ಜಪಾನಿನ ಓಡಿನಾಲಾದಲ್ಲಿ ಓಗೇಮಿ ಎಂಬ ಹಳ್ಳಿಯಿದೆ. ಈ ಗ್ರಾಮದ ಜನರ ಸರಾಸರಿ ವಯಸ್ಸು ಇಡೀ ವಿಶ್ವದಲ್ಲೇ ಅತ್ಯಂತ ಹೆಚ್ಚು. ಇಲ್ಲಿ ಎಲ್ಲರೂ ಶತಕಕ್ಕೂ ಹೆಚ್ಚು ವರ್ಷ ಬಾಳುತ್ತಾರೆ. ಈ ಗ್ರಾಮದ ಯಾರೊಬ್ಬರೂ ನಿವೃತ್ತಿಯ ಬಗ್ಗೆ ಮಾತನಾಡುವುದೇ ಇಲ್ಲ. ಅವರೆಲ್ಲರೂ ಕೆಲಸದಲ್ಲಿ ಅಷ್ಟೊಂದು ಮಗ್ನರಾಗಿರುತ್ತಾರೆ.

ಓಗೇಮಿಯ ಜನರು ತಮಗಿಷ್ಟವಾದ ರುಚಿಕಟ್ಟಾದ ಆಹಾರ ತಯಾರಿಸಿಕೊಳ್ಳುತ್ತಾರೆ. ಆದರೆ ಹೊಟ್ಟೆ ತುಂಬ ಊಟ ಮಾಡಲು ಹಿಂದೇಟು ಹಾಕುತ್ತಾರೆ. ಅಂದರೆ ಶೇ.80ರಷ್ಟು ಹೊಟ್ಟೆಯನ್ನಷ್ಟೇ ತುಂಬಿಸಿಕೊಳ್ಳುತ್ತಾರೆ. ಆಹಾರದಲ್ಲಿ ಶೇ.20ರಷ್ಟು ಕೊರತೆಯೇ ಅವರ ದೀರ್ಘಾಯುಷ್ಯದ ಗುಟ್ಟು.

ನನಗೆ ಮದುವೆ ವಯಸ್ಸಾದಾಗ ನನ್ನ ತಂದೆ ತಾಯಿ ಸ್ಕಾರ್ಪಿಯನ್‌ ಜೊತೆ ನನಗೆ ಇಜ್ಜೋಡು ಮದುವೆ ಮಾಡಿಬಿಟ್ಟರು. ಆದರೆ ನನ್ನ ಹೆಂಡತಿ ಅಪಾಯಕಾರಿ ಸ್ಕಾರ್ಪಿಯನ್‌ ಅಲ್ಲ. ಚೇಳಿನ ಹಾಗೆ ಅವಳ ಬಾಯಲ್ಲಿ ವಿಷಕಾರಿ ಮುಳ್ಳು ಕೂಡ ಇಲ್ಲ. ಅವಳು ತನ್ನ ದೇಹದ ಮೇಲೆ ಸ್ಕಾರ್ಪಿಯನ್‌ ಟ್ಯಾಟೂ ಹಾಕಿಸಿಕೊಂಡಿದ್ದಾಳೆ, ಅಷ್ಟೇ.

``ನನ್ನ ಜನ್ಮ ರಾಶಿ ಸ್ಕಾರ್ಪಿಯೋ.... ಹಾಗಾಗಿ ನಾನು ಈ ಟ್ಯಾಟೂ ಹಾಕಿಸಿಕೊಂಡಿದ್ದೇನೆ.... ಇತ್ತೀಚಿನ ದಿನಗಳಲ್ಲಿ ಟ್ಯಾಟೂ ಕ್ರೇಜ್‌ ಇದೆ. ನನ್ನ ಎಲ್ಲ ಸ್ನೇಹಿತೆಯರು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಹಾಗಾಗಿ ನಾನೂ ಟ್ಯಾಟೂ ಹಾಕಿಸಿಕೊಂಡಿದ್ದೇನೆ....'' ಸ್ಕಾಪಿರ್ಯನ್‌ ನನಗೆ ಹೇಳಿದಳು.

``ನಾವು ನಿನಗಾಗಿ ಬ್ಯೂಟಿ ಕ್ವೀನ್‌ ವಧುವನ್ನು ಆಯ್ಕೆ ಮಾಡಿದೆ. ತೆಳ್ಳಗಿದ್ದಾಳೆ, ಬೆಳ್ಳಗಿದ್ದಾಳೆ. 5 ಅಡಿ 9 ಅಂಗುಲ ಎತ್ತರ.....'' ನನ್ನ ಮಾತಾಶ್ರೀ ನನ್ನ ಮೂಗನ್ನು ಹಿಂಡುತ್ತಾ ನನಗೆ ಶುಭ ಸಮಾಚಾರ ಕೊಟ್ಟಿದ್ದರು. ನನ್ನ ಜನ್ಮ ರಾಶಿ ಕ್ಯಾನ್ಸರ್‌ ಅಂದರೆ ಏಡಿ. ನಾನು ಕ್ಯಾನ್ಸೇರಿಯನ್‌. ಕ್ಯಾನ್ಸೇರಿಯನ್‌ಗೂ ಸ್ಕಾರ್ಪಿಯೋಗೂ ಜೋಡಿ ಸರಿಹೊಂದುತ್ತೋ ಇಲ್ಲವೋ? ನಾನು ಬಾಲ್ಯದಿಂದಲೇ ತಿಂಡಿಪೋತ. ನನ್ನನ್ನು ಶೇ.80ರಷ್ಟು ಆಹಾರಕ್ಕೆ ನಿಯಂತ್ರಿಸುವುದು ನನ್ನ ಮೇಲಿನ ಶೋಷಣೆಯಾಗಿದೆ. ನನ್ನದು ನಾಯಕನ ಗುಣಲಕ್ಷಣ. ಎಲ್ಲಿಯವರೆಗೆ ಜೀವಿಸುತ್ತೆವೆಯೋ, ಅಲ್ಲಿಯವರೆಗೆ ಸುಖವಾಗಿರು. ಸಾಲ ಮಾಡಿಯಾದರೂ ತುಪ್ಪವನ್ನು ಸೇವಿಸು.

ವಿಧಿ ನಮ್ಮೆಲ್ಲರ ಜೋಡಿಯನ್ನು ಒಂದಾಗಿಸಿತು. ಅಲ್ಲಿಂದಲೇ ನನ್ನ ಟ್ರಾಜಿಡಿ ಶುರುವಾಯಿತು. ನನ್ನ ಹೆಂಡತಿಯಲ್ಲಿ ಓಗೇಮಿಯಾ ಜೀನ್‌ ಸೇರ್ಪಡೆಯಾಗಿದೆ. ಮುಂಜಾನೆಯ ಉಪಾಹಾರಕ್ಕೆ ಹೆಸರಿನ ಮೊಳಕೆಕಾಳು ಹಾಗೂ ಹಣ್ಣುಗಳಲ್ಲಿ ಸೇಬು, ಬಾಳೆಹಣ್ಣಿನ ಸಲಾಡ್‌ ಸಿಗುತ್ತದೆ. ನನ್ನ ಹೊಟ್ಟೆ ಕಾವ್‌..... ಕಾವ್‌... ಎನ್ನುತ್ತಿರುತ್ತದೆ.

ಈ ಶೇ.25ರಿಂದ ಏನು ತಾನೇ ಸಂತೃಪ್ತಿ ಸಾಧ್ಯ? ನನಗಂತೂ ಬಿಸಿ ಬಿಸಿ ಬೋಂಡಾ, ರಸಭರಿತ ಜಾಮೂನು ತಿನ್ನಲು ಇಷ್ಟವಾಗುತ್ತದೆ. ನನಗೆ ಶೇ.120ರಷ್ಟು ಉಪಾಹಾರ ಸೇವಿಸುವ ಅಭ್ಯಾಸವೇ ಆಗಿಬಿಟ್ಟಿದೆ.

ನನಗೆ ಸೆಂಚುರಿ ವೀರನಾಗುವ ಬಯಕೆ ಖಂಡಿತ ಇಲ್ಲ. ನಾನು ಅಡ್ವೋಕೇಟ್‌ ನೇಮಿಸಿದ ಲೋಯರ್‌ ಕೋರ್ಟ್‌, ಹೈಕೋರ್ಟ್‌ಹಾಗೂ ಸುಪ್ರೀಂ ಕೋರ್ಟ್‌ ತನಕ ಅಪೀಲ್ ‌ಮಾಡಿದೆ. ಆದರೆ ನನಗೆ ಈವರೆಗೂ ಬೇಲ್ ಸಿಕ್ಕಿಲ್ಲ. ಬಹುಶಃ ನನ್ನ ಹಣೆಯಲ್ಲಿ ಹಿಂಡಲಗಾ ಜೈಲಿಗೆ ಹೋಗುವುದನ್ನೇ ಬರೆಯಲಾಗಿದೆ ಅನಿಸುತ್ತೆ.

``ನಿಮಗದು ಅಭ್ಯಾಸವಾಗಿ ಬಿಡುತ್ತದೆ, ತಾಳ್ಮೆಯಿಂದ ಕಾರ್ಯಪ್ರವೃತ್ತರಾಗಿ. ಅದು ನಿಮ್ಮ ಹಿತದೃಷ್ಟಿಯಿಂದ ಕುಟುಂಬಕ್ಕೆ ದೀರ್ಘಾವಧಿಯತನಕ ನಿಮ್ಮ ಅವಶ್ಯಕತೆ ಇದೆ,'' ಸ್ಕಾರ್ಪಿಯನ್‌ ನನಗೆ ಸಾಂತ್ವನ ಹೇಳಿದಳು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ