ಹಾಲ್‌ನಲ್ಲಿ ಪೇಪರ್‌ ನೋಡುತ್ತಾ ಕುಳಿತಿದ್ದ ಅತ್ತೆಯ ಕೈ ಒತ್ತಿ, ಮಾವನಿಗೆ ಕೈ ಆಡಿಸುತ್ತಾ ಬೈ ಬೈ ಎಂದು ಅತ್ಯಾಧುನಿಕ ಅಲಂಕಾರದಲ್ಲಿ ತನ್ನ ಬಣ್ಣದ ಚೀಲ ಹಿಡಿದು ಆ ಮನೆಯ ಒಬ್ಬಳೇ ಸೊಸೆ ಅಶಿತಾ ಆಫೀಸಿಗೆ ಹೊರಟು ನಿಂತಾಗ ಆ ಹಿರಿಯರಿಗೆ ಹೇಳಿಕೊಳ್ಳುವಂಥ ಸಂತೋಷವೇನೂ ಆಗಿರಲಿಲ್ಲ.

ಹೊಸ ಸೊಸೆಗೆ ಸುನಂದಾ ಅಕ್ಕರೆಯಿಂದ ಹೇಳಿದರು, ``ಅಶಿತಾ ಇವತ್ತು ಸಂಜೆ 4 ಗಂಟೆ ಹೊತ್ತಿಗೆ ಬೇಗ ಬಂದುಬಿಡಮ್ಮ..... ಅಜಯ್‌ನ ಸೋದರತ್ತೆ ನಿನ್ನನ್ನು ನೋಡಲು ಮೈಸೂರಿನಿಂದ ಬರ್ತಿದ್ದಾರೆ.... ಮರೆಯಬೇಡ.''

``ಅತ್ತೆ, ಬೇಗ ಬರೋದು ಕಷ್ಟ ಆಗಬಹುದು. ಹೆವಿ ವರ್ಕ್‌ ಲೋಡ್‌ ಇದೆ. 4 ಗಂಟೆಗೆ ಆಗೋದೇ ಇಲ್ಲ ಬಿಡಿ. 5 ಗಂಟೆಗೆ ಅಲ್ಲಿ ಬಿಟ್ಟರೂ ಬೆಂಗಳೂರಿನ ಈ ಟ್ರಾಫಿಕ್‌ ದಾಟಿಕೊಂಡು ಮನೆಗೆ ಬರುವಷ್ಟರಲ್ಲಿ 7 ಗಂಟೆ ಆಗಿಯೇ ಹೋಗುತ್ತದೆ. ಅಲ್ಲಿಯವರೆಗೂ ನೀವೆಲ್ಲ ಅವರೊಂದಿಗೆ ಮಾತನಾಡುತ್ತಿರಿ, ಆಮೇಲೆ ಬಂದು ನಾನು ಭೇಟಿ ಆಗ್ತೀನಿ,'' ಎಂದಳು ಸೊಸೆ ಮುದ್ದು.

ನಂತರ ತಾನೇ ಜೋರಾಗಿ ನಗುತ್ತಾ, ``ಅಜಯ್‌ ಸೋದರತ್ತೆ ಕೇವಲ ನನ್ನನ್ನು ಮಾತ್ರ ನೋಡಲು ಬರ್ತಿದ್ದಾರಾ? ತಮ್ಮನ ಮನೆಗೆ ಅಕ್ಕಾ ಬರೋದು ಸಹಜವೇ ಅಲ್ಲವೇ.... ಇಲ್ಲಿ ಅವರ ಪ್ರಿಯ ಬಾಬಾರ ಪ್ರವಚನ ಬೇರೆ ಇರುತ್ತೆ, ಅದೆಲ್ಲ ಹಾಯಾಗಿ ಅಟೆಂಡ್‌ ಆಗಲಿ ಬಿಡಿ.....''

ತನ್ನ ಬೆಲ್ಲದಂಥ ಹೊಸ ಪತ್ನಿಯ ಮಾತಿನಲ್ಲಿದ್ದ ವ್ಯಂಗ್ಯ ಗುರುತಿಸಿದ ಅಜಯ್‌ ನಸುನಗುತ್ತಾ, ``ಅದೆಲ್ಲ ಇರಲಿ ಬಿಡು, ಬೇಗ ಮನೆಗೆ ಬಂದುಬಿಡು,'' ಎಂದು ಹಾರ್ದಿಕವಾಗಿ ಹೇಳಿದ.

ಪತಿಗೆ ಕೈ ಬೀಸಿ ನಗುತ್ತಾ ವೈಯಾರವಾಗಿ ನಡೆದು ಸ್ಕೂಟಿ ಹತ್ತಿದಳು ಅಶಿತಾ.ಅಮ್ಮನ ಮುಖ ಗಂಭೀರವಾದುದನ್ನು ಕಂಡು ಅಜಯ್‌ ಕೇಳಿದ, ``ಏನಾಯ್ತಮ್ಮ.... ಯಾಕೋ ನಿನ್ನ ಮೂಡ್‌ ಸೀರಿಯಸ್‌ ಆಗಿರೋ ಹಾಗಿದೆ.....''

``ಅದೇನಿಲ್ಲ.....'' ಅಮ್ಮ ಗಂಭೀರವಾಗಿ ಹೇಳಿದಾಗ ಅಜಯ್‌ ತಂದೆ ಕಡೆ ನೋಡಿದ. ಹೆಚ್ಚಿಗೆ ಮಾತು ಬೇಡ ಎಂಬಂತೆ ಮಹೇಶ್ ಮಗನಿಗೆ ಸನ್ನೆ ಮಾಡಿದರು. ತಂದೆ ಮಗ ಸನ್ನೆ ಮೂಲಕ ಮಾತನಾಡ ತೊಡಗಿದರು.

ಅಜಯ್‌ ಆಫೀಸ್‌ಗೆ ಹೊರಟ ನಂತರ ಮಹೇಶ್‌ ಪತ್ನಿಗೆ ಹೇಳಿದರು, ``ನಾನು ಸಂಜೆ ಸಾಧ್ಯವಾದಷ್ಟು ಬೇಗ ಮನೆಗೆ ಬರಲು ಟ್ರೈ ಮಾಡ್ತೀನಿ. ಅಕ್ಕಾ ಬರೋ ಹೊತ್ತಿಗೆ ಬಂದೇಬಿಡ್ತೀನಿ ಅಂತಿಟ್ಕೊ. ನೀನೇಕೆ ಹೀಗೆ ಸೈಲೆಂಟ್‌ ಆಗ್ಬಿಟ್ಟೆ.....?''

ಪತಿಯ ಮಾತಿಗೆ ಸುನಂದಾ ಬೇಸರದಲ್ಲಿ ಹೇಳಿದರು, ``ಮೌನವಾಗಿರುವುದು ಬಿಟ್ಟು ನಾನೇನು ತಾನೇ ಮಾಡಲಿ? ಎಷ್ಟು ಅಂತ ಈ ಹೊಸ ಸೊಸೆಗೆ ಅಡ್ಜಸ್ಟ್ ಮಾಡಿಕೊಳ್ಳುವುದು? ಬೆಳಗ್ಗಿನಿಂದ ರಾತ್ರಿವರೆಗೂ ಆ ಮಹಾರಾಣಿ ಈ ಮನೆಯ ಸೊಸೆ ಅನ್ನೋದೂ ಮರೆತು, ಒಂದು ಕಡ್ಡಿ ಇಲ್ಲಿಂದ ಅಲ್ಲಿಗೆ ಎತ್ತಿಡದೆ ಹಾಯಾಗಿರ್ತಾಳೆ.

``ಸದಾ ಬಣ್ಣದ ಬೀಸಣಿಗೆ ತರಹ ಅಲಂಕಾರ ಮಾಡಿಕೊಂಡು ಹೊರಗೆ ಓಡಾಡೋದು ಒಂದೇ ಗೊತ್ತಿರೋದು. ಮಾತು ಬೆಳೆಸಬಾರದು ಮುಂದುವರಿಸಬಾರದು ಅಂತ ನಾನೂ ಹಲ್ಲು ಕಚ್ಚಿ ಸುಮ್ಮನಿದ್ದೇನೆ.''

``ಇದೇನಿದು.... ಅಶಿತಾನಾ ಬಣ್ಣದ ಬೀಸಣಿಗೆ ಅಂದುಬಿಟ್ಟೆ? ಇದು ಯಾಕೋ ಜಾಸ್ತಿ ಆಗಲಿಲ್ವೇ?''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ