ಜಪಾನಿನ ಓಡಿನಾಲಾದಲ್ಲಿ ಓಗೇಮಿ ಎಂಬ ಹಳ್ಳಿಯಿದೆ. ಈ ಗ್ರಾಮದ ಜನರ ಸರಾಸರಿ ವಯಸ್ಸು ಇಡೀ ವಿಶ್ವದಲ್ಲೇ ಅತ್ಯಂತ ಹೆಚ್ಚು. ಇಲ್ಲಿ ಎಲ್ಲರೂ ಶತಕಕ್ಕೂ ಹೆಚ್ಚು ವರ್ಷ ಬಾಳುತ್ತಾರೆ. ಈ ಗ್ರಾಮದ ಯಾರೊಬ್ಬರೂ ನಿವೃತ್ತಿಯ ಬಗ್ಗೆ ಮಾತನಾಡುವುದೇ ಇಲ್ಲ. ಅವರೆಲ್ಲರೂ ಕೆಲಸದಲ್ಲಿ ಅಷ್ಟೊಂದು ಮಗ್ನರಾಗಿರುತ್ತಾರೆ.

ಓಗೇಮಿಯ ಜನರು ತಮಗಿಷ್ಟವಾದ ರುಚಿಕಟ್ಟಾದ ಆಹಾರ ತಯಾರಿಸಿಕೊಳ್ಳುತ್ತಾರೆ. ಆದರೆ ಹೊಟ್ಟೆ ತುಂಬ ಊಟ ಮಾಡಲು ಹಿಂದೇಟು ಹಾಕುತ್ತಾರೆ. ಅಂದರೆ ಶೇ.80ರಷ್ಟು ಹೊಟ್ಟೆಯನ್ನಷ್ಟೇ ತುಂಬಿಸಿಕೊಳ್ಳುತ್ತಾರೆ. ಆಹಾರದಲ್ಲಿ ಶೇ.20ರಷ್ಟು ಕೊರತೆಯೇ ಅವರ ದೀರ್ಘಾಯುಷ್ಯದ ಗುಟ್ಟು.

ನನಗೆ ಮದುವೆ ವಯಸ್ಸಾದಾಗ ನನ್ನ ತಂದೆ ತಾಯಿ ಸ್ಕಾರ್ಪಿಯನ್‌ ಜೊತೆ ನನಗೆ ಇಜ್ಜೋಡು ಮದುವೆ ಮಾಡಿಬಿಟ್ಟರು. ಆದರೆ ನನ್ನ ಹೆಂಡತಿ ಅಪಾಯಕಾರಿ ಸ್ಕಾರ್ಪಿಯನ್‌ ಅಲ್ಲ. ಚೇಳಿನ ಹಾಗೆ ಅವಳ ಬಾಯಲ್ಲಿ ವಿಷಕಾರಿ ಮುಳ್ಳು ಕೂಡ ಇಲ್ಲ. ಅವಳು ತನ್ನ ದೇಹದ ಮೇಲೆ ಸ್ಕಾರ್ಪಿಯನ್‌ ಟ್ಯಾಟೂ ಹಾಕಿಸಿಕೊಂಡಿದ್ದಾಳೆ, ಅಷ್ಟೇ.

“ನನ್ನ ಜನ್ಮ ರಾಶಿ ಸ್ಕಾರ್ಪಿಯೋ…. ಹಾಗಾಗಿ ನಾನು ಈ ಟ್ಯಾಟೂ ಹಾಕಿಸಿಕೊಂಡಿದ್ದೇನೆ…. ಇತ್ತೀಚಿನ ದಿನಗಳಲ್ಲಿ ಟ್ಯಾಟೂ ಕ್ರೇಜ್‌ ಇದೆ. ನನ್ನ ಎಲ್ಲ ಸ್ನೇಹಿತೆಯರು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಹಾಗಾಗಿ ನಾನೂ ಟ್ಯಾಟೂ ಹಾಕಿಸಿಕೊಂಡಿದ್ದೇನೆ….” ಸ್ಕಾಪಿರ್ಯನ್‌ ನನಗೆ ಹೇಳಿದಳು.

“ನಾವು ನಿನಗಾಗಿ ಬ್ಯೂಟಿ ಕ್ವೀನ್‌ ವಧುವನ್ನು ಆಯ್ಕೆ ಮಾಡಿದೆ. ತೆಳ್ಳಗಿದ್ದಾಳೆ, ಬೆಳ್ಳಗಿದ್ದಾಳೆ. 5 ಅಡಿ 9 ಅಂಗುಲ ಎತ್ತರ…..” ನನ್ನ ಮಾತಾಶ್ರೀ ನನ್ನ ಮೂಗನ್ನು ಹಿಂಡುತ್ತಾ ನನಗೆ ಶುಭ ಸಮಾಚಾರ ಕೊಟ್ಟಿದ್ದರು. ನನ್ನ ಜನ್ಮ ರಾಶಿ ಕ್ಯಾನ್ಸರ್‌ ಅಂದರೆ ಏಡಿ. ನಾನು ಕ್ಯಾನ್ಸೇರಿಯನ್‌. ಕ್ಯಾನ್ಸೇರಿಯನ್‌ಗೂ ಸ್ಕಾರ್ಪಿಯೋಗೂ ಜೋಡಿ ಸರಿಹೊಂದುತ್ತೋ ಇಲ್ಲವೋ? ನಾನು ಬಾಲ್ಯದಿಂದಲೇ ತಿಂಡಿಪೋತ. ನನ್ನನ್ನು ಶೇ.80ರಷ್ಟು ಆಹಾರಕ್ಕೆ ನಿಯಂತ್ರಿಸುವುದು ನನ್ನ ಮೇಲಿನ ಶೋಷಣೆಯಾಗಿದೆ. ನನ್ನದು ನಾಯಕನ ಗುಣಲಕ್ಷಣ. ಎಲ್ಲಿಯವರೆಗೆ ಜೀವಿಸುತ್ತೆವೆಯೋ, ಅಲ್ಲಿಯವರೆಗೆ ಸುಖವಾಗಿರು. ಸಾಲ ಮಾಡಿಯಾದರೂ ತುಪ್ಪವನ್ನು ಸೇವಿಸು.

ವಿಧಿ ನಮ್ಮೆಲ್ಲರ ಜೋಡಿಯನ್ನು ಒಂದಾಗಿಸಿತು. ಅಲ್ಲಿಂದಲೇ ನನ್ನ ಟ್ರಾಜಿಡಿ ಶುರುವಾಯಿತು. ನನ್ನ ಹೆಂಡತಿಯಲ್ಲಿ ಓಗೇಮಿಯಾ ಜೀನ್‌ ಸೇರ್ಪಡೆಯಾಗಿದೆ. ಮುಂಜಾನೆಯ ಉಪಾಹಾರಕ್ಕೆ ಹೆಸರಿನ ಮೊಳಕೆಕಾಳು ಹಾಗೂ ಹಣ್ಣುಗಳಲ್ಲಿ ಸೇಬು, ಬಾಳೆಹಣ್ಣಿನ ಸಲಾಡ್‌ ಸಿಗುತ್ತದೆ. ನನ್ನ ಹೊಟ್ಟೆ ಕಾವ್‌….. ಕಾವ್‌… ಎನ್ನುತ್ತಿರುತ್ತದೆ.

ಈ ಶೇ.25ರಿಂದ ಏನು ತಾನೇ ಸಂತೃಪ್ತಿ ಸಾಧ್ಯ? ನನಗಂತೂ ಬಿಸಿ ಬಿಸಿ ಬೋಂಡಾ, ರಸಭರಿತ ಜಾಮೂನು ತಿನ್ನಲು ಇಷ್ಟವಾಗುತ್ತದೆ. ನನಗೆ ಶೇ.120ರಷ್ಟು ಉಪಾಹಾರ ಸೇವಿಸುವ ಅಭ್ಯಾಸವೇ ಆಗಿಬಿಟ್ಟಿದೆ.

ನನಗೆ ಸೆಂಚುರಿ ವೀರನಾಗುವ ಬಯಕೆ ಖಂಡಿತ ಇಲ್ಲ. ನಾನು ಅಡ್ವೋಕೇಟ್‌ ನೇಮಿಸಿದ ಲೋಯರ್‌ ಕೋರ್ಟ್‌, ಹೈಕೋರ್ಟ್‌ಹಾಗೂ ಸುಪ್ರೀಂ ಕೋರ್ಟ್‌ ತನಕ ಅಪೀಲ್ ‌ಮಾಡಿದೆ. ಆದರೆ ನನಗೆ ಈವರೆಗೂ ಬೇಲ್ ಸಿಕ್ಕಿಲ್ಲ. ಬಹುಶಃ ನನ್ನ ಹಣೆಯಲ್ಲಿ ಹಿಂಡಲಗಾ ಜೈಲಿಗೆ ಹೋಗುವುದನ್ನೇ ಬರೆಯಲಾಗಿದೆ ಅನಿಸುತ್ತೆ.

“ನಿಮಗದು ಅಭ್ಯಾಸವಾಗಿ ಬಿಡುತ್ತದೆ, ತಾಳ್ಮೆಯಿಂದ ಕಾರ್ಯಪ್ರವೃತ್ತರಾಗಿ. ಅದು ನಿಮ್ಮ ಹಿತದೃಷ್ಟಿಯಿಂದ ಕುಟುಂಬಕ್ಕೆ ದೀರ್ಘಾವಧಿಯತನಕ ನಿಮ್ಮ ಅವಶ್ಯಕತೆ ಇದೆ,” ಸ್ಕಾರ್ಪಿಯನ್‌ ನನಗೆ ಸಾಂತ್ವನ ಹೇಳಿದಳು.

ಆದರೆ ಶೇ.80ರಷ್ಟು ಊಟದಲ್ಲಿ ಒಂದು ಬಟ್ಟಲು ಮೊಸರು, 1 ಬಾಳೆಹಣ್ಣು ಪ್ರತಿದಿನ, ತಿಂಗಳು, ವರ್ಷವಿಡೀ.

“ಡಿನ್ನರ್‌ ಯಾವಾಗಲೂ ಹೆವಿ ಆಗಿರಬಾರದು. ನಿದ್ರೆಗೆ ಭಂಗವಾಗುತ್ತದೆ. ಬೀದಿ ಬದಿ ತಿಂಡಿಗಳು ಬೇಡವೇ ಬೇಡ. ಫುಡ್‌ ಡಿಸಿಪ್ಲಿನ್‌ ಅತ್ಯಂತ ಅವಶ್ಯ,” ಸ್ಕಾರ್ಪಿಯನ್‌ ಪ್ರೀತಿಯಿಂದ ನನಗೆ ಸಿಡುಕುತ್ತಾಳೆ.

ಅವಳಂತೂ ತಾನೇ ಸ್ವತಃ ಪಾರ್ಟಿಗೆ ಹೋಗುವುದಿಲ್ಲ. ನನಗೂ ಹೋಗಲು ಬಿಡುವುದಿಲ್ಲ. ಹಾಗೊಮ್ಮೆ ಹೋಗುವ ಪ್ರಸಂಗ ಬಂದೇ ಬಿಟ್ಟರೆ, ಅಲ್ಲಿ ಸಲಾಡ್‌ನಿಂದ ಊಟದ ಶಾಸ್ತ್ರ ಮುಗಿಸಿ ಅವರ ಕೈಗೆ ಪ್ರೆಸೆಂಟೇಶನ್‌ ಕವರ್‌ ಕೊಟ್ಟು ಮನೆಗೆ ಬಂದುಬಿಡುತ್ತಾಳೆ.

ಜೀವನವಿಡೀ ಶುದ್ಧ ಸಸ್ಯಾಹಾರಿ ಊಟ ಸೇವಿಸಿ ನಾನಂತೂ ಕಡ್ಡಿ ಪೈಲ್ವಾನ್‌ ಆಗಿಬಿಡುತ್ತೇನೆ. ಪಕ್ಕದ ಮನೆಯಾಕೆ ತನ್ನ ಗಂಡನಿಗೆ ಚಿಕನ್‌ ಬಿರಿಯಾನಿ ಹೀಗೆ ಏನೆಲ್ಲವನ್ನು ಮಾಡಿಕೊಡುತ್ತಿರುತ್ತಾಳೆ. ಅವರ ಅಡುಗೆಮನೆಯಿಂದ ಹೊರ ಹೊಮ್ಮುವ ಸುವಾಸನೆ ನನ್ನನ್ನು ಅತ್ತ ಕಡೆ ಕಾಲೆಳೆಯುವಂತೆ ಮಾಡುತ್ತದೆ. ನನಗೆ ವನ್‌ ಪ್ಲಸ್‌ ಸೈಜ್‌ ಇಷ್ಟ. ವಿಲಿಯಂ ಶೇಕ್ಸ್ ಪಿಯರ್ ಹೇಳಿದ್ದಾನೆ. ಬ್ಲಡ್‌ ಅಂಡ್‌ ಫ್ಲೆಶ್‌ ಇನ್‌ ಬ್ಯೂಟಿ. ನಾನು ಸ್ಕಾರ್ಪಿಯನ್‌ ಕಣ್ತಪ್ಪಿಸಿ ಪಕ್ಕದ ಮನೆಯಾಕೆಯ ಕಣ್ಣು ಮಿಲಾಯಿಸಲು ಪ್ರಯತ್ನಿಸುತ್ತೇನೆ. ಅವಳ ಮಿಂಚಿನಂತಹ ಮುಗುಳ್ನಗೆಗೆ ನಾನು ಮನಸೋತು ಬಿಡುತ್ತೇನೆ.

ನಿಮಗಿದರ ಬಗ್ಗೆ ಆಕ್ಷೇಪ ಇರಬಹುದು. ಪರಸ್ತ್ರೀಯತ್ತ ಕಣ್ಣೆತ್ತಿ ನೋಡುವುದು ಕೆಟ್ಟ ಪದ್ಧತಿ ಅದನ್ನು ಬದಲಿಸಿಕೊಳ್ಳಿ ಎಂದು ಹೇಳಬಹುದು. ನಿಮ್ಮ ಆಕ್ಷೇಪ ಸರಿಯಾಗಿಯೇ ಇದೆ. ಆದರೆ ಪಕ್ಕದ ಮನೆಯ ಮಿಸ್ಟರ್‌ ಎಂಜಿನಿಯರ್‌ ನನ್ನ ಸ್ಕಾರ್ಫಿಯನ್‌ ಮೇಲೆ ಕಣ್ಣು ಹಾಕಿದ್ದಾನೆ. ನನ್ನ ಕಣ್ಣೆದುರಿನಲ್ಲಿಯೇ ನನ್ನ ಸ್ಕಾರ್ಪಿಯನ್‌ಳ ಗುಣಗಾನ ಮಾಡುತ್ತಾನೆ. ನೆಪ ಮಾಡಿಕೊಂಡು ಮನೆಗೆ ವಕ್ಕರಿಸುತ್ತಿರುತ್ತಾನೆ. ಸ್ಕಾರ್ಪಿಯನ್‌ ಅವನಿಗಾಗಿ ಸ್ವೀಟ್ಸ್ ಕೂಡ ತರಿಸುತ್ತಾಳೆ. ನಿಷೇಧ ಕೇವಲ ನನಗಾಗಿ ಮಾತ್ರ. ಕಣ್ಣು ಮುಚ್ಚಾಲೆಯ ಈ ಆಟವನ್ನು ಕೊನೆಗೊಳಿಸಲು ಯೋಚಿಸುತ್ತೇನೆ. ನನಗೆ ರಿಚ್‌ ಫುಡ್‌ ಇಷ್ಟ. ಪೂರಿ, ಬೋಂಡಾ, ಪಲಾವ್‌, ಬಿರಿಯಾನಿ, ಪಾನಿಪೂರಿ, ಹಲ್ವಾ…. ಕ್ಯಾಲೋರಿ ಬಗ್ಗೆ ಯೋಚನೆಯೇ ಇಲ್ಲ. ಬ್ಲಡ್‌ ಶುಗರ್‌, ಯೂರಿಕ್‌ ಆ್ಯಸಿಡ್‌, ಡಯಾಬಿಟಿಸ್‌ ಏನೇ ಬಂದರೂ ಸೈ. ನಾನು ನನ್ನನ್ನು ಪರಿಪೂರ್ಣವಾಗಿ ನಿರ್ಲಕ್ಷಿಸಿ ಸರಿಯಾಗಿ ಜೀವಿಸಲು ಇಚ್ಛಿಸುತ್ತೇನೆ. ನನಗೆ ದೀರ್ಘಾವಧಿ ಜೀವನ ಇಷ್ಟವಿಲ್ಲ. ಖುಷಿಯಿಂದ ಕೂಡಿದ ಜೀವನ ಮಜಭರಿತ ಜೀವನ ಇಷ್ಟ. ನಾನು ನನ್ನ ಇಚ್ಛೆಗಳನ್ನು ಹತ್ತಿಕ್ಕಿ ದಿನ ದಿನ ಸಾಯಲು ಇಷ್ಟಪಡುವುದಿಲ್ಲ. ನಾನು ಓಗೆಮಿ ಹಳ್ಳಿಯಲ್ಲವಲ್ಲ, ನನ್ನ ನಗರದಲ್ಲಿ ಇರಲು ಇಷ್ಟಪಡುತ್ತೇನೆ.

ಹೌದು ಮಹನೀಯರೆ, ನಾವು ನಮ್ಮ ನಮ್ಮ ಇಷ್ಟಗಳನ್ನು ಇಷ್ಟಪಡುವ ದಿಸೆಯಲ್ಲಿ ಯೋಚಿಸಬಹುದೆ?

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ