ಅವನು ಲೈಬ್ರೆರಿಗೆ ಬರುತ್ತಿರುವುದನ್ನು ನೋಡಿ, ಬಹುಶಃ ಯಾರೋ ಹೊಸ ಅಧಿಕಾರಿ ತಮ್ಮ ಆಫೀಸಿಗೆ ಸೇರಿರಬೇಕೆಂದು ಅಮಲಾ ಭಾವಿಸಿದಳು. ಆಕಾಶನೀಲಿಯ ಶರ್ಟ್‌ ಜೊತೆ ಗಾಢ ನೀಲಿ ಬಣ್ಣದ ಟೈ, ಹಾಲು ಬಿಳುಪಿನ ಪ್ಯಾಂಟ್‌ ಧರಿಸಿದ್ದ ಅವನ ವ್ಯಕ್ತಿತ್ವಕ್ಕೆ ಅವಳು ಒಮ್ಮೆಲೇ ಮಾರುಹೋದಳು. ಗೌರವರ್ಣದ ಕಟ್ಟುಮಸ್ತಾದ ದೇಹ, ನಿಯಂತ್ರಣಕ್ಕೆ ಸಿಗದೆ ಹಾರಾಡುತ್ತಿದ್ದ ಮುಂಗುರುಳು, ಹಿಂದಕ್ಕೆ ಬಾಚಿದ್ದ ದಟ್ಟ ಕೂದಲು ಅವನ ಆಕರ್ಷಕ ವ್ಯಕ್ತಿತ್ವಕ್ಕೆ ಹೆಚ್ಚು ಒಪ್ಪುತ್ತದೆ ಎನಿಸಿತು.

ಲೈಬ್ರೆರಿಗೆ ಬರುತ್ತಲೇ ಅವನು ಪತ್ರಿಕೆಗಳಿದ್ದ ರಾಕಿನ ಕಡೆ ನಡೆದ. ಅಲ್ಲಿದ್ದ ಯಾವುದೋ ಪತ್ರಿಕೆ ಎಳೆದುಕೊಂಡು ಅದರಲ್ಲಿ ಮಗ್ನನಾದ. ಅದಾದ ಮೇಲೆ ಅವನು ಕಾದಂಬರಿಗಳಿದ್ದ ಬೀರು ಕಡೆ ನಡೆದ. ತನ್ನ ಸೀಟ್‌ನಲ್ಲಿ ಕುಳಿತಿದ್ದ ಅಮಲಾ ಕಂಪ್ಯೂಟರ್‌ನಲ್ಲಿ ಹೊಸ ಪುಸ್ತಕಗಳ ಎಂಟ್ರಿ ಮಾಡತೊಡಗಿದಳು. ಸಾಕಷ್ಟು ತಡಕಾಡಿದ ನಂತರ ಆತ ಗ್ರಾಫಿಕ್‌ ಡಿಸೈನಿಂಗ್‌ ಕುರಿತಾದ ಪುಸ್ತಕ ಹಿಡಿದು ತಂದು ಅವಳ ಮುಂದೆ ಮೇಜಿನ ಮೇಲಿರಿಸಿದ.

``ದಯವಿಟ್ಟು ಈ ಪುಸ್ತಕವನ್ನು ನನ್ನ ಹೆಸರಿಗೆ ಇಶ್ಯು ಮಾಡ್ತೀರಾ.....?'' ಎನ್ನುತ್ತಾ ಅವಳ ಮುಂದಿನ ಕುರ್ಚಿಯಲ್ಲಿ ಕುಳಿತ.

``ಪುಸ್ತಕ ಇಶ್ಯು ಮಾಡುವ ಮೊದಲು ನಿಮ್ಮ ಡೀಟೇಲ್ಸ್ ನ್ನು ಎಂಟ್ರಿ ಮಾಡಬೇಕಾಗುತ್ತದೆ..... ನಿಮ್ಮ ಹೆಸರು, ಡಿಪಾರ್ಟ್‌ಮೆಂಟ್‌, ವಿಳಾಸ ಎಲ್ಲಾ ಈ ಫಾರ್ಮ್ ನಲ್ಲಿ ತುಂಬಿಸಿ,'' ಎಂದು ಅವನ ಮುಂದೆ ಒಂದು ಫಾರ್ಮ್ ತಳ್ಳಿದಳು ಅಮಲಾ.

``ಇದರ ಅಗತ್ಯವಿಲ್ಲ.... ಆಲ್ ರೆಡಿ ಎಂಟ್ರಿ ಮಾಡಿ ಕೊಟ್ಟಿದ್ದೇನೆ ಬಿಡಿ, ಕಳೆದ ಹಲವು ದಿನಗಳಿಂದ ರಜೆ ಮೇಲಿದ್ದೆ....... ನನ್ನ ಪತ್ನಿಗೆ ಹುಷಾರಿಲ್ಲ.... ನಾನು ನಿರಂಜನ್‌.... ನೀವು ಬಹುಶಃ ಈ ಆಫೀಸಿಗೆ ಹೊಸಬರಿರಬೇಕು..... ಇದಕ್ಕೆ ಮೊದಲು ಇಲ್ಲಿ ವಿಶಾಲಾಕ್ಷಿ ಮೇಡಂ ಕೂರುತ್ತಿದ್ದರು.....''

ಅಮಲಾ ತಕ್ಷಣ ಕಂಪ್ಯೂಟರಿನಲ್ಲಿ ನಿರಂಜನನ ಹೆಸರು ಹುಡುಕಿದಳು. ಆ ಪಟ್ಟಿಯಲ್ಲಿ ಇಡೀ ಆಫೀಸಿಗೆ ಇದ್ದುದೇ ಅದೊಂದು ಹೆಸರು, ಜೊತೆಗೆ ಫೋಟೋ ಸಹ ಪಕ್ಕದಲ್ಲೇ ಇತ್ತು. ಅಮಸಾ ಔಪಚಾರಿಕವಾಗಿ ಎಂಟ್ರಿ ಮಾಡಿಕೊಂಡು ಪುಸ್ತಕ ಇಶ್ಯು ಮಾಡಿದಳು. ಅವನು ಸ್ವಲ್ಪ ಹೊತ್ತು ಅಲ್ಲೇ ಇದ್ದು ಇವಳೆಡೆ ಮೋಹಕ ಮಂದಹಾಸ ಬೀರುತ್ತಾ, ``ನಿಮ್ಮನ್ನು ಭೇಟಿ ಮಾಡಿದ್ದು ಒಳ್ಳೆಯದೆನಿಸಿತು.... ಮತ್ತೊಮ್ಮೆ ಭೇಟಿ ಆಗೋಣ,'' ಎಂದು ಬೈ ಹೇಳಿ ಅಲ್ಲಿಂದ ವೇಗವಾಗಿ ಹೊರಟುಹೋದ.

ಗ್ರಾಫಿಕ್ಸ್ ವೆಬ್‌ ಡಿಸೈನಿಂಗ್‌ನ ಒಂದು ಬಹು ದೊಡ್ಡ ವ್ಯೂವ್ಲ್ಲಿ ಅವಳು ಹೊಸದಾಗಿ ಲೈಬ್ರೇರಿಯನ್‌ ಕೆಲಸಕ್ಕೆ ಸೇರಿದ್ದಳು. ಅಲ್ಲಿನ ಸಿಬ್ಬಂದಿ ಎಲ್ಲರೂ ಸಾಫ್ಟ್ ವೇರ್‌ ಎಂಜಿನಿಯರ್‌ಗಳಾಗಿದ್ದು, ಡಿಸೈನಿಂಗ್‌ನಲ್ಲಿ ಗಟ್ಟಿಗರೆನಿಸಿದ್ದರು. 1 ತಿಂಗಳ ಹಿಂದಷ್ಟೇ ಅವಳು ಅಲ್ಲಿ ಕೆಲಸಕ್ಕೆ ಸೇರಿದ್ದಳು. ಇಡೀ ದಿನ ಕೆಲಸದಲ್ಲಿ ಬಿಝಿ ಆಗಿದ್ದುದರಿಂದ, ಅವಳಿಗೆ ಅಲ್ಲಿ ಹೇಳಿಕೊಳ್ಳುವಂಥ ಗೆಳತಿಯರು ಯಾರೂ ಇರಲಿಲ್ಲ. ಬುಕ್‌ ಇಶ್ಯು ಮಾಡುವಾಗ ಅಥವಾ ಇನ್ನಿತರ ಮಾಹಿತಿ ನೀಡಬೇಕಾದಾಗ ಮಾತ್ರ ಅವಳು ಜನರೊಂದಿಗೆ ಮಾತನಾಡುತ್ತಿದ್ದಳು. ಈ ರೀತಿ ಅವಳಿಗೆ ಜನ ಸಂಪರ್ಕ ಕಡಿಮೆ ಎಂದೇ ಹೇಳಬೇಕು. ಹೀಗಾಗಿ ಯಾರಾದರೂ ಆತ್ಮೀಯವಾಗಿ ಮಾತನಾಡಿಸಿದಾಗ ಅವಳಿಗೆ ಬಹಳ ಖುಷಿಯಾಗುತ್ತಿತ್ತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ