``ನೀನು ಏನನ್ನು ಯೋಚಿಸಿ ನಿಮ್ಮಮ್ಮನ ಮದುವೆ ನನ್ನೊಂದಿಗೆ ಮಾಡಿಸಿದೆ ಆ ಮೇಡಂ ನೋಡಿದರೆ..... ಯಾವಾಗಲೂ ಬಾಬಾ, ಮಾತೆಯರ ಕೃಪೆ ಗಿಟ್ಟಿಸಲು ಸದಾ ಅವರ ಆಶ್ರಮಗಳಿಗೆ ಎಡತಾಕುತ್ತಾ ಅಲ್ಲೇ ಬಿದ್ದಿರುತ್ತಾಳೆ. ನಾನು ದಿನವಿಡೀ ಹೊರಗೆ ದುಡಿದು ದಣಿದು ಮನೆಗೆ ಬರುತ್ತೇನೆ, ಇನ್ನಾದರೂ ಹೆಂಡತಿ ಕೈ ಕಾಫಿ ಕುಡಿಯೋಣ ಆರಾಮವಾಗಿ ರಿಲ್ಯಾಕ್ಸ್ ಆಗಿರೋಣ ಎಂದರೆ ಇಲ್ಲವಲ್ಲ.... ಈ ಮಹಾತಾಯಿ ಫ್ರೀಯಾಗಿ ನನಗೆ ಸಿಕ್ಕಿದರೆ ತಾನೇ?

``ಯಾವಾಗ ಕೇಳು..... ಈ ಆಶ್ರಮ.... ಆ ಆಶ್ರಮ.... ಅಂತ ಸುತ್ತಾಡುವುದೇ ಆಯ್ತು. ಇಲ್ಲದಿದ್ದರೆ ಗೆಳತಿಯರನ್ನೆಲ್ಲ ಸೇರಿಸಿಕೊಂಡು ಮನೆಯಲ್ಲಿ ಭಜನೆ ನಡೆಸುತ್ತಾಳೆ. ನಾನೇ ಈ ಮನೆಗೆ ಅಪರಿಚಿತ ಆಗಿಹೋಗಿದ್ದೇನೆ. ಯಾವುದೂ ಇಲ್ಲ ಅಂದುಕೊಂಡ್ರೆ ನಿನ್ನೊಂದಿಗೆ ಕುಳಿತು ಹರಟೆ ಹೊಡೆಯುತ್ತಿರುತ್ತಾಳೆ. ನನ್ನ ಬಳಿ ಬಂದು ವಿಚಾರಿಸಿಕೊಳ್ಳೋಣ ಅನ್ನುವುದಕ್ಕೆ ಅವಳ ಬಳಿ ಪುರಸತ್ತೇ ಇಲ್ಲ! ಹಾಗಿರುವಾಗ ಅವಳೇಕೆ ಮದುವೆಯಾಗಿ ನನ್ನನ್ನು ಹೀಗೆ ನರಕಕ್ಕೆ ದೂಡಬೇಕಿತ್ತು?'' ನಿಶಾಳ ಮಲತಂದೆ ರಮಣಮೂರ್ತಿ ಅವಳತ್ತ ಕೋಪದಿಂದ ಸಿಡಿದು ಹೇಳುತ್ತಿದ್ದ.

ನಿಶಾಳಿಗಂತೂ ಏನು ಉತ್ತರ ಕೊಡಬೇಕೋ ತಿಳಿಯಲೇ ಇಲ್ಲ. ಏನು ತಾನೇ ಹೇಳಿಯಾಳು? ರಮಣ ಹೇಳಿದ ಮಾತುಗಳು ಸರಿಯಾಗೇ ಇತ್ತು. ತನ್ನ ತಂದೆಯ ಅಕಾಲ ಮರಣದ ನಂತರ ತಾಯಿ ಬಹಳ ದಿನಗಳ ಕಾಲ ಒಬ್ಬಂಟಿಯಾಗಿ ಬೇಸರದಿಂದ ಅಗಾಧ ನಿರಾಸೆಯಲ್ಲಿ ಸಮಯ ಕಳೆಯುತ್ತಿರುವುದನ್ನು ಗಮನಿಸಿದ್ದಳು. ಕಾಲೇಜಿನಿಂದ ತಾನು ವಾಪಸ್ಸು ಬಂದ ಮೇಲೆಯೇ ತಾಯಿಯ ಮುಖದಲ್ಲಿ ತುಸು ನಗು, ಗೆಲುವು ಕಾಣುತ್ತಿದ್ದುದು. ಹೀಗಾಗಿ ಕಾಲೇಜು ಇಲ್ಲದ ಸಮಯದಲ್ಲಿ ಸದಾ ಅಮ್ಮನಿಗೇ ಅಂಟಿಕೊಂಡು ಇದ್ದುಬಿಡುತ್ತಿದ್ದಳು, ಹಾಗಾದರೂ ಅವಳು ನೆಮ್ಮದಿಯಾಗಿ ಇರಲೆಂದು. ತನ್ನ ಸಮವಯಸ್ಕ ಹುಡುಗಿಯರಂತೆ ಫ್ರೆಂಡ್ಸ್, ಹೊರಗಿನ ಓಡಾಟ, ಸಿನಿಮಾ, ಮಾಲ್ ‌ಎಂದೆಲ್ಲ ಸುತ್ತಾಡಲು ಹೋದವಳೇ ಅಲ್ಲ. ಅಮ್ಮನ ಖುಷಿ ಅವಳಿಗೆ ಮುಖ್ಯವಾಗಿತ್ತು.

ನಿಶಾಳ ಪ್ರಯತ್ನ ಫಲ ನೀಡತೊಡಗಿತು. ಮಗಳು ಬಳಿ ಇದ್ದಾಗ ಪತಿ ವಿಹೀನತೆಯ ದುಃಖವನ್ನು ತಾಯಿ ರೇವತಿ ಮರೆಯುತ್ತಿದ್ದಳು. ಆಗ ತಾಯಿಗೆ ತನ್ನ ಮಗಳಿಗಿಂತ ಮಿಗಿಲಾದ ಬೇರೆ ಆಪ್ತರಿಲ್ಲ ಎಂದೇ ಅನಿಸುತ್ತಿತ್ತು. ಇಷ್ಟಾದರೂ ಸದಾ ಕಷ್ಟಸಹಿಷ್ಣೆಯಾಗಿದ್ದ ಆ ತಾಯಿಗೆ ಜೀವನದಲ್ಲಿ ಸಿಕ್ಕಿದ್ದಾದರೂ ಏನು? ಸದಾ ಗೋಳು ಗುಟ್ಟಿಸುವ ಅತ್ತೆ, ಸದಾ ಸಿಗರೇಟ್‌ ಸೇದುತ್ತಾ ಕೆಮ್ಮಿಕೊಂಡೇ ರೋಗಿಯಾಗಿ ಕಿರುಚಾಡುತ್ತಿದ್ದ ಮಾವ, ಸದಾ ಸಿಡುಕುತ್ತಿದ್ದ ಪತಿ, ಆ್ಯಕ್ಸಿಡೆಂಟ್‌ನಲ್ಲಿ ವಯಸ್ಕ ಮಗ ಹಾಗೂ ಪತಿಯ ಅಕಾಲಿಕ ಸಾವು..... ಜೀವನದಲ್ಲಿ ಜರ್ಝರಿತಳಾಗಲು ಇಷ್ಟು ಸಾಲದೇ?

ವಿಧಿಯ ಬಾಳು ಬಾಳುತ್ತಾ, ಎಲ್ಲರ ಕರುಣೆಗೆ ಪಾತ್ರಳಾಗಿ ಜೀವನವೇ ಒಂದು ಹೊರೆಯಾಗಿ ಕಷ್ಟಪಡುತ್ತಿದ್ದವಳಿಗೆ ಕಾಲೇಜಿನ ಕಿಶೋರಿ ಮಗಳು ಹೇಗಾದರೂ ಒಂದು ಹೊಸ ಬಾಳು ರೂಪಿಸಿಕೊಡಲು ದೃಢಸಂಕಲ್ಪ ತೊಟ್ಟಳು. ಅಜ್ಜಿ ತಾತಂದಿರ ಮರಣದ ನಂತರ ಅದು ಮತ್ತಷ್ಟು ದೃಢವಾಯಿತು. ತಾಯಿ ಸದಾ ಸಂತೋಷದಿಂದ ನಸುನಗುತ್ತಿರಬೇಕು ಎಂಬುದೇ ಮಗಳ ಜೀವನದ ಗುರಿಯಾಯಿತು. ಈ ಮಗಳನ್ನು ಬಿಟ್ಟರೆ ಆ ತಾಯಿಗೆ ತನ್ನವರೆಂದು ಹೇಳಿಕೊಳ್ಳುವ ಬೇರೆ ಜೀವ ತಾನೇ ಯಾವುದಿತ್ತು? ತವರಿನವರು ಎಂದು ಹೇಳಿಕೊಳ್ಳಲು ಹೆಸರಿಗೆ ಒಬ್ಬ ಅಣ್ಣ ಅಂತ ಇದ್ದ, ಆತ ಬೆಂಗಳೂರಿನಲ್ಲಿ ತನ್ನ ಸಂಸಾರದಲ್ಲಿ ಸಂಪೂರ್ಣ ಮುಳುಗಿಹೋಗಿದ್ದ.... ವರ್ಷದಲ್ಲಿ 1-2 ಸಲ ನೆನಪಾದಾಗ ತಂಗಿಗೆ ಫೋನ್‌ ಮಾಡಿದರೆ  ಹೆಚ್ಚು. ಮೈಸೂರಿನ ಈ ತಂಗಿ ಒಲ್ಲದ ಅತ್ತಿಗೆಯ ಅಣ್ಣನ ಮನೆ ಹುಡುಕಿಕೊಂಡು ಎಂದೂ ಬೆಂಗಳೂರಿಗೆ ಹೋಗುತ್ತಿರಲಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ