ಮೇಲೇರುವುದರಲ್ಲಿ ಸಂದೇಹವಿಲ್ಲ.

ಕೊರೋನಾದಲ್ಲೂ ಚಮಕಾಯಿಸುತ್ತಿರುವ ದಕ್ಷಿಣದ ಇಂಡಸ್ಟ್ರಿ

south-industry

ಕೊರೋನಾ ಅಂತೂ ಬಾಲಿವುಡ್‌ಗೆ ದೊಡ್ಡ ಕೊಡಲಿ ಪೆಟ್ಟು ಹಾಕಿರುವುದು ದಿಟ. ಆದರೆ ದಕ್ಷಿಣದ ಇಂಡಸ್ಟ್ರಿ ಈ ಮಹಾಮಾರಿಯ ಕಾಟದ ಮಧ್ಯದಲ್ಲೂ (ಮುಖ್ಯವಾಗಿ ತೆಲುಗು) ಶುಕ್ಲ ಪಕ್ಷದ ಚಂದ್ರನಂತೆ ಬೆಳಗುತ್ತಿದೆ! ಇತ್ತೀಚೆಗಷ್ಟೇ ಪವನ್‌ ಕಲ್ಯಾಣ್‌ (ಚಿರಂಜೀವಿ ತಮ್ಮ)ನ `ವಕೀಲ್ ಸಾಹೇಬ್‌’ ಚಿತ್ರ ಇಡೀ ದಕ್ಷಿಣದ ಎಲ್ಲಾ ಥಿಯೇಟರ್‌ಗಳಲ್ಲಿ ಪ್ರದರ್ಶಿತಗೊಂಡು, ನೋಡನೋಡುತ್ತಿದ್ದಂತೆ  ಕೋಟಿ ಕೋಟಿ ಬಾಚಿಕೊಂಡಿದೆ! ತೆಲುಗು ಚಿತ್ರಗಳ ಚಮಕ್‌ಎಷ್ಟು ಎಂಬುದು ಇದರಿಂದಲೇ ಅಂದಾಜಿಸಬಹುದಾಗಿದೆ. `ಬಾಹುಬಲಿ’ ನಂತರ ಮಹಾನ್‌ ಬ್ಲಾಕ್‌ ಬಸ್ಟರ್‌ ಎನಿಸಿದೆ! ಕೊರೋನಾ ಮಧ್ಯೆ ಇಡೀ ದೇಶದ ಅತ್ಯಂತ ಹೆಚ್ಚು ಹಣ ಕಮಾಯಿಸಿದ ಯಶಸ್ವೀ ಟಾಪ್‌-10 ಚಿತ್ರಗಳಲ್ಲಿ ಎಲ್ಲ ದಕ್ಷಿಣದ್ದೇ ಎಂದು ಬಾಲಿವುಡ್‌ ಕೈ ಕೈ ಹೊಸೆಯುತ್ತಿದೆ. ಹಿಂದಿಯ ಒಂದು ಚಿತ್ರ ಈ ಪಟ್ಟಿಯಲ್ಲಿ ಇಲ್ಲದಿರುವುದು ಶೋಚನೀಯವೇ ಸರಿ!

ರಶ್ಮಿಕಾ ಶಾಹಿದ ನನ್ನು ತಿರಸ್ಕರಿಸಿದ್ದು ಏಕೆ?

rashmika

ಕನ್ನಡದ  ಯಶಸ್ವೀ ಚಿತ್ರಗಳ ನಂತರ ತೆಲುಗಿನಲ್ಲಿ ರಾತ್ರೋರಾತ್ರಿ ಸೂಪರ್‌ ಸ್ಟಾರಿಣಿಯಾದ ರಶ್ಮಿಕಾ ಮಂದಣ್ಣ, ಬಾಲಿವುಡ್‌ನ `ಜರ್ಸಿ’ ಚಿತ್ರದಲ್ಲಿ ಶಾಹಿದ್‌ ಕಪೂರ್‌ ಜೊತೆ ನಾಯಕಿ ಎಂದೇ ಹೆಚ್ಚುಕಡಿಮೆ ಡಿಕ್ಲೇರ್‌ ಆಗಿತ್ತು. ಆದರೆ ಇದ್ದಕ್ಕಿದ್ದಂತೆ ರಶ್ಮಿಕಾ ಈ ಚಿತ್ರದಲ್ಲಿ ನಟಿಸುವುದಿಲ್ಲ ಎಂದು ಬಾಂಬ್‌ ಹಾಕುವುದೇ? ಸುದ್ದಿಗಾರರು ತಕ್ಷಣ ಇದರ ಹಿಂದಿನ ರಹಸ್ಯ ಭೇದಿಸಲು ಮುಂದಾದರು. ತಿಳಿದ ವಿಷಯ ಎಂದರೆ, ಶಾಹೀದ್‌ನಂಥ ಘಟಾನುಘಟಿ ಮುಂದೆ ತನ್ನ ನಟನೆ ಸಪ್ಪೆ ಎನಿಸಬಹುದೇನೋ ಎಂಬ ಸಣ್ಣ ಹಿಂಜರಿಕೆಯಲ್ಲಿ ರಶ್ಮಿಕಾ ತಾನೇ ಈ ಪಾತ್ರ ಬೇಡ ಎಂದಳಂತೆ! ಅಯ್ಯೋ….. ಹುಷಾರು ಕಣಮ್ಮ, ಮುಂದೆ ಬಾಲಿವುಡ್‌ ಪಂಡಿತರು ಈ ಹುಡುಗಿ ಹಿಂದಿಗೆ ಸರಿಹೋಗಲ್ಲ ಎಂಬ ನಿರ್ಧಾರಕ್ಕೆ ಬರುವ ಮೊದಲು ರಶ್ಮಿಕಾ ತನ್ನ ನಿರ್ಧಾರ ಬದಲಿಸಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ