ಬೆಂಗಳೂರಿನ ಪ್ರೇಮಿಗಳು ಕಲೆತು ಭೇಟಿಯಾಗಲು ಲಾಲ್‌ಬಾಗ್‌, ಕಬ್ಬನ್‌ ಪಾರ್ಕ್‌, ಬ್ಯೂಗಲ್ ರಾಕ್‌ಗಳಿಗಿಂತ ಬೇರೆ ಜಾಗ ಬೇಕೇ? ಎಂದಿನಂತೆಯೇ ಆ ದಿನ ಪ್ರಿಯಾ ಸ್ವರೂಪ್‌ ತಮ್ಮ ನೆಚ್ಚಿನ ಕಬ್ಬನ್‌ ಪಾರ್ಕ್‌ಗೆ ಬಂದಿದ್ದರು. ಅಂದು ಭಾನುವಾರ ಬೆಳಗಿನ 8 ಗಂಟೆ ಸಮಯ. ಹೆಲ್ತ್ ಕಾನ್ಶಿಯಸ್‌ ಆಗಿದ್ದ ಎಷ್ಟೋ ಮಂದಿ ಇನ್ನೂ ವಾಕಿಂಗ್‌ಮಾಡುತ್ತಿದ್ದರು. ಕೆಲವರು ಜಾಗ್‌ ಮಾಡುತ್ತಿದ್ದರೆ, ಉಳಿದವರು ಬ್ರಿಸ್ಕ್ ವಾಕಿಂಗ್‌ನಲ್ಲಿ ತಲ್ಲೀನರು. ಇನ್ನುಳಿದವರು ಬಗೆಬಗೆಯ ವ್ಯಾಯಾಮ ಮಾಡುತ್ತಿದ್ದರು. ಕೆಲವರು ಅಲ್ಲಿಯೇ ಬೆಂಚುಗಳಲ್ಲಿ ಕುಳಿತು ಇವರೆಲ್ಲರನ್ನೂ ಗಮನಿಸುತ್ತಿದ್ದರು.

ಅಲ್ಲಿನ ಕಾರಂಜಿಯ ಹತ್ತಿರದ ಬೆಂಚಿನ ಮೇಲೆ ಕುಳಿತಿದ್ದ ಈ ಪ್ರೇಮಿಗಳು ಈ ಇಹಲೋಕವನ್ನೇ ಮರೆತು ಕಣ್ಣಲ್ಲಿ ಕಣ್ಣು ನೆಟ್ಟು, ಎಲ್ಲೋ ಕರಗಿ ಹೋಗಿದ್ದರು. ಪ್ರಿಯಾ ತನ್ನ ಬಟ್ಟಲು ಕಂಗಳನ್ನು ಅರಳಿಸುತ್ತಾ ಸ್ವರೂಪನನ್ನೇ ದಿಟ್ಟಿಸುತ್ತಾ ಇದ್ದುಬಿಟ್ಟಿದ್ದಳು. ಪರಸ್ಪರರಲ್ಲಿ ನೆಟ್ಟ ನೋಟ ಬದಲಾಗುವಂತಿರಲಿಲ್ಲ.

ಸ್ವರೂಪ್‌ ಅವಳ ಕೈ ಹಿಡಿದುಕೊಳ್ಳುತ್ತಾ ಹೇಳಿದ, ``ಪ್ರಿಯಾ, ಇವತ್ತಂತೂ ನಿನ್ನ ಕಿಲ್ಲಿಂಗ್‌ ಲುಕ್ಸ್ ಪರವಶಗೊಳಿಸುವಂತಿದೆ.''

ಅವಳು ನಸುನಗುತ್ತಾ, ``ಹೌದು ಡಾರ್ಲಿಂಗ್‌ ಇನ್ನು ಮುಂದೆ ನೀನು ಹಿಡಿದಿರುವ ಈ ನನ್ನ ಕೈಗಳನ್ನು ಶಾಶ್ವತವಾಗಿ ನಿನ್ನವಾಗಿಸಿಕೊಳ್ಳಬೇಕು.

ಇನ್ನು ಮುಂದೆ ನಾನಂತೂ ನಿನ್ನಿಂದ ಖಂಡಿತಾ ದೂರ ಇರಲಾರೆ. ನೀನೇ ನನ್ನ ತುಟಿಗಳ ನಗುವಿನ ಕೇಂದ್ರಬಿಂದು. ಎಷ್ಟು ದಿನ ಅಂತ ನಾವು ಹೀಗೆ ಬರೀ ಕದ್ದುಮುಚ್ಚಿ ಭೇಟಿ ಆಗೋದು?'' ಎನ್ನುತ್ತಾ ಪ್ರಿಯಾ ಗಂಭೀರಳಾದಳು.

ಸ್ವರೂಪ್‌ ತುಸು ನಿಸ್ಸಹಾಯಕ ದನಿಯಲ್ಲಿ, ``ಇದಕ್ಕೆ ಈಗ ನಾನು ಏನು ತಾನೇ ಹೇಳಲಿ.....? ನಿನಗಂತೂ ನಮ್ಮಮ್ಮನ ಬಗ್ಗೆ ಗೊತ್ತೇ ಇದೆ..... ಅವರಂತೂ ಬಡಪಟ್ಟಿಗೆ ಯಾವ ಹೆಣ್ಣನ್ನೂ ಮೆಚ್ಚುವವರಲ್ಲ..... ಇದಕ್ಕೆ ಮೇಲೆ.... ನಮ್ಮಿಬ್ಬರದೂ ಬೇರೆ ಜಾತಿ.....''

``ಅವರದು ಗತ್ತು ಗೈರತ್ತಿನ ಅತಿ ಶ್ರೀಮಂತಿಕೆ ದರ್ಪದ ಗೌಡರ ಮನೆತನದ ವಂಶ. ನಮ್ಮದು ಕೆಳ ಮಧ್ಯಮ ವರ್ಗದ ಬಾಡಿಗೆ ಮನೆಯಲ್ಲಿ ವಾಸಿಸುವ ಬ್ರಾಹ್ಮಣರ ಕುಟುಂಬ. ಹೀಗಿರುವಾಗ ನಮ್ಮಿಬ್ಬರಲ್ಲಿ ಈ ಪ್ರೇಮ ಇಷ್ಟು ಗಾಢವಾಗಿ ಬೆಳೆದು ಬಂದುಬಿಟ್ಟಿದೆ. ಇದರಲ್ಲಿ ನಮ್ಮ ತಪ್ಪಾದರೂ ಏನು? ಅವರಿಗೆ ನನ್ನನ್ನು ತಮ್ಮ ಸೊಸೆಯಾಗಿ ನೋಡುವ ವಿಶಾಲ ಮನೋಭಾವ ಬರಬೇಕು ಅಷ್ಟೆ. ಕಳೆದ 3 ವರ್ಷಗಳಿಂದ ಹೇಳುತ್ತಲೇ ಇದ್ದೇನೆ..... ನೀನು ಅಮ್ಮನ ಬಳಿ ನಿಧಾನವಾಗಿ ಈ ವಿಷಯ ಮಾತನಾಡು.''

``ಹೀಗೆ ಒಂದು ಸಲ ಇನ್‌ಡೈರೆಕ್ಟ್ ಆಗಿ ಹಿಂಟ್‌ ಕೊಟ್ಟೆ. ಅವರು ಲೇಶ ಮಾತ್ರವೂ ಒಪ್ಪಲು ಸಿದ್ಧರಿಲ್ಲ! ನಿನಗಂತೂ ಗೊತ್ತೇ ಇದೆ, ಅಮ್ಮನನ್ನು ಬಿಟ್ಟರೆ ನನಗೆ ಬೇರಾರೂ ಇಲ್ಲ. ಚಿಕ್ಕಂದಿನಲ್ಲೇ ನನ್ನ ತಂದೆ ತೀರಿಕೊಂಡಾಗಿನಿಂದ ಅವರು ನನ್ನನ್ನು ಬಹಳ ಕಷ್ಟಪಟ್ಟು ಪ್ರೀತಿಯಿಂದ ಬೆಳೆಸಿದ್ದಾರೆ. ಹಾಗಿರುವಾಗ ಅವರನ್ನು ವಿರೋಧಿಸುವ ಪ್ರಶ್ನೆಯೇ ಇಲ್ಲ.

``ಒಂದು ಸಲ ಅವರು ನಿನ್ನನ್ನು ಒಪ್ಪಿಬಿಡಲಿ ಸಾಕು, ನಂತರ ಯಾವ ತೊಂದರೆಯೂ ಇಲ್ಲ. ನೀನು ಅವರನ್ನು ಭೇಟಿ ಆಗೋದು, ನಾನೇ ಭೇಟಿ ಮಾಡಿಸುವುದು ಅಂತಿಟ್ಕೊ. ಅಕಸ್ಮಾತ್‌ ಅವರು ನಿನ್ನನ್ನು ಯಾವುದೋ ಕಾರಣಕ್ಕೆ ರಿಜೆಕ್ಟ್ ಮಾಡಿಬಿಟ್ಟರೆ..... ಆಮೇಲೆ ಸಹಜವಾಗಿ ನೀನೂ ನನ್ನಿಂದ ದೂರ ಆಗಿಬಿಡ್ತೀಯಾ. ಈ ಕೆಟ್ಟ ಭಯದಿಂದಲೇ ನಾನು ನಿನ್ನನ್ನು ಅವರಿಗೆ ಪರಿಚಯಿಸುತ್ತಿಲ್ಲ. ಏನು ಮಾಡಿ ಅವರನ್ನು ಒಪ್ಪಿಸಲಿ ಅಂತ ತಲೆ ಕೆಡುವ ಹಾಗೆ ಪ್ಲಾನ್‌ ಮಾಡ್ತಾ ಇರ್ತೀನಿ.''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ