ಶಿಲ್ಪಾ ಪರಿಪೂರ್ಣ ಸಿದ್ಧತೆಯೊಂದಿಗೆ ಬ್ಲ್ಯಾಕ್‌ ಮೇಲರ್‌ ನ ಆಗಮನದ ನಿರೀಕ್ಷೆಯಲ್ಲಿದ್ದಳು. ಆಗ ಮನೆ ಬಾಗಿಲ ಕರೆಗಂಟೆ ಬಾರಿಸಿತು.......

ಬೆಡ್‌ ರೂಮಿನ ಗೋಡೆಯ ಮೇಲೆ ಮರ್ಫಿ ರೇಡಿಯೋದ ಪೋಸ್ಟರ್‌ ಬೇಬಿಯ ಫೋಟೋ ಈಗಲೂ ನೋಡಲು ಸಿಗುತ್ತದೆ. ಅದೆಂಥ ಸುಂದರ ಮಗು, ಅದೇನು ಖುಷಿಯಿಂದ ತುಟಿಯ ಮೇಲೆ ಬೆರಳಿಟ್ಟು ಪೋಸ್‌ ಕೊಟ್ಟಿದೆ. ಆ ಫೋಟೋ ಶಿಲ್ಪಾಳ ಬೆಡ್ ರೂಮಿನಲ್ಲಿ ಕಳೆದ 4 ವರ್ಷಗಳಿಂದ ಹಾಗೆಯೇ ಇದೆ. ಆ ಫೋಟೋ ನೋಡಿ ಒಮ್ಮೆ ಅತ್ತೆ ಹೇಳಿದ್ದರು, ಸುಂದರ ಮಗುವಿನ ಫೋಟೋ ನೋಡುವುದರಿಂದ ಹುಟ್ಟುವ ಮಗು ಕೂಡ ಸುಂದರವಾಗಿರುತ್ತದೆ. ಮಗುವಿನ ನಿರೀಕ್ಷೆ ಮಾಡುತ್ತಾ ಮಾಡುತ್ತಾ ಅವಳ ಅತ್ತೆ ತೀರಿಹೋದರು.

ಊಟ ಮುಗಿಸಿ ಶಿಲ್ಪಾ ನೈಟ್‌ ಬಲ್ಬಿನ ಮಂದ ಬೆಳಕಿನಲ್ಲಿ ಮರ್ಫಿ ಬೇಬಿಯನ್ನು ನೋಡುತ್ತಿದ್ದಳು. ಆಗ ಪತಿ ಅಮರ್‌ ಕೋಣೆಯೊಳಗೆ ಕಾಲಿಡುತ್ತಾ, ``ನಾನು ಡಾಕ್ಟರ್‌ ಬಳಿ ಅಪಾಯಿಂಟ್‌ ಮೆಂಟ್‌ ತೆಗೆದುಕೊಂಡಿದ್ದೇನೆ. ಈಗ ನಾವು ಡಾಕ್ಟರ್‌ ಹತ್ತಿರ ಹೋಗಿ ಟೆಸ್ಟ್ ಮಾಡಿಸಿಕೊಳ್ಳಬೇಕು. ಅವರು ಏನು ಹೇಳ್ತಾರೋ ನೋಡಬೇಕು,'' ಎಂದು ಹೇಳಿದ.

``ಹೌದು. ಇದು ಮೊದಲೇ ಆಗಿದ್ದರೆ ಅತ್ತೆಯ ಇಚ್ಛೆಯಾದರೂ ಪೂರೈಸುತ್ತಿತ್ತೇನೋ......?''

``ಈ ಮೊದಲು ಡಾಕ್ಟರ್‌ ಎಂದೂ ಇಬ್ಬರಿಗೂ ಟೆಸ್ಟ್ ಮಾಡಲು ಹೇಳಿರಲಿಲ್ಲ. ನಿನ್ನ ಗೆಳತಿ ಸುಜಾತಾ ಕೂಡ ವೈದ್ಯೆ. ಅವರು ಕೂಡ ಗರ್ಭ ಧರಿಸಲು ಒಮ್ಮೊಮ್ಮೆ ತಡ ಆಗಬಹುದು ಎಂದಿದ್ದರು. ನಾವು ಸಹ ಒಂದು ವರ್ಷ ನಿರ್ಲಕ್ಷ್ಯ ಮಾಡಿದೆ.''

ಅಮರ್‌ ಪದವಿ ಬಳಿಕ ಸ್ಪೋರ್ಟ್ಸ್ ಕೋಟಾದಡಿ ಒಂದು ಕಂಪನಿಯಲ್ಲಿ ನೌಕರಿ ಗಿಟ್ಟಿಸಿಕೊಂಡ.

ಅವನು ರಾಜ್ಯಮಟ್ಟದ ಬಾಕ್ಸಿಂಗ್‌ ಚಾಂಪಿಯನ್‌. ಅಮರ್‌ ನದು ಬಹಳ ಒಳ್ಳೆಯ ಪರ್ಸನಾಲಿಟಿ. ಆಫೀಸಿನಲ್ಲಿ ಅವನ ಸಹೋದ್ಯೋಗಿಗಳು ಹೇಳುತ್ತಿದ್ದರು. ಬಾಕ್ಸಿಂಗ್‌ ರಿಂಗ್‌ ನಲ್ಲಿ ನೀನು ಚಾಂಪಿಯನ್‌ ಆಗಿರುವೆ. ಈಗ ನಿನ್ನ ಕುಟುಂಬವನ್ನು ಬೆಳೆಸು. ನಿನ್ನಂತಹ ಬಲಿಷ್ಠ, ದಷ್ಟಪುಷ್ಟ ಭವಿಷ್ಯದ ಚಾಂಪಿಯನ್‌ ನನ್ನು ನೋಡೋಣ.

``ಅದೂ ಕೂಡ ಆಗುತ್ತದೆ. ಅದಕ್ಕೆ ಆತುರವೇನಿದೆ?'' ಎಂದು ಅವನು ಹೇಳುತ್ತಿದ್ದ.

ಮದುವೆಯ 5 ವರ್ಷಗಳ ಬಳಿಕ ಶಿಲ್ಪಾ ಹಾಗೂ ಅಮರ್‌ ಈ ವಿಷಯದ ಬಗ್ಗೆ ಸಲಹೆ ಪಡೆಯಲು ವೈದ್ಯರ ಬಳಿ ಧಾವಿಸಿದ್ದರು. ಡಾಕ್ಟರ್‌ ಇಬ್ಬರ ಕೆಲವು ಟೆಸ್ಟ್ ಗಳನ್ನು ಮಾಡಿಸಿ, 2 ದಿನಗಳ ಬಳಿಕ ಭೇಟಿಯಾಗಲು ಹೇಳಿದರು. ವೈದ್ಯರನ್ನು ಭೇಟಿಯಾಗಲು ಬಂದ ದಂಪತಿಗಳನ್ನು ಉದ್ದೇಶಿಸಿ, ``ನಿಮ್ಮಿಬ್ಬರ ರಿಪೋರ್ಟ್ಸ್ ಬಂದಿವೆ. ಶಿಲ್ಪಾ ಅವರ ರಿಪೋರ್ಟ್‌ ನಾರ್ಮಲ್ ಆಗಿದೆ. ಅವರಲ್ಲಿ ತಾಯಿಯಾಗುವ ಎಲ್ಲ ಸಾಧ್ಯತೆಗಳಿವೆ. ಆದರೆ.....''

``ಆದರೆ ಏನು ಡಾಕ್ಟರ್‌?'' ಶಿಲ್ಪಾ ಡಾಕ್ಟರ್‌ ಮಾತನ್ನು ಅರ್ಧದಲ್ಲಿಯೇ ತಡೆದು ಕೇಳಿದಳು.

``ಐ ಆ್ಯಮ್ ಸಾರಿ.  ಆದರೆ.... ನಾನು ಈ ವಿಷಯ ತಿಳಿಸಲೇಬೇಕು. ಅಮರ್‌ ಅವರಿಗೆ ತಂದೆಯಾಗುವ ಸಾಮರ್ಥ್ಯ ಇಲ್ಲ.''

ಕೆಲವು ಕ್ಷಣಗಳ ಕಾಲ ಕ್ಯಾಬಿನ್‌ ನಲ್ಲಿ ಮೌನ ಆವರಿಸಿತು. ಬಳಿಕ ಶಿಲ್ಪಾ ಹೇಳಿದಳು, ``ಆದರೆ ಡಾಕ್ಟರ್‌, ವೈದ್ಯ ವಿಜ್ಞಾನ ಈಗ ಎಷ್ಟು ಮುಂದುವರಿದಿದೆ, ಇದಕ್ಕೆ ಏನಾದರೂ ಔಷಧಿ ಅಥವಾ ಉಪಾಯ ಇರಬೇಕಲ್ಲ?''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ