ನನ್ನ ಹೆಂಡತಿ ಶಿಲ್ಪಾಳ ಚಿಕ್ಕಮ್ಮ ಕವಿತಾ ಭಾನುವಾರ ಬೆಳಗ್ಗೆ 11 ಗಂಟೆಗೆ ಯಾವುದೆ ಮುನ್ಸೂಚನೆ ಇಲ್ಲದೆ ಮನೆಗೆ ಬಂದಾಗ ರೂಪಾ ಕೂಡ ಅಲ್ಲಿಯೇ ಇದ್ದಳು. ನಾನು ಅವರಿಬ್ಬರನ್ನು ಪರಿಚಯ ಮಾಡಿಸುತ್ತಾ, ಅಷ್ಟಿಷ್ಟು ಗಾಬರಿಗೊಳಗಾದೆ.

2 ನಿಮಿಷ ರೂಪಾ ಜೊತೆ ಮಾತನಾಡಿದ ಬಳಿಕ ಅವರು ಅಡುಗೆ ಮನೆಗೆ ನೀರು ಕುಡಿಯಲೆಂದು ಹೆಜ್ಜೆ ಹಾಕಿದಾಗ, ನಾನು ಅವರ ಹಿಂದೆ ಹಿಂದೆಯೇ ಹೋದೆ.

``ಶಿಲ್ಪಾ ಎಲ್ಲಿಗೆ ಹೋಗಿದ್ದಾಳೆ?'' ಎಂದು ಅವರು ತುಂಟತನದ ಧ್ವನಿಯಲ್ಲಿ ಕೇಳಿದಾಗ, ನನ್ನ ಗಾಬರಿ ಇನ್ನಷ್ಟು ಹೆಚ್ಚಾಯಿತು.

``ಅವಳು ತವರಿಗೆ ಹೋಗಿದ್ದಾಳೆ ಚಿಕ್ಕತ್ತೆ,'' ನಾನು ನನ್ನ ಧ್ವನಿಯನ್ನು ಸಾಮಾನ್ಯಗೊಳಿಸುತ್ತಾ ಹೇಳಿದೆ.

``ಏನು ವಿಶೇಷ ಅಂತ ಹೋಗಿದ್ದಾಳೆ?''

``ಹಾಗೆ ಸುಮ್ಮನೇ ಹೋಗಿದ್ದಾಳೆ.''

``ಯಾವಾಗ ವಾಪಸ್‌ ಬರ್ತಾಳೆ?''

``ಮುಂದಿನ ಭಾನುವಾರ.''

``ಏನಪ್ಪಾ ನೀಲೇಶ್‌, ಶಿಲ್ಪಾಳ ಜೊತೆ ಇದೇನು ನಡೀತಿದೆ? ಅಂದಹಾಗೆ ಈ ರೂಪಾ ಯಾರು?''

ಚಿಕ್ಕತ್ತೆಯ ಈ ಸಂಬಂಧವಿಲ್ಲದ ಪ್ರಶ್ನೆಗಳನ್ನು ನಾನು ಕೇಳಿಸಿಕೊಳ್ಳುವ ಅಭ್ಯಾಸ ಮಾಡಿಕೊಳ್ಳದೆ ಇದ್ದಿದ್ದರೆ, ನಾನೀಗ ತಬ್ಬಿಬ್ಬಾಗಿ ಬಿಡುತ್ತಿದ್ದೆ. ಅವರು ಹೀಗೆಯೇ ಏನಾದರೂ ಕೇಳ್ತಾರೆಂದು ಗೊತ್ತಾಗಿ, ನಾನು ಅವರ ಜಾಲದಲ್ಲಿ ಸಿಲುಕಲಿಲ್ಲ.

ನಾನು ಅಷ್ಟೇ ಸಹಜವಾಗಿಯೇ ಉತ್ತರಿಸಿದೆ, ``ಚಿಕ್ಕತ್ತೆ, ಈಕೆ ಶಿಲ್ಪಾಳ ಗೆಳತಿ. ಪಕ್ಕದ ಮನೆಯಲ್ಲಿ ಇರೋದು. ಶಿಲ್ಪಾಳನ್ನು ಭೇಟಿಯಾಗಲೆಂದು ಬಂದಿದ್ದಳು. ನೀವು ನನ್ನ ಹಾಗೂ ಆಕೆಯ ಬಗ್ಗೆ ತಪ್ಪು ಕಲ್ಪನೆ ಮಾಡಿಕೊಳ್ಳಬೇಡಿ. ನಾನು ಪ್ರಾಮಾಣಿಕ ಪತಿಯಂದಿರಲ್ಲಿ ಒಬ್ಬ.''

``ಹಾಗೇ ಎಲ್ಲರೂ ಇರುತ್ತಾರೆ. ಸಿಕ್ಕಿಬೀಳು ತನಕ,'' ತಮ್ಮ ನಗೆ ಚಟಾಕಿಯ ಬಗ್ಗೆ ಚಿಕ್ಕತ್ತೆ ಜೋರಾಗಿ ನಕ್ಕಾಗ ನಾನೂ ಕೂಡ ಅವರ ನಗುವಿನಲ್ಲಿ ಶಾಮೀಲಾದೆ.ಫ್ರಿಜ್‌ನಿಂದ ನೀರಿನ ಬಾಟಲ್ ಕೈಗೆ ತೆಗೆದುಕೊಳ್ಳುತ್ತಾ, ಅವರು ನನ್ನನ್ನು ಪುನಃ, ``ನೀಲೇಶ್‌ನಿಮ್ಮಿಬ್ಬರ ಮದುವೆಯಾಗಿ ಇನ್ನೂ 3-4 ತಿಂಗಳು ಕೂಡ ಆಗಿಲ್ಲ. ಇಷ್ಟರಲ್ಲಿ ನೀನು ಅವಳನ್ನು ತವರಿಗೆ ಕಳಿಸಿಕೊಟ್ಟೆಯಾ?'' ಛೇಡಿಸಿದರು.

``ಅಂತಹದ್ದೇನೂ ಇಲ್ಲ ಚಿಕ್ಕತ್ತೆ. ನಾನು ಅವಳನ್ನು ಮನಸಾರೆ ಪ್ರೀತಿಸುತ್ತೇನೆ. ಆದರೆ ಅವಳೇ ಹಠ ಮಾಡಿ ತವರಿಗೆ ಹೊರಟುಬಿಡುತ್ತಾಳೆ. ನನ್ನ ಮಾತು ಅವಳು ಕೇಳುವ ಹಾಗಿದ್ದಿದ್ದರೆ, ನಾನು ಒಂದು ರಾತ್ರಿಯೂ ಅವಳಿಂದ ದೂರ ಇರುತ್ತಿರಲಿಲ್ಲ,'' ನಾನು ನನ್ನ ಧ್ವನಿಯನ್ನು ಎಷ್ಟು ಭಾವುಕನಾಗಿಸಿದೆ ಎಂದರೆ, ನನ್ನ ನಡತೆಯ ಬಗ್ಗೆ ಯಾರೂ ಸಂದೇಹಪಡಬಾರದು.

``ನಿಮ್ಮಿಬ್ಬರ ನಡುವೆ ಏನಾದರೂ ಮನಸ್ತಾಪ ಉಂಟಾಗಿಯೆಂದರೆ, ನನಗೆ ಅದರ ಬಗ್ಗೆ ವಿವರವಾಗಿ ತಿಳಿಸು. ನಾನು ನಿಮ್ಮ ಸಮಸ್ಯೆಯನ್ನು ಚಿಟಿಕೆ ಹೊಡೆಯುವಷ್ಟರಲ್ಲಿ ಬಗೆಹರಿಸಿಬಿಡ್ತೀನಿ,'' ಅವರು ಸ್ಟೈಲಾಗಿ ಚಿಟಿಕೆ ಹೊಡೆಯುತ್ತ ಹೇಳಿದರು.

``ನಮ್ಮಿಬ್ಬರ ನಡುವೆ ಪ್ರೀತಿಯ ಬೇರುಗಳು ಬಹಳ ಗಟ್ಟಿಯಾಗಿವೆ. ನೀವು ಯಾವುದೇ ರೀತಿಯ ಆತಂಕ ಪಡುವುದು ಬೇಡ,'' ಎಂದು ಹೇಳಿದಾಗ ಅವರು ಮುಗುಳ್ನಕ್ಕರು.

``ನೀನು ಒಳ್ಳೆಯ ಹುಡುಗನಪ್ಪ. ನನ್ನ ಮಾತುಗಳ ಬಗ್ಗೆ ತಪ್ಪು ತಿಳೀಬೇಡ,'' ಎಂದು ಹೇಳುತ್ತಾ ನನ್ನನ್ನು ತಬ್ಬಿಕೊಂಡು ಅತ್ತ ಬಾಟಲಿಯಿಂದ ಗ್ಲಾಸಿಗೆ ನೀರು ಹುಯ್ಯತೊಡಗಿದರು.

ಬಳಿಕ ಅವರು ಡ್ರಾಯಿಂಗ್‌ ರೂಮಿಗೆ ತೆರಳಿ ಅಲ್ಲಿ ನಿಂತಿದ್ದ ರೂಪಾಳನ್ನು ಉದ್ದೇಶಿಸಿ, ``ನೀನು ಬಹಳ ಸುಂದರವಾಗಿರುವೆ ರೂಪಾ....'' ಎಂದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ