``ನೋಡಿದೆಯಾ? ನಿನ್ನ ಗುರು ಬಾಬಾ ಕೃಷ್ಣ ಕದೀಮನ ಕುತಂತ್ರವನ್ನು...... ನನಗೆ ಆ ಸ್ವಾಮಿ ಯೋಗಿಯೆಂದಲ್ಲ ಭೋಗಿ ಎಂಬಂತೆ ಕಂಡು ಬರುತ್ತಾರೆ ಎಂದು ನಾನು ನಿನಗೆ ಅನೇಕ ಸಲ ಹೇಳ್ತಿದ್ದೆ. ಅದು ಇಂದು ಸಾಬೀತಾಗಿಯೇ ಹೋಯಿತು. ಪ್ರತಿಯೊಂದು ಟಿ.ವಿ. ಚಾನೆಲಿನಲ್ಲೂ ಅವನ ರಾಸಲೀಲೆಯ ಬಗ್ಗೆಯೇ ಚರ್ಚೆ ನಡೀತಿದೆ,'' ಎಂದು ಮನೆಯೊಳಗೆ ಕಾಲಿಡುತ್ತಿದ್ದಂತೆ ದೇವರಾಜ್‌ ತನ್ನ ಪತ್ನಿ ಸುಚಿತ್ರಾಳ ಗಮನ ಸೆಳೆಯುತ್ತ ಹೇಳಿದ.

`ನಿಮಗೆ ಅದು ಇಂದು ತಿಳಿಯಿತು. ನಾನು ಆ ರಹಸ್ಯವನ್ನು ಮೊದಲಿನಿಂದಲೂ ಬಲ್ಲೆ..... ಕೇವಲ ತಿಳಿದಿಲ್ಲ, ಅದರ ನೋವನ್ನು ಅನುಭವಿಸಿದಳು,' ಎಂದು ಯೋಚಿಸುತ್ತಾ ಸುಚಿತ್ರಾಳಿಗೆ ಬವಳಿ ಬಂದಂತಾಗಿತ್ತು. ಆ ಒಂದು ಕಹಿ ನೆನಪುಗಳ ನಡುವೆಯೂ ಎಷ್ಟೊಂದು ನೆಮ್ಮದಿಯೆನಿಸುತ್ತಿತ್ತು. ಇದನ್ನು ದೇವರಾಜ್‌ ಗಮನಿಸಲಿಲ್ಲ. ಅವನು ಗಡಿಬಿಡಿಯಲ್ಲಿ ಶೂ ಸಾಕ್ಸ್ ಕಳಚಿ, ಟಿ.ವಿ. ಆನ್ ಮಾಡಿಕೊಂಡು ಸೋಫಾದಲ್ಲಿ ಆಸೀನನಾದ.

``ಬಾಬಾನ ಮೇಲೆ ಬಿತ್ತು ಬರಸಿಡಿಲು..... ಧಾರ್ಮಿಕ ಗುರುವಿನಿಂದ ಅಪ್ರಾಪ್ತ ವಯಸ್ಸಿನ ಹುಡುಗಿಯ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ. ಆರೋಪಿ ನಾಪತ್ತೆ, ಪೊಲೀಸರಿಂದ ಬಾಬಾ ಕೃಷ್ಣ ಕದೀಮನ ಆಶ್ರಮಕ್ಕೆ ಸೀಲು!'' ಪ್ರತಿಯೊಂದು ಚಾನೆಲಿನಲ್ಲೂ ಹೆಚ್ಚು ಕಡಿಮೆ ಇದೇ ಬ್ರೇಕಿಂಗ್‌ ನ್ಯೂಸ್‌ ಬರುತ್ತಿತ್ತು. ಅಡುಗೆಮನೆಯಲ್ಲಿ ಚಹಾ ತಯಾರಿಸುತ್ತಿದ್ದ ಸುಚಿತ್ರಾಳ ಕಿವಿಗಳು ಅತ್ತ ಕಡೆಯೇ ನೆಟ್ಟಿದ್ದವು. ದೇವರಾಜ್‌ ಚಹಾ ಗುಟುಕರಿಸುತ್ತ ಹಾಸಿಗೆಯ ಮೇಲೆ ಒರಗಿದ.

ಇಂದು ಸುಚಿತ್ರಾ ತನ್ನನ್ನು ತಾನು ಅತ್ಯಂತ ನಿರಾಳ ಎಂಬಂತೆ ಭಾವಿಸುತ್ತಿದ್ದಳು. ಅನೇಕ ವರ್ಷಗಳಿಂದ ತನ್ನ ತಲೆಯ ಮೇಲೆ ಹೊತ್ತು ತಿರುಗುತ್ತಿದ್ದ ಬಹು ದೊಡ್ಡ ಭಾರವೊಂದನ್ನು ಇಳಿಸಿದಂತೆ ಭಾಸವಾಗುತ್ತಿತ್ತು. ಈಗ ಅವಳಿಗೆ ಆ ಭಯಾನಕ ಫೋನ್ ಕರೆಗಳಿಂದಲೂ ಮುಕ್ತಿ ಸಿಗಲಿದೆ ಎಂದೆನಿಸುತ್ತಿತ್ತು. ಯಾವುದಾದರೂ ಫೋನ್‌ ಬಂದರೆ ಸಾಕು, ಅವಳ ದೇಹ ಭಯದಿಂದ ಕಂಪಿಸುತ್ತಿತ್ತು.

ಕಣ್ಣು ಮುಚ್ಚಿಕೊಳ್ಳುತ್ತಿದ್ದಂತೆ ಸುಚಿತ್ರಾಳ ಕಣ್ರೆಪ್ಪೆಗಳ ಹಿಂದೆ ಬೇರೊಂದು ಲೋಕವೇ ಜೀವ ತಳೆಯಿತು. ಸುಮ್ಮನೆ ನಿಂತುಕೊಂಡಿದ್ದ ಸುಚಿತ್ರಾಳ ಸುತ್ತ ಭಾವನೆಗಳು ಸುತ್ತುವರಿಯತೊಡಗಿದವು. ಅದು ಹೇಗೆಂದರೆ ಪರ್ವತವೇ ಮರಗಳ ಮೇಲೆ ಬಂದು ಬಿದ್ದಂತೆ, ಅವಳು ತನ್ನ ಆಸುಪಾಸಿನ ಲೋಕದಿಂದ ಅದೃಶ್ಯಳಾಗಿಬಿಟ್ಟಳು. ನೆರಳಿನ ಈ ಲೋಕದಲ್ಲಿ ಅವಳ ಜೊತೆಗೆ ಸುದೀಪ್‌ ಇದ್ದಾನೆ. ಬಾಬಾನ ಆಶ್ರಮ ಮತ್ತು ಸೇವೆಯ ಹೆಸರಿನಲ್ಲಿ ದೇಹದ ಜೊತೆಗೆ ನಡೆಯುವ ಚೆಲ್ಲಾಟ. ಸುದೀಪ್‌ ಜೊತೆಗಿನ ಸ್ನೇಹ ಅವಳಿಗೆ ಕಾಲೇಜಿನ ದಿನಗಳಿಂದಲೇ ಆಗಿತ್ತು. ಅದನ್ನು ಸ್ನೇಹ ಎನ್ನದೆ ಪ್ರೀತಿ ಎಂದು ಹೇಳಿದರೆ ಹೆಚ್ಚು ಸೂಕ್ತವಾಗುತ್ತದೆ. ಅವರ ಕಾಲೇಜು ನಗರದ ಹೊರಭಾಗದಲ್ಲಿತ್ತು. ಅಲ್ಲಿಯೇ ಸಮೀಪದಲ್ಲಿ ಬಾಬಾ ಕೃಷ್ಣ ಕದೀಮರ ಆಶ್ರಮ ಕೂಡ ಇತ್ತು, ಹಸಿರು ಮರಗಳ ನಡುವೆ ಸುತ್ತುವರಿದಿದ್ದ ಆ ಆಶ್ರಮ ರಹಸ್ಯಮಯ ಎಂಬಂತೆ ಅನಿಸುತ್ತಿತ್ತು.

ಇಬ್ಬರೂ ಏಕಾಂತ ಅರಸುತ್ತ ಅತ್ತ ಕಡೆಯೇ ಹೋಗುತ್ತಿದ್ದರು. ಆ ಆಶ್ರಮದ ಎತ್ತರದ ಭವ್ಯ ದ್ವಾರ ಅವಳಿಗೆ ಬಹಳ ಆಕರ್ಷಿತಗೊಳಿಸಿತ್ತು. ಅವಳು ಒಳಗೆ ಹೋಗಿ ನೋಡಬೇಕೆಂದುಕೊಳ್ಳುತ್ತಿದ್ದಳು. ಆದರೆ ಕೇವಲ ಬಾಬಾನ ಭಕ್ತರಿಗೆ ಮಾತ್ರ ಆಶ್ರಮದಲ್ಲಿ ಪ್ರವೇಶಿಸಲು ಅವಕಾಶವಿತ್ತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ