``ದೇಶದಲ್ಲಿ ಲಕ್ಷಾಂತರ ಯುವಕರು ನಿರುದ್ಯೋಗಿಗಳಾಗಿ ಅಲೆದಾಡುತ್ತಿದ್ದಾರೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ದೇಶ ದುಸ್ಥಿತಿಯತ್ತ ಸಾಗುತ್ತಿದೆ. ಆದರ ಇಲ್ಲಿ ಜನ ನಿರುಪಯುಕ್ತ ವಿಷಯಗಳಲ್ಲಿ ತಮ್ಮ ಸಮಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಈ ಮಹಿಳೆಯರಿಗೆ ಬೇರೆ ಏನೂ ಕೆಲಸ ಉಳಿದಿಲ್ವಾ?

``ಯಾವಾಗ ಇವರ ಶೋಷಣೆ ಆಗಿತ್ತೊ ಆಗ ಏಕೆ ಇವರು ಧ್ವನಿ ಎತ್ತಲಿಲ್ಲ? ಈಗ ಏಕೆ ಕೂಗಾಡುತ್ತಿದ್ದಾರೆ? ಷಡ್ಯಂತ್ರ ಮಾಡುವ ಪುರುಷರ ವಿರುದ್ಧ ಬೇರೇನೂ ಇಲ್ಲಾ ಅಥವಾ ತಾವು ಪ್ರಸಿದ್ಧರಾಗಿರಬೇಕೆಂಬ ಕಾರಣದಿಂದ ಹೀಗೆ ಮಾಡುತ್ತಿರಬಹುದೆ? ಬಂದ್‌ಮಾಡು ಟಿ.ವಿ. ಅದರಲ್ಲೇನೂ ಹುರುಳಿಲ್ಲ,'' ಎಂದು ಸಿಡಿಮಿಡಿಗೊಂಡ ಯೋಗೇಶ್‌ ತಾನೇ ಸ್ವತಃ ಆಫ್‌ ಮಾಡಿ, ರಿಮೋಟ್‌ ಒಂದೆಡೆ ಎಸೆಯುತ್ತ ಆಫೀಸ್‌ಗೆ ಹೋಗಲು ಸನ್ನದ್ಧನಾಗತೊಡಗಿದ.

``ಅಂದಹಾಗೆ ಈ ಮಹಿಳೆಯರು ವ್ಯರ್ಥವಾಗಿ ಕೂಗಾಡುತ್ತಿದ್ದಾರೆಯೇ? ನೀವು ಪುರುಷರು ಹಾಲಿನಷ್ಟು ಶುದ್ಧರೆ?'' ಚಪಾತಿಯನ್ನು ತವಾ ಮೇಲೆ ಕುಕ್ಕುತ್ತಾ , ``ಹೌದು ಅದು ಸ್ವಾಭಾವಿಕವೇ. ಯಾವ ಸಮಾಜದಲ್ಲಿ ಮಹಿಳೆಯ ಮೌನವನ್ನು ಅವಳ ಸಭ್ಯತೆ ಹಾಗೂ ಘನತೆಯ ವ್ಯಕ್ತಿತ್ವದ ಮೂಲಾಧಾರ ಎಂದು ಭಾವಿಸಲಾಗುತ್ತೊ, ಅಲ್ಲಿ ಶೋಷಣೆಯ ವಿರುದ್ಧ ಅವಳ ಕೂಗನ್ನು ಸುಳ್ಳೆಂದೇ ಭಾವಿಸಲಾಗುತ್ತದೆ,'' ನೀಲಾ ಸ್ವಲ್ಪ ಆತುರದಿಂದಲೇ ಹೇಳಿದಳು.

``ನಾನು ಹಾಗೆ ಮಾಡುತ್ತಿಲ್ಲ. ಆದರೆ 10-20 ವರ್ಷ ಅಥವಾ 30 ವರ್ಷಗಳ ಹಿಂದಿನ ಮಾತನ್ನು ಕೆದಕುವುದು ಏಕೆ? ಆಗ ಇವರ ಜೊತೆ ಹಾಗಾಗಿದ್ದರೆ, ಆಗ ಏಕೆ ಇವರು ಧ್ವನಿ ಎತ್ತಲಿಲ್ಲ? ಈಗೇಕೆ ಕೂಗಾಡುತ್ತಿದ್ದಾರೆಂದು ನಾನು ಕೇಳ್ತಿರುವೆ,'' ಎಂದು ಯೋಗೇಶ್ ಶರ್ಟ್‌ ಗುಂಡಿ ಹಾಕಿಕೊಳ್ಳುತ್ತಾ ಹೇಳಿದ.

ಯೋಗೇಶನ ಮಾತುಗಳ ಬಗ್ಗೆ ನೀಲಾಳಿಗೆ ಅಚ್ಚರಿಯೂ ಆಯಿತು. ಕೋಪ ಬಂತು. ಅವಳು ಹೇಳಿದಳು, ``ನಿಮಗೆ ಇದು ಕೂಗಾಟ, ಅರಚಾಟ ಅನ್ನಿಸುತ್ತಿರಬಹುದು. ಆದರೆ ನನಗೆ ಇದರಲ್ಲಿ ವಾಸ್ತವ ಇದೆ ಅನ್ನಿಸುತ್ತಿದೆ. ಅಂದಹಾಗೆ ತಪ್ಪು ಕೇವಲ ಪುರುಷರದ್ದಷ್ಟೇ ಅಲ್ಲ, ಸಮಾಜದ್ದೂ ಇದೆ.

``ಒಂದುವೇಳೆ ಆಫೀಸಿನಲ್ಲಿ ಹುಡುಗಿಯರು ಶೋಷಣೆಯ ವಿರುದ್ಧ ಧ್ವನಿ ಎತ್ತಿದರೆ, ಅವರ ಉದ್ಯೋಗ ಹೊರಟು ಹೋಗುತ್ತದೆ. ಗೃಹಿಣಿ ಹೀಗೆ ಮಾಡಲು ಅವಳಿಗೆ ಧೈರ್ಯವಾದರೂ ಎಲ್ಲಿಂದ ಬರುತ್ತೆ? ಸಮಾಜ ಬಾಲ್ಯದಿಂದಲೇ ನಾಚಿಕೆ ಎಂಬ ಹೊದಿಕೆಯಲ್ಲಿರು ಎಂದು ಅವಳಿಗೆ ಕಲಿಸಿಕೊಟ್ಟಿರುತ್ತದೆ. ಆದರೆ ಪುರುಷರಿಗೆ ಮುಕ್ತ ಅವಕಾಶ ಏಕೆ? ಮಹಿಳೆಯರು ಏನು ಧರಿಸಬೇಕು? ಏನು ಧರಿಸಬಾರದು? ಎನ್ನುವುದು ಅವರವರ ಇಚ್ಛೆಯಾಗಬೇಕೇ ಹೊರತು ಬೇರೆಯವರು ಅದನ್ನು ನಿರ್ಧರಿಸಬಾರದು.''

``ನಿಜ ಹೇಳಬೇಕೆಂದರೆ, ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಪುರುಷ ಭಯಭೀತನಾಗಿರವಂತೆ ಕಂಡುಬರುತ್ತಿದೆ. ಎಲ್ಲಿ ತನ್ನ ಹಳೆಯ ಇತಿಹಾಸ ಕೆದಕಿ ಬಿಡುತ್ತಾರೊ ಎಂದು ಅವನಿಗೆ ಅನಿಸತೊಡಗಿದೆ,'' ಎಂದು ನೀಲೆ ಹೆಮ್ಮೆಯಿಂದ ತಲೆ ಎತ್ತಿ ಹೇಳಿದಳು, ``ಸೀತೆಯ ಅಗ್ನಿಪರೀಕ್ಷೆ ಸಾಕಷ್ಟು ಸಲ ಆಯಿತು. ಈಗ ರಾಮನ ಸರದಿ. ಏಕೆಂದರೆ ಸ್ತ್ರೀ ಕೇವಲ ದೇಹವಷ್ಟೇ ಅಲ್ಲ, ಅವಳಲ್ಲಿ ಉಸಿರು ಹಾಗೂ ಸ್ಪಂದನ ಕೂಡ ಇದೆ. ಸ್ತ್ರೀಯರಿಗೆ ತಮ್ಮದೇ ಆದ ಅಸ್ತಿತ್ವ ಇದೆ ಎನ್ನುವುದು ಪುರುಷರಿಗೆ ಗೊತ್ತಾಗಬೇಕು. ಅವಳು ಕೋಪ ಸಹಿಸಿಕೊಳ್ಳುವುದಿಲ್ಲ, ಯೋಚಿಸುತ್ತಾಳೆ ಕೂಡ.''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ